ನನ್ನ ಪ್ರೀತಿಯ ಮೀರಾ❤️ – 5
ಅವಳ ಕಣ್ಣೀರು ನೋಡಿದ ಸುಮಲಾಕ್ಷಿ ಅವರ ಮನಸ್ಸು ಮಾತ್ರ ಇನ್ನೂ ನೋವಿನಲ್ಲಿ ನರಳುತ್ತಿತ್ತು ಯಾಕೆಂದು ತಿಳಿದಿಲ್ಲ. ಅವರಿಗೂ ಮೀರಾಳ ಹಾಗೆ ಗೊಂದಲ…….
ಇಷ್ಟಕ್ಕೆ ಎಲ್ಲ ಅಳಬಾರದು ಮೀರಾ, ನಿನ್ನದು ಏನು ತಪ್ಪು ಇಲ್ಲ ನಾನೇ ಸ್ವಲ್ಪ ಅವಸರವಾಗಿ ನಿನಗೆ ಬೈದು ನಿನಗೆ ಅವಮಾನ ಮಾಡಿದ್ದು. ನನ್ನ ಕ್ಷಮಿಸು ಆಯಿತ
ಇನ್ಮೇಲೆ ನಿನಗೆ ಇಂಗ್ಲಿಷ್ ನಾನೇ ಹೇಳಿಕೊಡುತಿನಿ.
ನಿನ್ನ ಕೋರ್ಸ್ 2 ವರ್ಷ ಮುಗಿಯೋ ಅಷ್ಟರಲ್ಲಿ ಪೂರ್ತಿ ಕಲಿಸುವುದು ನನ್ನ ಜವಾಬ್ದಾರಿ ನೀನು ಇದಕ್ಕೆ ಬೇಡ ಅನ್ನುವ ಆಗಿಲ್ಲ.. ಇಲ್ಲ ಅಂದ್ರೆ ನಂಗೆ ಬೇಜಾರು ಆಗುತ್ತೆ ಎಂದು ಮೀರಾಗೆ ಇನ್ನೊಂದು ಮಾತು ಆಡಲು ಅವಕಾಶ ಕೊಡದೆ ಆಕೆಯ ತಲೆ ಸವರಿ ಆಚೆ ಹೋದರು…..
ಎಲ್ಲರಿಗೂ ಆಶ್ಚರ್ಯ. ಇಷ್ಟು ವರ್ಷದಿಂದ ನಾವು ನೋಡಿದ್ದೇವೇ ನಮ್ಮ ಸೀನಿಯರ್ಗಳು ಹೇಳಿದ್ದಾರೆ.
ಸುಮಲ ಮೇಡಂ ಯಾವತ್ತೂ ಯಾರಿಗೂ ತಲೆ ಬಾಗಿದವರು ಅಲ್ಲ ಅತರದಲ್ಲಿ ಈ ಒಂದು ಕಾಮನ್ ಹುಡುಗಿಗೆ ಕ್ಷಮೆ ಕೇಳಿ ಸ್ವತಃ ತಾವೇ ಇಂಗ್ಲಿಷ್ ಕಲಿಸುತ್ತೇನೆ ಎಂದಿದ್ದಾರೆ ಎಂಬುದು ದೊಡ್ಡ ಮತ್ತು ನಂಬಲು ಆಗದ ವಿಚಾರವೆ ಸರಿ….. ಇನ್ನೂ ಯಾರು ಸಹ ಅವಳ ಬಗ್ಗೆ ಒಂದು ಚೂರು ಮಾತನಾಡುವ ಧೈರ್ಯ ಮಾಡಲಿಲ್ಲ…
ಇಡೀ ದಿನ ಕಾಲೇಜ್ ಅಲ್ಲಿ ಶ್ರದ್ಧೆಯಿಂದ ಕ್ಲಾಸ್ಎಲ್ಲ ಮುಗಿಸಿ,ಚಿಂತೆ ಬಿಟ್ಟು ಆರಾಮಾಗಿ ಮನೆಗೆ ಹೋದಳು.
ಆದರೆ ಮನೆಯಲ್ಲಿ ಇದ್ದಿದ್ದೆ ದಿನ ತಾಯಿಯ ಕಿರುಕುಳ, ಸಹಿಸಿಕೊಂಡು ಅವಳಿಗೂ ಸಾಕು ಸಾಕಾಗಿ ಹೋಗಿತ್ತು.
ಪ್ರತಿದಿನ ಅವಳು ಓದುವುದಕ್ಕು ಬಿಡುತ್ತಿರಲಿಲ್ಲ ಏನಾದರು ಒಂದು ಕೆಲಸ ಹೇಳುವುದು ಮಾಡುತ್ತಿದ್ದರು.
ರಮೇಶ್ ಮನೆಯಲ್ಲಿ ಇರುವಾಗ ಮಾತ್ರ ಅವಳಿಗೆ ನೆಮ್ಮದಿಯಾಗಿ ಓದುವುದಕ್ಕೆ ಅವಕಾಶ.
ಅವರು ಆಚೆ ಹೋದರೆ ಸಾಕು ಅದೇ ಕಿರುಕುಳ
ಬೇಕೆಂದು ಅವಳ ಬುಕ್ ಬಚ್ಚಿ ಇಡುವುದು.
ಎಲ್ಲಿ ತನ್ನ ಮಕ್ಕಳಿಗಿಂತ ಚೆನ್ನಾಗಿ ಓದುವಳು ಎಂಬ ಭಯಕ್ಕೆ. ಊಟ ಕೊಡದೆ ಖಾಲಿ ಬಾಕ್ಸ್ ಅನ್ನು ಕಾಲೇಜ್ ಗೆ ತಗೊಂಡು ಹೋಗಬೇಕಿತ್ತು….
ಇಂತಹ ಸಂದರ್ಭ ಎಲ್ಲ ಎದುರಿಸಿ ಕೂಡ ಅವಳು ತನ್ನ ಓದುವ ಛಲ ಬಿಡಲಿಲ್ಲ….
ರಮೇಶ್ ಅವರು ಮೀರಾಗೆ ಹಣ ಕೊಡಬೇಕು ಅವಳ ಖರ್ಚಿಗೆ ಎಂದರೆ, ಸುಮಿತ್ರಾಗೆ ತಿಳಿಯದ ಹಾಗೆ ಅಂಗಡಿ ಹತ್ತಿರ ಅಥವಾ ಕಾಲೇಜ್ ನಲ್ಲಿ ಕೊಡಬೇಕು.
ಅವಳ ಎದುರು ಕೊಟ್ಟರೆ ಅದು ಅವಳ ಹೋಗಿ ಬರುವುದಕ್ಕೆ ಖರ್ಚು ಆಗುವ ಬಸ್ ಚಾರ್ಜ್ ಮಾತ್ರ ಅದಕ್ಕೆ ಒಂದು ರೂಪಾಯಿ ಕೂಡ ಹೆಚ್ಚಿಗೆ ಕೊಡುವಂತೆ ಇರಲಿಲ್ಲ….
ಇತ್ತ ಸುಮಲಾಕ್ಷಿ ಅವರು ಗಂಡ ಭಾರತ್ ಮೌರ್ಯ ಅತ್ರ
ಕಾಲೇಜ್ ನಲ್ಲಿ ನಡೆದ ಘಟನೆ ಹಾಗೂ ತಾನು ಮೀರಾಗೆ ಇಂಗ್ಲಿಷ್ ಕಲಿಸುವ ಬಗ್ಗೆ ಎಲ್ಲ ವಿವರವಾಗಿ ಹೇಳಿದಳು…
ಭರತ್ ಗೆ ಮೊದ ಮೊದಲು ಅವಳಿಗೆ ಅವಮಾನ ಮಾಡಿದ ವಿಷಯಕ್ಕೆ ಬೇಜಾರು ಆದರು ಕೊನೆಯಲ್ಲಿ ಸುಮಲಾಕ್ಷಿಯೇ ಕ್ಷಮೆ ಕೇಳಿ. ಮತ್ತು ತಾನೇ ಕಲಿಸಿಕೊಡುವ ಬಗ್ಗೆ ಕೇಳಿ ಅವರಿಗೆ ಸ್ವಲ್ಪ ಸಮಾಧಾನವಾಯಿತು……
ಭರತ್ ಆದರೆ ಆ ಹುಡುಗಿ ಅಳುವಾಗ ಮತ್ತೆ ಅವಳು ಇರುವ ಜಾಗದಲ್ಲಿ ನಾನು ಹೋದಾಗ ಏನೋ ಒಂದು ರೀತಿ ನಂಗೆ ಬೇಕಾದವಳು ಅನ್ನೋ ತರ ಅನಿಸುತ್ತಿತ್ತು…
ಆದರೆ ಅವಳು ಅಳುವಾಗ ನನಗೆ ತುಂಬಾ ಸಂಕಟವಾಯಿತು, ಅದು ತುಂಬಾ ವಿಚಿತ್ರ ಅನಿಸಿತು.
ಸರಿ ಬಿಡಿ ಆಗಲೇ ಇಂದ ಇದೆ ವಿಚಾರ ಹೇಳಿ ಹೇಳಿ ನಿಮಗೆ
ಬೋರಿಂಗ್ ಮಾಡತ್ತಿದಿನಿ ಛೇ ಎಂದು ವಿಷಯ ಬದಲಾಯಿಸಿದಳು….
ಭರತ್ ಮನಸ್ಸಿನಲ್ಲಿ:- ಸದ್ಯ ಹೇಗೋ ನೀನು ಮೀರಾ ಗೆ
ಈ ರೀತಿಯಲ್ಲಿ ಆದರು ಅತ್ರ ಆಗುತ್ತಿದೆಯ ಅದೇ ಸ್ವಲ್ಪ ಸಮಾಧಾನ ನನಗೆ…..
ನಾನೇ ನಿಮ್ಮನ್ನು ಒಂದು ಮಾಡಬಹುದು ಆದ್ರೆ ಸತ್ಯ ಗೊತ್ತಾದರೆ, ನಿನ್ನ ಮತ್ತೆ ಅವಳ ಜೀವಕ್ಕೆ ಕುತ್ತು ಬರುತ್ತದೆ ಅನ್ನೋ ಭಯಕ್ಕೆ 20 ವರ್ಷದಿಂದ ಈ ವಿಚಾರ ನಿನ್ನಿಂದ ಮುಚ್ಚಿಡುವ ಪರಿಸ್ಥಿತಿ ಬಂದಿದೆ… ಅದು ಬಿಟ್ಟು ನಿನಗೆ ಮೋಸ ಮಾಡುವ ಉದ್ದೇಶದಿಂದ ಸುಳ್ಳು ಹೇಳಿಲ್ಲ…..
ಭರತ್ ನ ಮನಸು ಹೀಗ 20 ವರ್ಷಗಳ ಹಿಂದೆ ನಡೆದ ಘಟನೆಯನ್ನು ಮೆಲುಕು ಹಾಕುತ್ತಿತ್ತು…
ನನ್ನ ಕ್ಷಮಿಸಿ ಬಿಡು ಸುಮಲ ನಮ್ಮ ಮಗು ಜೊತೆ ನೀನು ಜೀವನ ಮಾಡುವ ಅವಕಾಶ ನಾನೇ ನನ್ನ ಕೈ ಯಿಂದ ಕಿತ್ತುಕೊಂಡಿದ್ದೇ. ಅವತ್ತು ನನ್ನಪರಿಸ್ಥಿತಿಹಾಗೆಇತ್ತು,, ನಿನ್ನ ಹಾಗೂ ಮಗುವಿನ ಜೀವ ಉಳಿಸಲು ನಾನುಆರೀತಿಮಾಡಲೇಬೇಕಾಯಿತು,,,, ಆದರೆ ಇನ್ಮೇಲೆ ಹಾಗೆ ಆಗದಿಲ್ಲ ಆ ಭರವಸೆ ನಾನು ಕೊಡುತ್ತಿನಿ….
ಎಂದು ತನ್ನ ಮನದಲ್ಲೇ ಮಾತನಾಡುತ್ತಾನೆ.
ಸುಮಲ ಮಾತನಾಡುವ ಮಾತು ಅವನ ಕಿವಿಗೆ ಬೀಳಲಿಲ್ಲ
ತಾನು ಮಾಡಿದ ತಪ್ಪನ್ನು ನೆನೆದು ಪಾಶ್ಚಾತಪದಲ್ಲಿ ಬೆಯುತ್ತಿದ್ದ ….
****
ಮರುದಿನ ಕಾಲೇಜ್ ಗೆ ಮೀರಾ ಬಳಿ ಕ್ಷಮೆ ಕೇಳುವ ಸಲುವಾಗಿಯೇ ತನ್ನ ಎಲ್ಲ ಕೆಲಸಗಳನ್ನು ಮುಂದೂಡಿಸಿ ಬಂದಿದ್ದ ಅನಿರುದ್ಧ್ ವರ್ಮಾ…..
ಸ್ಟಾಫ್ ರೂಮ್ ಗೆ ಬಂದ ಆತ, ಒಬ್ಬ ಉಪನ್ಯಾಸಕರನ್ನು ಕರೆದು ಹೊಸದಾಗಿ ಬಂದಿರುವ ಆ ಮೀರಾ ಎಂಬ ಹುಡುಗಿಯನ್ನು ಕರೆದುಕೊಂಡು ಬನ್ನಿ ಸ್ವಲ್ಪ ಮಾತನಾಡುವುದು ಇದೆ ಎಂದು ಹೇಳಿ ಕಲಿಸಿದ…
ಅನಿರುದ್ಧ್:- ಮೀರಾ ಬಂದ ತಕ್ಷಣ.. hi ಮೀರಾ i am ಅನಿರುದ್ಧ್ , ಅನಿರುದ್ಧ್ ವರ್ಮಾ. ನನ್ನ ಪರಿಚಯ ಇರಬೇಕು ಅಲ್ವಾ ನಿನಗೆ… ಬನ್ನಿ ಆಚೆ ಹೋಗಿ ಮಾತನಾಡುವ.
ಎಂದು ಕಾಲೇಜ್ ಕ್ಯಾನ್ಟೀನ್ ಬಳಿ ಹೋದ…
ಮೀರಾ:- ಗುಡ್ ಮಾರ್ನಿಂಗ್ ಸಾರ್ ನನ್ನಿಂದ ಮತ್ತೆ ಏನಾದರೂ ತಪ್ಪಾಯ್ತ ಸಾರ್…. ನೀವು ಈ ಕಾಲೇಜ್ ನ ಮಾಲೀಕರು ಸಾರ್ ಗೊತ್ತು….
ಅನಿರುದ್ಧ್;- ನಿಮ್ಮ ತಪ್ಪು ಏನು ಇಲ್ಲ ಮೀರಾ ಕೂಲ್ ಡೌನ್ ಆರಾಮಾಗಿ ಮಾತನಾಡಿ. ನಾನೇನು ನಿಮಗೆ ಬೈಯಲು ಬರಲಿಲ್ಲ.. ನಮ್ಮ ಅತ್ತೆ ಪರವಾಗಿ ನಿಮ್ಮ ಅತ್ರ ಕ್ಷಮೆ ಕೇಳೋಣ ಅಂತ ಬಂದೆ…. ಇದು ನನ್ನ ಕಾಲೇಜ್ ಅಲ್ಲ ನಾನು ನೋಡಿಕೊಳ್ಳತಿನಿ ಅಷ್ಟೇ ನಮ್ಮ ಅತ್ತೆ ಗೆ ಸೇರಿದ್ದು..
ಅರೆ ನಿಂತೆ ಇದಿಯ ಕುಳಿತುಕೊ. 1 ನಿಮಿಷ ಬಂದೆ.
ನೀವು ಕಾಪಿ ಆರ್ ಟೀ ಏನು ತಗೊಂತಿರ.
ಮೀರಾ:- ನನಗೆ ಏನು ಬೇಡ ಸಾರ್ . ನೀವು ಕ್ಷಮೆ ಕೇಳಬೇಡಿ ನನಗೆ ಮುಜುಗರ ಆಗುತ್ತೆ ಸಾರ್ ನಾನು ಕ್ಲಾಸ್ ಇದೆ ಹೋಗುತ್ತೀನಿ…
ಹೋಗುವಂತೆ ಇರು ಮೀರಾ, 2 ಟೀ ಕೊಡಿ ನಾಗರಾಜ್
ಮೀರಾ ಮುಜುಗರದಲ್ಲಿ ಮುದುರಿ ಕುಳಿತಳು.
ಎರಡು ಟೀ ಜೊತೆಯಲ್ಲಿ ಬಜ್ಜಿನ ಟೇಬಲ್ ಮೇಲೆ ಇಟ್ಟರು.
ತಗೊ ಎಂದು ಕೈ ಸನ್ನೆ ಮಾಡಿದ.
ಅವಳಿಗೆ ಒಂದು ಹುಡುಗನ ಮುಂದೆ ಅದರಲ್ಲೂ ದೊಡ್ಡ ಶ್ರೀಮಂತರ ಮನುಷ್ಯನ ಮುಂದೆ ಮಾತನಾಡುವುದು ಕುರುವುದು ಎಲ್ಲ ಹೊಸದೇ….
ಏನಿವೇ ಮತ್ತೆ ಸಾರಿ, ಮತ್ತೆ ಭಾನುವಾರ ನಮ್ಮ ಕಾಲೇಜ್ ಅಲ್ಲಿ ಫ್ರೆಶರ್ಸ್ ಪಾರ್ಟಿ ಇದೆ ನೀವು ಏನು ಅಂದುಕೊಳ್ಳದೆ ಈ ಡ್ರೆಸ್ ಹಾಕಿಕೊಂಡು ಬರಬೇಕು ಅವತ್ತು..
ನೀವು ಮುಜುಗರ ಮಾಡಿಕೊಳ್ಳಬೇಡಿ.
ಒಂದು ವೇಳೆ ನೀವು ಹಾಕಲಿಲ್ಲ ಅಂದ್ರೆ ನನ್ನ ನೀವು ಕ್ಷಮಿಸಿ ಇಲ್ಲ ಅಂತ ಅರ್ಥ…
ok ನೀವಿನ್ನೂ ನಿಮ್ಮ ಕ್ಲಾಸ್ ಗೆ ಹೋಗಬಹುದು.
ಇದು ನನ್ನ (personal) ವಯಕ್ತಿಕ ನಂಬರ್ ನಿಮಗೆ ಒಪ್ಪಿಗೆ ಅಂದ್ರೆ ನನಗೆ ಕಾಲ್ ಮಾಡಿ 2 ದಿನ ಟೈಮ್ ಇದೆ.
ಅದು ಸಾರ್ ನಾನು ಮೊಬೈಲ್ ಉಪಯೋಗ ಮಾಡೋದಿಲ್ಲ.. ಈ ಡ್ರೆಸ್ ಎಲ್ಲ ಸುಮ್ಮನೆ ಯಾಕೆ ನಾನು ಕ್ಷಮಿಸಿದಿನಿ ದಯವಿಟ್ಟು ಇದೆಲ್ಲ ಬೇಡ….
ನಿನ್ನ ಅತ್ರ ಮೊಬೈಲ್ ಇಲ್ಲ ಅಂತ ಗೊತ್ತು, ನೀನು ಒಂದು ಕೆಲಸ ಮಾಡು ನಮ್ಮ ಕಾಲೇಜ್ ಅಲ್ಲಿ ಟೆಲಿಫೋನ್ ಇದೆ ಅಲ್ವಾ ಅದರಲ್ಲಿ ನನಗೆ ಕಾಲ್ ಮಾಡು ಓಕೆ ನಾ…
ಎಂದು ಹೋಗೆ ಬಿಟ್ಟ…..
ಮೀರಾ ಗೆ ಏನು ಮಾಡಬೇಕು ಎಂದು ಗೊತ್ತಾಗದೆ ಗೊಂದಲ ತುಂಬಿದ ಮನದಲ್ಲೇ ಕ್ಲಾಸ್ ರೂಮ್ ಸೇರಿ. ಕ್ಲಾಸ್ ಎಲ್ಲ ಮುಗಿಸಿ ಮನೆಗೆ ಹೋದಳು….
ಅವಳಿಗೆ ದಿನ ಪೂರ್ತಿ ಒಂದೇ ಯೋಚನೆ:-
ನಾನು ಆ ಬಟ್ಟೆ ಹಾಕಿಕೊಂಡು ಹೋದರೆ ತಪ್ಪು, ಅಷ್ಟು ದುಬಾರಿ ಬೆಲೆ ಬಟ್ಟೆ ಹೇಗೆ….
ಇನ್ನು ಹಾಕಿಲ್ಲ ಅಂದ್ರೆ ನಾನು ಕ್ಷಮಿಸಿಲ್ಲ ಎಂಬ ಭಾವನೆ ಇಂದ ಕೊರಗುತಾರೆ ಏನು ಮಾಡೋದು ಎರಡರ ಮಧ್ಯೆ ಸಿಕ್ಕಿ ಹಾಕಿಕೊಳ್ಳುವ ಪರಿಸ್ಥಿತಿ… ನಿನ್ನೆ ನಾನು ಎಲ್ಲರ ತರ ಮಾತನಾಡಿ ಇದ್ದರೆ, ಮೇಡಂ ಬೈದು ಕ್ಷಮೆ ಕೇಳುವ ಪರಿಸ್ಥಿತಿ ಬರುತ್ತಿರಲಿಲ್ಲ….
ಡ್ರೆಸ್ ಅಲ್ವಾ ಹಾಕೋಣ.ನಾನು ಹಾಕಿಕೊಂಡು ಹೋದರೆ ಅವರ ಮನಸ್ಸಿಗೆ ಸಮಾಧಾನ ಆಗುತ್ತೆ ಅಂದ್ರೆ ಹಾಕಿದರೆ ಆಯ್ತು ಏನು ಯೋಚಿಸಿ..ತನ್ನ ತಂದೆಯ ಬಳಿ ಮೊಬೈಲ್ ಕೇಳಿ ಪಡೆದು ಆ ಕಾರ್ಡ್ ಮೇಲೆ ಇದ್ದ ನಂಬರ್ ಡಯಲ್ ಮಾಡಿದಳು…
ಆಕಡೆ ಹೆಲೊ ಎಂಬ ಆಕರ್ಷಕ ಧ್ವನಿ ಕೇಳಿಸಿತು ಅಷ್ಟಕ್ಕೆ ಅವಳ ಮನಸ್ಸು ಎಲ್ಲೋ ಕಳೆದು ಹೋಯಿತು…
ಎದುರು ಬಂದಾಗ ಭಯವಾದರು.
ಮೊಬೈಲ್ ಅಲ್ಲಿ ಧ್ವನಿ ಕೇಳಿದಾಗ ಯಾವುದೋ ಚೋರ ತನ್ನ ಹೃದಯ ಕದ್ದ ಹಾಗೆ ಭಾಸವಾಯಿತು……
******
ಧನ್ಯವಾದಗಳು
✍️ಆಕರ್ಷಿತ❤️…….
Swipe left/right or tap the sides to turn pages