ನನ್ನ ಪ್ರೀತಿಯ ಮೀರಾ❤️ – 2
ಮೀರಾ,
ಮೀರಾ ಒಂದು ಮದ್ಯಮ ವರ್ಗದ ಕುಟುಂಬದಲ್ಲಿ ಜನನ.
ಅವರ ಮನೆಯಲ್ಲಿ ತಂದೆ ತಾಯಿ ಅಜ್ಜಿ ತಮ್ಮ ತಂಗಿ.
ಐವರ ಒಂದು ಪುಟ್ಟ ಕುಟುಂಬ.
ಅಜ್ಜಿ ರಮಾಮಣಿ ಅವರ ಯಜಮಾನರು ಮೂಲತಹ ತುಮಕೂರಿನವರು, ಆದರೆ ಮಗ ರಮೇಶ್ ನ ಉದ್ಯೋಗಕಾಗಿ ಬೆಂಗಳೂರಿನ ಒಂದು ಸಣ್ಣ ವಟರಾದಲ್ಲಿ
ಜೀವನ ನಡೆಸುತ್ತಿದ್ದಾರೆ. ಮತ್ತು ತುಮಕೂರಿನಲ್ಲಿ ಸ್ವಂತ ಮನೆಯು ಇದೆ.
ವಯಸ್ಸು ಸುಮಾರು ಎಪ್ಪತ್ತು. ಮನೆಯಲ್ಲೇ ಮಗ ಸೊಸೆ ಗೆ ಜೊತೆಯಾಗಿ ಮೊಮ್ಮಕ್ಕಳ ಸಾಕಿ ಬೆಳೆಸಿದರು.
ಈಗ ಕುಟುಂಬದ ಪೋಷಣೆ ಗಾಗಿ ಮನೆಯಲ್ಲೇ ಹೂವು ಕಟ್ಟುತ್ತಾ ದೀಪಕ್ಕೆ ಬತ್ತಿಗಳ ಹೊಸೆದು. ತನ್ನ ಮಗನ ದಿನಸಿ ಅಂಗಡಿಗೆ ಸಹಾಯ ಮಾಡುತ್ತ..
ಇನ್ನು ಸ್ವಲ್ಪ ಗ್ರಂದಿಗೆ ಅಂಗಡಿ ಗೆ ಮಾರಾಟ ಮಾಡುತ್ತಾರೆ.
ಮತ್ತು ತಮ್ಮದೇ ಆದ ಮೀರಾ ಉಪ್ಪಿನಕಾಯಿ, ಅಪ್ಪಳ,
ಸಂಡಿಗೆ ಮತ್ತು ಇತರೆ ಸಾಂಪ್ರದಾಯಿಕ ತಿಂಡಿಗಳನ್ನು ತನ್ನ ಮಗನ ಅಂಗಡಿಯಲ್ಲಿ ಮಾರಾಟಕ್ಕೆ ಸ್ವತಃ ತಮ್ಮ ಕೈ ಅಲ್ಲಿ ಮಾಡಿ ಇಟ್ಟಿದ್ದಾರೆ.
ಸೊಸೆ ಸುಮಿತ್ರಾ ಅವರು ಅತ್ತೆಗೆ ಮತ್ತು ಗಂಡನಿಗೆ ಸಹಾಯ ಮಾಡುತ್ತ,ಮತ್ತು ಮೂವರು ಮಕ್ಕಳ ಓದಿಸುತ್ತ.
ತಾಯಿಯ ಕರ್ತವ್ಯ ನಿಭಾಯಿಸುತ ಒಳ್ಳೆ ಗೃಹಿಣಿ ಆಗಿದ್ದಾರೆ.
ಪ್ರಕಾಶ್ ಸುಮಿತ್ರಾ ದಂಪತಿಗಳಿಗೆ ಮೂವರು ಮಕ್ಕಳು
ಮೊದಲ ಮಗಳು ಮೀರಾ
ಎರಡನೇ ಮಗ ವಿಕಾಸ್
ಕೊನೆಯ ಮಗಳು ಸೃಜನ
ಇದಷ್ಟು ಮೀರಾಳ ಕುಟುಂಬ.
ಮೀರಾ ಗೆ ಓದಿನಲ್ಲಿ ಆಸಕ್ತಿ. ಆಗಾಗಿ ಒಂದು ಸರ್ಕಾರಿ ಕಾಲೇಜಿನಲ್ಲಿ . science ಅಲ್ಲಿ pcmb. ಈಗ ತಾನೇ PUC ಮುಗಿದಿದೆ, ಮುಂದೆ ಓದಬೇಕು ಓದಿ ಡಾಕ್ಟರ್ ಆಗಬೇಕು ಎನ್ನುವುದು ಆಕೆಯ ಆಸೆ.
ಆ ಆಸೆಗೆ ಅಡ್ಡ ಇರುವುದು ಅಜ್ಜಿ ಮತ್ತು ಅಮ್ಮ.
ನಮ್ಮಂತವರ ಕುಟುಂಬದಲ್ಲಿ ಹೆಣ್ಣುಮಕ್ಕಳ ಓದಿರುವುದೆ ಕಷ್ಟ ಅದರಲ್ಲಿ ನೀನು ಡಾಕ್ಟರ್ ಆಗುತ್ತೀನಿ ಅಂತ ಇದಿಯ. ಅಷ್ಟು ಓದಿಗೆ ದುಡ್ಡು ಎಲ್ಲಿಂದ ತರುವುದು ಸುಮ್ಮನೆ ಇನ್ನೂ ಎರಡು ವರ್ಷ ಮನೆಯಲ್ಲಿ ಇದ್ದು ಅಡಿಗೆ ಮತ್ತು ಕೆಲಸ ಕಲಿ ಯಾರಿಗಾದರೂ ಮದುವೆ ಮಾಡುತ್ತೇವೆ, ಅಲ್ಲಿ ಹೋಗಿ ನಿನ್ನ ಗಂಡನ ಮನೆಯಲ್ಲಿ ಬೇಕಾದರೆ ಓದು. ಇಲ್ಲಿ ನೀನು ಒಬ್ಬಳೇ ಅಲ್ಲ ನಿನ್ನ ಹಿಂದೆ ಇಬ್ಬರೂ ಇದ್ದಾರೆ ನಿನ್ನ ತಮ್ಮ ತಂಗಿ ಅವರ ಭವಿಷ್ಯ ಬಗ್ಗೆ ಸ್ವಲ್ಪ ಯೋಚನೆ ಮಾಡು. ಎಲ್ಲ ಉಳಿತಾಯ ನಿನಗೆ ಖರ್ಚು ಮಾಡಿದರೆ ಮನೆಯ ಗಂಡು ಮಗನ ಓದಿಸೋದು ಬೇಡವಾ. ಎಂದು ಅಮ್ಮ ಅಜ್ಜಿ ಇಬ್ಬರೂ ಬುದ್ಧಿ ಹೇಳಿದ್ದರು, ಅದಕ್ಕೆ ತಕ್ಕಂತೆ puc ಅಲ್ಲಿ 95% ಅಂಕ ಪಡೆದಿದ್ದರು ಕಾಲೇಜಿನ ಬಗ್ಗೆ ಮಾತುಗಳನ್ನು ನಿಲ್ಲಿಸಿಯೆ ಬಿಟ್ಟಿದ್ದಳು ಎಲ್ಲಿ ಅಪ್ಪನಿಗೆ ಕಷ್ಟ ಆಗಿ ಮತ್ತು ತಂಗಿ ತಮ್ಮನ ಭವಿಷ್ಯ ಹಾಳಾಗುತ್ತದೆ ಎನ್ನುವ ಭಾವನೆ ಇಂದ..
ಅವರ ತಂದೆ ಕೂಡ ಮುಂದಿನ ಓದಿನ ಬಗ್ಗೆ ಕೇಳಿದಾಗ ಏನಾದರೂ ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಳು. ಅವರಿಗೆ ಎಲ್ಲ ಮಕ್ಕಳನ್ನು ಓದಿಸಿ ಒಳ್ಳೆ ಜೀವನ ಕೊಡುವ ಆಸೆ ಉದ್ದೇಶ ಇತ್ತು..
ಅಕ್ಕನಿಗೆ ಡಾಕ್ಟರ್ ಓದುವ ಆಸೆ ಇರುವ ಮತ್ತು ತಾಯಿ ಮತ್ತು ಅಜ್ಜಿ ಹೇಳಿದ ಮಾತು, ಅದಕ್ಕೆ ಅಕ್ಕ ಕಾಲೇಜಿನ ಬಗ್ಗೆ ಮಾತನಾಡುತ್ತಾಇಲ್ಲ ಎಂಬ ವಿಚಾರ ಹೇಗೋ ಸೃಜನ ಅಪ್ಪನಿಗೆ ತಿಳಿಸಿದಳು.
ಇದನ್ನು ತಿಳಿದ ಪ್ರಕಾಶ್ ಅವರು ಹೇಗಾದರೂ ಮಾಡಿ ಮೀರಾಳನ್ನು ಡಾಕ್ಟರ್ ಓದಿಸಿ ತಿರಬೇಕೆಂದು ನಿರ್ಧಾರ ಮಾಡಿದರು. ಈ ವಿಷಯ ಮನೆಯಲ್ಲಿ ಪ್ರಸ್ತಾಪ ಮಾಡಲೇ ಇಲ್ಲ. ಹೇಳಿದರೆ ಹೇಳಿ ಮತ್ತೆ ತನ್ನ ಹೆಂಡತಿ ನಿರಾಕರಿಸುತ್ತಾಳೆ ಎಂಬ ಧುಡುಕದಿಂದ……
ಮೀರಾ puc ಓದುವಾಗ KCET ಎಂಬ ಪ್ರವೇಶ ಪರೀಕ್ಷೆ ಬರೆದು ಪಾಸ್ ಆಗಿದ್ದರಿಂದ. ಖಾಸಗಿ ಕಾಲೇಜುಗಳಲ್ಲಿ ಅರ್ಧದಷ್ಟು ಶುಲ್ಕ ಕಡಿಮೆ ಆಗುತ್ತದೆ ಎಂದು ತಿಳಿದ ಪ್ರಕಾಶ್.
ಅವರು ಮಗಳ ಓದಿನ ಬಗ್ಗೆ ಅವಳಲ್ಲಿ ಕೇಳಿದಾಗ.
“ಇಲ್ಲ ಅಪ್ಪ ನಾನು ಓದಲ್ಲ” ಎನ್ನುತ್ತಾಳೆ….
ಪ್ರಕಾಶ್:- ನನಗೆ ಗೊತ್ತು ಮಗಳೆ ಅಮ್ಮ ಹೇಳಿದಳು ಓದಬೇಡ ಅಂತ ನೀನು ನಿನ್ನ ನಿರ್ಧಾರ ಬದಲಿಸುತ್ತ ಇದೆಯ. ಆಸರೆ ನಿನ್ನ ಡಾಕ್ಟರ್ ಕನಸನ್ನು ನಾನು ನನಸು ಮಾಡುತ್ತಿನಿ ಅದಕ್ಕಾಗಿ ಕಾಲೇಜ್ ಅಲ್ಲಿ ಕೂಡ ಮಾತನಾಡಿ ಬಂದಿದ್ದೆ.
ಮೀರಾ:- ಆದರೆ ಅಪ್ಪ, ನಾನು D Pharma ಮಾಡಬೇಕು, ಅದಕ್ಕೆ ತುಂಬಾ ಖರ್ಚು ಆಗುತ್ತೆ,
ನಾನು ಓದಿ ಏನು ಪ್ರಯೋಜನ ಹೇಗಿದರು ಮದುವೆ ಮಾಡುತ್ತಿರ, ನನಗೆ ಯಾಕೆ ಈ ಕಾಲೇಜ್ ಓದು ಎಲ್ಲ. ಸುಮ್ಮನೆ ಅಮ್ಮ ಹೇಳಿದ ಹಾಗೆ ಮನೆಯಲ್ಲಿ ಇರುವೆ.
ಪ್ರಕಾಶ್:- ಇಲ್ಲ ಮಗಳೇ ಖರ್ಚು ಜಾಸ್ತಿ ಇಲ್ಲ ನೀನು kcet ಪರೀಕ್ಷೆ ಅಲ್ಲಿ ಪಾಸ್ ಆಗಿದಿಯ ಮತ್ತೆ puc ಅಲ್ಲೂ 95% ಬಂದಿದೆ ಆಗಾಗಿ ಅರ್ಧ ಶುಲ್ಕ ಕಡಿಮೆ ಇದೆ, ನಾನು ಅದನ್ನು ಕಟ್ಟುತ್ತೇನೆ ನೀನು ಓದಬೇಕು ಅಷ್ಟೇ..
ತುಂಬಾ ಸಲ ಹೇಳಿದ ಮೇಲೆ ಮೀರಾ ಒಪ್ಪಿದಳು.
ಇನ್ನು ಮನೆಯಲ್ಲಿ ಹೆಂಡತಿ ಒಪ್ಪಿಸೋದು ಕಷ್ಟ ಇದೆ ಅಂತ ಯೋಚನೆ ಮಾಡಿದರು……
ಮನೆಯಲ್ಲಿ ಈ ವಿಷಯದ ಪ್ರಸ್ತಾಪಕ್ಕೆ ಮುಂದಾದರು..
ಪ್ರಕಾಶ್:- ಸುಮಿತ್ರಾ ಅದು , ಮೀರಾ ನ ಮುಂದೆ ಓದಿಸಬೇಕು ಅಂತ ಇದಿನಿ.
ಸುಮಿತ್ರಾ:- ಆವತ್ತೆ ಹೇಳಿದ್ದೇ ಇವಳಿಗೆ ಬೇಡ ಅಂತ, ಅಷ್ಟು ಬೇಗ ನಿಮ್ಮ ಕಿವಿಗೆ ಉದಿದಳ.
ಪ್ರಕಾಶ್:- ಪಾಪ ಆ ಮಗು ಏನು ಹೇಳಿಲ್ಲ ಅವಳಿಗೆ ಗದರಬೇಡ. ನಾನೇ ಹೇಳುತ್ತಿರುವುದು.
ಸುಮಿತ್ರಾ:- ಯಾಕೆ ರೀ ಮಿಕ್ಕಿದ ಇನ್ನೂ ಇಬ್ಬರೂ ಮಕ್ಕಳಿಗೆ ಓದಿಸೋದು ಬೇಡವ. ಇವಳು ಒಬ್ಬಳೇ ಅಲ್ಲ ಮನೇಲಿ ಇನ್ನೂ ಇಬ್ಬರೂ ಇದ್ದಾರೆ, ನೆನಪು ಇರಲಿ ನಿಮಗೆ ಅವರು ನಿಮ್ಮ ಮಕ್ಕಳೇ….
ಪ್ರಕಾಶ್:- ಅವರನ್ನು ಚನ್ನಾಗಿ ಓದಿಸೋಣ.
ಅದೆಲ್ಲ ಆಗದಿಲ್ಲ, ಯಾವುದಾದರು ಹುಡುಗನ ನೋಡಿ ಮದುವೆ ಮಾಡಿ ಅದು ಬಿಟ್ಟು ಏನು ನಿಮ್ಮದು, ಛೇ ಎಲ್ಲ ನನ್ನ ಕರ್ಮ 10 ನೇ ಕ್ಲಾಸ್ ಓದುತ್ತಿರುವ ಮಗ ಇದ್ದಾನೆ, ಅವನನ್ನ ಒಳ್ಳೆ ಕಾಲೇಜ್ ಸೇರಿಸೋಕೆ ದುಡ್ಡು ಬೇಡವ ಎಲ್ಲ ಇವರಿಗೆ ಕೊಟ್ಟರೆ. ಇನ್ನೊಬ್ಬಳು ಮಗಳು ಇದ್ದಾಳೆ ಅಲ್ಲವೇ,… ಹೆಣ್ಣುಮಕ್ಕಳ ಓದಿ ಏನು ಉದ್ಧಾರ ಮಾಡಬೇಕು ನಾ ಕಾಣೆ….ಎನ್ನುತ್ತಾ ಗೊಣಗುತ್ತ ಇದ್ದರು..
ಮೀರಾ ಮೂಲೆಯಲ್ಲಿ ಕುಳಿತು ಕಣ್ಣೀರು ಹಾಕುತ್ತಿದ್ದಳು….
******
ಮೀರಾಳ ಓದಿಗೆ ಸುಮಿತ್ರಾ ಒಪ್ಪಿಗೆ ಕೊಡೋದಿಲ್ವ,
ಆಕೆಯ ಕನಸು ಕನಸಾಗೆ ಉಳಿಯುತ್ತ……
ಧನ್ಯವಾದಗಳು
ಹರ್ಷಿತ ನವೀನ್ ಕುಮಾರ್
Swipe left/right or tap the sides to turn pages