ಕುಮಾರ್ ಅವರು ರಾಜಶೇಖರ್ ಅವರಿಗೆ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಕ್ಯಾಬಿನೆಟ್ ಮಿನಿಸ್ಟರ್ ಜಗದೀಶ್ ಅವರ ಜೊತೆ ವೈಯಕ್ತಿಕ ಸಂಬಂಧ ಬೆಳೆಸುವಂತೆ ಸಲಹೆ ನೀಡಿದ್ದರು. ಅವರು ಅರ್ಥವಾಗದೇ ಏನೆಂದು ಕೇಳಲು ಸ್ನೇಹ ಸಂಬಂಧ ಬೆಳೆಸುವಂತೆ ಹೇಳಿದ್ದರು. ರಾಜಶೇಖರ್ ಅವರು ಈ ವಯಸ್ಸಲ್ಲಿ ಸ್ನೇಹ ಸಂಬಂಧ ಎಲ್ಲಾ ಕಷ್ಟ ಕುಮಾರ್ ಸುಮ್ಮನೆ ಅನವಶ್ಯಕವಾಗಿ ಏನೇನೋ ಹೇಳಬೇಡಿ ಎಂದು ಅಸಹನೆಯಿಂದ ಹೇಳಲು ನಿಮಗೆ ಸಾಧ್ಯವಾಗದಿದ್ದರೆ ನಿಮ್ಮ ಮಗ ಇದಾನಲ್ಲ ಎಂದು ಹೇಳಿದ್ದರು.