ಅಖಿಲ್ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡುತ್ತಲೇ, ಅವನು ತೋರಿಸುತ್ತಿದ್ದ ಹ್ಯಾಂಡ್ ಮೂವ್‌ಮೆಂಟ್ಸ್‌ಗೆ ತಕ್ಕಂತೆ ಸತ್ಯ ಕೂಡ ಡ್ಯಾನ್ಸ್ ಮಾಡಲು ಶುರುಮಾಡುತ್ತಾಳೆ… ಮೊದಲಿಗೆ ಸ್ವಲ್ಪ ನಾಚಿಕೆಪಟ್ಟರೂ, ಅಖಿಲ್ ಕಣ್ಣುಗಳಲ್ಲಿ ಕಾಣಿಸುತ್ತಿದ್ದ ಧೈರ್ಯವನ್ನು ನೋಡಿದ ನಂತರ ಸಂಪೂರ್ಣವಾಗಿ ಅವನ ಮೇಲೆ ನಂಬಿಕೆ ಇಟ್ಟುಕೊಂಡು ಡ್ಯಾನ್ಸ್ ಮಾಡುತ್ತಿರುತ್ತಾಳೆ…