ನಿನ್ನ ನಗುವಿಗೆ💞 – 2
ಇಬ್ಬರೂ ಒಟ್ಟಿಗೆ ಕಾಫಿ ಕುಡಿಯುವುದು, ತಮಾಷೆಯಾಗಿ ಶಾಪಿಂಗ್ಗೆ ಹೋಗುವುದು, ಒಬ್ಬರಿಗಾಗಿ ಒಬ್ಬರು ಕಾಯುವುದು ಪ್ರತಿದಿನವೂ ನಡೆಯುತ್ತಲೇ ಇರುತ್ತದೆ.. ಮಳೆಯಲ್ಲಿ ನೆನೆಯುತ್ತಾ ಎಂಜಾಯ್ ಮಾಡುವುದು ಕೂಡ ಮಾಡುತ್ತಿರುತ್ತಾರೆ… ಹೀಗೆ ಅವರಿಬ್ಬರ ನಡುವಿನ ಪ್ರೀತಿ ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚಾಗುತ್ತಾ ಹೋಗುತ್ತದೆ….
ಒಂದು ದಿನ ಲಕ್ಷ್, ಮೀನಾಕ್ಷಿಯನ್ನು ಹತ್ತಿರದಲ್ಲಿರುವ ಕಾಫಿ ಶಾಪ್ಗೆ ಬರುವಂತೆ ಕರೆಯುತ್ತಾನೆ. ಮೀನಾಕ್ಷಿ ಕೂಡ ಕಾಲು ಗಂಟೆಯೊಳಗೆ ಕೆಫೆ ಹತ್ತಿರ ಬಂದು ತಲುಪುತ್ತಾಳೆ…
“ಯಾಕೆ ಬರಲು ಹೇಳಿದ್ರಿ ಲಕ್ಷ್ ಸರ್?” ಎಂದು ಕೇಳುತ್ತಾಳೆ….
“ನಿನ್ನ ಜೊತೆ ಮಾತನಾಡಬೇಕು ಮೀನಾ…” ಎಂದು ಹೇಳುತ್ತಲೇ ಅವಳ ಕೈಗೆ ಒಂದು ಪುಟ್ಟ ಉಂಗುರವನ್ನು ತೊಡಿಸುತ್ತಾನೆ ಲಕ್ಷ್….
“ನೀನು ನನ್ನನ್ನು ಎಂದಿಗೂ ಮಿಸ್ ಮಾಡಿಕೊಳ್ಳಬಾರದು…” ಎಂದು ಹೇಳುತ್ತಾನೆ….
ಆ ಮಾತಿಗೆ ಮೀನಾಕ್ಷಿ ಸಣ್ಣಗೆ ನಗುತ್ತಾ,
“ನನಗೆ ಅಡುಗೆ ಮಾಡುವುದರಲ್ಲಿ ಬರೀ ಕಾಫಿ ಮಾಡುವುದು ಮಾತ್ರ ಗೊತ್ತು… ಬೇರೆ ಏನೂ ಬರಲ್ಲ…” ಎಂದು ಹೇಳುತ್ತಾಳೆ….
ಅದನ್ನು ಕೇಳಿದ ಲಕ್ಷ್ ನಗುತ್ತಾ,
“ಸರಿ ಬಿಡು… ಪರವಾಗಿಲ್ಲ. ಇಬ್ಬರೂ ಒಟ್ಟಿಗೆ ಅಡುಗೆ ಕಲಿಯೋಣ… ಪ್ರತಿದಿನ ಒಟ್ಟಿಗೆ ಅಡುಗೆ ಮಾಡೋಣ…” ಎಂದು ಹೇಳುತ್ತಾನೆ….
ಹೀಗೆ ಕೆಲವು ದಿನಗಳ ನಂತರ ಇಬ್ಬರಿಗೂ ನಿಶ್ಚಿತಾರ್ಥ ನಡೆಯುತ್ತದೆ…. ನಿಶ್ಚಿತಾರ್ಥದ ನಂತರ ಲಕ್ಷ್ ಮತ್ತು ಮೀನಾಕ್ಷಿ ಇಬ್ಬರೂ ಒಟ್ಟಿಗೆ ಹೊಸ ಜೀವನಕ್ಕೆ ಕಾಲಿಡಬೇಕೆಂದು ನಿರ್ಧರಿಸಿಕೊಳ್ಳುತ್ತಾರೆ….
ಒಂದು ದಿನ ಆಫೀಸ್ನಲ್ಲಿ ಪ್ರಾಜೆಕ್ಟ್ ವಿಷಯವಾಗಿ ಹೆಡ್ ಆಫೀಸ್ನಿಂದ ಮ್ಯಾನೇಜರ್ಗೆ ಕರೆ ಬರುತ್ತದೆ…. ಆ ಕರೆ ಮಾಡಿದವಳು ಪ್ರಿಯಾ… ಪ್ರಿಯಾ ಲಕ್ಷ್ನ ಕಾಲೇಜು ಸ್ನೇಹಿತೆ….
ಲಕ್ಷ್ ಮತ್ತು ಪ್ರಿಯಾ ಕಾಲೇಜು ದಿನಗಳಿಂದಲೂ ಒಳ್ಳೆಯ ಸ್ನೇಹಿತರಾಗಿದ್ದರಿಂದ ಆಫೀಸ್ನಲ್ಲೂ ಇಬ್ಬರೂ ಒಟ್ಟಿಗೆ ಸಾಕಷ್ಟು ಹೊತ್ತು ಮಾತನಾಡುತ್ತಿರುತ್ತಾರೆ….
ಇದನ್ನು ಒಂದು ದಿನ ಮೀನಾಕ್ಷಿ ನೋಡುತ್ತಾಳೆ….
ಲಕ್ಷ್ ಪ್ರಿಯಾಳ ಜೊತೆ ಹೆಚ್ಚು ಸಮಯ ಕಳೆಯುತ್ತಿರುವುದನ್ನು ನೋಡಿದ ಮೀನಾಕ್ಷಿ ಏನೂ ಮಾತನಾಡದೆ ಮೌನವಾಗಿ ಅಲ್ಲಿಂದ ಹೊರಟು ಹೋಗುತ್ತಾಳೆ….
ಆ ದಿನದಿಂದ ತನ್ನೊಳಗೆ ತಾನೇ ಮೌನವಾಗಿರಲು ಶುರುಮಾಡುತ್ತಾಳೆ…. ಅದು ಕೋಪವಲ್ಲ… ಏನೋ ಒಂದು ರೀತಿಯ ನೋವು, ಭಯ….
ಒಂದು ದಿನ ಪ್ರಿಯಾ ಲಕ್ಷ್ ಪಕ್ಕದಲ್ಲಿ ನಿಂತು ನಗುತ್ತಾ,
“ನೀನು ಇನ್ನೂ ಕಾಲೇಜು ದಿನಗಳಲ್ಲಿ ಹೇಗಿದ್ದೆಯೋ ಹಾಗೆಯೇ ಇದ್ದೀಯ…” ಎಂದು ಹೇಳುತ್ತಾಳೆ….
ಆ ಮಾತು ಕೇಳಿದ ಮೀನಾಕ್ಷಿಯ ಹೃದಯ ಒಮ್ಮೆಲೇ ವೇಗವಾಗಿ ಬಡಿದುಕೊಳ್ಳುತ್ತದೆ….
ಅಲ್ಲೇ ಏನೂ ಮಾತನಾಡದೆ ಮೌನವಾಗಿ ಅಲ್ಲಿಂದ ಹೊರಟು ಹೋಗಿ ಟೆರೇಸ್ ಮೇಲೆ ಕುಳಿತು ಯೋಚಿಸುತ್ತಾ ಇರುತ್ತಾಳೆ….
ಅಷ್ಟರಲ್ಲಿ ಅಲ್ಲಿಗೆ ಬಂದ ಲಕ್ಷ್,
“ಏನು ಯೋಚಿಸುತ್ತಿದ್ದೀಯ ನೀನು?” ಎಂದು ಕೇಳುತ್ತಾನೆ….
ಮೀನಾಕ್ಷಿ ಸ್ವಲ್ಪ ಹೊತ್ತು ಮೌನವಾಗಿದ್ದು,
“ನೀನು ಹೆಚ್ಚಾಗಿ ಪ್ರಿಯಾ ಜೊತೆನೇ ಬ್ಯುಸಿಯಾಗಿದ್ದೀಯ… ನನ್ನ ಜೊತೆ ಮಾತನಾಡಲೂ ನಿನಗೆ ಸಮಯ ಇಲ್ಲ ಅಲ್ವಾ…” ಎಂದು ನಿಧಾನವಾಗಿ ಹೇಳುತ್ತಾಳೆ….
ಅದನ್ನು ಕೇಳಿದ ಲಕ್ಷ್ ಸಣ್ಣಗೆ ನಗುತ್ತಾ,
“ಹೌದು… ನಾನು ತುಂಬಾ ಬ್ಯುಸಿಯಾಗಿದ್ದೇನೆ. ಆದರೆ ಅದು ಕೆಲಸಕ್ಕಾಗಿ ಮಾತ್ರ… ಪ್ರಿಯಾ ನನಗೆ ಕಾಲೇಜು ಫ್ರೆಂಡ್… ಅಷ್ಟೇ. ಅದಕ್ಕಿಂತ ಹೆಚ್ಚಾಗಿ ನನಗೂ ಅವಳಿಗೂ ಏನೂ ಇಲ್ಲ…” ಎಂದು ಹೇಳುತ್ತಾನೆ….
ನಂತರ ಅವಳ ಕಡೆ ನೋಡುತ್ತಾ,
“ಏನು… ನೀನು ಯಾವುದಕ್ಕಾದರೂ ಭಯಪಡುತ್ತಿದ್ದೀಯಾ?” ಎಂದು ಕೇಳುತ್ತಾನೆ….
“ನೀನು ಅವಳಿಗೆ ಹತ್ತಿರವಾಗಿಬಿಟ್ಟಿದ್ದೀಯೇನೋ ಅನ್ನೋ ಭಯ ಕಾಡುತ್ತಿತ್ತು…” ಎಂದು ಮೀನಾಕ್ಷಿ ಕಣ್ಣಲ್ಲಿ ನೀರು ತುಂಬಿಕೊಂಡು ಹೇಳುತ್ತಾಳೆ….
ಅದನ್ನು ಕೇಳಿದ ಲಕ್ಷ್ ಅವಳ ಹತ್ತಿರ ಹೋಗಿ,
“ನನ್ನ ಹೃದಯದಲ್ಲಿ ಜಾಗ ಯಾವಾಗಲೂ ನಿನಗೇ… ನನ್ನ ಹೃದಯದ ರಾಣಿಯೂ ನೀನೇ…” ಎಂದು ಹೇಳುತ್ತಾನೆ….
ಆ ಮಾತುಗಳನ್ನು ಕೇಳಿದ ತಕ್ಷಣ ಮೀನಾಕ್ಷಿ ನಗುತ್ತಾಳೆ….
“ಅಬ್ಬಾ… ಕೊನೆಗೂ ನಕ್ಕೆ ಅಲ್ವಾ… ಅಷ್ಟೇ ಸಾಕು ನನಗೆ…” ಎಂದು ಲಕ್ಷ್ ಕೂಡ ನಗುತ್ತಾ ಅವಳ ಜೊತೆ ಸ್ವಲ್ಪ ಹೊತ್ತು ತಮಾಷೆಯಾಗಿ ಮಾತನಾಡುತ್ತಿರುತ್ತಾನೆ….
ಹೀಗೆ ಲಕ್ಷ್ ಕೊಟ್ಟ ಸ್ಪಷ್ಟನೆಯಿಂದ ಮೀನಾಕ್ಷಿ ನೆಮ್ಮದಿಯಿಂದ ನಿದ್ರೆ ಮಾಡುತ್ತಾಳೆ….
ಮರುದಿನ ಆಫೀಸ್ಗೆ ಹೋದ ಮೀನಾಕ್ಷಿ ಪ್ರಿಯಾಳನ್ನು ಭೇಟಿಯಾಗುತ್ತಾಳೆ….
ಆಗ ಪ್ರಿಯಾ,
“ಲಕ್ಷ್ ನನಗೆ ಬರೀ ಫ್ರೆಂಡ್ ಮಾತ್ರ… ನೀನು ಯಾವುದನ್ನೂ ತಪ್ಪಾಗಿ ಅರ್ಥಮಾಡಿಕೊಳ್ಳಬೇಡ…” ಎಂದು ಹೇಳುತ್ತಾಳೆ….
ಅದನ್ನು ಕೇಳಿದ ಮೀನಾಕ್ಷಿಯ ಮನಸ್ಸು ನಿರಾಳವಾಗುತ್ತದೆ….
ಅಷ್ಟರಲ್ಲೇ ಲಕ್ಷ್ ಅಲ್ಲಿಗೆ ಬಂದು ಮೀನಾಕ್ಷಿಯ ಕೈ ಹಿಡಿಯುತ್ತಾನೆ…. ಇಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ನಗುತ್ತಾರೆ….
ಹೀಗೆ ದಿನಗಳು ಕಳೆಯುತ್ತಾ ಹೋಗುತ್ತವೆ….
ಕೆಲವು ದಿನಗಳ ನಂತರ ಮೀನಾಕ್ಷಿಯ ಹುಟ್ಟುಹಬ್ಬ ಬರುತ್ತದೆ…. ಅದೇ ದಿನ ಆಫೀಸ್ಗೆ ಹೊಸದಾಗಿ ಫ್ರೆಶರ್ಸ್ ಜಾಯಿನ್ ಆಗಿದ್ದರಿಂದ ಸೆಲೆಬ್ರೇಷನ್ಸ್ ನಡೆಯುತ್ತಿರುತ್ತವೆ….
ಆದರೆ ಮೀನಾಕ್ಷಿ ಬಾಗಿಲು ತೆರೆದು ಒಳಗೆ ಕಾಲಿಡುತ್ತಿದ್ದಂತೆಯೇ… ಅಲಂಕರಿಸಿದ ಹಾಲ್ನ ಮಧ್ಯದಲ್ಲಿ ಲಕ್ಷ್ ಕಾಣಿಸುತ್ತಾನೆ….
ಮೀನಾಕ್ಷಿಯ ಕಡೆ ನೋಡುತ್ತಾ,
“ನನ್ನ ಜೀವನದಲ್ಲಿ ನಿನ್ನನ್ನು ಕಳೆದುಕೊಳ್ಳುವುದು ನನಗೆ ಇಷ್ಟವಿಲ್ಲ… ನೀನು ಬೇರೆ, ನಾನು ಬೇರೆ ಅಲ್ಲ… ನಾವಿಬ್ಬರೂ ಒಂದೇ…” ಎಂದು ಹೇಳುತ್ತಾ ಮೊಣಕಾಲೂರಿ ಕುಳಿತುಕೊಳ್ಳುತ್ತಾನೆ….
ನಂತರ ಮೀನಾಕ್ಷಿಯ ಕೈ ಹಿಡಿದು ಮತ್ತೊಮ್ಮೆ ಉಂಗುರ ತೊಡಿಸುತ್ತಾನೆ….
ಇಲ್ಲಿ ನೀವು ಗಮನಿಸಬೇಕಾದ ವಿಷಯ ಏನೆಂದರೆ… ಇದು ಎರಡನೇ ಬಾರಿ ಉಂಗುರ ತೊಡಿಸುತ್ತಿರುವುದು….
ಮೊದಲ ಬಾರಿ ತನ್ನ ಪ್ರೀತಿಯನ್ನು ಮೀನಾಕ್ಷಿಗೆ ತಿಳಿಸುತ್ತಾ ಉಂಗುರ ತೊಡಿಸಿದ್ದ ಲಕ್ಷ್… ಈಗ ಎಲ್ಲರ ಮುಂದೆ ಮತ್ತೊಮ್ಮೆ ಉಂಗುರ ತೊಡಿಸಿ, ಅವಳು ತನ್ನ ಜೀವನದಲ್ಲಿ ಎಷ್ಟು ವಿಶೇಷವಾದವಳು ಎಂಬುದನ್ನು ತಿಳಿಸುತ್ತಾನೆ….
ಅದನ್ನು ನೋಡಿದ ಮೀನಾಕ್ಷಿಯ ಕಣ್ಣುಗಳಲ್ಲಿ ಸಂತೋಷ ತುಂಬಿ ತುಳುಕುತ್ತದೆ…. ತಕ್ಷಣವೇ ಲಕ್ಷ್ನನ್ನು ತಬ್ಬಿಕೊಳ್ಳುತ್ತಾಳೆ…. ಲಕ್ಷ್ ಕೂಡ ಅವಳನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತಾನೆ….
ಅವರಿಬ್ಬರ ಸಂತೋಷವನ್ನು ನೋಡಿದ ಆಫೀಸ್ನಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟುತ್ತಾ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ….
ಹೀಗೆ ಆ ದಿನ ಮೀನಾಕ್ಷಿಯ ಹುಟ್ಟುಹಬ್ಬವನ್ನು ಆಫೀಸ್ನ ಎಲ್ಲ ಸ್ಟಾಫ್ಗಳ ನಡುವೆ ತುಂಬಾ ಸಂತೋಷದಿಂದ ಆಚರಿಸುತ್ತಾರೆ….
ಇಂತಹ ಒಂದು ಸುಂದರವಾದ ಸರ್ಪ್ರೈಸ್ನ್ನು ಲಕ್ಷ್ ಕೊಡುತ್ತಾನೆಂದು ಮೀನಾಕ್ಷಿ ಸ್ವಲ್ಪವೂ ಊಹಿಸಿರಲಿಲ್ಲ….
ನನ್ನ ಸ್ಟೋರಿ ನಿಮಗೆ ಹೇಗನಿಸಿತು ಅನ್ನೋದನ್ನ ಕಾಮೆಂಟ್ ಸೆಕ್ಷನ್ನಲ್ಲಿ ಕಾಮೆಂಟ್ ಮಾಡಿ ಬಂಗಾರಗಳೇ…. 🥰🥰
ಈ ಸ್ಟೋರಿಯನ್ನು ಕೇವಲ ಒಂದು ಕಥೆಯಾಗಿ ಮಾತ್ರ ನೋಡಿ…. ಇದು ನಿಜ ಜೀವನಕ್ಕೆ ಸಂಬಂಧಿಸಿದ್ದಲ್ಲ…. ಏನಾದರೂ ತಪ್ಪುಗಳಿದ್ದರೆ ದಯವಿಟ್ಟು ನಿರ್ಲಕ್ಷಿಸಿ ಬಂಗಾರಗಳೇ…. 🥰🥰
ನಿಮ್ಮ ಚಿನ್ನಿ ❤️
Swipe left/right or tap the sides to turn pages