ಒಡೆದ ಕನ್ನಡಿ – 1
ಹಸಿರಿನಿಂದ ಹಾಗೂ ಸ್ವಚ್ಚತೆಯಿಂದ ಕೂಡಿರುವ ಒಂದು ಪುಟ್ಟ ಗ್ರಾಮ..
ಆ ಗ್ರಾಮದಲ್ಲಿ ಶಾಂತಮ್ಮ ಹಾಗೂ ರಾಜಣ್ಣ ಎಂಬ ಇಬ್ಬರು ಹಳೆಯ ಪುಟ್ಟದಾದ ಗುಡಿಸಲಿನಲ್ಲಿ ವಾಸಿಸುತ್ತಿದ್ದರು
ಇವರ ದಾಂಪತ್ಯ ಶುರುವಾಗಿ ಸುಮಾರು ಹದಿನೈದು ವರ್ಷಗಳು ಕಳೆದಿತ್ತು ಆದರೆ ಈ ಬಡ ಕುಟುಂಬದ ದಂಪತಿಗಳಿಗೆ ಮಕ್ಕಳು ಇಲ್ಲವೆಂದು ಆ ಗ್ರಾಮದಲ್ಲಿ ತುಂಬಾ ಜನ ಆಡಿಕೊಳ್ಳತಿದ್ದರು..
ಆದರೆ ಆ ಗ್ರಾಮದಲ್ಲಿ ಇದ್ದ ಜನರಿಗೆ ಇವರಿಗೆ “ಏಕೆ” ಮಕ್ಕಳು ಆಗಿರಲಿಲ್ಲ ಎಂಬ ವಿಷಯ ಗೊತ್ತಿರಲಿಲ್ಲ, ಆ ವಿಷಯ ಏನೆಂದರೇ……!?
ದಂಪತಿಗಳಿಬ್ಬರೂ ಊರಿನಲ್ಲಿರುವ ದೊಡ್ಡ ಮನೆತನದವರ ಮನೆಯಲ್ಲಿ ಜೀತದಾಳುಗಳಾಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು… ಅಂತ ಕಷ್ಟಕರ ಜೀವನ ನಡೆಸುವಾಗ ಮಕ್ಕಳನ್ನು ಮಾಡಿಕೊಂಡು ಅವರ ಲಾಲನೆ ಪಾಲನೆ ಮಾಡುವುದು ಕಷ್ಟವೆಂದು ಸುಮನಾಗಿದ್ದರು….
ಅದೊಂದು ದಿನ ರಾಜಣ್ಣ ಊರಿನ ಆಚೆ ತೆಂಗಿನ ಮರದ ಕೆಳಗಡೆ ಯೋಚಿಸುತ್ತ ಕುಳಿತಿದ್ದ.. ಆ ಯೋಚನೆಯಲ್ಲಿ ಊರಿನ ಜನರು ಆಡುತ್ತಿದ್ದ ಆ ದುಃಖಸ್ಥಿತ ಆ ಮಾತುಗಳನ್ನು ನೆನೆಯುತ್ತಾ ತನ್ನಲಿ ತಾನೇ ದುಃಖದಲ್ಲಿ ಕುಗ್ಗುತ್ತಿದ್ದ….
ತನ್ನಡೆಗೆ ವೇಗವಾಗಿ ಬರುತ್ತಿದ್ದ ಕಾರಿನ ಶಬ್ದ ಕೇಳಿ ತಿರುಗಿ ನೋಡಿದ.. ರಾಜಣ್ಣನ ಅಂತರದಲ್ಲೇ ಒಂದು ಮರದ ಕೆಳಗಡೆ ಕಾರನ್ನು ನಿಲ್ಲಿಸಿ ಆ ವ್ಯಕ್ತಿ ಹೊರಬಂದು ಒಂದು ಸಿಗರೇಟ್ ಹಚ್ಚುತ್ತಾ ತನ್ನಲ್ಲೇ ತಾನೇ ಯೋಚಿಸುತ್ತಾ (ಮುಖದಲ್ಲಿ ಕೋಪ) ರಾಜಣ್ಣನ ಕಡೆ ನೋಡುತ್ತಾ ಬಂದನು…
ರಾಜಣ್ಣ:- “‘ಸ್ವಾಮಿ’ ಯಾರು ನೀವು? ಯಾವೂರು ನಿಮ್ಮದು?!..”
(ಆತ ಹಿಂದೆ ಮುಂದೆ ನೋಡುತ್ತಾ ಕೋಪದ ಮುಖವೊತ್ತು ಉತ್ತರಿಸಿದ)
“ನಾನು ಒಬ್ಬ ಖಾಸಗಿ ಕಂಪನಿಯ ಮಾಲೀಕ, ನನ್ ಹೆಸರು ಲಲಿತ್ ಪ್ರಸಾದ್ ಬೆಂಗಳೂರಿನಿಂದ ಬರ್ತಾ ಇದೀನಿ”
(ರಾಜಣ್ಣ ಮನಸ್ಸಿನಲ್ಲಿ ಹೀಗೆ ಅಂದುಕೊಂಡ) ಯಾಕೀ ಆಸಾಮಿ ಕೋಪದಲ್ಲಿ ಇದ್ದಾರಲ್ವಾ? ಏನಾಗಿರಬಹುದು..
(ಮರದ ಬಳಿ ಕುಳಿತಿದ್ದ ರಾಜಣ್ಣ ಎದ್ದು ಆತನ ಬಳಿ ಹೋದ)
“ಅಯ್ಯ ಯಾರ್ ಬೇಕು ನಿಮಗೆ, ನಮ್ಮೂರಿನಲ್ಲಿ ಯಾರಾದರೂ ಸಂಬಂಧಿಕರು ಇದ್ದಾರಾ!? ಯಾಕೆ ಕೋಪದಲ್ಲಿದ್ದೀರಾ? ಏನಾಯ್ತು?” ಎಂದು ಕೇಳಿದ..
ಲಲಿತ್ ಪ್ರಸಾದ್:- “ನಾನು ಶ್ರೀಮಂತರ ಮನೆಯಲ್ಲಿ ಹುಟ್ಟಿದ್ದೆ ತಪ್ಪಾ? (ಸಣ್ಣ ಧ್ವನಿಯಲ್ಲಿ ,ಕೋಪ ಕಳಚುತ್ತ) ಅಥವಾ ಎಜುಕೇಟೆಡ್ ಆಗಿದ್ದೆ ತಪ್ಪಾ?, ನಾನು ಬಿಸಿನೆಸ್ ಮ್ಯಾನ್ ಆಗಿದ್ದೆ ತಪ್ಪಾ? ಅಥವಾ ನಾನು ಹುಟ್ಟಿದ್ದೇ ತಪ್ಪಾಯ್ತಾ?!. (ಕೋಪದಲ್ಲಿ ಕೈನಲ್ಲಿ ಉರಿಯುತ್ತಿದ್ದ ಸಿಗರೇಟ್ ಅನ್ನು ಬಿಸಾಡಿದ)

ಕೋಪದಲ್ಲಿ ಇದ್ದ ಆಸಾಮಿ ಮುಖವನ್ನು ನೋಡಿ ರಾಜಣ್ಣ ಭಯದಲ್ಲಿ ಒಂದು ಹೆಜ್ಜೆ ಹಿಂದೆ ಸರಿದ.
ಆ ವ್ಯಕ್ತಿ ಗಾಬರಿಗೊಂಡಿದ್ದ ರಾಜಣ್ಣನನ್ನು ನೋಡಿ ನಗುಮುಖದಿಂದ ಬನ್ನಿ ಎಂದು ಕೈ ಸನ್ನೆಯಲ್ಲಿ ಕರೆದ..
ಲಲಿತ್ ಪ್ರಸಾದ್:- “ಏನ್ ನಿಮ್ಮ ಹೆಸರು?
ನೀವು ಇದೆ ಊರಿನವರ? ಏನ್ ಮಾಡಿಕೊಂಡಿದ್ದೀರಾ? ಯಾಕೆ ಚಿಂತೆಯಲ್ಲಿ ಕೂತಿದ್ರಿ? ನಾನು ಬಂದಾಗ”…
ರಾಜಣ್ಣ:- “ಯಾವಾಗ್ಲೂ ಇರುವುದೇ ಬಿಡಿ ಸ್ವಾಮಿ, ಜೀತದಾಳ್ಗಳ ಪರಿಸ್ಥಿತಿ.. ನನ್ನ ಹೆಸರು ರಾಜಣ್ಣ.. ನೀವ್ಯಾಕ್ ಕೋಪದಲ್ಲಿ ಇದ್ದೀರಾ? ಬೆಂಗಳೂರಿನಿಂದ ಇಲ್ಲಿವರೆಗೂ ಬಂದಿದ್ದು ಯಾಕೆ?”..
ಲಲಿತ್ ಪ್ರಸಾದ್:- “ನನ್ ಕಥೆ ಬಿಡಿ. ನಿಮ್ಮ ಹಳ್ಳಿ ಜೀವನ ಹೇಗಿದೆ!? ವ್ಯವಸಾಯ ತೋಟಗಾರಿಕೆ ಎಲ್ಲ ಹೇಗ್ ನಡೆಯುತ್ತಿದೆ?”..
ರಾಜಣ್ಣ:- “ಜೀತದಾಳುಗಳ ಸ್ಥಿತಿನೇ ಹೀಗೆ ಕೈಗೊಬ್ರು ಕಾಲಿಗೊಬ್ಬರು ಹೇಳೋರು ಕೇಳೋರು ಇದ್ದೆ ಇರ್ತಾರೆ, ಜೀವನ ನಡೆಸಿಕೊಂಡು ಹೋಗ್ತಾ ಇರಬೇಕು ಅಷ್ಟೇ”..
ಲಲಿತ್ ಪ್ರಸಾದ್:- “ಹೌದ!.. ರಾಜಣ್ಣ ನಿಮಗೆ ತೋಟ ಏನ್ ಇಲ್ವಾ?”.. (ಮೃದುವಾಗಿ ವ್ಯಾಕಿಸಿದ)
ರಾಜಣ್ಣ:- “ಇಲ್ಲ ಸ್ವಾಮಿ ನಮಗೆ ಏನಿಲ್ಲ ಹೊಲ ಇಲ್ಲ, ಗದ್ದೆ ಇಲ್ಲ, ದನ ಕರ ಇಲ್ಲ, ಮೇಕೆ ಕುರಿ ಇಲ್ಲ, ಏನು ಇಲ್ಲ ಆದರೆ ಜನ ಮಾತ್ರ ಮಕ್ಕಳಿಲ್ಲ ಅಂತ ಆಡಿಕೊಳ್ಳುತ್ತಿದ್ದಾರೆ”…. (ಬೇಸರದ ಧ್ವನಿಯಲ್ಲಿ)
“ಏನು ಇಲ್ಲದ ನಾನು, ಮಕ್ಕಳನ್ನು ಹೇಗೆ ಸಾಕಬೇಕು? ನಾವು ಜೀತದಾಳುಗಳಾಗಿ ಎರಡು ಹೊತ್ತು ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟ ಅಂತದ್ರಲ್ಲಿ ಮಕ್ಕಳನ್ನು ಸಾಕೋದು ಹೇಗೆ?”.
ಲಲಿತ್ ಪ್ರಸಾದ್:- (ಆಶ್ಚರ್ಯದಿಂದ) “ಹೌದಾ! ರಾಜಣ್ಣ ಇಷ್ಟು ಕಷ್ಟನಾ? ಜನರ ಮಾತುಗಳನ್ನು ತಲೆ ಕೆಡಿಸ್ಕೋಬೇಡಿ ನಿಮ್ಮ ಜೀವನ ನೀವು ನಡೆಸಿ.. ಹಳ್ಳಿ ಜೀವನ ತುಂಬಾ ಒಳ್ಳೆಯದು ಅಂತಾರೆ, ಆದರೆ ನಿಮ್ಮನ್ನು ನೋಡಿದ್ಮೇಲೆ ಗೊತ್ತಾಯ್ತು ನನ್ನಂತೆ ನಿಮಗೂ ಕೂಡ ಸಮಸ್ಯೆಗಳಿದ್ದಾವೆ..
ಅಂದ್ರೆ ಪ್ರಪಂಚದಲ್ಲಿ ಸಮಸ್ಯೆ ಇಲ್ದೆ ಇರೋ ಮನುಷ್ಯನೇ ಇಲ್ವಾ.
ರಾಜಣ್ಣ:- (ಕಣ್ತುಂಬಿದ ನೀರನ್ನು ಹರಿಸುತ್ತಾ) “ಹೌದು ಸ್ವಾಮಿ, ನಮ್ ಜೀವನ ತುಂಬಾ ಕಷ್ಟಕರವಾದದ್ದು”.
ಲಲಿತ್ ಪ್ರಸಾದ್:- (ಯೋಚಿಸುತ್ತಾ) ಅಳಬೇಡ ರಾಜಣ್ಣ ರೈತನ ಕಣ್ಣೀರು ಭೂಮಿಯ ಪಾಲಾಗಬಾರದು. ರೈತನ ಕಣ್ಣೀರಿಗೆ ಬೆಲೆ ಜಾಸ್ತಿ, ನನ್ನಿಂದ ಏನಾದರೂ…. ಸಹಾಯಬೇಕಾ ರಾಜಣ್ಣ.
ರಾಜಣ್ಣನ ಉತ್ತರ ಹೀಗಿತ್ತು…
***********************
ಮಾಡುವುದಾದರೆ ಲಲಿತ್ ಪ್ರಸಾದ್ ಏನು ಸಹಾಯ ಮಾಡಬಹುದು..
ಕೇಳುವುದಾದರೆ ರಾಜಣ್ಣ ಏನನ್ನು ಕೇಳಬಹುದು..
ರಾಜಣ್ಣ:- (ಕಣ್ತುಂಬಿದ ನೀರನ್ನು ಹರಿಸುತ್ತಾ) “ಹೌದು ಸ್ವಾಮಿ, ನಮ್ ಜೀವನ ತುಂಬಾ ಕಷ್ಟಕರವಾದದ್ದು”.
ಲಲಿತ್ ಪ್ರಸಾದ್:- (ಯೋಚಿಸುತ್ತಾ) ಅಳಬೇಡ ರಾಜಣ್ಣ ರೈತನ ಕಣ್ಣೀರು ಭೂಮಿಯ ಪಾಲಾಗಬಾರದು. ರೈತನ ಕಣ್ಣೀರಿಗೆ ಬೆಲೆ ಜಾಸ್ತಿ, ನನ್ನಿಂದ ಏನಾದರೂ…. ಸಹಾಯಬೇಕಾ ರಾಜಣ್ಣ.
ಹೆಗಲ ಮೇಲೆನಾ ಟವಲನ್ನು ಕೈಗೆತ್ತಿಕೊಂಡ ರಾಜಣ್ಣ
ರಾಜಣ್ಣ:- “ಸಾಮಿ ಈ ಗ್ರಾಮದಲ್ಲಿ ದೊಡ್ಡ ಮನೆತನದಲ್ಲಿ ಕೆಲಸ ಮಾಡಿ ಮಾಡಿ ಹೊಟ್ಟೆಪಾಡಿಗಾಗಿ, ಕೈ ಕಾಲುಗಳು ಸೊರಗಿ ಹೋಗಿವೆ ದೇವರು ನಿಮ್ಮ ರೂಪದಲ್ಲಿ ಬಂದಿದ್ದಾರೆ ಎಂದು ನಾನು ಭಾವಿಸಿ ಒಂದು ಸಹಾಯವನ್ನು ಕೇಳಬಹುದೇ”..
ಆಗ ,
ಲಲಿತ್ ಪ್ರಸಾದ್:- “ಅಯ್ಯೋ ರಾಜಣ್ಣ ನನ್ನನ್ನ ದೇವರು ಮಾಡಬೇಡಿ.. ನನ್ನಿಂದ ಆಗುವುದಾದರೆ ನಾನು ಮಾಡ್ತೀನಿ”
ನಿಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಳ್ಳಿ,….
ಹೇಗಿದೆ ಎಂದು ಕಾಮೆಂಟ್ ಮಾಡುವುದು ಮರೆಯಬೇಡಿ..
ಮುಂದುವರೆಯುವುದು.
ಧನ್ಯವಾದಗಳು
✍️ಆಕರ್ಷಿತ❤️……
Swipe left/right or tap the sides to turn pages