New Katha Varnika is now on Google Play — read original stories on your phone. Learn more

ಮೋಹ ❤️

3 stories Ongoing Romance Love Family Drama

ಮೋಹ ❤️ - ೧ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ವಿಶಾಲವಾದ ಸುಂದರ ಬಂಗಲೆ. ಮನೆಯ ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿದ್ದ ಉದ್ಯಾನವನ, ಮುಂಭಾಗದಲ್ಲಿ ಸಾಲಾಗಿ ನಿಂತಿದ್ದ ದುಬಾರಿ ಕಾರುಗಳು, ಒಳಗೆ ಕಾಲಿಟ್ಟರೆ ಕಣ್ಣಿಗೆ ಹಬ್ಬವೆನಿಸುವಂತೆ ಅಲಂಕರಿಸಿದ್ದ ಹಾಲ್... ಆ ಮನೆಯ ಶ್ರೀಮಂತಿಕೆಯನ್ನು ಎದ್ದು ತೋರಿಸುತ್ತಿದ್ದವು. ಆ ಮನೆಯ ಹಾಲ್‌ನಲ್ಲಿ ಕುಟುಂಬದವರೆಲ್ಲರೂ ಕುಳಿತಿದ್ದರು. ಮನೆಯ ಯಜಮಾನ ಆದಿತ್ಯ, ಅವರ ಪತ್ನಿ ಮಾಧವಿ, ಆದಿತ್ಯನ ತಂದೆ ವಿಶ್ವನಾಥ್ ಮತ್ತು ತಾಯಿ ಜಾನಕಿ. ಎಲ್ಲರೂ ಬೆಳಗಿನ ತಿಂಡಿ ಮುಗಿಸಿ ಹರಟೆಯಲ್ಲಿ ತೊಡಗಿದ್ದರು. ಅವರ ಜೊತೆಯಲ್ಲೇ ಕುಳಿತಿದ್ದ ವಿಹಾನ್ ಮತ್ತು ವೈದೇಹಿ. ವಿಹಾನ್ ಮತ್ತು ಅವನ ತಾಯಿ ವೈದೇಹಿ ಆ ಮನೆಯ ಪಕ್ಕದಲ್ಲೇ ವಾಸವಾಗಿದ್ದರು. ವಿಹಾನ್, ಇಪ್ಪತ್ತೆಂಟು ವರ್ಷದ ಯುವಕ. ಸುಮಾರು ಆರು ಅಡಿ ಎತ್ತರ, ಆಕರ್ಷಕ ವ್ಯಕ್ತಿತ್ವ, ಗಂಭೀರವಾದ…

Browse Stories

No stories found

Try another filter, or browse more series from the home page.

Back to Home