💞ಚೇತನದ ಕಡಲಲ್ಲಿ ಸಿಂಧು💞 – 3
ನನ್ನ ಇವನಾದರೂ ಅರ್ಥಮಾಡಿಕೊಂಡಿದ್ದಾನೆ ಆ ಮನೆಯಲ್ಲಿ ನನಗೆ ಸ್ವಲ್ಪ ಆದರೂ ಗೌರವ ಪ್ರೀತಿ ತೋರಿಸೋದು ನನ್ನ ತಮ್ಮ ಒಬ್ಬನೇ…
ರಾತ್ರಿ ನನ್ನ ಕಷ್ಟ ಅರ್ಥ ಮಾಡಿಕೊಂಡು ಪಾಪ ಪಾತ್ರೆನೆಲ್ಲ ತೊಳೆದಿರಿಸಿದ.. ಎನ್ನುತ್ತಾ
ಇಳಿದು ಹೋಗುವಾಗ ಅವನ ತಲೆ ಪ್ರೀತಿಯಿಂದ ನೇವರಿಸಿ ಚೆನ್ನಾಗಿ ಓದಿಕೋ ನಿಹಾರ್. ಏನಾದರೂ ಬೇಕಿದ್ದರೆ ನನ್ನ ಕೇಳು ಎನ್ನುತ್ತಾ ಅವನ ನಿರಾಕರಣೆಯ ನಡುವೆ ತನ್ನ ಬಳಿ ಇದ್ದ 500ರ ಎರಡು ನೋಟನ್ನು ಅವನ ಜೋಬಿನಲ್ಲಿ ಇರಿಸಿದಳು……..
ತನ್ನಕ್ಕನ ಪರಿಶ್ರಮದ ಪ್ರತಿಫಲ ಎನ್ನುತ್ತಾ ಆ ನೋಟುಗಳನ್ನು ಕಣ್ಣಿಗೆ ಹೊತ್ತಿಕೊಂಡು ತನ್ನ ಪರ್ಸ್ ನಲ್ಲಿ ಇಟ್ಟ…
ಅವಳ ಆ ಮಾತು ಅವನಿಗೆ ನಂಬಿಕೆ ಮೂಡಿಸಿತ್ತು. ಆ ಮಾತಿನಲ್ಲಿ ನಿನ್ನ ಪ್ರತೀ ಕಷ್ಟ ದುಃಖದಲ್ಲಿ ನಾನಿರುತ್ತೇನೆ ನೀನೇನು ಹೆದರಬೇಡ ಎಂಬ ಧೈರ್ಯ ತುಂಬಿಸುವ ಮಾತುಗಳು ಇದ್ದಂತಿತ್ತು…..
******
ಒಳಗೆ ಬರುತ್ತಿದ್ದ ಚಂದುವಿಗಾಗಿ ಕಾಯುತ್ತಿದ್ದ ವಿಕ್ರಂ ಹಾಯ್ ಸಿಂಧು ಗುಡ್ ಮಾರ್ನಿಂಗ್ ಎನ್ನುತ್ತಾ ಕಣ್ಣಲ್ಲೇ ಸನ್ನೆ ಮಾಡಿದ…
ಎಲ್ಲರ ಮುಂದೆ ಅವಳಿಗೆ ಕೆಲಸ ಹೇಳುವ ರೀತಿ ಬಳಿ ಕರೆದು…
ಮಿಸ್ ಸಿಂಧು ಕಂ ಟು ಮೈ ಕ್ಯಾಬಿನ್ ಕ್ವಿಕ್ಲಿ ಯು ಹ್ಯಾವ್ ಸೋ ಮೆನಿ ವರ್ಕ್ ಟುಡೇ ಎನ್ನುತ್ತಾ ಅವಳನ್ನು ಏಕಾಂತವಾಗಿ ಮಾತನಾಡಿಸುವ ಪ್ರಯತ್ನ ಮಾಡಿದ….
ಎಸ್ ಸರ್, ಐ ವಿಲ್ ಕಮ್. ಎನ್ನುತ್ತಾ ತನ್ನ ಬ್ಯಾಗನ್ನು ಟೇಬಲ್ ಮೇಲೆ ಇರಿಸಿ ವಿಕ್ರಂ ನ ಕ್ಯಾಬಿನ್ ಹೋಕ್ಕಿದಳು..
ಹೇಳಿ ಸರ್
ಏನು ಸಿಂಧು ಇವತ್ತು ಇಷ್ಟು ಸೂಪರ್ ಆಗಿ ಕಾಣಿಸ್ತಿದಿಯ ತುಂಬಾ ಟೆಂಟಿಂಗ್ ಆಗಿದಿಯಾ ಕಣೆ. ನಿನ್ನ ನೋಡುತ್ತಿದ್ದರೆ ಈಗಲೇ ಮದುವೆ ಮಾಡಿಕೊಂಡು ಬಿಡಬೇಕು ಅನಿಸುತ್ತಿದೆ.. ಮೋಹಕವಾಗಿ ಹೇಳಿದ..
ಸುಮ್ನಿರಿ ಸರ್ ಏನೇನು ಹೇಳ್ತೀರಾ ನಾನು ನಾರ್ಮಲ್ ಆಗಿ ಡೈಲಿ ಬರೋ ತರನೇ ಬಂದಿರೋದು, ನೀವೇ ಇವತ್ತು ಸ್ವಲ್ಪ ಬೇರೆ ತರ ನೋಡ್ತಿರೋ ಆಗಿದೆ …ಎನ್ನುತ್ತಾ ಇರಿಸು ಮುರಿಸಿನಲ್ಲಿ ಹೇಳಿದಳು.
ಅವಳಿಗೆ ಅವನು ಕೆಲಸದ ಜಾಗದಲ್ಲಿ ಕೆಲಸದ ನೆಪದಲ್ಲಿ ಕರೆದು ಈ ರೀತಿ ಮಾತನಾಡಿದ್ದು ಹಿಡಿಸಲಿಲ್ಲ….
ರಿಯಲಿ ಸಿಂಧು ಹೈ ಸ್ವೆರ್
ನಿಜಾನೆ ಹೇಳುತ್ತಿದ್ದೇನೆ ನೀನು ಹಂಗೆ ಕಾಣ್ತಿದ್ದೀಯಾ……
ಓಕೆ ಸರ್ ಬೇರೆ ಏನು ವಿಚಾರ ಇಲ್ಲ ಅಂದ್ರೆ ನಾನು ಹೋಗಿ ನನ್ನ ವರ್ಕ್ ಗೆ ಜಾಯಿನ್ ಆಗ್ತೀನಿ….
‘ಹೋಗುವಂತೆ ಇರು ಏನ್ ಅರ್ಜೆಂಟ್ ಅದಕ್ಕೆ ನಿನ್ನತ್ರ ಸ್ವಲ್ಪ ಪರ್ಸನಲ್ ಆಗಿ ಮಾತಾಡಬೇಕು ರಾತ್ರಿ ಕೂಡ ನೀನು ಬ್ಯುಸಿ ಇದ್ದೆ ಅನಿಸುತ್ತೆ ಅದಕ್ಕೆ ಮಾತಾಡುವುದಕ್ಕೆ ಆಗಲಿಲ್ಲ’..ಎನ್ನುತ್ತಾ ಮೋಹಕವಾಗಿ
ಮೆಲ್ಲಗೆ ಹೆಜ್ಜೆ ಇಡುತ್ತಾ ಸಿಂಧು ಕುಳಿತಿದ್ದ ಚೇರಿನ ಬಳಿ ಬಂದು ಅವಳ ಮುಖದ ಬಳಿ ತಲೆ ಬಾಗಿಸಿದ…
ಅವನ ಸಡನ್ ಕ್ರಿಯೆಗೆ ಭಯಗೊಂಡ ಸಿಂಧು ತಟ್ಟನೆ ಎದ್ದು ಡೋರ್ ಬಳಿ ಹೋದಳು. ಈಗ ಡೋರ್ ಲಾಕ್ ಆಗಿತ್ತು ಪಕ್ಕದಲ್ಲೇ ಇದ್ದ ಗಾಜಿನ ಗೋಡೆಗೆ ಹೊರಗಿಕೊಂಡು ಜೋರಾಗಿ ಉಸಿರಾಡುತ್ತಿದ್ದಳು..
ಅಯ್ಯೋ,! ಸಿಂಧು ಹೆದರಬೇಡ ನಾನೇನು ಮಾಡಲ್ಲ ನಿನಗೆ ಜಸ್ಟ್ ಒಂದು ಮುತ್ತು ಕೊಡ್ತೀನಿ ಅಷ್ಟೇ. ಅದು ಕೂಡ ಇವತ್ತು ನೀನು ಸುಂದರವಾಗಿ ಕಾಣಿಸುತ್ತಿರುವುದಕ್ಕೆ ಕಾಂಪ್ಲಿಮೆಂಟ್ ಅಷ್ಟೇ…
“ಬೇಡ ಸರ್ ಇದೆಲ್ಲ ತಪ್ಪು ನನಗೆ ಭಯ ಆಗುತ್ತೆ” ಎನ್ನುತ್ತಾ ಕೈ ಅಡ್ಡ ಹಿಡಿದಳು….
ಕೈಯನ್ನು ಸರಿಸುತ್ತಾ ಟ್ರೈ ಟು ಅಂಡರ್ಸ್ಟ್ಯಾಂಡ್ ಮೈ ಡಿಯರ್ ಸಿಂಧು ನಾನು ನಿನ್ನ ಪ್ರೀತಿ ಮಾಡ್ತಿದ್ದೀನಿ ಆಫ್ಟರ್ ಆಲ್ ಮುತ್ತು ಕೊಡೋದ್ರಲ್ಲಿ ತಪ್ಪೇನು ಇಲ್ಲ ಜಸ್ಟ್ ಕಾಮ್ ಡೌನ್ ಎನ್ನುತ್ತಾ ಮೆಲ್ಲಗೆ ಅಣೆಯ ಮೇಲೆ ತುಂಬಾ ಮೃದುವಾಗಿ ತುಟಿ ಹೂರಿದ್ದ…
ಹೋದ ಜೀವ ವಾಪಸ್ ಬಂದ ಹಾಗೆ ಇತ್ತು ಸಿಂಧೂಗೆ ಬಿಗಿ ಹಿಡಿತಿದ್ದ ಉಸಿರನ್ನು ಆಚೆ ಬಿಟ್ಟಳು…
ಅವಳ ನಂಬಿಕೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದ ವಿಕ್ರಂ ಎಸ್ ಐ ಗಾಟ್ ಎಂದು ಮನಸಲ್ಲೇ ಬಿಗಿದ…
ಪಾಪ ಸಿಂಧುವಿಗೆ ಅವನ ನಾಟಕ ಗೊತ್ತಿಲ್ಲದೆ.
ಎಷ್ಟು ಒಳ್ಳೆಯವರು ನನ್ನ ಹುಡುಗ ಈಗಿನ ಕಾಲದಲ್ಲಿ ಹುಡುಗಿ ಸಿಕ್ಕರೆ ಸಾಕು ದುರುಪಯೋಗ ಮಾಡಿಕೊಳ್ಳುವರು ಇಂತಹದರಲ್ಲಿ ಹಣೆಗೆ ಮುತ್ತಿಟ್ಟು ಸಂತೋಷ ಪಡುತ್ತಿದ್ದಾನೆ ಎಂದರೆ ನಾನು ತುಂಬಾ ಲಕ್ಕಿ ಎಂದುಕೊಳ್ಳುತ್ತಾಳೆ…
ಮತ್ತೆ ಒಂದು ವಿಷಯ ಸಿಂಧು ಇವತ್ತು ನನ್ನ ಫ್ರೆಂಡ್ ಮದುವೆ ಆಗ್ತಿದ್ದಾನೆ ಅದಕ್ಕೆ ಪಾರ್ಟಿ ಇದೆ ಅದಕ್ಕೆ ನೀನು ಕಂಪಲ್ಸರಿ ಬರಲೇಬೇಕು ಇಲ್ಲ ಅನ್ನೋ ಹಾಗಿಲ್ಲ ಶಾರ್ಪ್ ಇವಿನಿಂಗ್ ಆರು ಗಂಟೆಗೆ ರೆಡಿ ಆಗುತ್ತಾನೆ… ಎನ್ನುತ್ತಾನೆ…
ಎಂದು ತಲೆ ಆಡಿಸಿ ಅಲ್ಲಿಂದ ಹೊರಗೆ ಬಂದು ತನ್ನ ಕೆಲಸದಲ್ಲಿ ಮಗ್ನಾಳಾಗುತ್ತಾಳೆ…
ಅಲ್ಲೇ ಅಕ್ಕಪಕ್ಕದ ಕೆಲವು ಸಹೋದ್ಯೋಗಿಯರು.
ನೋಡೇ ಸುಪ್ರವೈಸರ್ ಜೊತೆ ಸರಸ ಆಡೋ ಅವಕಾಶ ಎಲ್ಲರಿಗೂ ಸಿಗಲ್ಲ ಕಣೆ,, ಬಡವಿ ಆದ್ರು ಇಂತ ಶ್ರೀಮಂತ ದುಡ್ಡಿರುವವರನ್ನು ಪ್ರೀತಿಯ ಬಲೆಯಲ್ಲಿ ಬೆಳೆಸಿಕೊಂಡರೆ ಸಾಕು ಆರಾಮಾಗಿ ಜೀವನ ಸಾಗಿಸಬಹುದು ಎನ್ನುವ ಕೊಂಕು ಮಾತುಗಳು ಸಿಂಧು ಕಿವಿಗೂ ಬಿದ್ದವು. ಆದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನಾಗುತ್ತಾಳೆ…
ಅವಳ ಯೋಚನೆ ಬೇರೆಯದೇ ರೀತಿಯಲ್ಲಿ ಸಾಗುತ್ತಿತ್ತು
ಅಲ್ಲಾ ಅವರು ಆ ರೀತಿ ನನಗೆ ಭಯ ಬೆಳೆಸುವುದು ಮುತ್ತು ಗಿತ್ತು ಅನ್ಕೊಂಡು ಆದರೂ ಇದೆಲ್ಲಾ ಕೆಲಸದ ಜಾಗದಲ್ಲಿ ತಪ್ಪು ಅನಿಸಿತು ನೋಡಿದವರು ಎಷ್ಟು ತಪ್ಪಾಗಿ ಮಾತನಾಡುತ್ತಿದ್ದಾರೆ ಅದಕ್ಕೆ ಇವತ್ತು ಇದರ ಬಗ್ಗೆ ಮಾತಾಡಿ ಅವರಿಗೆ ಕೆಲಸದ ಟೈಮಿನಲ್ಲಿ ಈ ಜಾಗದಲ್ಲಿ ಈ ರೀತಿ ವರ್ತಿಸಬೇಡಿ ನನಗೆ ಮುಜುಗರವಾಗುತ್ತದೆ ಎಂದು ತಿಳಿಸಬೇಕು ಎಂದುಕೊಂಡು ಸುಮ್ಮನಾದಳು…..
ಮಧ್ಯಾಹ್ನ ಊಟದ ಸಮಯದಲ್ಲಿ,,,
ಹಾಯ್ ಸಿಂಧು ಏನಿವತ್ತು ಸ್ಪೆಷಲ್
ಏನಿಲ್ಲ ಸರ್ ನಾರ್ಮಲ್ ಚಿತ್ರಾನ್ನ ಅಷ್ಟೇ.
ಹೌದಾ ಓಕೆ ತಗೋ ಈ ಸ್ಯಾರಿನಾ ಬ್ಯಾಗ್ ನಲ್ಲಿ ಇಟ್ಕೋ, ಸಂಜೆ ಇದನ್ನೇ ಹಾಕೊಂಡು ರೆಡಿ ಇರು…
ಬೇಡ ಅನ್ನಬೇಡ ನನಗೆ ಗೊತ್ತು ನಿನಗೆ ಸ್ವಾಭಿಮಾನ ಜಾಸ್ತಿ ಅಂತ ಆದರೆ ನಿನಗೆ ಗೊತ್ತು ಪಾರ್ಟಿ ಅಂದ ಮೇಲೆ ಎಲ್ಲರೂ ಫ್ಯಾನ್ಸಿ ಆಗಿ ಡ್ರೆಸ್ ಹಾಕಿರುತ್ತಾರೆ ಆದರೆ ಆತರ ಹಾಕೋದಕ್ಕೆ ನಿನಗೆ ಮುಜುಗರ ಆಗುತ್ತದೆ ಅಂತ ಗೊತ್ತು ಅದಕ್ಕೆ ಸಿಂಪಲ್ ಫ್ಯಾನ್ಸಿ ಸ್ಯಾರಿ ತಂದಿದ್ದೇನೆ..
ಇಲ್ಲ ಅನ್ನೋದೇ ಹಾಕು ಇದು ನನ್ನ ಪ್ರೆಸ್ಟೀಜ್ ಪ್ರಶ್ನೆ ಎಂದು ಅಲ್ಲಿಂದ ಹೋಗಿದ್ದ…..
ಹೌದು ಅವರ ಗೌರವ ಅಲ್ಲಿ ಕಡಿಮೆಯಾಗಬಹುದು ನಾನು ಈ ರೀತಿ ಕಾಟನ್ ಸೀರೆಯಲ್ಲಿ ಹೋದರೆ…
ಅವರ ಸ್ಟೇಟಸ್ ಗೆ ಮ್ಯಾಚ್ ಆಗೋ ತರ ಇರಬೇಕು ಅಲ್ವಾ ನಾನು… ಎನ್ನುತ್ತಾ ಅವನು ಕೊಟ್ಟ ಸೀರೆಯ ಕವರನ್ನು ಬ್ಯಾಗಿಗಿರಿಸಿ ಊಟ ಆಗಿದ್ದರಿಂದ ಅಲ್ಲಿಂದ ತನ್ನ ಕೆಲಸದ ಕಡೆ ಹೋದಳು….
ಸಂಜೆ ಸುಮಾರು 5:00 ಗಂಟೆಗೆ ತನ್ನ ಕೆಲಸ ಮುಗಿಸಿ ಹೊರಗೆ ಬಂದ ಸಿಂಧು ಯಾವುದೋ ಕಾರನ್ನು ಏರಿ ಎಲ್ಲಿಗೂ ಹೋಗುತ್ತಿರುವ ದೃಶ್ಯ ಗಮನಿಸಿದ ಕಣ್ಣುಗಳಲ್ಲಿ ಗಾಬರಿ ಮೂಡಿತು…..
ಹೋಗು ಸಿಂಧು ಈ ರೂಮ್ನಲ್ಲಿ ಫ್ರೆಶ್ ಆಗಿ ಸೀರೆ ಹಾಕೋ. ಎನುತ್ತಾ ರೂಮ್ ಕಿ ಕೊಟ್ಟು ಆಚೆ ಬಂದ ವಿಕ್ರಂ ಮುಖದಲ್ಲಿ ಕ್ರೂರ ಭಾವ ಇತ್ತು…..
ಬಾತ್ರೂಮ್ ಅಲ್ಲಿ ಸ್ನಾನ ಮಾಡುತ್ತಿದ್ದ ಸಿಂಧುವಿನ ನಗ್ನ ಮೈ ಯ ದೃಶ್ಯವನ್ನು ತನ್ನ ಲ್ಯಾಪ್ಟಾಪ್ ನಲ್ಲಿ ನೋಡುತ್ತಾ ಕ್ರೂರ ಮೋಹವನ್ನು ತೋರುತ್ತಿದ್ದ…..
ಏನ್ ಸಕ್ಕತ್ತಾಗಿದೆ ನನ್ ಚಿನ್ನ.. ಇವತ್ತಿನ ನಿನ್ನ ಹೇಗಾದರೂ ನನ್ನವಳನ್ನಾಗಿ ಮಾಡ್ಕೊಂತ್ತೀನಿ.. ಈ ಪಾರ್ಟಿ ನಿನಗಾಗಿ ನೆಪ ಅಷ್ಟೇ..
ಮಿಡಲ್ ಕ್ಲಾಸ್ ಮನೆಯ ಹುಡುಗಿ ಆದ್ರೂ ಯಾವ ಸಿಟಿ ಫ್ಯಾಷನ್ ಹುಡುಗಿರಿಗೆ ಕಡಿಮೆ ಇಲ್ಲ.. ಅವರೆಲ್ಲ ನನಗೆ ಬೋರಾಗಿದ್ದಾರೆ,, ಪಕ್ಕ ಲೋಕಲ್ನ ಒಂದು ಸಲ ಟ್ರೈ ಮಾಡಬೇಕು ಅಂತಾನೇ ನಿನ್ನ ಹುಡುಕಿ ಇಷ್ಟು ಕಷ್ಟಪಟ್ಟು ಪ್ರೀತಿ ಹೆಸರಲ್ಲಿ ನಿನ್ನ ನಂಬಿಸಿದ್ದು..
ನನ್ನ ಕೆಲಸ ಒಂದು ಸಲ ಆಗಲಿ ಆಮೇಲೆ ನಿನ್ನ ಕೂಡ ಡಸ್ಟ್ ಬಿನ್ ನಲ್ಲಿ ಟಿಶು ತರ ಬಿಸಾಕ್ತೀನಿ ನೋಡ್ತಾ ಇರು ಎನ್ನುತ್ತಾ ತನ್ನ ಕ್ರೌರತ್ವ ತೋರುತ್ತಿದ್ದ…..
ಫ್ರೆಶ್ ಆಗಿ ಅವನು ಕೊಟ್ಟ ಸೀರೆ ಉಟ್ಟು ಸ್ವಲ್ಪ ಮೇಕಪ್ ಆಗಿ ತಯಾರಾದ ಸಿಂಧು ತುಂಬಾ ಸುಂದರವಾಗಿ ಕಾಣುತ್ತಿದ್ದಳು.
ಸಂತೋಷವಾಗಿದ್ದ ಅವಳಿಗೆ ಗೊತ್ತಿಲ್ಲ ಇಂದು ದಿನ ಅವಳ ಜೀವನವನ್ನೇ ಹಾಳು ಮಾಡಬಹುದು ಎಂಬ ಸ್ವಲ್ಪ ಅಂದಾಜು ಕೂಡ ಅವಳಿಗೆ ಇರಲಿಲ್ಲ…

ನಾನು ರೆಡಿ ವಿಕ್ರಂ ಸರ್
ವಾವ್ ಬ್ಯೂಟಿಫುಲ್ ಸಿಂಧು ಆದರೆ ನೀನು ಇವಾಗ ನನ್ನ ಗರ್ಲ್ ಫ್ರೆಂಡ್ ಸರ್ ಅಂತ ಎಲ್ಲ ಕರೀಬೇಡ ವಿಕ್ರಂ ಅನ್ನು ಸಾಕು….
ಓಕೆ ವಿಕ್ರಂ…
ಓಕೆ ಬಾ ಇಲ್ಲಿ ಏನಾದರೂ ಸ್ವಲ್ಪ ತಿನ್ನು ಬೆಳಿಗ್ಗೆಯಿಂದ ಕೆಲಸ ಮಾಡಿ ಕೆಲಸ ಮಾಡಿ ಸುಸ್ತಾಗಿರ್ತೀಯ… ಎನ್ನುತ್ತಾ ವೆಟರ್ ತಂದುಕೊಟ್ಟ ಫುಡ್ ಅನ್ನು ಅವಳಿಗೆ ತಿನ್ನಿಸಿದ..
ಸಿಂಧು ಕಣ್ಣಾಲ್ಲಿಗಳು ಒದ್ದೆಯಾದವು.. ತನ್ನ ಸ್ವಂತದವರು ತಂದೆ ತಾಯಿ ತೋರದ ಕಾಳಜಿ ಇವನು ತೋರುತ್ತಿದ್ದಾನೆ ನನಗೆ ಇವನಿಗಿಂತ ಒಳ್ಳೆ ಜೀವನ ಸಂಗಾತಿ ಸಿಗಲ್ಲ.. ಅಪ್ಪಾ ಆಗಲಿ ಅಮ್ಮ ಆಗಲಿ ಒಂದು ದಿನವೂ ನೀನು ತಿಂದ ಏನು ಮಾಡ್ತಿದ್ದೀಯಾ? ಹುಷಾರಾಗಿದ್ಯಾ ಅಂತ ಕೇಳೇ ಇರಲಿಲ್ಲ…
ಅಂತದರಲ್ಲಿ ಇವನ ಕೇಳುತ್ತಿದ್ದಾನೆ ಎಂದೇ ಅವನ ಕೆಟ್ಟ ಪ್ರೀತಿಯನ್ನು ನಿಜವಾದ ಕಾಳಜಿ ಯುಕ್ತ ಪ್ರೀತಿ ಎಂದು ನಂಬಿದ್ದಳು…..
ಪಾಪ ಅವಳಿಗೇನು ಗೊತ್ತು ಅವನು ಪ್ರೀತಿಯ ಮುಖವಾಡ ಹಾಕಿರುವ ಕಾಮುಕ ಎಂದು …
ನಿಜವಾಗಿ ಸಿಂಧು ಜೀವನ ಹಾಳಾಗುತ್ತಿದೆಯ?……
ಬರಬೇಕಾಗಿದ್ದ ಗೆಳೆಯರೆಲ್ಲ ಬಂದಿದ್ದ ಕಾರಣ ಆ ಪಾರ್ಟಿ ಹಾಲ್ ನಲ್ಲಿ ಸ್ಟೇಜ್ ಮೇಲೆ ನಿರೂಪಕಿಯ ಮಾತಿನ ಚಕಮಕಿ ಶುರುವಾಗಿತ್ತು…..
ಒಂದಷ್ಟು ಜೋಡಿಗಳನ್ನ ಡ್ಯಾನ್ಸ್ ಹಾಡು ಎನ್ನುತ್ತಾ ಒಂದಷ್ಟು ಕಾರ್ಯಕ್ರಮಗಳು ನಡೆದಿದ್ದವು.. ಮತ್ತೆ ಹೊಸ ಜೋಡಿಗಳಿಗೆ ಮತ್ತು ಪ್ರೇಮಿಗಳಿಗೆ ಕೆಲವು ಗೇಮ್ಗಳ ಕಾಂಪಿಟೇಶನ್ ಕೂಡ ನಡೆದಿತ್ತು.
ವಿಕ್ರಂ ಕೂಡ ಮದುವೆಯಾಗಲಿರುವ ಹೊಸ ಜೋಡಿಗಳಿಗೆ ವಿಶ್ ಮಾಡಿದ..
ಪಾರ್ಟಿ ಹಾಲ್ ಈಗ ಮಂದ ಬೆಳಕಿನಿಂದ ಕೂಡಿತ್ತು ಮತ್ತು ಎಲ್ಲಾ ಪ್ರೇಮಿಗಳು ಜೋಡಿಗಳು ಇಂಗ್ಲಿಷ್ನಲ್ಲಿ ಬರುತ್ತಿದ್ದ ರೋಮ್ಯಾಂಟಿಕ್ ಸಾಂಗ್ ಹೆಜ್ಜೆ ಹಾಕುತ್ತಿದ್ದರು ವಿಕ್ರಂ ಸಿಂಧುವಿನ ನಡುವನ್ನು ಬಳಸಿ ಸ್ಟೆಪ್ ಹಾಕುತ್ತಿದ್ದ,,,
ಅವಳ ಸಹಕಾರ ಕೂಡ ಇತ್ತು…..
ಎಲ್ಲರಿಗೂ ಜ್ಯೂಸ ಹಾಗೂ ಡ್ರಿಂಕ್ಗಳು ಹಂಚಲ್ಪಟ್ಟವು ಈಗ ಸಿಂಧು ಮುಂದೆ ಒಂದು ಜ್ಯೂಸ್ ಹಾಗು ಮಧ್ಯದ ಗ್ಲಾಸ್ ಗಳಿದ್ದವು…
ಯಾವುದು ಮಾತ್ರೆಗಳನ್ನು ಮಿಕ್ಸ್ ಮಾಡಿದ ಜ್ಯೂಸ್ ಕುಡಿಸಿ ಮತ್ತೆ ಅದರೊಟ್ಟಿಗೆ ಡ್ರಿಂಕ್ಸ್ ಕೂಡ ಕುಡಿಸಲು ಹೋದ ಅವಳು ಬೇಡ ಎಂದರು ಏನು ಆಗುವುದಿಲ್ಲ ಕುಡಿ ಎಂದು ಬಲವಂತವಾಗಿ ಕುಡಿಸಿದ…
ಕುಡಿದ ಸಿಂಧು ತಲೆ ಒಮ್ಮೆ ಗಿರ ಎಂದಿತು ಬೇಡವೆಂದರೂ ಮತ್ತೊಂದು ಸ್ವಿಫ್ಟ್ ಕುಡಿಸಿದ….
ಒಂದು ಹತ್ತು ನಿಮಿಷದ ನಂತರ ಸಿಂಧು ಪೂರ್ತಿ ಪ್ರಜ್ಞೆ ತಪ್ಪಿದಳು….
*******
ಧನ್ಯವಾದಗಳು
✍️ಆಕರ್ಷಿತ…….
Swipe left/right or tap the sides to turn pages