New Katha Varnika is now on Google Play — read Telugu stories on your phone. Learn more
💞ಚೇತನದ ಕಡಲಲ್ಲಿ ಸಿಂಧು💞 – 1

💞ಚೇತನದ ಕಡಲಲ್ಲಿ ಸಿಂಧು💞 – 1

ಚೇತನ್ ದೀಪಿಕಾ ವಿಕ್ರಮ್ ಸಿಂಧು ಇವರಲ್ಲಿ ಯಾರು ಯಾರ ಪ್ರೀತಿಗೆ ಒಲಿಯುತ್ತಾರೆ.. ಆ ಪ್ರೀತಿ ಎಷ್ಟು ನಿಜ… ಒಂದು ವೇಳೆ ಆ ಪ್ರೀತಿಯೇ ಜೀವನವನ್ನು ನಾಶ ಮಾಡಿದರೆ….ಮತ್ತೆ ಅವರು ಯಾರನ್ನು ಆರಿಸಿಕೊಳ್ಳು ಬಹುದು ಬಾಳ ಸಂಗಾತಿಯಾಗಿ …….

 

ಸ್ವಲ್ಪ ನೈಜ ಘಟನೆ ಹಾಗೂ ಜೊತೆಯಲ್ಲಿ ನನ್ನ ಆಲೋಚನೆ ಸೇರಿಸಿ ಬರೆದ ಕಥೆ………….

 

 

ಈಗ ಕಥೆಗೆ ಬರೋಣ,,,

ಸಂಜೆ ಸೂರ್ಯ ಮುಳುಗಿದ್ದ ನಿನ್ನ ಪೈಪೋಟಿಗೆ ನಾನಿದ್ದೀನಿ ಎನ್ನುತ್ತಾ ಚಂದ್ರ ಕೂಡ ಆಕಾಶದಲ್ಲಿ ಮೂಡಿದ… ಚಂದ್ರನ ಬೆಳಕಿಗೆ ನಮ್ಮದೊಂದು ಪುಟ್ಟ ಅಳಿಲು ಸೇವೆ ಎಂಬಂತೆ ಅದರ ಜೊತೆ ಬಂದಿದ್ದು ನಕ್ಷತ್ರಗಳು…..

 

ಅದೊಂದು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಒಂದು ಚಿಕ್ಕ ಏರಿಯಾದಲ್ಲಿನ ಮನೆ….

 

ಏನೇ ಸಿಂಧು ಎಲ್ಲಿ ಹಾಳಾಗೋಗಿದ್ಯಾ. ಬೇಗ ಬಂದು ಅಡುಗೆ ಮಾಡೇ ಟೈಮ್ 8:00 ಆಗ್ತಿದೆ ನೀನಿನ್ನೂ ಆ ನಿನ್ನ ಕಿತ್ತೋದ್ ಗಾರ್ಮೆಂಟ್ ಕೆಲಸದಿಂದ ಆಚೆ ಬಂದಿಲ್ವಾ….

 

ಮನೆಗೆ ಬಂದ ಮೇಲೆ ನಮಗೆ ಬೇಯಿಸಿ ಹಾಕ್ಬೇಕು ಅನ್ನೋ ಜ್ಞಾನ ಬೇಡ್ವಾ, ಬಾರೆ ಅಡುಗೆ ಮಾಡು ನಿನ್ನ ತಮ್ಮನಿಗೆ ಪಾಯಸ ಜಾಮೂನ್ ಬೇಕಂತೆ ಅದನ್ನು ಮಾಡಿ ಮತ್ತೆ ಅನ್ನ ಸಾಂಬಾರ್ ಹಪ್ಪಳ ಪಲ್ಯ ಮಜ್ಜಿಗೆನೂ ಮಾಡು ಮತ್ತೆ ನಿಮ್ಮಪ್ಪಂಗೆ ರೊಟ್ಟಿ ಇರಬೇಕು ಅದರ ಜೊತೆ ಕಮ್ಮಿ ಅಂದ್ರು ಎರಡ್ ತರ ಪಲ್ಯ ಇರಬೇಕು ಏನಾದ್ರೂ ತಪ್ಪಾಗಿ ಮಾಡಬೇಕು ಎನ್ನುತ್ತಾ ಮಲತಾಯಿ ದೌರ್ಜನ್ಯ ಎರಗುತ್ತಾರೆ ಸಿಂಧೂ ತಾಯಿ ಮಂಗಳ…..

 

 

ಅಮ್ಮ ಬಂದೆ ಒಂದು ನಿಮಿಷ ಎಲ್ಲ ಮಾಡ್ತೀನಿ ಎನ್ನುತ್ತಾ.. ಆಗ ತಾನೇ ಕೆಲಸದ ಒತ್ತಡದಿಂದ ಆಚೆ ಬಂದು… ಸೀರೆ ಬದಲಾಯಿಸಿ ತನ್ನ ಅಳೆ ನೈಟಿ ತೊಟ್ಟು  ಕೈ ಕಾಲು ಮುಖ ತೊಳೆದು ಮುಖವನ್ನು ಒರೆಸುತ್ತಾ ಬಂದಳು ಸಿಂಧು…

 

ಮನಸ್ಸಿನಲ್ಲಿ,,,

 

ಅಪ್ಪಾ ದೇವರೇ ನನಗೆ ಈ ಕಷ್ಟದಿಂದ ಯಾವಾಗ ಮುಕ್ತಿ ಕೊಡ್ತಿಯಪ್ಪ. ಆ ಗಾರ್ಮೆಂಟ್ಸ್ ಕೆಲಸ ಮುಗಿಸಿ. ಪಿಜ್ಜಾ ಅಂಗಡಿಯಲ್ಲಿ ಕತ್ತೆತರ ಎರಡು ಕಡೆ ದುಡಿದು ಈ ಮನೆಗೆ ತಂದು ಕೊಡುತ್ತಿದ್ದೇನೆ ಆದರೂ ಈ ಅಮ್ಮ ಮನೆಯಲ್ಲಿ ಒಂದು ಸಣ್ಣ ಕೆಲಸ ಕೂಡ ಮಾಡಲ್ಲ ಅಂತಾರೆ ತಿಂದಿದ್ದು ತಟ್ಟೆ ಕೂಡ ಸಿಂಕ್ ನಲ್ಲಿ ಹಾಗೆ ಬಿಡ್ತಾರೆ..

 

 

 

ಉಪ್…..ನಿಟ್ಟುಸಿರು ಬಿಟ್ಟು ಬೆಳಗ್ಗೆ ಗಡತ್ತಾಗಿ ತನ್ನ ತಂದೆ ತಾಯಿ ತಮ್ಮ ತಿಂದು ಬಿಟ್ಟಿದ್ದ ಕೇಸರಿ ಬಾತ್ ಉಪ್ಪಿಟ್ಟು ಅನ್ನ ಸಾಂಬಾರ್ ಎಲ್ಲ ತರ ತಟ್ಟೆ ಮತ್ತು ಪಾತ್ರೆಗಳು ತೊಳೆಯಲು ಶುರು ಮಾಡ್ತಾಳೆ ಪಾಪ…..

 

 

ಇನ್ನೊಂದು ಗಂಟೆಯಲ್ಲಿ ಹೆಂಗಪ್ಪ ಅಡಿಗೆ ಮಾಡೋದು… ಇವತ್ತು ಬೇರೆ ಲೇಟಾಗೋಯ್ತು, ಪಿಜ್ಜಾ ಅಂಗಡಿ ಕೆಲಸ ಬಿಡೋಣ ಅಂದ್ರೆ ಗಾರ್ಮೆಂಟ್ಸ್ ನಲ್ಲಿ ಕೊಡೋ ಸಂಬಳ ಇವರಿಗೆ ಬೇಯಿಸಿ ಹಾಕಿ ಕರೆಂಟ್ ಬಿಲ್, ನೀರ್ ಬಿಲ್ ಕೂಡ ಕಟ್ಟೋದಕ್ಕೆ ಆಗಲ್ಲ… ಇನ್ನು ಮನೆ ಬಾಡಿಗೆ 

ಈಎಂಐ ಎಲ್ಲಾ ಕಟ್ಬೇಕು ಎನ್ನುತ್ತಾ ತನ್ನ ಸ್ಥಿತಿ ನೆನೆದು ತಾನೇ ಬೇಸರಗೊಳ್ಳುತ್ತಾಳೆ……

 

 

ಈ ನಡುವೆ ಸರಿಯಾಗಿ ನಿದ್ದೆ ಮಾಡೋದಕ್ಕೂ ಕೂಡ ಆಗ್ತಿಲ್ಲ ಅಲ್ಲಿ ಮಿಷಿನ್ ಮುಂದೆ ಕೂತು ಕೆಲಸ ಮಾಡುತ್ತಿದ್ದರೆ ನಿದ್ದೆ ಬರುತ್ತೆ…

 

ಹೇಗೋ ಅಲ್ಲಿ ವಿಕ್ರಂ ಸರ್ ಇರುವುದರಿಂದ ಪರವಾಗಿಲ್ಲ ಸ್ವಲ್ಪ ಹೊತ್ತು ಆರಾಮಾಗಿ ನಿದ್ದೆ ಮಾಡಬಹುದು…..

 

ಒಂದೊಂದ್ಸಲ ಅನಿಸುತ್ತೆ ಈ ಮನೆಯಲ್ಲಿ ನಾಯಿತರ ಕೆಲಸ ಮಾಡೋ ಬದಲು ಅಲ್ಲೇ ಗಾರ್ಮೆಂಟ್ಸ್ ನಲ್ಲೇ ಎಷ್ಟೋ ವಾಸಿ ಅಂತ…..

 

 

ಅಲ್ಲಿ ಎಕ್ಸ್ಟ್ರಾ ಕೆಲಸ ಮಾಡಿದರೆ ಗಂಟೆಗೆ 500 ಸಿಗುತ್ತೆ, ಅವತ್ತೇನಾದರೂ ಮನೆಯಲ್ಲಿ ಅಡುಗೆ ಮಾಡಿಲ್ಲ ಅಂದ್ರೆ ಇವರಿಗೆ ಹೊರಗಡೆಯಿಂದ ಊಟ ಆರ್ಡರ್ ಮಾಡಬೇಕು

ನಾನು ಅಲ್ಲಿ ಕಷ್ಟಪಟ್ಟು ದುಡಿದಿದ್ದು ಆ ಪಾರ್ಸೆಲ್ಗೆ ಸರಿಹೋಗುತ್ತೆ……..

 

ಎನ್ನುತ್ತಾ ಪಾತ್ರೆ ತೊಳೆದು ಮುಗಿಸಿ ಅಡಿಗೆಗೆ ತರಕಾರಿ ಹೆಚ್ಚುತ್ತಾ ಕುಕ್ಕರ್ ನಲ್ಲಿ ಬೇಳೆ ಬೇಯಲು ಇಟ್ಟು ಇನ್ನೊಂದೆಡೆ ಅನ್ನಕ್ಕೆ ಇಡುತ್ತಾ…

 

 

ಮೋಸ್ಟ್ಲಿ ನಮ್ಮಮ್ಮ ಇದ್ದಿದ್ರೆ ನನಗಿಂತ ಪರಿಸ್ಥಿತಿ ಬರ್ತಿರ್ಲಿಲ್ಲವೇನೋ ಇವರು ಬರಿ ಅವರ ಮಗನ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ ನಾನೆಷ್ಟೇ ದುಡಿದು ತಂದು ಬೇಯಿಸಿಹಾಕಿ ಚೆನ್ನಾಗಿ ನೋಡಿಕೊಂಡು ಪ್ರಯೋಜನ ಇಲ್ಲ……

 

 

ಇನ್ನು ಅಪ್ಪ ಹೆಸರಿಗೆ ಮಾತ್ರ ಇದ್ದಾರೆ.. ಮಗಳು ಈ ವಯಸ್ಸಿನಲ್ಲಿ ಓದು ಬಿಟ್ಟು ದುಡಿಯುತ್ತಿದ್ದಾಳೆ ಎನ್ನುವ ಪರಿಜ್ಞಾನ ಇಲ್ಲದೆ ಮನೆಗೆ ಬರುತ್ತಲೇ ಕುಡಿಯುತ್ತಾ ಬರುತ್ತಾರೆ…. ಇನ್ನು ಎಲ್ಲರಿಗೂ ಬಾಯಿಗೆ ರುಚಿ ಆಗಿ ತಿನ್ನಲು ವೆರೈಟಿ ವೆರೈಟಿ ತಿಂಡಿ ಬೇಕು… 

 

 

ಇರೋ ಈ ಒಂದು ಗಂಟೆ ಟೈಮಿನಲ್ಲಿ ಪಾತ್ರೆ ತೊಳೆದು ಅಡುಗೆ ಮಾಡಿ ಅವರಿಗೆ ಬಡಿಸಬೇಕು ಮತ್ತೆ ಅವರು ಊಟ ಆದ್ಮೇಲೆ ತಿಂದಿದ್ದ ತಟ್ಟೆ ಕೂಡ ನಾನೇ ಎತ್ತಿ ಎಲ್ಲ ತೊಳೆದಿಟ್ಟು ಆಮೇಲೆ ಮನಸಿದ್ದರೆ ತಿನ್ನೋದು, ಇಲ್ಲ ಅಂದ್ರೆ ಇಲ್ಲ….. ಕ್ಲೀನ್ ಮಾಡಿ. ಆರಿದಿರುವ ಚಾಪೆ ಮೇಲೆ ಮಲಗಬೇಕು……

 

 

ಯಾವ ಜನ್ಮದ ಕರ್ಮಾನೋ ಈಗ ಅನುಭವಿಸ್ತಾ ಇದೀನಿ….. ಎನ್ನುತ್ತಾ ತನ್ನಷ್ಟಕ್ಕೆ ತಾನೇ ತನ್ನ ನೋವನ್ನು ಹೇಳಿಕೊಂಡೆ ಅಡುಗೆ ಕೆಲಸ ಅರ್ಧ ಮುಗಿಸಿದಳು…..

 

 

ಅಷ್ಟೇ ಅಲ್ಲ ಇನ್ನು ಇದೆ ಪಾಯಸ ಜಾಮೂನು ಅಂತೆ ರೊಟ್ಟಿ ಪಲ್ಯ ಅಂತೆ ಅದು ಎರಡೆರಡು ತರ ಅಯ್ಯೋ….

 

ಮೋಸ್ಟ್ಲಿ ಅಂತ ದೊಡ್ಡ ದೊಡ್ಡ ಸಾವಕಾರ ಮನೆಯಲ್ಲಿ ಕೂಡ ಇಷ್ಟು ವಿಧ ವಿಧ ತಿನ್ನಲ್ಲ ಅನ್ಸುತ್ತೆ..

ಅಷ್ಟರಲ್ಲೇ ಫೋನ್ ರಿಂಗ್ ಅನಿಸಿದೆ ಶಬ್ದ ಕೇಳಿ ಬಂತು..

 

ಅವಳ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲೆಂದೇ ಫೋನ್ ಮಾಡಿದ್ದಾನೆ ವಿಕ್ರಮ್, ಎಂದುಕೊಂಡಿದ್ದಾಳೆ ಸಿಂಧು…

 

ಹಲೋ ವಿಕ್ರಂ ಸರ್ ಹೇಳಿ ಇಷ್ಟೊತ್ತಲ್ಲಿ ಕಾಲ್ ಮಾಡಿದಿರಾ ಏನ್ ವಿಷಯ..

 

ಅದು ಏನಿಲ್ಲ ಸಿಂಧು ಹೇಗಿದ್ದೀಯಾ ಏನ್ ಮಾಡ್ತಿದ್ದೀಯಾ? ಊಟ ಮಾಡಿದ..

 

ಇನ್ನು ಇಲ್ಲ ಸರ್ ನಿಂದಾಯ್ತಾ ಊಟ ನಾನಿನ್ನು ಅಡಿಗೆ ಮಾಡ್ತಿದ್ದೆ…..

 

ಹೌದ ಬೇಗ ಮಾಡಬೇಕು ಅಲ್ವಾ ನೀನು ತಿಂದಿದ್ಯೋ ಇಲ್ಲ ಅಂತ ಯೋಚನೆಯಲ್ಲಿ ನಾನಿನ್ನು ಊಟ ಮಾಡದೆ ಕೂತಿದೀನಿ… ಎನ್ನುತ್ತಿದ್ದ ಅವನು ಗಡತ್ತಾಗಿ ಚಿಕನ್ ಮಟನ್ ಫಿಶ್ ಎಂದುಕೊಂಡು ವೆರೈಟಿ ವೆರೈಟಿ ದಿಶಸ್ ಗಳನ್ನು ತಿನ್ನುತ್ತಿದ್ದ….

 

ನನಗಾಗಿ ಊಟ ಮಾಡದೆ ಕಾಯುತ್ತಿದ್ದಾರೆ ಎಂದದ್ದನ್ನು ಕೇಳಿದ ಸಿಂಧು ಈಗ ಖುಷಿಯಲ್ಲಿ ತೇಲುತ್ತಿದ್ದಳು ಅವಳಿಗೆ ಗೊತ್ತಿಲ್ಲ ಪಾಪ ಅವನ ಸುಳ್ಳು ನಾಟಕ…..

 

ಹೌದಾ ಸರ್ ನೀವು ಊಟ ಮಾಡಿ ನಾನು ಮಾಡ್ತೀನಿ ಸರ್, ನಾನು ಸ್ವಲ್ಪ ಬ್ಯುಸಿ ಇದ್ದೀನಿ ಮತ್ತೆ ಮಾಡ್ತೀನಿ ಅನ್ನುತ್ತ ಕರೆ ಕಟ್ ಮಾಡುತ್ತಾಳೆ…

 

ಇನ್ನೊಂದು ಕಡೆ ವಿಕ್ರಮ್ ಕರೆಕಟ್ಟಾದ ಶಬ್ದಕ್ಕೆ ಎಚ್ಚರಗೊಂಡು….

ಎಷ್ಟು ಕೊಬ್ಬು ಇವಳಿಗೆ ನನ್ ಫೋನ್ ಕಟ್  ಮಾಡ್ತಾಳೆ, ಮಾಡ್ತೀನಿ ಇರು ಇವಳಿಗೆ ಇದೆ.. ಎನ್ನುತ್ತಾ ಕುಹಸ್ತ ನಗೆ ಬೀರುತ್ತಾನೆ….

 

ಫೋನ್ ಕಟ್ ಮಾಡಿದ ಸಿಂಧು ಅಡುಗೆ ಕೆಲಸದಲ್ಲಿ ನಿರಂತರಾಗುತ್ತಾಳೆ. 

 

ಅಷ್ಟರಲ್ಲಿ ಟೈಮ್ ನೋಡಿಕೊಂಡು ಕುಳಿತಿದ್ದ ಮಂಗಳ ಏನೇ ಸಿಂಧು ಇನ್ನೂ ಆಗಿಲ್ವಾ? ಇನ್ನು ಐದು ನಿಮಿಷ ಅಷ್ಟೇ ಇರೋದು ಅಷ್ಟರಲ್ಲಿ ಮಾಡಿಲ್ಲ ಅಂದ್ರೆ ನಿನ್ನ ಎನ್ನುತ್ತಾ ಪೊರಕೆ ಇಡಿದು ಬಂದಿದ್ದರು……

 

 

ಅವರ ಮಾತಿಗೆ ಸಿಟ್ಟಿಗೆದ್ದ ಸಿಂಧು,,, ಅಲ್ಲ ಕಣಮ್ಮ ಒಂದೇ ಗಂಟೆಯಲ್ಲಿ ಇಷ್ಟು ಮಾಡಿದ್ದೆ ಹೆಚ್ಚು ಅಂತದ್ರಲ್ಲಿ ಇನ್ನೂ ಮಾಡು ಅಂತಿದ್ಯ ಅದು ಬರಿ ಐದು ನಿಮಿಷದಲ್ಲಿ ನನ್ ಕೈಲಿ ಆಗಲ್ಲ ನೀನೆ ಮಾಡ್ಕೋ ಎನ್ನುತ್ತಾ ಇದ್ದವಳ ಬೆನ್ನಿಗೆ ಪೊರಕೆ ಯಿಂದ ಒಂದು ಏಟು ಬಿದ್ದಿತ್ತು….

 

 

ಬಿದ್ದ ರಬಸಕ್ಕೆ ಅಮ್ಮ ನೋವು ಎಂದು ಕಿರುಚಿದಳು ಅವಳ ಕಣ್ಣಿನಲ್ಲಿ ಆಗಲೇ ನೀರು ಧಾರಾಕಾರವಾಗಿ ಅರಿದಿತ್ತು… ಕಣ್ಣುಗಳು ನೋವಿನಿಂದ ಅವಮಾನದಿಂದ ಕೆಂಪಗೆ ಕೆಂಡದಂತಾಗಿದ್ದವು ಆದರೂ ಏನು ಮಾಡುವಂತಿಲ್ಲ ಹಲ್ಲು ಕಚ್ಚಿಕೊಂಡು ಎಲ್ಲವನ್ನು ನುಂಗಿ ಮತ್ತೆ ಕೆಲಸಕ್ಕೆ ಕೈ ಹಾಕಿದಳು…

 

 

ಏನೇ ನನಗೆ ಎದುರು ಮಾತಾಡೋ ಅಷ್ಟು ಧೈರ್ಯ ಬಂತ ನಿನ್ಗೆ, ನನ್ ಸೌತಿ ಮಗಳೇ ಏನೋ ಪಾಪ ಅಂತ ನಿನ್ನ ಸಣ್ಣವಳು ಇದ್ದಾಗ ಸಾಕಿ ಬೆಳೆಸಿದರೆ ನನಗೆ ಎದ್ರು ಉತ್ರ ಕೊಡ್ತೀಯಾ ಎನ್ನುತ್ತಾ? ಇನ್ನೊಂದೆರಡು ಏಟುಗಳನ್ನು ರಭಸವಾಗಿ ಬಿಟ್ಟಿದ್ದಳು….

 

 

ಇನ್ನಷ್ಟು ಜಾಸ್ತಿ ಆದ ನೋವನ್ನು ಮತ್ತೆ ಕಣ್ಣು ಮುಚ್ಚಿ ಹಲ್ಲು ಕಚ್ಚಿ ನುಂಗತ ಸುಮ್ಮನಾದಳು…….

 

 

ಬಾಗಿಲು ಬಡಿಯುವ ಶಬ್ದ …

ಏನೇ ಕಿವಿ ಕೇಳಸಲ್ವ ಆ ಕಿವಿ ನೋ ಬಿದ್ದೋಯ್ತ ಹೇಗೆ ಹೋಗು ಬಾಗಿಲು ತೆಗಿ…….

 

 

                         ***********

 

ಹೊಸ ಕಥೆ ಹೇಗಿದೆ ಎಂದು ತಿಳಿಸಿ, ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಹೀಗೆ ಇರಲಿ….

 

 

                                      ಆಕರ್ಷಿತ………