ನನ್ನ ಪ್ರೀತಿಯ ಮೀರಾ❤️ – 1
ಒಂದು ಸಾದಾರಣ ಮದ್ಯಮ ತರಗತಿಯ ಕುಟುಂಬದಲ್ಲಿ
ಜನಿಸಿದ 20 ರ ಅರೆಯ ಯುವತಿ..
ಒಬ್ಬ ದೊಡ್ಡ ಪ್ರಖ್ಯಾತಿ ಪಡೆದ ಬಿಸಿನೆಸ್ ಮ್ಯಾನ್.
ಅತಿ ಚಿಕ್ಕ ವಯಸ್ಸಿನಲ್ಲೇ ಪ್ರಖ್ಯಾತಿ ಪಡೆದು ಸೈ ಏನಿಸಿಕೊಂಡಿದ್ದ ಮತ್ತು 2 ಬಾರಿ ವಿಶ್ವ ಬಿಸಿನೆಸ್ ಪ್ರಶಸ್ತಿ ಪಡೆದ. ನವ ಯುವಕರ ಸ್ಫೂರ್ತಿ. ದೊಡ್ಡ ಶ್ರೀಮಂತರ ಮನೆಯ ಮುದ್ದಿನ ಮಗ…
ಇವರ ಇಬ್ಬರಿಗೂ ಪ್ರೀತಿ ಹೇಗೆ ಆಗುತ್ತದೆ ಎಂಬುದೇ ಕುತೂಹಲಕಾರಿ ವಿಷಯ.
ಈ ಪ್ರೀತಿಗಾಗಿ ಅವರು ಇಬ್ಬರೂ ಪಡುವ ಪಾಡು…….ಒಂದು ಸಾದಾರಣ ಮದ್ಯಮ ತರಗತಿಯ ಕುಟುಂಬದಲ್ಲಿ
ಜನಿಸಿದ 20 ರ ಅರೆಯ ಯುವತಿ, ಮೀರಾ.
ಒಬ್ಬ ಪ್ರಖ್ಯಾತಿ ಪಡೆದ ದೊಡ್ಡ ಬಿಸಿನೆಸ್ ಮ್ಯಾನ್,
ಅನಿರುದ್ಧ್ ವರ್ಮಾ.
ಅತಿ ಚಿಕ್ಕ ವಯಸ್ಸಿನಲ್ಲೇ ಪ್ರಖ್ಯಾತಿ ಪಡೆದು ಸೈ ಏನಿಸಿಕೊಂಡಿದ್ದ ಮತ್ತು 2 ಬಾರಿ ವಿಶ್ವ ಬಿಸಿನೆಸ್ ಪ್ರಶಸ್ತಿ ಪಡೆದ. ನವ ಯುವಕರ ಸ್ಫೂರ್ತಿ. ದೊಡ್ಡ ಶ್ರೀಮಂತರ ವರ್ಮಾ ಮನೆತನದ ಮುದ್ದಿನ ಮಗ…
ಒಂದು ವಿಶಾಲವಾದ ದೊಡ್ಡ 4 ಅಂತಸ್ತಿನ ಅರಮನೆ, ಅಲ್ಲಿ ವಾಸಿಸುತ್ತಿರುವುದು ಲಕ್ಷ್ಮೀ ಮತ್ತು ವೆಂಕಟೇಶ್ ವರ್ಮಾ ಅವರ ಕೂಡು ಕುಟುಂಬ.
ಈ ಕಾಲದಲ್ಲೂ ಇಡೀ ಕುಟುಂಬ ಒಟ್ಟಾಗಿ ಬಾಳುವುದಕ್ಕೆ ಕಾರಣ, ಆ ಮನೆಯ ಹಿರಿಯ ಜೀವಗಳಾದ ಲಕ್ಷ್ಮೀ ವೆಂಕಟೇಶ್..
ಅವರಿಗೆ ಇಬ್ಬರೂ ಗಂಡು ಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳು,,
ಇವರ ಆಸೆ ಒಂದೇ ಎಲ್ಲರೂ ಒಟ್ಟಾಗಿ ಜೀವಿಸಬೇಕು. ತನ್ನ ಎರಡು ಗಂಡು ಮಕ್ಕಳು ದಾಯಾದಿಗಳ ಆಗದೆ,
ಜಗತ್ತಿಗೆ ಸ್ಫೂರ್ತಿಯುತವಾದ ಒಳ್ಳೆ ಅಣ್ಣಾ ತಮ್ಮನಾಗಿ,
ಕೂಡಿ ಬಾಳಿ ಬದುಕ ಬೇಕು ಎಂಬುದೇ ಆಶಯ.
ಆದರೆ ಇದಕ್ಕೆ ಪೂರ್ತಿ ವಿರೋಧಿಗಳು ಇವರು.
ಅವರೇ
ಮೊದಲ ಮಗ ಸೂರ್ಯ ಪ್ರಕಾಶ್ ವರ್ಮಾ,
ಎರಡನೇ ಅವರು ಸುಮಲಾಕ್ಷಿ,
ಮೂರನೆ ಮಗ ಅಜಿತ್ ವರ್ಮಾ,
ನಾಲ್ಕನೇ ಮಗಳು ಕೋಮಲ,
ಐದನೇ ಮಗಳು. ಪರಿಮಳ,
ಸೂರ್ಯ ಪ್ರಕಾಶ್ ಅವರ ದರ್ಮಪತ್ನಿ, ದಾಕ್ಷಾಯಿಣಿ.
ಅಜಿತ್ ಅವರ ಪತ್ನಿ ಶೈಲಜಾ.
ಸುಮಲಾಕ್ಷಿ ಅವರ ಗಂಡ ಭರತ್ ಮೌರ್ಯ.
ಕೋಮಲ ಅವರ ಗಂಡ. ತರುಣ್ ಕುಮಾರ್.
ಪರಿಮಳ ಗೆ ಇನ್ನೂ ಮದುವೆ ಆಗಿಲ್ಲ…
ಸೂರ್ಯ ಪ್ರಕಾಶ್ ಹಾಗೂ ದಾಕ್ಷಾಯಿಣಿ ಏಕೈಕ ಪುತ್ರ ಸಂತಾನ ನಮ್ಮ ಹೀರೋ ಅನಿರುದ್ಧ್ ವರ್ಮಾ.
ಸ್ವಲ್ಪ ಹಠವಾದಿ, ನೋಡಲು ಒರಟ ಆದರೆ ಮನಸ್ಸು ಮಾತ್ರ ಮಗು…
ಅಜಿತ್ ಮತ್ತು ಶೈಲಜಾ ಅವರಿಗೆ ಇಬ್ಬರೂ ಮಕ್ಕಳು
ವಿಜಯ್ ವರ್ಮಾ, ಕೊನೆಯ ಮಗಳು ವಿನುತ.
ಸುಮಲಾಕ್ಷಿ ಮತ್ತು ಭರತ್ ಮೌರ್ಯ ಮಗು ಹುಟ್ಟಿದಾಗ ಕಳೆದು ಹೋಗಿದೆ ಇವತ್ತಿನ ವರೆಗೂ ಸಿಕ್ಕಿಲ್ಲ…
ಕೋಮಲ ಮತ್ತು ತರುಣ್ಗೆ ಒಬ್ಬಳೇ ಮಗಳು ಸೌಜನ್ಯ.
ಇಷ್ಟು ಅನಿರುದ್ಧ್ ವರ್ಮಾನ ಕುಟುಂಬ.
ಇನ್ನೊಬ್ಬರು ಇದ್ದಾರೆ ಅವರು ಮನೆ ಕೆಲಸದವರೆ
ಆದರು ಈ ಕುಟುಂಬದಲ್ಲಿ ಒಬ್ಬ ಸದಸ್ಯ ರಂಗಸ್ವಾಮಿ..
ಮನೆಯಲ್ಲಿ ಯಾವುದೇ ವಿಚಾರ ನಿರ್ಧಾರ ಮಾಡುವಾಗ
ವೆಂಕಟೇಶ್ ಅವರು ಮೊದಲು ಇವರ ಸಲಹೆ ಕೇಳಿಯೇ ಮುಂದೆ ಹೆಜ್ಜೆ ಇಡೋದು….
ರಂಗಸ್ವಾಮಿ ನಂಬಿಕಸ್ತ ಮನುಷ್ಯ, ಸ್ವಾಭಿಮಾನಿ. ಅವನಿಗಂತ ಸ್ವಂತ ಕುಟುಂಬ ಇಲ್ಲ ಒಬ್ಬ ಅನಾಥ,
ಅವರಿಗೆ ಈ ಕುಟುಂಬವೆ ಬದುಕು….
ವರ್ಮಾನ್ ಗ್ರೂಪ್ ಆಫ್ ಇಂಡಸ್ಟ್ರೀಸ್.
ವರ್ಮಾನ್ ಫಾರ್ಮ ಕಂಪೆನಿ pvt .Ltd
ಇದರ ಅಡಿಯಲ್ಲಿ ಬೆಂಗಳೂರು ನಗರದಲ್ಲಿ .
ವರ್ಮಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಹೊಂದಿದ್ದು.
ಎರಡು ಕೂಡ ಅತ್ಯಂತ ಪ್ರಸಿದ್ಧಿ ಪಡೆದಿರುವ ಬ್ರಾಂಚ್ಗಳು.
ಕಡಿಮೆ ಹಣದಲ್ಲಿ ಉತ್ತಮ ಚಿಕಿತ್ಸೆ , ನೀಡುವ ಧ್ಯೇಯ ಹೊಂದಿದೆ, ಇದು ಸೂರ್ಯ ಪ್ರಕಾಶ್ ವರ್ಮಾ ಅವರ ನೇತೃತ್ವದಲ್ಲಿ ನೆಡೆಯುತ್ತಿದೆ,, ಅವರೂ B.Pharma ಮತ್ತು M Pharma ಗಳಂತಹ ಕೋರ್ಸ್ ಮುಗಿಸಿ,
ತನ್ನ ತಂದೆ ಕಟ್ಟಿದ್ದ ಕಂಪೆನಿ ಜವಾಬ್ದಾರಿ ತನ್ನ ಹೆಗಲ ಮೇಲೆ ಹೊತ್ತಿದ್ದಾರೆ.
ವರ್ಮನ್ ಗ್ರೂಪ್ ಆಫ್ ಇಂಡಸ್ಟ್ರಿಯಲ್ pvt.Ltd.
ಈ ಸಂಸ್ಥೆಯ ಮಾಲೀಕತ್ವ ವೆಂಕಟೇಶ್ ಅವರು
ತಮ್ಮ ಮುದ್ದಿನ ಮೊಮ್ಮಗ ಅನಿರುದ್ಧ್ ವರ್ಮಾ ಗೆ ವಾಯಿಸಿದಾರೆ. ಮತ್ತು ಮ್ಯಾನೇಜರ್ ಪೋಸ್ಟ್ ಅವರ ಮಗ ಅಜಿತ್ ನೀಡಿದ್ದು ಇದಕ್ಕಾಗಿ ಮನೆಯಲ್ಲಿ ದೊಡ್ಡ
ಜಗಳವೇ ಆಗಿತ್ತು.
ನಾನು ನಿಮ್ಮ ಮಗ ಅಂದಮೇಲೆ ಈ ಇಂಡಸ್ಟ್ರಿ ಕಂಪೆನಿ ಮಾಲೀಕತ್ವ ತನಗೆ ವಹಿಸುವಂತೆ ಅಜಿತ್ ಹಠ ಕ್ಕೆ ನಿಂತಿದ್ದ.
ಆದರೆ ಇದಕ್ಕೆ ಒಪ್ಪದ ಅವರ ತಂದೆ,
ನೀನು ಒಬ್ಬ ನಿಷ್ಪ್ರಯೋಜಕ ನಿನ್ನನ್ನು ನಂಬಿ ನಾನು ಈ ಕಂಪೆನಿ ನಿನಗೆ ಕೊಟ್ಟರೆ ನೀನು ನನ್ನ ಕನಸನ್ನು ಮಣ್ಣು ಪಾಲು ಮಾಡುತ್ತೀಯಾ.. ಎಂದು ನಿರಾಕರಿಸಿದ್ದರು.
ಅದಕ್ಕೆ ಒಪ್ಪಿದೆ ಜಗಳ ಮಾಡಿ ಬೆದರಿಕೆ ಹಾಕಿ ಪಡೆದುಕೋಂಡಿದ್ದು ಈ ಮ್ಯಾನೇಜರ್ ಪೋಸ್ಟ್…
ಅನಿರುದ್ಧ್ MBA ಮುಗಿಸಿ ಈ ಕಂಪೆನಿ ನೋಡಿಕೊಳ್ಳುತ್ತಿದು. ಮತ್ತು ಇದೆ ಕುಟುಂಬದ ಇನ್ನೊಂದು ಕಂಪೆನಿ ವರ್ಮ ಗ್ರೂಪ್ ಆಫ್ಇನ್ಸ್ಟಿಟ್ಯೂಟ್ ನಾ ಅಡಿಯಲ್ಲಿ ನಡೆಯುತ್ತಿರುವ ಕಾಲೇಜ್ ನ ಎಲ್ಲ ಜವಾಬ್ದಾರಿ ತನ್ನ ಮುದ್ದಿನ ಮಗಳು ಸುಮಲಾಕ್ಷಿ ಹೆಸರಿನಲ್ಲಿ ಇಟ್ಟಿದ್ದಾರೆ,
ಆದರೆ ಇದರ ಮುಂದಾಳತ್ವ ತನ್ನ ಅಳಿಯ ಅನಿರುದ್ಧ್ ಗೆ ವಹಿಸಿದ್ದಾರೆ….
ಈ ಸಂಸ್ಥೆಯು ನರ್ಸಿಂಗ್ ಮತ್ತು ಕಮರ್ಷಿಯಲ್ ವಿಭಾಗದಲ್ಲಿ PUC ಮತ್ತು DEGREE ಕೋರ್ಸ್ಗಳನ್ನು ಹೊಂದಿದೆ….
ಇವತ್ತು ನಮ್ಮ ಹೀರೋ ಆ ಕಾಲೇಜ್ ನ ಆಗುಹೋಗುಗಳನ್ನು ವಿಚಾರಿಸಲು ಮತ್ತು ಅಲ್ಲಿನ್ನ ಬೆಳವಣಿಗೆ ಮತ್ತು ಬದಲಾವಣೆ ಬಗ್ಗೆ ಚರ್ಚೆ ಮಾಡಲು ಕಾಲೇಜ್ ಗೆ ಹೋಗುತ್ತಿದ್ದಾನೆ…..
ಇನ್ನು ಮತ್ತೊಂದು ಸಂಚಿಕೆಯಲ್ಲಿ ನಮ್ಮ ಕಥಾ ನಾಯಕಿ ಮೀರಾ ಹಾಗೂ ಕುಟುಂಬದ ಬಗ್ಗೆ ತಿಳಿದುಕೊಳ್ಳುವ
ಅಲ್ಲಿಯವರೆಗೂ ಸ್ವಲ್ಪ ಕಾಯಿರಿ ಇಷ್ಟ ಆದರೆ ಬೆಂಬಲ ನೀಡಿ..
******
ಧನ್ಯವಾದಗಳು
ಹರ್ಷಿತ ನವೀನ್ ಕುಮಾರ್
Swipe left/right or tap the sides to turn pages