💞ಚೇತನದ ಕಡಲಲ್ಲಿ ಸಿಂಧು💞 – 5
ಇತ್ತ ದೀಪಿಕಾ ಪ್ರೀತಿಯಲ್ಲಿ ಮುಳುಗಿದ್ದ ಚೇತನ್ ಕೇವಲ ಅವಳ ಕೆಲಸ ಮಾಡುವ ಅವಳ ಅವಶ್ಯಕತೆ ಪೂರೈಸುವ ಹಾಳಾಗಿದ್ದ ಅವಳ ಊಟ ತಿಂಡಿ ಶಾಪಿಂಗ್ ಕ್ಯಾಬ್ ಬುಕಿಂಗ್ ಇಂದ ಹಿಡಿದು ಪ್ರತಿಯೊಂದು ಈಗ ಅವನೇ ಮಾಡುತ್ತಿದ್ದ ಜೊತೆಯಲ್ಲಿ ಅವಳ ಶಾಪಿಂಗ್ ಬ್ಯಾಗ್ ಬಾರ ಹೊರುವ ಕೂಲಿ ಆಳು ಕೂಡ….
ಅವಳು ಅವನೊಂದಿಗೆ ಬ್ರೇಕ್ ಅಪ್ ಮಾಡಿಕೊಳ್ಳಲೆಂದು ಜಗಳ ಮಾಡಿದಳು. ನನ್ನ ಮೇಲೆ ಪ್ರೀತಿ ಇಲ್ಲ ನಿನಗೆ ಹಾಗೆ ಹೀಗೆ ಅಂತ ಎನ್ನುತ್ತಾ….
ಅವಳ ಮೇಲಿನ ಹುಚ್ಚು ಪ್ರೀತಿಯನ್ನು ಪ್ರೂವ್ ಮಾಡಲೆಂದು ತನ್ನ ಎದೆಯ ಮೇಲೆ ದೀಪು ಅಂತ ಇಂಗ್ಲಿಷ್ನಲ್ಲಿ ಸ್ಟೈಲಿಶ್ ಆಗಿ ಹಚ್ಚೆ ಹಾಕಿಸಿಕೊಂಡಿದ್ದ…
ಇವನ ಈ ಪರಿಯ ಹುಚ್ಚನ್ನು ಕಂಡ ಚೇತನ್ ತಂದೆ ತಾಯಿಗೆ ಆತಂಕ ಶುರುವಾಗಿತ್ತು…
ಶೋಕಿ ಮಾಡುವ ಹುಡುಗಿಯನ್ನು ನಂಬಿ ನಿಜವಾದ ಪ್ರೀತಿ ಎಂದು ಮಗ ಹುಚ್ಚನಾಗಿದ್ದ ….
ಮಧ್ಯರಾತ್ರಿ ಲೇಟಾಗಿ ಬರುವುದು, ಅವಳ ಜೊತೆ ಸೇರಿ ಪಾರ್ಟಿಗಳಲ್ಲಿ ಕಂಠಪೂರ್ತಿ ಕುಡಿದು ಬರುವುದು,, ಯಾವಾಗಲೂ ಅವಳ ಜಪ ಮಾಡುತ ಇರುವುದು ನೋಡಲಾಗದೆ ಅವನಿಗೆ ಮದುವೆ ಆಗುವಂತೆ ಒತ್ತಾಯ ಮಾಡಿದರು….
ಇಲ್ಲ ನಾನು ಒಪ್ಪೋದಿಲ್ಲ ನಾನು ದೀಪಿಕಾ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಅವಳನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದು ಕುಳಿತಿದ್ದ….
ಅದಕ್ಕೆ ಒಪ್ಪದ ತಾಯಿ ಸರಸ್ವತಿ ನನಗೆ ಬಡ ಮನೆತನದ ಹುಡುಗಿಯಾದರೂ ಪರವಾಗಿಲ್ಲ ಸಂಸ್ಕಾರವಂತ ಹೆಣ್ಣು ನಮ್ಮ ಸೊಸೆಯಾಗಿ ಮಗನಿಗೆ ಹೆಂಡತಿಯಾಗಿ ಬರಬೇಕೆಂದು ತಾಕಿತು ಮಾಡಿದ್ದರು….
ದೀಪಿಕಾ ನಂತಹ,,, ಡ್ರಿಂಕ್ಸ್ ಮಾಡಿಕೊಂಡು ಪಾರ್ಟಿ ಎಂದು ಹೊರಗೆ ಸುತ್ತುವ ಹುಡುಗಿ ಅವರಿಗೆ ಸ್ವಲ್ಪ ಹಿಡಿಸಿರಲಿಲ್ಲ….
ಅದಕ್ಕಾಗಿ ತಮ್ಮ ಗಂಡ ಗುರುದೇವ್ ಬಳಿ ಹೇಳಿ ಒಂದು ಪ್ಲಾನ್ ಮಾಡಿದ್ದರು.
ನಾವು ತೋರಿಸಿದ ಹುಡುಗಿಯನ್ನು ಮದುವೆಯಾಗದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎದುರಿಸಿ ಹೇಗೋ ಅವನ್ನು ಒಪ್ಪಿಸಿದರು….
ಗುರುದೇವ್ ಕೂಡ ಒಂದಷ್ಟು ಬ್ರೋಕರ್ಗಳಿಗೆ ಚೇತನ್ ಫೋಟೋ ಕೊಟ್ಟಿದ್ದರು ತಮಗೆ ತಿಳಿದ ಎಲ್ಲಾ ಕಡೆ ವಿಚಾರಿಸಿದರು…
ಈಗ ತಮಗೆ ಇಷ್ಟವಾಗುವ ಸೊಸೆಯನ್ನು ಆಯ್ಕೆ ಮಾಡುವ ಹಕ್ಕು ಸರಸ್ವತಿಯವರ ಕೈನಲ್ಲಿತ್ತು
ತುಂಬಾ ಕಡೆ ಹೆಣ್ಣು ನೋಡುವ ಶಾಸ್ತ್ರ ಮಾಡಿದರು ಕೂಡ ಅವರಿಗೆ ಯಾರು ಹಿಡಿಸಿರಲಿಲ್ಲ..
ಒಂದು ದಿನ ಬ್ರೋಕರ್ ಹೇಳಿದ್ದ ಹುಡುಗಿಯನ್ನು ನೋಡಲು ಬಂದಿದ್ದ ಸರಸ್ವತಿಯವರಿಗೆ ಆ ಹುಡುಗಿಗಿಂತ ಮನೆಯ ಓನರ್ ಗೆ ಬಾಡಿಗೆ ಹಣ ನೀಡಲು ಬಂದಿದ್ದ ಅತ್ಯಂತ ರೂಪವತಿ, ಗುಣವತಿಯಾಗಿದ್ದ ಸಿಂಧು ಇಷ್ಟವಾದಳು….
ಮನೆಯ ಓನರ್ ಬಳಿ ನೇರವಾಗಿ ನಿಮ್ಮ ಮಗಳು ನಮಗೆ ಇಷ್ಟವಾಗಲಿಲ್ಲ ನನಗೆ ಈಗ ಆಚೆ ಹೋದ ಹುಡುಗಿ ಇಷ್ಟವಾದಳು ಯಾರದು ಎಂದು ವಿಚಾರಿಸಿ,
ಗಂಡ ಮಗ ಮಗಳನ್ನು ಕರೆದುಕೊಂಡು ನೇರವಾಗಿ ಬಂದಿದ್ದರು ಮನೆ ಚಿಕ್ಕದಾಗಿದ್ದರೂ ಅಚ್ಚುಕಟ್ಟಾಗಿ ಸ್ವಚ್ಛಂದವಾಗಿ ಕಂಗೊಳಿಸುತ್ತಿತ್ತು ……..
ಸಿಂಧು ತಾಯಿ ಮಂಗಳ ಬಳಿ ನೇರವಾಗಿ ಮಾತನಾಡಿದರು…..
ಮಂಗಳ ಗೆ ಮೊದಮೊದಲು ಇವಳಿಗೇಕೆ ಇಂಥ ದೊಡ್ಡ ಶ್ರೀಮಂತ ಸಂಬಂಧ ಕೊಡಿಸಬೇಕು… ಜೊತೆಯಲ್ಲಿ ಇವಳನ್ನು ಮದುವೆ ಮಾಡಿಕೊಟ್ಟರೆ ಮನೆ ಕೆಲಸ ಯಾರು ಮಾಡುತ್ತಾರೆ… ನಮ್ಮ ಖರ್ಚು ಯಾರು ನಿಭಾಯಿಸುತ್ತಾರೆ ಎಂದು ಯೋಚಿಸಿ ಬೇಡ ಅಂತ ಹೇಳಬೇಕು ಎಂದು ಬಾಯಿ ತೆಗೆಯುತ್ತಾರೆ…..
ಅಷ್ಟರಲ್ಲಿ ಏನೋ ಒಂದು ಮನಸ್ಸಿನಲ್ಲಿ ಲೆಕ್ಕಾಚಾರ ಹಾಕಿದ ಮಂಗಳ ಸರಿ ನಮಗೆ ಒಪ್ಪಿಗೆ ಇದೆ ಎಂದು ಹೇಳುತ್ತಾರೆ….
ಆಯ್ತು ನಿಮ್ಮ ಮಗಳನ್ನು ಒಮ್ಮೆ ಕರೆಯಿರಿ ಅವಳಗೆ ಇಷ್ಟವೋ ಕೇಳೋಣ ಎಂದರೆ.
ನನ್ನ ಮಾತು ನನ್ನ ಮಗಳು ಮೀರುವುದಿಲ್ಲ ಅವಳಿಗೂ ಓಕೆ, ನೀವು ಮುಂದೆ ಆಗುವ ಕಾರ್ಯಕ್ರಮ ಬಗ್ಗೆ ಯೋಚಿಸಿ.
ಸರಿ ಆಯ್ತು ನಿಮ್ಮ ನಂಬರ್ ಕೊಟ್ಟಿರಿ ನಾವು ಮನೆಯಲ್ಲಿ ಮಾತನಾಡಿ ವಿಷಯ ಫೋನ್ ಮಾಡಿ ತಿಳಿಸುತ್ತೇವೆ ಎಂದು ಸರಸ್ವತಿ ಅವರ ಕುಟುಂಬ ಬಂದ ಕಾರಿನಲ್ಲಿ ಹೊರಟು ಹೋಗಿದ್ದರು….
*******
ಸರಸ್ವತಿಯವರ ಮನೆಯಲ್ಲಿ.,,,,,…
ಚೇತನ್ ಮನೆಗೆ ಬಂದ ತಕ್ಷಣ ಇನ್ನೂ ತನ್ನ ಕೆಲಸ ಮುಗಿಯಿತು ನೀವೇನಾದರೂ ಮಾಡಿಕೊಳ್ಳಿ ನನಗೆ ಸಂಬಂಧವಿಲ್ಲ ಎನ್ನುವಂತೆ ಮತ್ತೊಮ್ಮೆ ಆಕರ್ಷವಾಗಿ ಸ್ಟೈಲಿಶ್ ಜೀನ್ಸ್ ಮತ್ತು ಶರತ್ ಧರಿಸಿ ದೀಪಿಕಾ ಕರೆಗೆ ಬಂದೆ ಎನ್ನುತ್ತಾ ಓಡಿ ಹೋಗಿದ್ದ…
ದೀಪಿಕಾಗೆ ಈಗ ಶಾಪಿಂಗ್ ಮಾಡಲಿತ್ತು ಅದಕ್ಕಾಗಿ ಅವನಿಗೆ ಕರೆ ಮಾಡಿದ್ದು ಅದನ್ನು ಬಿಟ್ಟು ಯಾವುದೇ ಪ್ರೀತಿಯ ಉದ್ದೇಶವಿರಲಿಲ್ಲ…..
ಹಾಯ್ ದೀಪು ಬಂಗಾರ ಏನು ಅಪರೂಪಕ್ಕೆ ಕಾಲ್ ಮಾಡಿದ್ದೀಯ ಬರಲು ಹೇಳಿದೆ ಮೀಟ್ ಆಗೋದಕ್ಕೆ ಏನ್ ವಿಷಯ ಮದುವೆ ಬಗ್ಗೆ ಏನಾದ್ರೂ ಪ್ಲಾನ್ ಇದ್ರೆ ಹೇಳು ಈಗಲೇ ಓಡಿ ಹೋಗಿ ಮದುವೆ ಆಗೋಣ….
ಏನ್ ಹೇಳ್ತಿದ್ದೀಯೋ ನನಗೆ ಈಗಲೇ ಇಷ್ಟು ಬೇಗ ಮದುವೆ ಬಗ್ಗೆ ಇಂಟರೆಸ್ಟ್ ಇಲ್ಲ ನಿಮಗೆ ಹೇಳಿದ್ದೀನಿ ತಾನೇ..
ಹೌದು, ಇಷ್ಟು ದಿನ ಮನೆಯಲ್ಲಿ ಹೇಳೋಣ ಅಂತಿದ್ದೆ ಸಡನ್ ಆಗಿ ಏನೋ ಓಡಿ ಹೋಗೋಣ ಅಂತಿದ್ಯ ಯಾಕೆ ನಿಮ್ಮಪ್ಪನ ಆಸ್ತಿ ಏನಾದರೂ ದಾನ ಮಾಡೋ ಪ್ಲಾನ?.. ಎಂದು ಹುಬ್ಬು ಹಾರಿಸಿ ಕುತೂಹಲದಿಂದ ಕೇಳಿದಳು……..
ಇಲ್ಲ ಬೇಬಿ ನಮ್ಮನೆಯಲ್ಲಿ ಏನಾಗಿದೆ ಗೊತ್ತಾ?….
ಏನಾಯ್ತು?… ದೀಪಿಕಾ ಪ್ರಶ್ನೆಸಿದಳು…
ಅಪ್ಪ ಅಮ್ಮ ಇಬ್ಬರೂ ಎಮೋಷನಲ್ ಬ್ಲಾಕ್ ಮೇಲ್ ಮಾಡಿ ನನಗೆ ಮದುವೆ ಮಾಡಬೇಕು ಅಂದುಕೊಂಡಿದ್ದಾರೆ ಅದಕ್ಕೆ ನಾನು ಸುಮ್ಮನೆ ಒಪ್ಪಿಕೊಂಡು ಮಾತು ಕೊಟ್ಟಿದ್ದೀನಿ……
ಹೌದಾ!… ಎಂದು ಅವಕ್ ಆದವಳಂತೆ ನಟಿಸಿದಳು….
ಚೇತನ್ ಮಾತು ಮುಂದುವರೆಸುತ್ತಾ
ಮದುವೆ ಏನೋ ಮಾಡ್ಕೊಂತೀನಿ ಆದ್ರೆ ಅವಳನ್ನು ಆದಷ್ಟು ಬೇಗ ಡೈವೋರ್ಸ್ ಕೊಟ್ಟು ಓಡಿಸಿ ಆಮೇಲೆ ನಾವು ಮದುವೆ ಆಗೋಣ ಅದಕ್ಕೆ ನಾನೊಂದು ಪ್ಲಾನ್ ಮಾಡಿದ್ದೇನೆ…..
ದೀಪಿಕಾ ಕೂಡ ಮೈಂಡ್ನಲ್ಲೇ ಯಾವುದೋ ಮಾಸ್ಟರ್ ಪ್ಲಾನ್ ಹಾಕಿ,,
ಹೌದಾ ಚೇತು ಸರಿ ಬಿಡು ನೀನು ಅವಳ ಜೊತೆ ಮದುವೆಯಾಗಿ ಖುಷಿಯಾಗಿರು ನಾನು ಯಾವುದಾದರೂ ಹಾಳು ಬಾವಿಗೆ ಬಿಳ್ತೀನಿ……
ಯಾಕೆ ದೀಪು ಹಾಗಂತೀಯ ನನ್ನ ಮನೆನಲ್ಲಿ ನನ್ನ ಹಾರ್ಟ್ ನಲ್ಲಿ ಯಾವಾಗಲೂ ನಿನಗೆ ಮೊದಲ ಸ್ಥಾನ….
ಅವಳನ್ನ ನಾಟಕಕ್ಕಾಗಿ ಮಾತ್ರ ಮದುವೆ ಆಗ್ತೀನಿ ಇನ್ನೊಂದು ವಿಷಯ ಏನು ಗೊತ್ತಾ…
ಮನೆಯವ್ರು ಇನ್ನೂ ಅವರ ಮನೆಯಲ್ಲಿ ಒಪ್ಪಿಗೆ ಅಂತ ಹೇಳಿಲ್ಲ ಈಗಲೇ ಹೇಗಾದರೂ ಆ ಸಂಬಂಧ ಕ್ಯಾನ್ಸಲ್ ಮಾಡಬಹುದು ಅಂತ ಅದಕ್ಕೆ ನಾನೇನಾದರೂ ದಾರಿ ಹುಡುಕ್ತೀನಿ….
ತಟ್ಟನೆ,,, ಆ ಪ್ಲಾನ್ ವರ್ಕ್ ಆಗ್ದೇ ಇದ್ರೆ ನೀನು ಅವಳನ್ನೇ ಮದುವೆ ಆಗಿ ಸಂಸಾರ ಮಾಡಬೇಕಾಗುತ್ತೆ ಹೇಗಿದ್ದರೂ ನಿನಗೆ ಮನೆಯಲ್ಲಿ ಹೆಂಡತಿ ಇರಬೇಕು ಅಂತಾನೇ ಇಷ್ಟ ಅಲ್ವಾ ಅದಕ್ಕೆ ಸುಮ್ಮನೆ ಮದುವೆ ಆಗು,, ನನ್ನ ಲೈಫ್ ಹೇಗೆ ನಡೆಯುತ್ತೆ ಬಿಡು….
ಎನ್ನುತ್ತಾಳೆ ಮುಖದಲ್ಲಿ ಸುಳ್ಳು, ನಾಟಕದ ನೋವನ್ನು ತುಂಬಿಕೊಂಡು…..
ನನಗೆ ಹೆಂಡತಿ ಬೇಕು ನಿಜ ಆದರೆ ಆ ಜಾಗದಲ್ಲಿ ನೀನಿರಬೇಕೆ ಹೊರತು ಅವಳು ಯಾರೋ ಭಿಕಾರಿ ಅಲ್ಲ..
ಆಯ್ತು ನೀನು ಹೇಳಿದ ಹಾಗೆ ಒಂದು ಪಕ್ಷ ಮದುವೆ ಫಿಕ್ಸ್ ಮಾಡಿದರು ಅಂತನೇ ಅಂದುಕೊಳ್ಳೋಣ ನಾನು ಅವಳತ್ರ ಡೈರೆಕ್ಟ್ ಆಗಿ ವಿಷ್ಯ ಹೇಳಿ ಮದುವೆ ಆದ್ಮೇಲೆ ಡೈವರ್ಸ್ ಕೊಡ್ತೀನಿ ಅಂತ ಹೇಳಿ ಅವಳನ್ನು ನಾನು ಒಪ್ಪಿಸುತ್ತೇನೆ….
ಆಮೇಲೆ ಅಪ್ಪ ಅಮ್ಮನ ಹತ್ತಿರ ಕೂಡ ಅವಳಿಗೆ ಇಷ್ಟ ಇಲ್ಲ ಅಂತ ಡೈವರ್ಸ್ ಕೊಟ್ಟಿದ್ದಾಳೆ ಅಂತ ನಂಬಿಸುತ್ತೇನೆ ಮತ್ತೆ ಅವರು ವಿಧಿ ಇಲ್ಲದೆ ನನ್ನ ನಿನ್ನ ಮದುವೆ ಮಾಡ್ತಾರೆ..
ಆತರ ಮಾಸ್ಟರ್ ಪ್ಲಾನ್ ಕ್ರಿಯೇಟ್ ಮಾಡ್ತೀನಿ…….
ಹೇಗಿದೆ ನನ್ನ ಐಡಿಯಾ…?..
ಸೂಪರ್ ಕಣೋ ಚೇತು ಎನ್ನುತ್ತಾ ಕೆನ್ನೆಗೆ ಮುತ್ತಿಟ್ಟು ಹಗ್ ಕೊಟ್ಟಳು ಅದು ಕೂಡ ಬೀದಿಯಲ್ಲಿ…
ಹುಡುಗ ಕಳೆದೆ ಹೋದ ಮುತ್ತಿನ ಮತ್ತಿನಲ್ಲಿ ತೇಲುತ್ತಿದ್ದ ಅಲ್ಲಿಂದ ವಾಸ್ತವಕ್ಕೆ ಬಂದ ಚೇತನ್ಗೆ ನಾವಿರುವುದು ಪಬ್ಲಿಕ್ ನಲ್ಲಿ ಎಂಬ ಅರಿವಾಯಿತು.
“ಛೆ ದೀಪು ಏನಿದು ಪಬ್ಲಿಕ್ ಇಲ್ಲಿ ಇತರ ನಡೆದುಕೊಳ್ಳಲು ಸ್ವಲ್ಪ ಬುದ್ದಿ ಬೇಡವ ನಿನಗೆ. ಮೊದಲು ಇಲ್ಲಿಂದ ನಡಿ” ಹೋಗೋಣ ಎನ್ನುತ್ತಾ ಕರೆದುಕೊಂಡು ಹೋದ…
ಅವನ ವ್ಯಕ್ತಿತ್ವವೇ ಅಂತಹದ್ದು ಪ್ರೀತಿ ಎಂದರೆ ಪವಿತ್ರವಾದದ್ದು ಅದನ್ನು ಯಾರ ಮುಂದೆಯೂ ಶೋಕಿಗಾಗಿ ತೋರಿಸಬಾರದು ಎಂಬುದು ಇವನ ಪಾಲಿಸಿ, ಇದಕ್ಕೆ ತದ್ವಿರುದ್ಧ ದೀಪಿಕಾ…
ದೀಪಿಕಾಗೆ ದಾರಿಯಲ್ಲಿ ಎಲ್ಲರೂ ಮುಂದೆ ತಾನು ಮರ್ಯಾದೆ ಬಿಟ್ಟು ಕೊಟ್ಟ ಮುತ್ತಿಗಿಂತ,,
ಅದೇ ಪಬ್ಲಿಕ್ ಮುಂದೆ ಅವಳಿಗೆ ರೆಗಿ ಎಳೆದುಕೊಂಡು ಹೋದದ್ದೆ ದೊಡ್ಡದಾಗಿತ್ತು ಅದೇ ಅವಳಿಗೆ ಅವಮಾನದಂತೆ ಭಾಸವಾಗಿತ್ತು ಮುಖ ಬಿಳುಚಿಕೊಂಡಿತು……
ಸ್ವಲ್ಪ ಹೊತ್ತಿನ ಜಗಳದ ನಂತರ ಚೇತನ್ ತಾನಾಗೆ ಅವಳಿಗೆ ಸಮಾಧಾನ ಮಾಡಿ ಶಾಪಿಂಗ್ ಎಂದು ಕರೆದುಕೊಂಡು ಹೋದ
(ಇದೇಂತಹ ಪ್ರೀತಿ ನೋಡಿ ಬೇಜಾರಾದಾಗ, ಜಗಳವಾದಾಗ, ಕೋಪ ಬಂದಾಗ ಪ್ರೀತಿಯಿಂದ ಅಲ್ಲದೆ ದುಡ್ಡಿನಿಂದ ದೊಡ್ಡ ದೊಡ್ಡ ದುಬಾರಿ ಗಿಫ್ಟ್ ಗಳಿಂದ ಬೆಲೆ ಕಟ್ಟುವುದು)….
ಅವಳು ಶಾಪಿಂಗ್ ಯಾವಾಗಲೂ ದೊಡ್ಡ ದೊಡ್ಡ ಮಾಲ್ ನಲ್ಲಿನ ಬ್ರಾಂಡೆಡ್ ದುಬಾರಿ ಬಟ್ಟೆಗಳದ್ದೇ.. ಮತ್ತು ಮಾಡ್ರನ್ ವೆಸ್ಟರ್ನ್ ವೇರ್ ಬಟ್ಟೆಗಳನ್ನು ಹಾಕುತ್ತಿದ್ದದ್ದು ಮತ್ತು ಶಾಪಿಂಗ್ ಮಾಡುತ್ತಿದ್ದದ್ದು ಇದಕ್ಕಾಗಿ ಸರಸ್ವತಿಯವರಿಗೆ ಇವಳು ಇಡಿಸಿರಲಿಲ್ಲ…..

ಸಿಂಧು ವನ್ನು ನೋಡಿದ ತಕ್ಷಣ ಅವರ ಅನುಭವದ ವಯಸ್ಸಾದ ಕಣ್ಣುಗಳಿಗೆ ತಿಳಿದಿತ್ತು ಸಿಂಧೂ ಪಕ್ಕಾ ಸಂಸ್ಕಾರವಂತ ಮತ್ತು ಸಾಂಪ್ರದಾಯಿಕ ಹೆಣ್ಣು ಮಗಳು ಎಂಬುದು….
ಅವರು ಅಂದು ಕೊಂಡಂತೆ ಹಿರಿಯರೊಂದಿಗೆ ತಗ್ಗಿ ಬಗ್ಗಿ ನಡೆಯುವ ಸ್ವಭಾವ ಅವಳದಾಗಿತ್ತು…
ಈಗ ಚೇತನ್ ಮನೆಯಲ್ಲಿ ವಾದ ವಿವಾದ ಚರ್ಚೆ ನಡೆಯುತ್ತಿತ್ತು….
ಸರಸ್ವತಿಯವರು,,,
ಆ ಹುಡುಗಿ ಸಿಂಧೂನೇ ನನ್ನ ಮಗನಿಗೆ ಸರಿಯಾದ ಜೋಡಿ ನನ್ನ ಮನೆಗೆ ಮತ್ತು ನನಗೆ ತಕ್ಕ ಸೊಸೆ ಎನ್ನುತ್ತಿದ್ದರೆ…
ಗುರುದೇವ್ ಅವರು,,,
ಇಲ್ಲ ಕಣಮ್ಮ ಆ ಹುಡುಗಿ ತೀರಾ ಬಡ ಕುಟುಂಬದವಳು,,, ನಮ್ಮ ಸ್ಟೇಟಸ್ ಗೆ ಮ್ಯಾಚ್ ಆಗುವುದಿಲ್ಲ..
ನೀನು ಏನೇ ಹೇಳು ನನ್ನ ಮಗನಿಗೆ ಒಳ್ಳೆ ಮನೆತನದ ಸ್ಟ್ಯಾಂಡರ್ಡ್ ಹುಡುಗಿಯನ್ನು ತರಬೇಕು ಎಂದು ವಾದಿಸಿದರು…
ಹೌದು ಅಮ್ಮ ಡ್ಯಾಡ್ ಹೇಳುತ್ತಿರುವುದು ಸರಿ ಇದೆ ನನ್ನ ಅಣ್ಣನಿಗೆ ಆ ಮಿಡಲ್ ಕ್ಲಾಸ್ ಹುಡುಗಿ ಯಾವ ಮೂಲೆಯಿಂದ ಕೂಡ ಮ್ಯಾಚ್ ಆಗಲ್ಲ…..
ಅವರ ಮನೆ ನೋಡಿದಿರಾ ನೀವು ಹೇಗಿತ್ತು ಒಳ್ಳೆ ಹಾಳು ಕೊಂಪೆ ತರ ಇತ್ತು ಅದಲ್ಲದೆ ಅದು ಅವರ ಸ್ವಂತ ಮನೆ ಕೂಡ ಅಲ್ಲ…
ಅವಳು ಯಾವುದು ಚೀಪ್ ಕಂಪನಿಯಲ್ಲಿ ಅದೇನು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡೋದು ಅಂತೆ. ಅಲ್ಲ ಅದೇಗೆ ನನ್ನ ಅಣ್ಣನಿಗೆ ಅವಳು ಸರಿ ಜೋಡಿಯ ಅಂತ ನೀವ್ ಅನ್ಕೊಂಡ್ರಿ….
ಎಂದು ಸ್ವಾತಿ ವಿರೋಧಿಸಿದಳು
ತನ್ನ ಹೆಂಡತಿಯನ್ನು ಉರಿ ನೋಟವನ್ನು ಕಿರುಗಣ್ಣಿನಲ್ಲಿ ಗಮನಿಸಿದ ಗುರುದೇವ್.
ಸುಮ್ಮನಿರಮ್ಮ ಸ್ವಾತಿ ನಿಮ್ಮ ಅಮ್ಮನ ಮಾತೇ ಈ ಮನೆಯಲ್ಲಿ ಫೈನಲ್,,
ಸುಮ್ಮನೆ ನೀನು ಇಲ್ಲಿ ಲಾಯರ್ ತರ ಪಾಯಿಂಟ್ ಹಾಕಿ ವಾದ ಮಾಡಿದರೆ ಪ್ರಯೋಜನ ಇಲ್ಲ…
ನೀನೆಷ್ಟೇ ವಾದ ಮಾಡಿದರೂ ಈ ಮನೆಯ ಜಡ್ಜ್ ನನ್ನ ಹೆಂಡತಿ,, ಇಲ್ಲಿ ಕೊನೆಯ ತೀರ್ಪು ಅವಳದ್ದೇನಮ್ಮ.. ಸುಮ್ನೆ ಅನಾವಶ್ಯಕವಾಗಿ ಮಾತಾಡಿ ಒಂದು ದಿನ ಊಟ ಇಲ್ಲದೆ ಹಸಿವಿನಿಂದ ಮಲಗಬೇಕಾಗುತ್ತದೆ ಅದನ್ನು ಮರೆಯಬೇಡ.. ಎಂದು ತಮ್ಮ ಮಗಳನ್ನು ಎಚ್ಚರಿಸಿದರು..
ಹಾಗೆ ಬನ್ನಿ ದಾರಿಗೆ ಎನ್ನುತ್ತಾ ಗಂಭೀರ ಧ್ವನಿಯಲ್ಲಿ,,
ಕೈನಲ್ಲಿ ಸೌಟು ಹಿಡಿದು ಆ ಕಡೆ ಈ ಕಡೆ ಓಡಾಡುತ್ತಾ ಸರಸ್ವತಿ…
ಈಗ ನಿಮ್ಮ ಗೊಂದಲದ ಪ್ರಶ್ನೆಗಳಿಗೆ ನಾನು ಉತ್ತರ ಕೊಡುತ್ತೇನೆ ನೋಡಿ…..
ಇಬ್ಬರು ಮಾತನಾಡದೆ ಸಣ್ಣ ಮಕ್ಕಳ ರೀತಿ ಕೈಕಟ್ಟಿ ಕೇಳಿಸಿಕೊಳ್ಳದೊಡಗಿದರು ಹೇಳಿ ಮೇಡಂ ಕೇಳಿಸಿಕೊಂಡು ಚೆನ್ನಾಗಿ ನೆನಪಿನಲ್ಲಿ ಇಡುತ್ತೇವೆ ಎನ್ನುವಂತೆ ಸನ್ನೆಯಲ್ಲೇ ತಲೆಯಾಡಿಸಿದರು ಒಂದು ಕೈ ಕಟ್ಟಿದ್ದರೆ ಮತ್ತೊಂದು ಬಾಯಿ ಮೇಲೆ ಇತ್ತು….
ಆ ಮನೆಗೆ ಸರಸ್ವತಿಯವರ ಮಾತೆ ಕೊನೆಯ ತೀರ್ಮಾನವಾಗುತ್ತಿತ್ತು ಅವರು ಹೇಳುವುದು ಅಷ್ಟೇ ಸರಿ ಇರುತ್ತಿತ್ತು ಪ್ರತಿಯೊಂದು ವಿಚಾರದಲ್ಲೂ ಅವರೇ ನಿರ್ಧಾರ ತೊಗೊಳುತ್ತಿದ್ದರು……
***********
ಧನ್ಯವಾದಗಳು
✍️ಆಕರ್ಷಿತ❤️………..
Swipe left/right or tap the sides to turn pages