ವಿರಾಟ್ ಅವಳ ಮೃದುವಾದ ಬೆರಳಿಗೆ ಉಂಗುರ ತೊಡಿಸುವಾಗ ಒಂದು ಕ್ಷಣ ಅವನ ಕಣ್ಣಿನಲ್ಲಿದ್ದ ಆತಂಕವನ್ನು ಅವಳು ಗಮನಿಸಿದ್ದಳು. ಅವಳು ಅವನ ಬೆರಳಿಗೆ ಉಂಗುರ ತೊಡಿಸುವಾಗ ಅವನು ಅವಳ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದ್ದ. ಅವಳು ಅವನ ಆತಂಕವನ್ನು ಅರಿತಂತೆ ಚಂದದ ಸಣ್ಣ ನಗು ನೀಡಿದ್ದಳು. ಆ ನಗುವಿನಲ್ಲಿ ಅವನಿಗೆ ಆ ಕ್ಷಣ ಸಮಾಧಾನದ ಜೊತೆ ಮುಂದಿನ ಭರವಸೆ ಕಂಡಿತ್ತು. ಅವರಿಬ್ಬರ ಸುಂದರ ಕ್ಷಣಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿತ್ತು. ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಇಬ್ಬರೂ ತಮ್ಮ ದಾಂಪತ್ಯ ಜೀವನಕ್ಕೆ ಮೊದಲ ಹೆಜ್ಜೆ ಇಟ್ಟಿದ್ದರು.