New Katha Varnika is now on Google Play — read Telugu stories on your phone. Learn more
💞ಚೇತನದ ಕಡಲಲ್ಲಿ ಸಿಂಧು💞 – 4

💞ಚೇತನದ ಕಡಲಲ್ಲಿ ಸಿಂಧು💞 – 4

ಪಾರ್ಟಿ ಹಾಲ್ ಈಗ ಮಂದ ಬೆಳಕಿನಿಂದ ಕೂಡಿತ್ತು ಮತ್ತು ಎಲ್ಲಾ ಪ್ರೇಮಿಗಳು ಜೋಡಿಗಳು ಇಂಗ್ಲಿಷ್ನಲ್ಲಿ ಬರುತ್ತಿದ್ದ ರೋಮ್ಯಾಂಟಿಕ್ ಸಾಂಗ್ ಹೆಜ್ಜೆ ಹಾಕುತ್ತಿದ್ದರು ವಿಕ್ರಂ ಸಿಂಧುವಿನ ನಡುವನ್ನು ಬಳಸಿ ಸ್ಟೆಪ್ ಹಾಕುತ್ತಿದ್ದ,,, 

ಅವಳ ಸಹಕಾರ ಕೂಡ ಇತ್ತು…..

 

ಕುಡಿದ ಸಿಂಧು ತಲೆ ಒಮ್ಮೆ ಗಿರ್ ಎಂದಿತು….

ಬೇಡವೆಂದರೂ ಮತ್ತೊಂದು ಸ್ವಿಫ್ಟ್ ಕುಡಿಸಿದ….

ಒಂದು ಹತ್ತು ನಿಮಿಷದ ನಂತರ ಸಿಂಧು ಪೂರ್ತಿ ಪ್ರಜ್ಞೆ ತಪ್ಪಿದಳು….

 

ಪ್ರಜ್ಞೆ ಕಳೆದುಕೊಂಡವಳನ್ನು ರೂಮಿಗೆ ಎತ್ತಿಕೊಂಡು ಹೋದ ಅವಳ ಮೇಲೆ ಕರುಣೆ ಇಲ್ಲವೇ ಪ್ರಾಣಿಯಂತೆ ಎರಗಿದ್ದ…

 

 

ಎಲ್ಲ ಮುಗಿದು ಹೋಗಿತ್ತು. ಸಿಂಧು ಜೀವನ ದಲ್ಲಿ ಅವಳ ಒಪ್ಪಿಗೆ ಇಲ್ಲದೇನೆ ಅವಳ ಹೆಣ್ಣುತನವನ್ನು ಉರಿದು ಮುಕ್ಕಿ ತಿಂದಿದ್ದ ಒಬ್ಬ ಕಾಮುಕ. ಕಾಡಿನ ಮೃಗದ ರೀತಿ….

 

ಒಂದು ಪಕ್ಷ ಈಗ ಅವಳಿಗೆ ಪ್ರಜ್ಞೆ ಇದ್ದಿದ್ದರೆ ಅವನ ಕ್ರೌರ್ಯವನ್ನು ಕಣ್ಣಾರೆ ಕಂಡು ಪ್ರಾಣವನ್ನೇ ಬಿಡುತ್ತಿದ್ದಳೆನೋ… ಅಷ್ಟು ಮೃದು ಸ್ವಭಾವದ ಹುಡುಗಿ…

 

                        ——————

 

ಆ ಒಂದು ಮುಂಜಾನೆ, ಎಲ್ಲರ ಪಾಲಿಗೆ ಸೂರ್ಯ ಬೆಳಕನ್ನು ಹೊತ್ತು ತಂದಿದ್ದಾರೆ. ಸಿಂಧು ಪಾಲಿಗೆ ಮಾತ್ರ ಕರಾಳ ಸತ್ಯವನ್ನು ತಂದಿದ್ದು ಬೆಳಕಿನಲ್ಲಿ ಕೂಡ ಅವಳ ಜೀವನ ಕತ್ತಲಿನಿಂದ ತುಂಬಿದಂತಾಯಿತು…..

 

 

ಎಚ್ಚರಗೊಂಡ ಸಿಂಧೂಗೆ ಮೈಯೆಲ್ಲಾ ಭಾರವಾದಂತೆ ಬಾಸವಾಯಿತು. ಅವಳಿಗೆ ಈಗ ಅರಿವಾಗಿತ್ತು ತನ್ನ ಮೈಮೇಲೆ ಬಟ್ಟೆ ಇಲ್ಲದೆ ಬೆತ್ತಲಾಗಿ ಮಲಗಿದ್ದೇನೆ ಎಂಬುದು ಅರ್ಥವಾದ ತಕ್ಷಣ ಬಿದ್ದಿದ್ದ ಬೆಡ್ ಶೀಟ್ ಹೊದ್ದು ಮೇಲೆ ಎದ್ದು ಕುಳಿತಳು…..

 

ಕೆದರಿದ ತಲೆ ಕೂದಲು, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅವಳು ರಾತ್ರಿ ಹುಟ್ಟಿದ್ದ ಆ ಗುಲಾಬಿ ಬಣ್ಣದ ಸೀರೆ ಅವಳ ಕಣ್ಣಿಗೆ ಈಗ ಆ ಸೀರೆ ಅಣಕಿಸಿದಂತೆ ಖಂಡಿತು….

 

 

ಗಾಯವಾಗಿದ್ದ ತುಟಿ ಕೊರಳ ಇಳಿಜಾರಿನಲ್ಲಿ ಹಲ್ಲಿನ ಗುರುತು, ನಡುವಿನ ಮೇಲೆ ಇನ್ನು ಹಸಿಯಾಗಿದ್ದ ಯಾವುದೋ ಗಂಡಸಿನ ಹೊರಟು ಸ್ಪರ್ಶ..

ಅವಳ ದೇಹದಲ್ಲಿ ಒಂದು ರಾತ್ರಿಯಲ್ಲಿ ಆದ ಬದಲಾವಣೆ ಹೆಣ್ಣಾಗಿ ಅವಳಿಗೆ ಈಗ ಅರಿವಾಯಿತು..

 

ರಾತ್ರಿ ಕುಡಿದ ಡ್ರಿಂಕ್ ಈಗ ತನ್ನ ಪರಿಣಾಮವನ್ನು ಬೀರುತ್ತಾ ವಿಪರೀತ ತಲೆ ನೋಯುತ್ತಿತ್ತು…..

 

ಅವಳಿಗೆ ರಾತ್ರಿಯ ಘಟನೆಗಳು ಸ್ವಲ್ಪ ಸ್ವಲ್ಪ ನೆನಪಾಗುತ್ತಿದ್ದವು…  ವಿಕ್ರಂ ಕೋಟ ಜ್ಯೂಸ್ ಮತ್ತೆ ಡ್ರಿಂಕ್ ಕುಡಿದ ಮೇಲೆ ತಲೆ ತಿರುಗಿದಂತಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಿದ್ದು…. ಅದನ್ನೇ ಅಡ್ವಾಂಟೇಜ್ ಮಾಡಿಕೊಂಡು ತನ್ನನ್ನು ತೋಳಿನಲ್ಲಿ ಎತ್ತಿಕೊಂಡು ರೂಮಿಗೆ ಕರೆದುಕೊಂಡು ಹೋಗಿ ಅವನ ಬಟ್ಟೆಗಳನ್ನು ಬಿಚ್ಚುತ್ತಿದ್ದದ್ದು ಮತ್ತು ಇವಳ ಮೇಲೆ ಎರಗಿದ್ದು ಅಷ್ಟೇ ನೆನಪಾಗಿದ್ದು..

ಅವನು ಮೈಮೇಲೆ ಬಿದ್ದರೂ ಅವಳಿಗೆ ವಿರೋಧಿಸುವ ಶಕ್ತಿ ಇರಲಿಲ್ಲ ಅಷ್ಟರಲ್ಲಿ ಅವಳು ಪೂರ್ತಿ ಪ್ರಜ್ಞೆ ಕಳೆದುಕೊಂಡಿದ್ದಳು…..

 

 

ಎಲ್ಲವೂ ನೆನಪಾಗಿ ಅವಳೇ ತಲೆಯನ್ನು ಸಿಡಿಯಲು ಆರಂಭಿಸಿದಳು ವಿಕ್ರಂ ಗಾಗಿ ಹುಡುಕಿದಳು. ಅವನು ಆ ರೂಮಿನ ಮೂಲೆಯಲ್ಲಿದ್ದ ಸೋಫಾದ ಮೇಲೆ ಕುಳಿತು ಡ್ರಿಂಕ್ ಮಾಡುತ್ತಾ ಸಿಗರೇಟ್ ನ ಹೊಗೆ ಬಿಡುತ್ತಿದ್ದ…

 

 

ಅವಳಿಗೆ ಈಗ ಯಾಕೋ ಅವನನ್ನು ನೋಡಿದ ತಕ್ಷಣ ಹೇಳಲಾರದ ಅಸಹ್ಯ ಹುಟ್ಟಿತು…

 

ಆಕೆ ಎಚ್ಚರಗೊಂಡನ್ನು ಗಮನಿಸಿದ ವಿಕ್ರಂ ನಿಧಾನವಾಗಿ ಎದ್ದು ಅವಳ ಬಳಿ ಬರುತ್ತಾ “ಐ ಕುಡ್ ನಾಟ್ ಕಂಟ್ರೋಲ್ ಮೈ ಸೆಲ್ ಅಟ್ ಲಾಸ್ಟ್ ನೈಟ್ ಅಚಾನಕ್ಕಾಗಿ ಇದೆಲ್ಲಾ ನಡೆದು ಹೋಯಿತು ಐ ಯಾಮ್ ಸಾರಿ” ಎಂದು ಸಿಂಪಲ್ಲಾಗಿ ಹೇಳಿಬಿಟ್ಟ….

 

 

ಸಿಂಧು ಕಣ್ಣುಗಳು ಕಣ್ಣೀರಿನಿಂದ ತುಂಬಿದವು..

 

ಸಿಂಪಲ್ಲಾಗಿ ಸಾರಿ ಎಂದರೆ ಹೋದ ಅವಳ ಮಾನ ಅವಳ ಹೆಣ್ಣುತನ ವಾಪಸ್ ಬಂದಿತೆ….

 

ಅದು ಹೇಗೆ ಅಷ್ಟು ಈಜಿ ಆಗಿ ತಗೊಂತೀರ ವಿಕ್ರಂ ಸರ್, ನನ್ ನನ್ ಒಪ್ಪಿಗೆ ಇಲ್ದೆ ನೀವು ಹೇಗೆ ಇತರ ಮಾಡಿದ್ರಿ…

 

ನಿನ್ನೆ ನಾನು ಬರಲೇ ಬರೆದಿತ್ತು ನನ್ನ ಜೀವನವೇ ನಾಶ ಆಗಿ ಹೋಯಿತು ಎಂದಳು ದುಃಖದಿಂದ…..

 

ಕೂಲ್ ಸಿಂಧು ಯಾಕೆ ಟೆನ್ಶನ್ ಮಾಡ್ಕೋತಿ, ಮಾಡಿಕೊಂಡು ಅಳುತ್ತೀಯಾ ನಾನು ಇದೀನಿ ಅಲ್ವಾ ಐ ವಿಲ್ ಹ್ಯಾಂಡಲ್ ಇಟ್ ನಿಮ್ಮತ್ರ ಅವಳನ್ನು ತಬ್ಬಿಕೊಂಡು. 

ಕುಹಕ ನಗೆ ಬೀರಿದ ಮತ್ತು ಹಣೆ ಮೇಲೆ ಒಂದು ಮುತ್ತು ಕೊಟ್ಟು ಸಮಾಧಾನ ಮಾಡಿದ ರೀತಿ ನಾಟಕ ಮಾಡಿದ…

 

 

ಅಟ್ಲೀಸ್ಟ್ ನೈಟ್ ಮನೆಗಾದರೂ ಹೋಗಬೇಕಿತ್ತು ನಾನು ಬೇಡ ಬೇಡ ಅಂದ್ರು ಡ್ರಿಂಕ್ಸ್ ಮಾಡ್ಸಿದಿರ….

 

 

ಚುಪ್ ಸಿಂಧು ಸಮಾಧಾನ ಮಾಡ್ಕೋ ಅಲ್ಲಿಲ್ವಾ ಆಗಿ ಹೋಗಿದ್ದು ಆಯ್ತು ಈಗ ಮುಂದೆ ಆಗೋದು ನೋಡೋಣ ತಿಂಡಿ ತಿಂದು ಮನೆಗೆ ಹೋಗುವಂತೆ……

 

ಅಲ್ಲ ವಿಕ್ರಂ ನನ್ನ ಜೀವನ ಹೇಗಾಗಿದೆ ನೋಡುವ ನಾನೇನು ಮಾಡಲಿ ಈಗ ಅಷ್ಟು ಈಸಿಯಾಗಿ ಹೇಗೆ ಇದನ್ನ ತಗೊಂಡ್ಲಿ ಹೇಳು ನೀನೆ?……

 

ಅವಳ ಮಾತಿನಲ್ಲಿ ಕೋಪ ದುಃಖ ಮತ್ತು ಅಸಹಾಯಕತೆ ಇತ್ತು….

 

ತಗೋಬೇಕು ಸಿಂಧು ಇದೆಲ್ಲ ಈಗಿನ ಕಾಲದ ಲವ್ ನಲ್ಲಿ ಕಾಮನ್ ಎಷ್ಟೇ ಆದ್ರೂ ನಾಳೆ ದಿನ ನಾವಿಬ್ರೂ ಮದುವೆ ಆಗುವವರೇ ಅಲ್ವಾ? ಸೊ ಟೇಕ್ ಇಟ್ ಈಸಿ ಎನ್ನುತ್ತಾ… ಗಾಳಿಯಲ್ಲಿ ಬಲೂನ್ ಬಿಟ್ಟಷ್ಟು ಈಜಿ ಆಗಿ ವಿವರಿಸಿದ್ದ….

 

 

ಓಕೆ ಫೈನ್ ನೀನೀಗ ಅಳಬೇಡ ಹೋಗು ಹೋಗಿ ಫ್ರೆಶ್ ಆಗು ಎನ್ನುತ್ತಾ ಅವಳನ್ನು ಬಾತ್ರೂಮ್ಗೆ ಕಳುಹಿಸಿದ ಮೈ ಮೇಲೆ ನೀರು ಬೀಳುತ್ತಿದ್ದಂತೆ ಮೈಮೇಲೆ ಆದ ಗಾಯಗಳು ವಿಪರೀತ ನೋವಾಗಲು ಶುರು ಮಾಡಿದವು

 

 

ಟವಲ್ ಕೊಡುವ ನೆಪದಲ್ಲಿ ಬಾತ್ರೂಮ್ ಒಳಗೆ ಬಂದ ವಿಕ್ರಂ ಮತ್ತೊಮ್ಮೆ ಒಂದಾಗುವ ದವಕ ತೋರಿದ್ದ…

 

ಅವಳು ಎಷ್ಟೇ ಬೇಡವೆಂದರೂ ಕನ್ವೆನ್ಸ್ ಮಾಡುತ್ತಾ ಬಲವಂತವಾಗಿ ಮತ್ತೊಮ್ಮೆ ಅತಿ ಒರಟಾಗಿ ತನ್ನ ಕೆಲಸ ಸಾಧಿಸಿಕೊಂಡ…..

 

ಒಮ್ಮೆ ಎಲ್ಲ ಮುಗಿದ ಮೇಲೆ ಇನ್ನು ನಾನು ಎಷ್ಟೇ ರಕ್ಷಣೆ ಮಾಡಿಕೊಂಡರು ಪ್ರಯೋಜನವಿಲ್ಲ ಎಂದು ಅವಳು ಸುಮ್ಮನಾಗಿ ಯಂತ್ರದಂತೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದಳು……

 

 

ನನ್ನ ಪಾಡಿಗೆ ಸ್ನಾನ ಮಾಡಿ ತನ್ನ ಬಟ್ಟೆ ತೊಟ್ಟ ವಿಕ್ರಂ ಅವಳು ಬಂದ ತಕ್ಷಣ “ಓಕೆ ಬಾಯ್ ಸಿಂಧು ಹುಷಾರಾಗಿ ಹೋಗು, ನನಗೆ ಸ್ವಲ್ಪ ಅರ್ಜೆಂಟ್ ವರ್ಕ್ ಇದೆ” ಎನ್ನುತ್ತಾ ಅವಳ ಮಾತಿಗೂ ಕಾಯದೆ ರೂಮಿನಿಂದ ಹೊರಟು ಹೋಗಿದ್ದ…….

 

 

ಗಾಯಗೊಂಡ ಜಾಗವನ್ನು ಕ್ರೀಮ್ ನಿಂದ ಕವರ್ ಮಾಡಿ ತುಟಿಗೆ ಅತಿಯಾದ ಲಿಫ್ಟಿಕ್ ಬಳಿದುಕೊಂಡು ಯಾರಿಗೂ ಕಾಣದಂತೆ ಮರೆ ಮಾಚಿದಳು….

ನೋವಿನಿಂದಲೇ ಮನೆ ಕಡೆ ಹೆಜ್ಜೆ ಹಾಕಿದಳು. ಅವಳಿಗೆ ಅಲ್ಲೇನು ಆಗಿದೆ ಅದನ್ನು ಅರಗಿಸಿಕೊಳ್ಳುವ ಅಥವಾ ನಂಬುವ ಶಕ್ತಿ ಇರಲಿಲ್ಲ…..

 

 

 

ಮನೆಗೆ ಬಂದೊಡನೆ ಮಂಗಳ,,

 

 

ಎಲ್ಲಿ ಹೋಗಿದ್ದೆ ರಾತ್ರಿಯಲ್ಲ ಯಾವನ್ ಜೊತೆ ಹಾಳಾಗೋಗಿದ್ದೆ ಮನೆಯಲ್ಲಿದ್ದರೆ ಕೆಲಸ ಮಾಡಬೇಕಾಗುತ್ತೆ ಅಂತ ಹೋಗಿದ್ದ….

 

 

ಇಲ್ಲ ಅಮ್ಮ ನೈಟ್ ಶಿಫ್ಟ್ ಹಾಕಿಸಿಕೊಂಡಿದ್ದೆ ಸ್ವಲ್ಪ ಎಕ್ಸ್ಟ್ರಾ ದುಡ್ಡು ಸಿಗುತ್ತೆ ಮತ್ತೆ ಇವತ್ತು ಮನೆ ಕೆಲಸ ಮಾಡೋದು ಟೈಮ್ ಸಿಗುತ್ತೆ ಅಂತ….

ಸರಾಗವಾಗಿ ಬಾಯಿಗೆ ಬಂದ ಸುಳ್ಳು ಹೇಳಿದಳು….

 

ಹಳೆಯ ನೈಟಿ ಧರಿಸಿ ಮನೆಯ ಕೆಲಸಗಳನ್ನು ಒಂದೊಂದಾಗಿ ಮಾಡಲು ಆರಂಭಿಸಿದಳು. ವಿಪರೀತ ನೋವಾಗುತ್ತಿದ್ದ ತಲೆ ಮೈಕೈ ಎಲ್ಲವನ್ನು ಮರೆತು ಸುಮ್ಮನೆ ಯಂತ್ರದಂತೆ ಅಭ್ಯಾಸ ಬಲದಂತೆ ಪಾತ್ರೆ ತೊಳೆ, ಅದು ಅಡುಗೆ ಮಾಡು, ಮನೆ ಗುಡಿಸಿ ಒರೆಸು, ರಾಶಿ ರಾಶಿ ಬಟ್ಟೆ ಒಗೆದು ಕೊನೆಗೆ ಸ್ನಾನ ಮಾಡಿದವಳೇ ಸುಸ್ತಾಗಿ ಅರಿದಿರುವ ಚಾಪೆಯಲ್ಲಿ ನೆಮ್ಮದಿಯ ನಿಟ್ಟಿಸಿರು ಬಿಟ್ಟು ಕಣ್ಣು ಮುಚ್ಚಿದಳು…….

 

 

ಅಷ್ಟರಲ್ಲಿ ಶುರುವಾಗಿತ್ತು ಏನೇ ಮಧ್ಯಾಹ್ನಕ್ಕೆ ಏನಾದರೂ ಅಡುಗೆ ಮಾಡಿದ್ಯ ಇಲ್ವಾ……

 

ಎಲ್ಲ ರೆಡಿ ಮಾಡಿದೀನಿ ಅಮ್ಮ

 

ನಿಮ್ ತಾತ ಬರ್ತಾನ ಬಡಿಸುವುದಕ್ಕೆ ಮಾಡಿಟ್ಟರೆ ಸಾಲುವುದಿಲ್ಲ ಹಾಕೊಂಡು ಬಾ ಬೇಗ ಜೊತೆಯಲ್ಲಿ ಹಪ್ಪಳನು ಹಾಕು…..

 

ಸರಿ ಎಂದವಳೇ,,,

ಛೆ ನೆಮ್ಮದಿಯಾಗಿ ಸ್ವಲ್ಪ ಮಲಗಲು ಬಿಡುವುದಿಲ್ಲ ಎಂದುಕೊಂಡು ಅಮ್ಮನಿಗೆ ಊಟ ಹಾಕಿ ಕೊಟ್ಟು ಅವರು ತಿನ್ನುವವರೆಗೂ ಕಾದು ತೊಳೆದು ವರೆಸಿ ತಾನು ಒಂದು ಲೋಟ ಮಜ್ಜಿಗೆ ಕುಡಿದು ನಿದ್ದೆಗೆ ಜಾರಿದಳು……

 

 

ನಿದ್ದೆಯಲ್ಲೂ ಕೂಡ ಅವನ ಒರಟು ಸ್ಪರ್ಶ ಅವಳಿಗೆ ಭಯ ಬೀಳಿಸುತ್ತಿತ್ತು….. 

ನಡೆದ ಘಟನೆಗಳೆಲ್ಲ ಕನಸಿನಂತೆ ಒಮ್ಮೆ ಕಣ್ಣು ಮುಂದೆ ಬಂದು ಹೋದವು…

 

 

ಕೆಲವು ಗಂಟೆಗಳ ನಂತರ,,,

 

 

ಏ ಸಿಂಧು ಎದ್ದೇಳಿ ನಾವಿಲ್ಲಿ ಹಸಿವು ಕೊಂಡಿದ್ದರೆ ಇಲ್ಲಿ ರಾಣಿ ತರ ಮಲಗಿದ್ದಾಳೆ.. ಬೇಗ ಎದ್ದು ಟೀ ಜೊತೆಯಲ್ಲಿ ಬಜ್ಜಿ ಪಕೋಡ ಮಾಡು… ದಿನ ಸಪ್ಪೆ ಊಟ ತಿಂದು ನಾಲಿಗೆ ಕೆಟ್ಟೋಗಿದೆ ಜೊತೆನಲ್ಲಿ ಚುರುಮುರಿನು ಇರಲಿ…

 

ಇನ್ನು ಹಾಗಲ್ಲ ಎಂದರೆ ಒದೆ ಬೀಳಬಹುದು ಎಂದರಿತು ವಿಧಿ ಇಲ್ಲದೆ ಸುಮ್ಮನೆ ಕೆಲಸಗಳಲ್ಲಿ ಮಗ್ನವಾಗುತ್ತಾಳೆ…..

 

ಅವಳಿಗೆ ಈ ಕ್ಷಣ ಎಲ್ಲಾದರೂ ಹೋಗಿ ಸತ್ತು ಬಿಡಬೇಕು ಎನಿಸಿಬಿಟ್ಟಿತ್ತು…….

 

 

ಒಂದೆರಡು ದಿನ ಕಳೆದಿದ್ದವು. ಗಾರ್ಮೆಂಟ್ಸ್ ನಲ್ಲಿ ಮೊದಲಿನತರ ವಿಕ್ರಂ ಮಾತನಾಡುತ್ತಿರಲಿಲ್ಲ ಇವಳೇ ನೆಪ ಹುಡುಕಿ ಮಾತನಾಡಿಸಿದರೆ ಕೆಲಸದ ಬಗ್ಗೆ ಮಾತ್ರ ಉತ್ತರ ನೀಡಿ ಹೋಗುವಂತೆ ಹೇಳುತ್ತಿದ್ದ ಫೋನ್ ಮಾಡಿದರೆ ನಂಬರ್ ಬ್ಲಾಕ್ ಲಿಸ್ಟ್ ನಲ್ಲಿ ಇತ್ತು……

 

ಅವಳಿಗೂ ಕೆಲಸದ ಜಾಗದಲ್ಲಿ ಬೇರೇನೂ ಮಾತನಾಡುವ ಧೈರ್ಯ ಬರಲಿಲ್ಲ …..

 

 

 

ಒಂದು ವಾರ ಕಳೆದಿತ್ತು,,,…

 

 

ಈಗ ಅವನೇ ಬಂದು ಮಾತನಾಡಿದ್ದ ಹೇಗಿದ್ದೀಯಾ ಸಿಂಧು ಸಾರಿ ಅವತ್ತಿಂದ ನಿನ್ನ ಜೊತೆ ಸರಿಯಾಗಿ ಮಾತನಾಡಲು ಆಗಲಿಲ್ಲ ವರ್ಕ್ ಪ್ರೆಶರ್ ಜಾಸ್ತಿ ಇತ್ತು ಏನು ಅಂತ ಸಿಹಿಯಾದ ಮಾತನಾಡುತ್ತಾ ಮತ್ತೊಮ್ಮೆ ಹತ್ತಿರವಾಗಿದ್ದ.. 

 

ಸಿಂಧುವಿಗೆ ಕಳೆದುಕೊಂಡ ವಿಶ್ವಾಸ ಮರುಕಳಿಸಿತು…

 

ಇತ್ತ ದೀಪಿಕಾ ಪ್ರೀತಿಯಲ್ಲಿ ಮುಳುಗಿದ್ದ ಚೇತನ್ ಕೇವಲ ಅವಳ ಕೆಲಸ ಮಾಡುವ ಅವಳ ಅವಶ್ಯಕತೆ ಪೂರೈಸುವ ಹಾಳಾಗಿದ್ದ ಅವಳ ಊಟ ತಿಂಡಿ ಶಾಪಿಂಗ್ ಕ್ಯಾಬ್ ಬುಕಿಂಗ್ ಇಂದ ಹಿಡಿದು ಪ್ರತಿಯೊಂದು ಈಗ ಅವನೇ ಮಾಡುತ್ತಿದ್ದ ಜೊತೆಯಲ್ಲಿ ಅವಳ ಶಾಪಿಂಗ್ ಬ್ಯಾಗ್ ಬಾರ ಹೊರುವ ಕೂಲಿ ಆಳು ಕೂಡ….

 

                     ***********

 

                      ಧನ್ಯವಾದಗಳು 

 

 

                        ✍️ಆಕರ್ಷಿತ❤️……