💞ಚೇತನದ ಕಡಲಲ್ಲಿ ಸಿಂಧು💞 – 2
ಏನೇ ನನಗೆ ಎದುರು ಮಾತಾಡೋ ಅಷ್ಟು ಧೈರ್ಯ ಬಂತ ನಿನ್ಗೆ, ನನ್ ಸೌತಿ ಮಗಳೇ ಏನೋ ಪಾಪ ಅಂತ ನಿನ್ನ ಸಣ್ಣವಳು ಇದ್ದಾಗ ಸಾಕಿ ಬೆಳೆಸಿದರೆ ನನಗೆ ಎದ್ರು ಉತ್ರ ಕೊಡ್ತೀಯಾ ಎನ್ನುತ್ತಾ? ಇನ್ನೊಂದೆರಡು ಏಟುಗಳನ್ನು ರಭಸವಾಗಿ ಬಿಟ್ಟಿದ್ದಳು….
ಇನ್ನಷ್ಟು ಜಾಸ್ತಿ ಆದ ನೋವನ್ನು ಮತ್ತೆ ಕಣ್ಣು ಮುಚ್ಚಿ ಹಲ್ಲು ಕಚ್ಚಿ ನುಂಗತ ಸುಮ್ಮನಾದಳು…….
ಬಾಗಿಲು ಬಡಿಯುವ ಶಬ್ದ …
ಏನೇ ಕಿವಿ ಕೇಳಿಸಲ್ವಾ ಅದು ಬಿದ್ದೋಯ್ತ ಹೇಗೆ ಹೋಗು ಬಾಗಿಲು ತೆಗಿ……
ನೀವೇ ಹೋಗಿ ತೆಗೆಯಬಹುದಲ್ಲ ಅಮ್ಮ ನನ್ನ ಕೈ ಚೆನ್ನಾಗಿಲ್ಲ ಎಂದು ಹೇಳಲು ಹೊರಟವಳು ಸುಮ್ಮನಾದಳು. ಮತ್ತೆ ಎಲ್ಲಿ ಅದೇ ರೀತಿ ಹಿಂಸಿಸಿ ಹೊಡೆಯೊಳು ಎಂಬ ಭಯಕ್ಕೆ ತಾನೇ ಎದ್ದು ಹೋಗಿ ಬಾಗಿಲು ತೆಗೆದಳು…..
ಅಲ್ಲಿ ಕಂಠಪೂರ್ತಿ ಕುಡಿದು ನಾರುತ್ತಾ ಬಂದಿರುವ ಅಪ್ಪ ಸುರೇಶ್ ನನ್ನ ನೋಡಿ ಅವಳಿಗೆ ಒಂದು ರೀತಿ ಅಸಹ್ಯವಾಯಿತು…..
ಏನಪ್ಪಾ ಇದು ಇಷ್ಟು ಕುಡಿದಿದ್ದೀರಾ ಇನ್ನು ತಲೆ ತೋರಾಡುತ್ತಿದ್ದವನು ಕರೆದುಕೊಂಡು ಬಂದು ಸೋಫಾ ಮೇಲೆ ಮಲಗಿಸಿದಳು. ಮತ್ತೆ ಅಡಿಗೆ ಕೆಲಸ ಮುಗಿಸಿ ಎಲ್ಲವನ್ನು ಟೇಬಲ್ ಮೇಲೆ ತಂದಿರಿಸಿ ಅವರಿಗೆಲ್ಲ ಊಟ ಹಾಕಿ ಕೊಟ್ಟು ತಾನು ಒಂದು ಲೋಟ ನೀರು ಕುಡಿಯುತ್ತ ಸಮಾಧಾನದ ನಿಟ್ಟಿಸಿರು ಬಿಟ್ಟಳು……
ಅಷ್ಟರಲ್ಲಿ ಏಯ್ ಏನೇ ಇದು ಸಾಂಬರಲ್ಲಿ ಉಪ್ಪಿಲ್ಲ ಸಿಹಿಗೆ ಏಲಕ್ಕಿ ಹಾಕಿಲ್ಲ ಏನ್ ದೊಡ್ ರೋಗ ನಿನಗೆ ತಂದು ಹಾಕು ಎನ್ನುತ್ತಾ ದಬ್ಬಾಳಿಕೆಯ ಧ್ವನಿಯಲ್ಲಿ ಕಿರುಚಿದರು ಮಂಗಳ…….
ಆಗಲೇ ವಿಕ್ರಂ ಜೊತೆ ಮಾತನಾಡುತ್ತಾ ಸಾಂಬಾರ್ ನಲ್ಲಿ ಉಪ್ಪನ್ನು ಹಾಕುವುದನ್ನು ಮರೆತಿದ್ದಳು….
ಮತ್ತೆ ಏಲಕ್ಕಿ ಕಾಲಿ ಆಗಿದೆ ಅಮ್ಮ ನಾಳೆ ತರುತ್ತೇನೆ ಎಂದಳು…
ಕುಡಿದ ಮತ್ತಿನಲ್ಲಿ ಸರಿಯಾಗಿ ತಿನ್ನದೆ ಎಲ್ಲವನ್ನು ಚೆಲ್ಲುತ್ತಿದ್ದ ಅಪ್ಪನನ್ನು ನೋಡಿ ಮನಸ್ಸು ಕದಡಿತ್ತು…..
ನನ್ನಪ್ಪ ನಾನು ಚಿಕ್ಕವಳಿದ್ದಾಗ ಹೀಗೆ ಇದ್ದವರೆ ಅಲ್ಲ ಆದರೆ ಏಕೆ ಹೀಗೆ ಬದಲಾದರೂ ಗೊತ್ತಿಲ್ಲ ನನ್ನ ತಾಯಿ ತೀರಿಕೊಂಡ ಮೇಲೆ ಹೀಗೆಲ್ಲಾ ಆಗೋಯ್ತು ನನ್ನ ಜೀವನವೇ ಉಲ್ಟಾ ಪಲ್ಟಾ ಆಯ್ತು…….
ತಟ್ಟೆಯನ್ನು ಎತ್ತಿಕೊಂಡು ಅವರನ್ನು ಸರಿಯಾಗಿ ಕೂರಿಸಿ ತುತ್ತನ್ನು ಕಲಸುತ್ತಾ ಬಾಯಿಯಲ್ಲಿ ಇಟ್ಟಳು….
ಎಲ್ಲರ ಊಟ ಮುಗಿದು ಮನೆಯ ಕ್ಲೀನಿಂಗ್ ಗೆ ನಿಂತಿದ್ದಳು ಸಿಂಧು ಸಮಯ ಸುಮಾರು 11 ಗಂಟೆ ದಾಟಿದರು ಇನ್ನು ತಮ್ಮ ನಿಹರ್ ಬಂದಿರಲಿಲ್ಲ ಅವನೊಬ್ಬನಿಗಾಗಿ ಊಟವನ್ನು ಎತ್ತಿಟ್ಟು ಕಾಯುತ ಅವಳ ಕೆಲಸಕ್ಕೆ ನಿಂತಿತ್ತು… ಇನ್ನು ಕಾದು ಕಾದು ಸಾಕಾಗಿ ತನಗೆ ಸ್ವಲ್ಪ ಊಟ ಬಡಿಸಿಕೊಂಡು ಒಂದಷ್ಟು ಬೇಕಾಬಿಟ್ಟಿ ತಿಂದು ಕೈ ತೊಳೆದು ಕುಳಿತಲ್ಲಿಯೇ ಮಲಗಿ ಬಿಟ್ಟಳು….
ಅವಳ ಮನಸ್ಸಿನ ನೋವಿನ ಭಾರಕ್ಕೆ ಹೊಟ್ಟೆ ಪೂರ್ತಿ ತುಂಬಿದಂತೆ ಬಾಸವಾಗಿತ್ತು….
ಅಷ್ಟು ನೋವುಗಳನ್ನು ನುಂಗಿ ಬದುಕುತ್ತಿದ್ದಳು ಪ್ರತಿನಿತ್ಯ..
ಯಾವಾಗಲೂ ಮಧ್ಯರಾತ್ರಿಯಲ್ಲಿ ಬಂದ ನಿಹಾರು ಊಟ ಮಾಡಿ ತಾನೆ ಪಾತ್ರೆಗಳನ್ನು ತೊಳೆದಿರಿಸಿ ಮಲಗಿದ್ದವಳನ್ನು ಎಚ್ಚರಿಸಿ ಮಲಗಲು ಕಳಿಸಿ ತಾನು ನಿದ್ದೆಗೆ ಜಾರಿದ…..
*******
ಆ ಮನೆಯಲ್ಲಿ ಅವಳ ಬಗ್ಗೆ ಸ್ವಲ್ಪವಾದರೂ ಕೇರ್ ಮಾಡುವವನು ಇವನೊಬ್ಬನೇ ಅದೇ ನಿಹಾರ್..
ತನ್ನ ಅಕ್ಕನ ಕಷ್ಟವನ್ನು ಅರಿತಿದ್ದ ಕಾರಣ ಅವನು ಓದಿಕೊಂಡೇ ಪಾರ್ಟ್ ಟೈಮ್ ಜಾಬ್ ಮಾಡುತ್ತಿದ್ದ.. ಮತ್ತು ಸಂಜೆ ಅಕ್ಕ ಬಂದ ಮೇಲೆ ತನ್ನ ತಾಯಿ ಕೊಡುವ ಕಿರುಕುಳ ಅರಿತೆ ಅವನು ಅದನ್ನು ತನ್ನ ಕಣ್ಣಿನಲ್ಲಿ ನೋಡಲಾಗದೆ ಇನ್ನು ಸ್ವಲ್ಪ ಹೊತ್ತು ಡೆಲಿವರಿ ಬಾಯ್ ವರ್ಕ್ ಮಾಡಿ ಲೇಟ್ ನೈಟ್ ಮನೆಗೆ ಬರುತ್ತಿದ್ದ…….
ಬುದ್ಧಿ ಬಂದಾಗಿನಿಂದಲೂ ತಾಯಿಯ ಕಿರುಕುಳ ತಡೆಯಲಾಗದೆ ಮನ ಬಿಟ್ಟು ಹೋಗಿಬಿಡಬೇಕು ಎನಿಸಿದರು ತನ್ನ ತಮ್ಮನಿಗಾಗಿಯೇ ಸುಮ್ಮನೆ ಎಲ್ಲವನ್ನು ಸಹಿಸಿಕೊಂಡು ಬದುಕುತ್ತಿದ್ದಳು ಸಿಂಧು….
ನನ್ನನ್ನು ಇಂಜಿನಿಯರ್ ಓದಿಸುವ ಆಸೆ ಇದ್ದರಿಂದ ಅವನಿಗೆ ಓದಿಸಿ ಅವನ ಜೀವನವನ್ನು ರೂಪಿಸಿ ಹೋಗಬೇಕು ಎಂಬುದು ಅವಳ ಯೋಚನೆ ಯಾಗಿತ್ತು…..
ಏನೇ ಸಿಂಧು ಕೆಲಸ ಅಂತ ಹೇಳಿ ನನ್ನನ್ನೇ ಅವಾಯ್ಡ್ ಮಾಡು ಅಷ್ಟು ಪೊಗರು ನಿನಗೆ, ನಿನ್ನ ಫುಲ್ ನನ್ನ ಲವ್ ನಲ್ಲಿ ಬಿಡಿಸಿಕೊಂಡು ನಿನ್ನ ಅನುಭವಿಸಲಿಲ್ಲ ಅಂದ್ರೆ ನನ್ನ ಹೆಸರೇ ಬದಲಾಯಿಸ್ಕೊತಿನಿ. ಎನ್ನುತ್ತಾ ಡ್ರಿಂಕ್ಸ್ ಮಾಡುತ್ತಾ ಕಾಲ ಮೇಲೆ ಕಾಲು ಹಾಕಿ ಎಂಜಾಯ್ ಮಾಡ್ತಿದ್ದ ಸಿಂಧು ಕೆಲಸ ಮಾಡುವ ಗಾರ್ಮೆಂಟ್ಸ್ ನ ಸುಪ್ರವೈಸರ್ ವಿಕ್ರಂ…
*******
ಹಲೋ ಬಂಗಾರ ಏನ್ ಮಾಡ್ತಿದ್ದೀಯಾ? ಎನ್ನುವ ಧ್ವನಿ ಬಂದಿತ್ತು ಅತ್ತ ಕಡೆಯಿಂದ…..
ಹಾಯ್ ಹೇಳು ಡಾರ್ಲಿಂಗ್ ಏನಿಲ್ಲ ಈಗ ತಾನೆ ವರ್ಕ್ ಮುಗೀತು. ಅದಕ್ಕೆ ಫ್ಲ್ಯಾಟ್ ಗೆ ಬಂದು ಫ್ರೆಶ್ ಅಪ್ ಆಗ್ತಿದೆ..
ಊಟ ಇನ್ನೂ ಮಾಡಿಲ್ಲ ಕಣೋ ಸ್ವಲ್ಪ ಆರ್ಡರ್ ಮಾಡಿ ಬಿಡು ಚಿಕನ್ ಬಿರಿಯಾನಿ ಮತ್ತು ಜೊತೆಯಲ್ಲಿ ಕೂಲ್ ಡ್ರಿಂಕ್ಸ್ ಏನಾದರೂ ಸಿಕ್ಕಾಪಟ್ಟೆ ತಲೆನೋವು ವರ್ಕ್ ಪ್ರಶರ್ ತುಂಬಾ ಇತ್ತು…. ಎನ್ನುತ್ತಾ ದೀಪಿಕಾ ಆರ್ಡರ್ ಮಾಡುತ್ತಾಳೆ ಚೇತನ್ ಹತ್ರ….
ಹಾ ಸರಿ ಆರ್ಡರ್ ಮಾಡಿದ್ದೀನಿ ದೀಪಿಕಾ ಇನ್ನೂ 10 ನಿಮಿಷದಲ್ಲಿ ಬರುತ್ತೆ…..
ಆರಾಮಾಗಿ ತಿನ್ನು……
ಓಕೆ ಲವ್ ಯು ಬಾಯ್ ಕಣೋ ಎನ್ನುತ್ತಾ ಇನ್ನೊಂದು ಮಾತನಾಡಲು ಅವಕಾಶ ಕೊಡದಂತೆ ಕರೆ ತುಂಡರಿಸಿದ್ದಳು…….
ಚೇತನ್:- ಹಲೋ ಹಲೋ ಮಾತಾಡಕೂ ಮುಂಚೆ ಕಟ್ ಮಾಡ್ತಾಳೆ ಯಾವಾಗ್ಲೂ ಇಂಗೆ ಅಲ್ಲಾ ಇವಳು ನಿಜವಾಗ್ಲೂ ನನ್ನ ಲವ್ ಮಾಡ್ತಿದ್ದಾಳ….
ಛೆ ಛೆ ಆತರ ಏನು ಇರಲ್ಲ ಪಾಪ ಅವಳು ಕೆಲಸ ಮಾಡಿ ಸುಸ್ತಾಗಿ ಇರ್ತಾಳೆ ಅದಕ್ಕೆ ಕಟ್ ಮಾಡಿರಬಹುದು ಸುಮ್ನೆ ನಾನೇ ಏನೇನೋ ಥಿಂಕ್ ಮಾಡ್ತೀನಿ ಎನ್ನುತ್ತಾ ತನ್ನ ಆಲೋಚನೆಗೆ ಬ್ರೇಕ್ ಹಾಕಿದ್ದ….
ಅಬ್ಬಬ್ಬಾ ಏನಾದ್ರು ಇತ್ತೀಚಿಗೆ ತುಂಬಾ ಜಾಸ್ತಿ ಆಗೋಯ್ತು ಏನೋ ಒಳ್ಳೆ ದುಡ್ಡಿರೋನು ಅಂತ ಲವ್ ಮಾಡೋ ತರ ನಾಟಕ ಮಾಡಿದೆ ಒಳ್ಳೊಳ್ಳೆ ಗಿಫ್ಟ್ ಸಿಗುತ್ತದೆ ಶಾಪಿಂಗ್ ಮಾಡೋದಕ್ಕೆ ಅವನ ಹತ್ತಿರ ನನ್ನ ಎಲ್ಲಾ ಖರ್ಚು ಮುಗಿತಿತ್ತು ಆದರೆ ಅವನಿಗ ಲವ್ ಅಂತ ಟಾರ್ಚರ್ ಮಾಡುತ್ತಿದ್ದಾನೆ..
ಮದುವೆ ಬೇರೆ ಮಾಡ್ಕೊಳೋಣ ಅಂತಾನೆ ನಾನು ಇನ್ನು ಲೈಫ್ ನ ಎಂಜಾಯ್ ಮಾಡಬೇಕು ಅವನನ್ನ ಮದುವೆಯಾಗಿ ಸೀರೆ ಉಟ್ಕೊಂಡು ಒಳ್ಳೆ ಮೂದೇವಿ ತರ ಸಂಸಾರ ಮಾಡಕ್ಕಾಗುತ್ತಾ..?…
ಹೇಗಾದರೂ ಮಾಡಿ ಜಗಳ ಮಾಡಿ ಬ್ರೇಕ್ಅಪ್ ಮಾಡ್ಕೋಬೇಕು ಫಸ್ಟು ಎಂದು ಯೋಚಿಸುತ್ತಾಳೆ ದೀಪಿಕಾ.
“ದೀಪಿಕಾ ಲೆಟ್ಸ್ ಶಿಫ್ಟ್ ಟು ನ್ಯೂ ಬಾಯ್ ಫ್ರೆಂಡ್”… ಎಂದುಕೊಂಡು ತನ್ನ ಮೊಬೈಲ್ ನಲ್ಲಿ ಯಾವುದಾದರೂ ಶ್ರೀಮಂತ ಹೊಸ ಹುಡುಗನ ಪ್ರೊಫೈಲ್ ಸಿಗಬಹುದು ಎಂದು ಹುಡುಕಿದಳು…
ಹಾ ಎಕ್ಸಾಕ್ಟ್ಲಿ ಈಜಿ ಯ ಪರ್ಫೆಕ್ಟ್ ಮ್ಯಾಚ್ ಟು ಮಿ ಎನ್ನುತ್ತಾ? ಒಬ್ಬ ಸ್ಟಂಡಿಂಗ್ ಹುಡುಗನ ಪ್ರೊಫೈಲ್ ನೋಡುತ್ತಾ ಮೋಹಕತೆಯಿಂದ ನಗುತ್ತಾಳೆ…..
ಆದಷ್ಟು ಬೇಗ ಮನೆಯಲ್ಲಿ ವಿಷಯ ಹೇಳಿ ಮದುವೆ ಆಗೋಣ ಎಂದರೆ ಇವಳು ಕೇಳುತ್ತಾನೆ ಇಲ್ಲ ಎಷ್ಟು ದಿನ ಅಂತ ಹೀಗೆ ಲವರ್ಸ್ ರೀತಿ ಶಾಪಿಂಗ್ ಡೇಟಿಂಗ್ ಕಾಫಿ ಡೇ ಅಂತ ಓಡಾಡೋದು ಮದುವೆಯಾಗಿ ಆರಾಮಾಗಿ ಡೈಲಿ ನಾನು ಹೆಂಡ್ತಿ ಮುಖ ನೋಡಿಕೊಂಡು ಆಫೀಸ್ಗೆ ಹೋಗಬಹುದು ಆಮೇಲೆ ಪ್ರತಿದಿನ ಅವಳಿಗೆ ಗಿಫ್ಟ್ ತಗೊಂಡು ಬಂದು ಅವಳಿಗೆ ಕೋಪ ಬಂದಾಗ ಕೊಟ್ಟು ಸಮಾಧಾನ ಮಾಡಿ ಅವಳಿಗೆ ಊಟ ಮಾಡಿಸಬೇಕು ಹಾಗೆ ಹೀಗೆ ಎನ್ನುತ್ತಾ ಪಕ್ಕ ಹಸ್ಬೆಂಡ್ ಮೆಟೀರಿಯಲ್ ರೀತಿ ಯೋಚಿಸುತ್ತಿದ್ದಾನೆ… ಮುಗ್ಧ ಚೇತನ್..
ಏನ್ ಟೈಮಿಂಗ್ಸ್ ಆ ಸಿಂಧು ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಲ್ಲಿ ಒಳ್ಳೆ ಟೆಂಟಿಂಗ್ ಫಿಗರ್ ನ ಪ್ರೊಫೈಲ್ ಬಂದಿದೆ…..
“ಹಾಯ್ ಡಾರ್ಲಿಂಗ್” ಎಂಬ ಮೆಸೇಜ್ ನೋಡಿ
“ಹಲೋ ಸ್ವೀಟ್ ಎನ್ನುತ್ತಾ” ಇನ್ನಷ್ಟು ಹಲವು ಮೆಸೇಜ್ಗಳು ರವಾನೆಯಾಗಿದ್ದವು ವಿಕ್ರಂ ಮತ್ತು ದೀಪಿಕಾ ಮಧ್ಯೆ….
ಮರುದಿನ ಬೆಳಗ್ಗೆ ಮಾಮೂಲಿಯಾಗಿ ನಾಲ್ಕು ಗಂಟೆಗೆ ಎದ್ದ ಸಿಂಧು ಮನೆ ಕೆಲಸಗಳಲ್ಲಿ ತೊಡಗಿಕೊಂಡಳು… ಸ್ನಾನ ಮಾಡಿ ದೇವರ ಮುಂದೆ ದೀಪ ಹಚ್ಚಿ ಕೈ ಮುಗಿದ ಸಿಂಧು ಮತ್ತೆ ಅಡಿಗೆ ಕೆಲಸದಲ್ಲಿ ನಿರಂತರಾಗಿ ಹೋದಳು. ಬೆಳಗಿನ ತಿಂಡಿ ಮಧ್ಯಾಹ್ನಕ್ಕೆ ಮತ್ತೆ ರಾತ್ರಿಗೆ ಆಗುವಂತ ಅಡಿಗೆ ಮಾಡಿ ಮುಗಿಸಿದ ಸಿಂಧು ಎದ್ದಿದ್ದ ಎಲ್ಲರಿಗೂ ಕಾಫಿ ಕೊಟ್ಟು ತಮ್ಮನಿಗೆ ಮತ್ತು ತನಗೆ ಬಾಕ್ಸ್ ಗೆ ಲಂಚ್ ಪ್ಯಾಕ್ ಮಾಡಿ…
ಕಡು ಹಸಿರು ಬಣ್ಣದ ಕಾಟನ್ ಸೀರೆ ಒಪ್ಪವಾಗಿ ಹುಟ್ಟು ಒಣಗಿದ ಗಂಗೂರು ಕೂದಲಿಗೆ ಜಡೆ ಹಾಕಿ, ಹಣೆಗೆ ಸಣ್ಣ ಬಿಂದಿ, ಕೊರಳಲ್ಲಿ ಬೆಳ್ಳಿ ಚೈನ್ ತನ್ನ ಎಡ ಕೈಗೆ ಕಪ್ಪನೆಯ ಬೆಲ್ಟ್ ವಾಚ್ ಧರಿಸಿ ಇನ್ನೊಂದು ಕೈಗೆ ಒಂದೆರಡು ಬಳೆ ತೊಟ್ಟು ಬಾರದ ನಗುವನ್ನು ಮುಖದಲ್ಲಿ ತಂದುಕೊಂಡು ಹೆಗಲ ಮೇಲೆ ಬ್ಯಾಗ್ ಒತ್ತು ಕೈನಲ್ಲಿ ಕ್ಯಾರಿಯರ್ ಹಿಡಿದು ಗಾರ್ಮೆಂಟ್ಸ್ ಕಡೆಗೆ ಹೆಜ್ಜೆ ಹಾಕಿದಳು…
ಅವಳು ಹೋದ ನಂತರ ಅಡಿಗೆ ಮನೆಗೆ ಬಂದು ನೋಡಿದ ಮಂಗಳ…
ಅಯ್ಯಯ್ಯೋ ಈ ಮೂದೇವಿ ಇವತ್ತು ರಾತ್ರಿಗೆ ಅಡುಗೆ ಮಾಡ್ಬಿಟ್ ಹೋಗಿದ್ದಾಳೆ. ಆ ತಣ್ಣಗಾಗಿರೋದನ್ನ ಹೇಗೆ ತಿನ್ನೋದು.. ಸಂಜೆ ಬಂದು ಬಿಸಿ ಬಿಸಿ ಮಾಡೋದಕ್ಕೆ ಏನ್ ರೋಗ ಎಂದುಕೊಂಡು ಮಂಗಳ ಅವರು ಮಗಳಿಗೆ ಸಹಸ್ರನಾಮ ಅರ್ಚನೆ ಮಾಡುತ್ತಿದ್ದರು….
ಸ್ವಲ್ಪವೂ ಅವಳ ಕಷ್ಟ ಅರ್ಥ ಮಾಡಿಕೊಳ್ಳದೆ ಕತ್ತೆ ತರ ಅವಳನ್ನು ದುಡಿಸುತ್ತಿರುವ ತಾಯಿಯನ್ನು ಕಂಡು ರೊಚ್ಚಿಗೆದ್ದ ನಿಹಾರ್….
ಚಿ ಏನಮ್ಮಾ ನಿಂದು ಪ್ರತಿದಿನ ಇದೇ ಆಯ್ತು ಯಾಕೆ ನಿನಗೆ ಕೈ ಇಲ್ವಾ ಮಾಡ್ಕೊಂಡು ತಿನ್ನೋಕೆ ಏನು…..
ಮಾಡೋದು ಬೇಡ ಅಟ್ಲೀಸ್ಟ್ ಅಕ್ಕ ಕಷ್ಟಪಟ್ಟು ಮಾಡಿ ಇಟ್ಟಿರೋದನ್ನು ಬಿಸಿ ಮಾಡಿ ತಿನ್ನೋದಕ್ಕೂ ಆಗದಿರುವ ಅಷ್ಟು ಬೇಜವಾಬ್ದಾರಿತನ ನಿಮ್ಮ ಮೈಯಲ್ಲಿ ತುಂಬಿಕೊಂಡಿದೆ… ನಿಮ್ಮಂತವರಿಗೆಲ್ಲ ಏನು ಬೇಕು ನನಗೊಂದು ಅರ್ಥನೇ ಆಗ್ತಾ ಇಲ್ಲ……
ಕಷ್ಟಪಟ್ಟು ದುಡಿದದ್ದೆಲ್ಲ ಅವಳ ಸ್ವಂತ ಖರ್ಚಿಗೆ ಇಟ್ಕೊಳ್ಳೋದೇ ಈ ಮನೆಗೆ ತಂದು ಹಾಕಿ,
ನಿಮ್ಮ ಈ ಅಹಂಕಾರ ತುಂಬಿದ ಮಯನ್ನು ಬೆಳಿಸ್ತಾ ಇದ್ದಾಳೆ ಅಲ್ವಾ? ಆ ನನ್ನ ಅಕ್ಕನಿಗೆ ಬುದ್ಧಿ ಇಲ್ಲ ನಿಮಗೆ ಹೇಳಿ ಏನೂ ಪ್ರಯೋಜನ ಥೂ ನಿಮ್ಮ ಜನ್ಮಕ್ಕೆ ಎನ್ನುತ್ತಾ
ತನ್ನ ಅಕ್ಕ ಪ್ರೀತಿಯಿಂದ ಕೊಡಿಸಿದ್ದ.. ಅವಳ ಬೆವರು ಸುರಿಸಿ ತಂದುಕೊಟ್ಟಿದ್ದ ಬೈಕೇ ಏರಿ ತನ್ನ ಅಕ್ಕನನ್ನು ಅರಸಿ ಗಾರ್ಮೆಂಟ್ಸ್ ರೋಡಿನತ್ತ ಹೋದ…..
ಏನಕ್ಕಾ ನೀನು ಎರಡು ನಿಮಿಷ ಕಾಯ ಬೇಕಲ್ವಾ. ಬಾ ಕುತ್ಕೋ ಗಾಡಿ ಇದ್ದು ನೀನು ಯಾಕೆ ನಡೆದುಕೊಂಡು ಹೋಗ್ತೀಯಾ?….
ಬೇಡ ಕಣೋ ನೀನು ಕಾಲೇಜಿಗೆ ಹೋಗು ಟೈಮ್ ಆಗುತ್ತೆ ನಾನು ನಡೆದುಕೊಂಡೆ ಹೋಗ್ತೀನಿ ಸ್ವಲ್ಪ ದೂರನೇ ಇರೋದು….. ಸುಮ್ಮನೆ ನಿನಗೆ ತೊಂದರೆ…..
ಇದರಲ್ಲಿ ನನಗೆ ತೊಂದರೆ ಏನು ಬಂತು ಅಕ್ಕ..
ಇದು ನೀನು ಕಷ್ಟಪಟ್ಟು ನನಗೆ ಭಿಕ್ಷೆ ಹಾಕಿರೋ ಬೈಕ್ ಇದರ ಮೇಲೆ ನನಗಿಂತ ನಿನಗೆ ಜಾಸ್ತಿ ಹಕ್ಕು ಇದೆ ಕೂತ್ಕೋಬಾ ಎನ್ನುತ್ತಾ ಅವಳನ್ನು ಕರೆದುಕೊಂಡು ಹೋದ…
ನನ್ನ ಇವನಾದರೂ ಅರ್ಥಮಾಡಿಕೊಂಡಿದ್ದಾನೆ ಆ ಮನೆಯಲ್ಲಿ ನನಗೆ ಸ್ವಲ್ಪ ಆದರೂ ಗೌರವ ಪ್ರೀತಿ ತೋರಿಸೋದು ನನ್ನ ತಮ್ಮ ಒಬ್ಬನೇ…
ರಾತ್ರಿ ನನ್ನ ಕಷ್ಟ ಅರ್ಥ ಮಾಡಿಕೊಂಡು ಪಾಪ ಪಾತ್ರನೆಲ್ಲ ತೊಳೆದಿಸಿದ.. ಎನ್ನುತ್ತಾ
ಇಳಿದು ಹೋಗುವಾಗ ಅವನತಲೆ ಪ್ರೀತಿಯಿಂದ ನೇವರಿಸಿ ಚೆನ್ನಾಗಿ ಓದಿಕೋ ನಿಹಾರ್. ಏನಾದರೂ ಬೇಕಿದ್ದರೆ ನನ್ನ ಕೇಳು ಎನ್ನುತ್ತಾ ಅವನ ನಿರಾಕರಣೆಯ ನಡುವೆ ತನ್ನ ಬಳಿ ಇದ್ದ 500ರ ಎರಡು ನೋಟನ್ನು ಅವನ ಜೋಬಿನಲ್ಲಿ ಇರಿಸಿದಳು……..
***********
ಧನ್ಯವಾದಗಳು
✍️ಆಕರ್ಷಿತ…..
Swipe left/right or tap the sides to turn pages