ವಿರಾಟ್ ತನ್ನೊಳಗೆ ಇರುವ ನೋವನ್ನು ತೋರಿಸಿಕೊಳ್ಳದೆ ಹಾಕಿಕೊಂಡಿರುವ ಮುಖವಾಡ ನೋಡುಗರ ಕಣ್ಣಿಗೆ ಅಹಂಕಾರದಂತೆ ಕಾಣುತ್ತಿತ್ತು. ಅಜ್ಜಿಯ ಮಡಿಲಲ್ಲಿ ಮಲಗಿದ್ದ ವಿರಾಟ್ ಗೆ ಸೊಂಪಾದ ನಿದ್ದೆ ಬಂದಿತ್ತು. ಶಾಂತಮ್ಮ ಊಟಕ್ಕೆ ಕರೆಯಲು ಬಂದವರು ವಿರಾಟ್ ಮಲಗಿದ್ದನ್ನು ನೋಡಿ ಎಬ್ಬಿಸಲು ಮನಸಾಗದೇ ಗೌರಿ ಅವರನ್ನು ಪಿಸುದನಿಯಲ್ಲಿ ಕರೆದಿದ್ದರು. ಗೌರಿ ಅವರು ವಿರಾಟ್ ತಲೆ ಸವರಿದವರು ಊಟ ಮಾಡಿ ಮಲಗುವಂತೆ ಏಳು ಎಂದು ಎಬ್ಬಿಸಿದ್ದರು. ವಿರಾಟ್ ತಡಬಡಿಸಿ ಎದ್ದವನು ಅಯ್ಯೋ ಅಜ್ಜಿ ನಿದ್ದೆ ಬಂದಿದ್ದೇ ತಿಳಿಯಲಿಲ್ಲ ಬಾ ಊಟ ಮಾಡೋಣ ಎಂದು ಅವರನ್ನು ಕರೆದುಕೊಂಡು ಹೋಗಿದ್ದ