ಅಪಘಾತ ಆದ ವ್ಯಕ್ತಿಯೊಬ್ಬರನ್ನು ಹೊತ್ತ ಆಂಬುಲೆನ್ಸ್ ಒಂದು ಆಸ್ಪತ್ರೆಯ ಮುಂದೆ ಬಂದು ನಿಂತಿತ್ತು. ಅದರಿಂದ ಇಳಿದ ವ್ಯಕ್ತಿಯೊಬ್ಬ ಡಾಕ್ಟರ್ ಡಾಕ್ಟರ್… ಎಂದು ಕೂಗುತ್ತ ಓಡಿ ಬರುತ್ತಿದ್ದ. ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಕರೆತರಲಾಗುತ್ತಿತ್ತು. ಅವನ ಮುಖಕ್ಕೆ ಹಾಗೂ ತಲೆಗೆ ಗಂಭೀರ ಗಾಯಗಳಾಗಿದ್ದವು.