ನನ್ನ ಪ್ರೀತಿಯ ಮೀರಾ❤️ – 3
ಸುಮಿತ್ರಾ:- ಅದೆಲ್ಲ ಆಗದಿಲ್ಲ, ಯಾವುದಾದರು ಹುಡುಗನ ನೋಡಿ ಮದುವೆ ಮಾಡಿ ಅದು ಬಿಟ್ಟು, ಏನು ನಿಮ್ಮದು, ಛೇ ಎಲ್ಲ ನನ್ನ ಕರ್ಮ 10 ನೇ ಕ್ಲಾಸ್ ಓದುತ್ತಿರುವ ಮಗ ಇದ್ದಾನೆ, ಅವನನ್ನ ಒಳ್ಳೆ ಕಾಲೇಜ್ ಸೇರಿಸೋಕೆ ದುಡ್ಡು ಬೇಡವ ಎಲ್ಲ ಇವರಿಗೆ ಕೊಟ್ಟರೆ. ಇನ್ನೊಬ್ಬಳು ಮಗಳು ಇದ್ದಾಳೆ ಅಲ್ಲವೇ,… ಹೆಣ್ಣುಮಕ್ಕಳ ಓದಿ ಏನು ಉದ್ಧಾರ ಮಾಡಬೇಕು ನಾ ಕಾಣೆ….ಎನ್ನುತ್ತಾ ಗೊಣಗುತ್ತ ಇದ್ದರು..
ಮೀರಾ ಮೂಲೆಯಲ್ಲಿ ಕುಳಿತು ಕಣ್ಣೀರು ಹಾಕುತ್ತಿದ್ದಳು…
ರಮೇಶ್:- ಅದು ಆಗೆ ಅಲ್ಲ ಕಣೆ, ಅವಳು ಓದಿದರೆ ನಿನಗೆ ಏನು ತೊಂದರೆ ಅಂತ, ಸುಮ್ಮನೆ ಒಪ್ಪಿಕೋ ಇಲ್ಲ ಅಂದ್ರೆ ಏನು ಮಾಡಬೇಕೋ ಅದನ್ನ ನಾನು ಮಾಡುತ್ತಿನಿ.
ನಾನು ಅಂತೂ ಅವಳನ್ನು ಓದಿಸೆ ಓದಿಸುತಿನಿ ಅದು ನಿನ್ನ ಎದ್ರು ಹಾಕಿಕೊಳ್ಳುವ ಅವಶ್ಯಕತೆ ಬಂದರು ಪರವಾಗಿಲ್ಲ,
ನೋಡು ಆ ಮಗು ಅಳೋದು ನೋಡಿನು ನಿನ್ನ ಮನಸ್ಸು ಕರಗೋದಿಲ್ಲ ಅಲ್ವಾ….
ಸುಮಿತ್ರಾ:- ಸರಿ ನೀವು ಹೇಳೋದು ಕೇಳೋ ಹಾಗೆ ಕಣೋದಿಲ್ಲ, ಏನಾದರೂ ಮಾಡಿಕೊಳ್ಳಿ ಅಪ್ಪ ಮಗಳು ಇಬ್ಬರು, ನನ್ನ ಏನು ಕೇಳಬೇಡಿ.
ಇನ್ನೇನು ಒಪ್ಪಿಕೊಂಡಳು ಅಂತ ಖುಷಿ ಪಡುವ ಅಷ್ಟರಲ್ಲಿ.!
ಸುಮಿತ್ರಾ:- ಆದರೆ ಒಂದು ಕಂಡಿಷನ್.
ರಮೇಶ್:- ಏನೇ ಅದು ಹೇಳು, ಒಪ್ಪಿಕೊಂಡೆ ಅಂತ ಅಂದುಕೋಂಡೆ ಅಷ್ಟರಲ್ಲಿ ಏನಾದರು ಒಂದು ಅವಾಂತರ ಮಾಡುತ್ತೀಯಾ…
ಸುಮಿತ್ರಾ:- ಏನಿಲ್ಲ, ನೀವು ಏನಾದರು ಮಾಡಿಕೊಳ್ಳಿ ನನ್ನ ಮಕ್ಕಳಿಗೆ ಅಂತ ಉಳಿತಾಯ ಮಾಡಿರುವ ದುಡ್ಡನ್ನು ಮಾತ್ರ ಮುಟ್ಟಬಾರದು. ಮತ್ತೆ ನೀವು ಸಾಲನು ಮಾಡೋ ಆಗಿಲ್ಲ..
ರಮೇಶ್:- ಹೀಗೆ ಹೇಳಿದರೆ ಹೇಗೆ.
ಸುಮಿತ್ರಾ:- ಹೇಗೆ ಅಂದ್ರೆ ನಾನೇನು ಮಾಡಲಿ,
ಯಾವುದಾದರು ಸರಕಾರಿ ಕಾಲೇಜ್ ಗೆ ಸೇರಿಸಿ
ದುಡ್ಡು ಕಟ್ಟೋದು ತಪ್ಪುತ್ತದೆ, ಓದಿಸಿದ ಹಾಗೂ ಆಗುತ್ತೆ.
(ಎಂದು ತನ್ನ ಸಣ್ಣ ಬುದ್ಧಿ ತೋರುತ್ತಿದ್ದಳು)….
ನೀನು ಅವಳ ವಿಚಾರದಲ್ಲಿ ಮಾತ್ರ ಯಾಕೆ ಹೀಗೆ ವಿಷ ಕಾರುತ್ತೀಯ. ಆ ಮಗು ನಿನಗೆ ಏನು ಅನ್ಯಾಯ ಮಾಡಿದೆ.
ನೀನು ಬದಲು ಆಗೋದಿಲ್ಲ , ಅವಳನ್ನು ನಮ್ಮ ಮಗಳು ಅಂದುಕೋ, ಅವಗ ನಮಗೆ ಮಕ್ಕಳು ಇಲ್ಲದಾಗ, ಇದೇ ಮಗು ಅಲ್ವಾ ನಮ್ಮ ನೋವನ್ನು ನೀಗಿಸಿದ್ದು. ನಿನಗೆ ಅಂತ ಸ್ವಂತ ಮಗು ಅದಮೇಲೆ ನಿನಗೆ ಅಷ್ಟು ಅಸಡ್ಡೆ ಆಯ್ತ..
ನಿನಗೆ ಇವಗ ಎಷ್ಟು ಹೇಳಿದರೂ ಅರ್ಥ ಆಗಲ್ಲ, ಅವಳು ಮದುವೆ ಮಾಡಿಕೊಂಡು ಹೋಗುತ್ತಾಳೆ ಅಲ್ವಾ ಆಗ ಗೊತ್ತಾಗುತ್ತದೆ ನಿನಗೆ ಅವಳ ಬೆಲೆ.
ನನ್ನ ಮಗಳನ್ನು ನಾನು ಓದಿಸುತಿನಿ. ಅದು ಹೇಗೆ ಮಾಡಬೇಕು ಅಂತ ನನಗೆ ಗೊತ್ತು.
ಅದಕ್ಕೆ ನಿನ್ನ ಅನುಮತಿಯ ಅವಶ್ಯಕತೆ ಇಲ್ಲ…
(ಎಂದು ತುಂಬಾ ಬೇಜಾರು ಮತ್ತು ಕೋಪದಲ್ಲಿ ಬೈದ. ಆತನು ತಾನೇ ಎಷ್ಟು ಸಹಿಸಲು ಸಾದ್ಯ)…
ಕೋಪದಲ್ಲಿ ಆಚೆ ಹೋಗಿ ಯೋಚಿಸಿ ಇದಕ್ಕೆ ಏನಾದರೂ ದಾರಿ ಹುಡುಕುವ ಪ್ರಯತ್ನ ಮಾಡಿದ.
ಮತ್ತೆ ಕಾಲೇಜ್ ಮತ್ತೆ ಅಲ್ಲಿ ಇಲ್ಲಿ ವಿಚಾರಿಸಿ ನಂತರ ಒಂದು ನಿರ್ಧಾರಕ್ಕೆ ಬಂದ. ಬ್ಯಾಂಕ್ ನಲ್ಲಿ ಎಜುಕೇಶನ್ ಲೋನ್ ತೆಗೆದುಕೊಂಡು, ಅದರಲ್ಲಿ ಓದಿಸಬಹುದು ಆಮೇಲೆ ಸಾಲ ಕಂತಿನ ರೂಪದಲ್ಲಿ ಪಾವತಿ ಮಾಡಬಹುದು ಎಂದು ತನ್ನ ಗೆಳೆಯ ಹತ್ತಿರ ತಿಳಿದುಕೊಂಡು.
ಮೀರಾ ಹತ್ತಿರ ವರ್ಮಾ ಇನ್‌ಸ್ಟಿಟ್ಯೂಟ್ ನ ಕಾಲೇಜಿನಲ್ಲಿ ನಿನಗೆ ಸೀಟ್ ಸಿಕ್ಕಿಸುವುದಾಗಿ ಹೇಳಿದ್ದೇ ತಡ , ಸುಮಿತ್ರಾ ತನ್ನ ಕಿವಿಗಳನ್ನು ದೊಡ್ಡದು ಮಾಡಿಕೊಂಡು,,
ಏನು ಅಷ್ಟು ದೊಡ್ಡ ಖಾಸಗಿ ಕಾಲೇಜಿನಲ್ಲ, ಅಯ್ಯೋ ಅಯ್ಯೋ ನನ್ನ ಮಕ್ಕಳ ಓದಿಸೋಕೆ ಇಟ್ಟ ದುಡ್ಡು ಎಲ್ಲ ಹಾಳು ಮಾಡುತ್ತಿದ್ದಾರೆ..
(ಎಂದು ಬಾಯಿ ಬಾಯಿ ಬಡಿದು ಕೊಂಡಳು).
ರಮೇಶ್:- ಮುಚ್ಚು ಬಾಯಿ, ನಾನೇನು ಆ ದುಡ್ಡು ಮುಟ್ಟಲ್ಲ……
ಮಗಳೇ ಇಲ್ಲಿ ನೋಡು, ನಾನು ಬ್ಯಾಂಕ್ ಅಲ್ಲಿ ವಿಚಾರಿಸಿದಿನಿ. ಎಜುಕೇಶನ್ ಲೋನ್ ಕೊಡುತ್ತಾರೆ ಅಂತೆ ಹೋಗಿ ತಯಾರು ಆಗು, ಬ್ಯಾಂಕ್ ಹೋಗಿ ಬರೋಣ. ಎಂದು ಅಪ್ಪ ಮಗಳು ಹೊರಟರು
ಸುಮಿತ್ರಾ:- (ಮನಸ್ಸಿನಲ್ಲಿ) ಅಬ್ಬಾ ಸದ್ಯ. ಲೋನ್ ಅಂತೆ ನಾನೆಲ್ಲೋ ನನ್ನ ಮಕ್ಕಳಿಗೆ ಅಂತ ಇಟ್ಟಿರುವ ದುಡ್ಡು ಎಲ್ಲಿ ಈ ದರಿದ್ರ ಪೀಡೆಗಾಗಿ ಹಾಳು ಮಾಡುತ್ತಾರೋ ಅಂತ ಭಯ ಆಗಿತ್ತು…
*****
ಬ್ಯಾಂಕ್ ಅಲ್ಲಿ ಮಾತನಾಡಿ. ಬೇಕಾದ ಎಲ್ಲ ದಾಖಲೆ ವಿವರ ತೆಗೆದುಕೊಂಡು.. ಮತ್ತು ಕಾಲೇಜ್ ಅಲ್ಲಿ ಕೂಡ ವಿಚಾರಿಸಿ ಎಲ್ಲಾದರ ಅರ್ಜಿಗಳನ್ನು ಪಡೆದು, ಅದನ್ನ ಮೀರಾ ಕೈ ಅಲ್ಲಿ ಸೈನ್ ಹಾಕಿಸಿ, ಮತ್ತು ತಾವು ಕೂಡಾ ಶ್ಯೂರಿಟಿ ಸಹಿ ಹಾಕಿ ಲೋನ್ ತೆಗೆದುಕೊಂಡರು ಮತ್ತು ಕಾಲೇಜ್ ಸೇರಿಸಿ…
ಸ್ವಲ್ಪ ದಿನಗಳು, ಕಳೆದ ನಂತರ ಕಾಲೇಜ್ ಕೂಡ ಶುರುವಾಗಿತ್ತು..
ಮೀರಾಳ ದಿನಚರಿ ಕೂಡ, ತನ್ನ ಹೊಸ ಕಾಲೇಜ್ ಮತ್ತು ಗೆಳತಿಯರ ಜೊತೆ ಮುಂದುವರೆದಿತ್ತು. ಜೊತೆ ಜೊತೆಯಲ್ಲಿ ಕಲಿಕೆ ಕೂಡ….
ಆದರೆ, ದಿನ ಬರುತ್ತ ಬರುತ್ತ ಸುಮಿತ್ರಾ ಅವರ ಚುಚ್ಚು ಮಾತು ಜಾಸ್ತಿ ಆಗಿ ಹೋದವು.. ಎಷ್ಟೇ ನೋವು ಆದರು ತನ್ನ ತಂದೆ ಅತ್ತಿರ ಹೇಳಲು ಹೋಗಲಿಲ್ಲ…
ಒಂದು ದಿನ ಕಾಲೇಜ್ ಅಲ್ಲಿ.
“ಆ ಸಂಸ್ಥೆ ನಡೆಸುವವರು ಬರುತ್ತಾರೆ ಅಂತೆ ಇವತ್ತು” ಎಂಬ ಮಾತುಗಳು ಗಾಳಿಯಲ್ಲಿ ಅರಿದಾಡಿದವು.
ಮಾಲೀಕತ್ವ ಹೊಂದಿದ್ದ ಸುಮಲಾಕ್ಷಿ ಅವರು ಹಾಗೂ ಅವರ ಅಳಿಯ ಅನಿರುದ್ಧ್ ವರ್ಮಾ ಅವರು ಕಾಲೇಜಿನ ಹೊಸದಾಗಿ ಬಂದಿರುವ ವಿದ್ಯಾರ್ಥಿಗಳ ಪರಿಚಯ ಮಾಡಿಕೊಂಡು ಮಾತನಾಡಿಸಲು, ಬಂದರು…….
ಇವರನ್ನು ನಾನು ಮೊದಲನೇ ಬಾರಿ ನೋಡುತ್ತಿರುವುದು ಆದರೆ ನನಗೆ ಯಾಕೆ ತುಂಬಾ ಅತ್ತಿರದ ವ್ಯಕ್ತಿ ಅನ್ನೋ ತರ ಬಾಸ ಆಗುತ್ತಿದೆ……
ಯಾಕೋ ಮೀರಾಳ ಮನಸ್ಸಿಗೆ ಮುದ ನೀಡುವ ವಿಷಯದ ರೀತಿ ಆಕೆ ತುಂಬಾ ಸಂತೋಷ ವಾಗಿ ಇದ್ದಳು…
******
ಧನ್ಯವಾದಗಳು
ಹರ್ಷಿತ ನವೀನ್ ಕುಮಾರ್
Swipe left/right or tap the sides to turn pages