ಪ್ರೀತಿಯೇ ನಿನ್ನ… – 1
ಸಂಜೆಯ ಸಮಯ…
ನಗರದ ಪ್ರಸಿದ್ಧ ಸೂಪರ್ ಮಾರ್ಕೆಟ್‌ನಲ್ಲಿ ಎಂದಿನಂತೆ ಜನರ ಓಡಾಟ ಜೋರಾಗಿತ್ತು. ಕೆಲವರು ವಾರದ ದಿನಸಿ ಸಾಮಾನುಗಳನ್ನು ಖರೀದಿಸುತ್ತಿದ್ದರೆ, ಇನ್ನು ಕೆಲವರು ಅಗತ್ಯವಿಲ್ಲದ ವಸ್ತುಗಳನ್ನೂ ಖರೀದಿಸುವುದರಲ್ಲಿ ಬ್ಯುಸಿಯಾಗಿದ್ದರು.
ಅದೇ ಸಮಯಕ್ಕೆ ಕೈಯಲ್ಲಿ ಒಂದು ಪುಟ್ಟ ಶಾಪಿಂಗ್ ಲಿಸ್ಟ್ ಹಿಡಿದುಕೊಂಡು ಹುಡುಗಿಯೊಬ್ಬಳು ಸೂಪರ್ ಮಾರ್ಕೆಟ್ ಒಳಗೆ ಬಂದಳು.
ಮೊಬೈಲ್‌ನಲ್ಲಿ ಯಾರಿಗೋ ಮಾತನಾಡುತ್ತಾ, ಎದುರಿಗೆ ಗಮನ ಕೊಡದೆ ವೇಗವಾಗಿ ನಡೆಯುತ್ತಿದ್ದಳು.
“ಹಲೋ ಅಮ್ಮಾ… ಹೌದು, ಹಾಲು, ಬ್ರೆಡ್, ಸಕ್ಕರೆ ಎಲ್ಲ ತಗೋತೀನಿ. ಇನ್ನೇನಾದರೂ ಬೇಕಾ?”
ಅತ್ತ ಕಡೆಯಿಂದ ತಾಯಿ ಏನೋ ಹೇಳುತ್ತಿದ್ದಂತೆ,
“ಅಯ್ಯೋ ಅಮ್ಮಾ, ಇಷ್ಟೊಂದು ಸಾಮಾನುಗಳನ್ನೆಲ್ಲ ನಾನೊಬ್ಬಳೇ ಹೇಗೆ ತರಲಿ? ಸರಿ ಬಿಡು, ನೋಡ್ತೀನಿ” ಎಂದು ಮಾತನಾಡುತ್ತಾ ತಿರುಗಿದವಳೇ ಎದುರಿಗೆ ಬರುತ್ತಿದ್ದ ಹುಡುಗನಿಗೆ ಜೋರಾಗಿ ಡಿಕ್ಕಿ ಹೊಡೆದಳು.
“ಅಯ್ಯೋ!”
ಅವಳ ಕೈಯಲ್ಲಿದ್ದ ಶಾಪಿಂಗ್ ಲಿಸ್ಟ್ ಕೆಳಗೆ ಬಿದ್ದರೆ, ಹುಡುಗನ ಕೈಯಲ್ಲಿದ್ದ ಚಾಕೊಲೇಟ್ ಪ್ಯಾಕೆಟ್ ಮತ್ತು ಬಿಸ್ಕೆಟ್ ಪ್ಯಾಕೆಟ್ ನೆಲದ ಮೇಲೆ ಬಿದ್ದವು.
“ಹಲೋ ಮ್ಯಾಡಮ್! ಕಣ್ಣು ಮುಂದೆ ಇಟ್ಟುಕೊಂಡು ನಡೆಯೋಕೆ ಆಗಲ್ವಾ?” ಎಂದು ಹುಡುಗ ಕೋಪದಿಂದ ಕೇಳಿದ.
ಅವಳು ತಕ್ಷಣ ಮೊಬೈಲ್ ಕಟ್ ಮಾಡಿ ಅವನತ್ತ ನೋಡಿದಳು.
“ಏನ್ರೀ! ನಾನೇನಾದರೂ ಬೇಕು ಅಂತ ಡಿಕ್ಕಿ ಹೊಡೆದ್ನಾ? ನೀವೇ ಸ್ವಲ್ಪ ನೋಡಿಕೊಂಡು ಬರಬೇಕಿತ್ತು ಅಲ್ವಾ?”
“ಓಹೋ! ತಪ್ಪು ಮಾಡಿದ್ದು ನೀನು, ಈಗ ಬುದ್ಧಿ ಹೇಳೋದು ಕೂಡ ನೀನೇನಾ?”
“ಹೌದು, ಯಾಕೆ? ಏನಾದರೂ ಪ್ರಾಬ್ಲಮ್ ಇದೆಯಾ?”
“ಪ್ರಾಬ್ಲಮ್ ನನಗಲ್ಲ, ನಿನ್ನ ಕಣ್ಣುಗಳಿಗೆ ಇರಬೇಕು. ಎದುರಿಗೆ ಏನಿದೆ ಅಂತ ನೋಡದೆ ಮೊಬೈಲ್‌ನಲ್ಲಿ ಮಾತಾಡಿಕೊಂಡು ಬರ್ತಿದ್ದೀಯ!”
“ನಿಮ್ಮ ಕಣ್ಣುಗಳಿಗೂ ಅದೇ ಸಮಸ್ಯೆ ಇರಬಹುದು. ಎದುರಿಗೆ ಹುಡುಗಿ ಬರ್ತಿದ್ದಾಳೆ ಅಂತ ಸ್ವಲ್ಪ ಸೈಡ್ ಕೊಡಬಹುದಿತ್ತಲ್ಲ!”
ಹುಡುಗ ಅವಳ ಮಾತು ಕೇಳಿ ಒಂದು ಕ್ಷಣ ಅವಳನ್ನೇ ನೋಡಿದ.
“ಅಂದರೆ ಈಗ ನಾನು ಹುಡುಗಿಗೆ ದಾರಿ ಬಿಡಬೇಕಾ?”
“ಖಂಡಿತ! ಕನಿಷ್ಠ ಮ್ಯಾನರ್ಸ್ ಆದರೂ ಇರಬೇಕು.”
“ವಾವ್! ಮ್ಯಾನರ್ಸ್ ಬಗ್ಗೆ ನನಗೆ ಕ್ಲಾಸ್ ತೆಗೆದುಕೊಳ್ಳುವಷ್ಟು ನೀವು ದೊಡ್ಡವರಾಗಿದ್ದೀರಾ?”
“ನಿಮಗಿಂತ ಸ್ವಲ್ಪ ಬುದ್ಧಿ ಜಾಸ್ತಿ ಇದೆ ಅಷ್ಟೇ!”
“ಹೌದಾ? ಅದಕ್ಕೇ ಇರಬೇಕು, ನೆಲದ ಮೇಲೆ ಬಿದ್ದಿರೋ ನಿಮ್ಮ ಶಾಪಿಂಗ್ ಲಿಸ್ಟ್ ಕೂಡ ಕಾಣಿಸುತ್ತಿಲ್ಲ!”
ಅವಳು ತಕ್ಷಣ ಕೆಳಗೆ ನೋಡಿದಳು.
“ಅಯ್ಯೋ!”
ಬಿದ್ದಿದ್ದ ಲಿಸ್ಟ್ ಎತ್ತಿಕೊಳ್ಳಲು ಬಗ್ಗಿದವಳೇ, ಅದೇ ಸಮಯಕ್ಕೆ ಹುಡುಗ ಕೂಡ ತನ್ನ ಚಾಕೊಲೇಟ್ ಪ್ಯಾಕೆಟ್ ಎತ್ತಿಕೊಳ್ಳಲು ಬಗ್ಗಿದ. ಇಬ್ಬರ ತಲೆ ಮತ್ತೆ ಜೋರಾಗಿ ತಾಕಿತು.
“ಅಬ್ಬಾ!”
“ಅಯ್ಯಯ್ಯೋ!”
ಇಬ್ಬರೂ ತಲೆಯನ್ನು ಹಿಡಿದುಕೊಂಡು ಒಬ್ಬರನ್ನೊಬ್ಬರು ನೋಡಿದರು.
“ನಿಮಗೆ ಸ್ವಲ್ಪವಾದರೂ ಕಾಮನ್ ಸೆನ್ಸ್ ಇದೆಯಾ?” ಅವಳು ಕೋಪದಿಂದ ಕೇಳಿದಳು.
“ನನಗಾ? ತಲೆ ತಾಕಿಸಿಕೊಂಡು ನಿಂತಿರೋದು ನೀನು, ಪ್ರಶ್ನೆ ಮಾತ್ರ ನನಗೆ ಕೇಳ್ತಿದ್ದೀಯ!”
“ನಿಮ್ಮ ಜೊತೆ ಮಾತನಾಡುವುದೇ ವೇಸ್ಟ್!”
“ಅದೇ ಒಳ್ಳೆಯದು. ನನ್ನ ಸಮಯವಾದರೂ ಉಳಿಯುತ್ತೆ.”
ಅವಳು ಕೋಪದಿಂದ ತನ್ನ ಲಿಸ್ಟ್ ತೆಗೆದುಕೊಂಡು ಮುಂದೆ ಹೊರಟಳು.
ಆದರೆ ಎರಡು ಹೆಜ್ಜೆ ಹಾಕುತ್ತಿದ್ದಂತೆ ಮತ್ತೆ ತಿರುಗಿ,
“ಒಂದು ನಿಮಿಷ!”
“ಈಗೇನು?” ಹುಡುಗ ಬೇಸರದಿಂದ ಕೇಳಿದ.
“ನಿಮ್ಮ ಚಾಕೊಲೇಟ್ ಕೆಳಗೆ ಬಿದ್ದಿದೆ. ಅದನ್ನಾದರೂ ತೆಗೆದುಕೊಳ್ಳಿ. ಇಲ್ಲದಿದ್ದರೆ ಅದಕ್ಕೂ ನನ್ನನ್ನೇ ಕಾರಣ ಮಾಡ್ತೀರಾ!”
ಹುಡುಗ ಕೆಳಗೆ ಬಿದ್ದಿದ್ದ ಚಾಕೊಲೇಟ್ ಎತ್ತಿಕೊಂಡು ಅವಳನ್ನು ನೋಡಿ,
“ಥ್ಯಾಂಕ್ಸ್ ಮ್ಯಾಡಮ್. ನಿಮ್ಮಿಂದಾಗಿ ಇವತ್ತು ಫ್ರೀ ಎಂಟರ್ಟೈನ್ಮೆಂಟ್ ಸಿಕ್ತು!”
“ನಿಮ್ಮ ಮುಖ ನೋಡಿದ ಮೇಲೆ ನನಗೆ ಸಿಕ್ಕಿದ್ದು ಮಾತ್ರ ತಲೆನೋವು!”
“ಹಾಗಾದರೆ ಮೆಡಿಕಲ್ ಶಾಪ್ ಅಲ್ಲಿದೆ. ಮಾತ್ರೆ ತಗೊಳ್ಳಿ!”
“ನಿಮ್ಮ ತಲೆನೋವಿಗೆ ಮಾತ್ರೆ ಸಿಗುತ್ತಾ ಅಂತ ಮೊದಲು ವಿಚಾರಿಸಿ!”
ಎಂದು ಹೇಳಿ ಅವಳು ಅಲ್ಲಿಂದ ಹೊರಟಳು.
ಹುಡುಗ ಅವಳು ಹೋಗುವುದನ್ನೇ ನೋಡುತ್ತಾ ಸಣ್ಣಗೆ ತಲೆ ಅಲ್ಲಾಡಿಸಿದ.
“ದೇವರೇ! ಸೂಪರ್ ಮಾರ್ಕೆಟ್‌ಗೆ ಸಾಮಾನು ತರೋಕೆ ಬಂದಿದ್ದೆ. ಆದರೆ ಇಲ್ಲಿ ಒಂದು ಸುನಾಮಿಯೇ ಸಿಕ್ಕಿತು!”
ಅತ್ತ ಹುಡುಗಿ ಕೂಡ ತನ್ನಷ್ಟಕ್ಕೆ ತಾನೇ ಗೊಣಗಿಕೊಂಡಳು.
“ಅಬ್ಬಾ! ಎಂಥಾ ಅಹಂಕಾರ! ಮುಖ ನೋಡಿದರೆ ಹೀರೋ ತರ ಇದ್ದಾನೆ, ಮಾತಾಡಿದರೆ ವಿಲನ್ ತರ ಆಡ್ತಾನೆ!”
ಇಬ್ಬರೂ ತಮ್ಮ ತಮ್ಮ ಶಾಪಿಂಗ್‌ನಲ್ಲಿ ಬ್ಯುಸಿಯಾದರು.
ಆದರೆ ವಿಧಿಯ ಆಟ ಬೇರೆಯೇ ಇತ್ತು.
ಸ್ವಲ್ಪ ಸಮಯದ ನಂತರ ಇಬ್ಬರೂ ಒಂದೇ ಸಮಯಕ್ಕೆ ಒಂದೇ ಶೆಲ್ಫ್‌ನಲ್ಲಿದ್ದ ಕೊನೆಯ ಚಾಕೊಲೇಟ್ ಬಾಕ್ಸ್ ತೆಗೆದುಕೊಳ್ಳಲು ಕೈ ಚಾಚಿದರು.
ಮತ್ತೆ ಇಬ್ಬರ ಕೈಗಳು ಒಂದಕ್ಕೊಂದು ತಾಕಿದವು!
ಇಬ್ಬರೂ ಒಮ್ಮೆ ಮುಖ ನೋಡಿಕೊಂಡರು.
“ನೀವಾ?”
“ಮತ್ತೆ ನೀವಾ?”
ಈ ಬಾರಿ ಇಬ್ಬರ ಬಾಯಿಂದಲೂ ಒಂದೇ ಸಮಯಕ್ಕೆ ಮಾತು ಹೊರಬಿತ್ತು!
ನಿಮಗೆ ಮಾಡೋದಕ್ಕೆ ಕೆಲಸ ಇಲ್ವಾ, ಎಲ್ಲಾ ಕಡೆ ನನ್ನ ಫಾಲೋ ಮಾಡ್ಕೊಂಡು ಬರ್ತಿದ್ದೀರಾ..
ಅಮ್ಮ ತಾಯಿ ನಿಮ್ಮನ್ನು ನೀವೂ ದೊಡ್ಡ ಇವಳು ಅನ್ಕೊಂಡಿದ್ದಿರಾ… ಫಾಲೋ ಮಾಡೊ ಅಷ್ಟು ದೊಡ್ಡ ಫಿಗರ್ ಏನಲ್ಲ ಬಿಡು ನೀನು ಎಂದು ಸಣ್ಣಗೆ ಗುಣುಗಿಕೊಂಡ..
ಸ್ವಲ್ಪ ಅವನ ಹತ್ತಿರ ಬಾಗಿ ಏನಂದ್ರಿ?.. ಏನಾದ್ರೂ ಹೇಳೋದಾದ್ರೆ ನೇರವಾಗಿ ಹೇಳಿ. ಯಾಕೆ ಅಷ್ಟು ತಾಕತ್ ಇಲ್ವಾ ನಿಮಗೆ?
ಹೇ ತಾಕತ್ ಗೀಕತ್ ಅಂತ ಎಲ್ಲ ಮಾತಾಡಬೇಡಿ. ಏನೋ ಹುಡುಗಿ ಅಂತ ಸುಮ್ಮನೆ ಇದ್ದೀನಿ ಕಾಲು ಕೆರೆದುಕೊಂಡು ಜಗಳಕ್ಕೆ ಬಂದರೆ ಸರಿ ಇರಲ್ಲ.
ಅಯ್ಯೋ…. ಬಂದನಪ್ಪ ಮಾರ್ಯದ ಪುರುಷೋತ್ತಮ ಮರ್ಯಾದೆ ಕೊಡೂದಕ್ಕೆ. ಇವನನ್ನು ಬಿಟ್ರೆ ನನಗೆ ಯಾರು ಮರ್ಯಾದೆ ಕೊಡೋದಿಲ್ಲ ಅನ್ನೋತರ.
ಹೇ ಮರ್ಯಾದೆ ಕೊಟ್ಟು ಮಾತಾಡಿ.
ಹೇ ಹೋಗಯ್ಯ ಕಂಡಿದೀನಿ ಸುಂದರವಾದ ಹುಡುಗಿ ಕಂಡರೆ ಸಾಕು ಹಿಂದೇನೇ ಬಂದು ಬಿಡ್ತೀರಾ..
ಅವಳು ಹಾಗೆ ಅಂದ ತಕ್ಷಣ ಸುತ್ತ ಮುತ್ತಾ ನೋಡತೊಡಗಿದ.
ಏನು ಹಾಗೆ ನೋಡುತ್ತಿದಿಯಾ… ಕೇಳಿದಳು ಅವಳು.
ಆ….. ಏನೋ ಸುಂದರವಾದ ಹುಡುಗಿ ಅಂದ್ಯಲ್ಲ ಅದು ಯಾರು ಅಂತ ಹುಡುಕುತಿದ್ದೆ. ಎಂದು ಹೇಳುತ್ತಾ ವ್ಯಂಗ್ಯವಾಗಿ ನಕ್ಕ.
ಅಯ್ಯೋ ನಿನ್ನಾ… ಇನ್ನೊಮ್ಮೆ ನನ್ನ ಕಣ್ಣಿಗೆ ಕಾಣಿಸಿಕೊಳ್ಳಬೇಡ. ಕಾಲು ಅಪ್ಪಳಿಸುತ್ತಾ ಬಿಲ್ಲಿಂಗ್ ಸಕ್ಷನ್ ಕಡೆ ತೆರಳಿದಳು.
ಅವನು ಅವಳ ಹಿಂದೆಯೇ ನಗುತ್ತಾ ಇನ್ನೊಂದು ಬಿಲ್ಲಿಂಗ್ ಸಕ್ಷನ್ ಕಡೆ ಬಂದು ನಿಂತ
ಮುಂದುವರೆಯುವುದು…..
ಕಥೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಪ್ರೋತ್ಸಾಹಿಸಿ.
Swipe left/right or tap the sides to turn pages