New Katha Varnika is now on Google Play — read original stories on your phone. Learn more

ಒಲವಿನ ಸೆರೆ

13 stories Ongoing Romance Family Drama Suspense

ವಿಶೇಷ ಸೂಚನೆ : ಈ ಕಥೆಯು ಸಂಪೂರ್ಣ ನನ್ನ ಕಲ್ಪನೆಯಲ್ಲಿ ಮೂಡಿಬಂದಿದ್ದು, ಯಾವುದೇ ಕಥೆ ಕಾದಂಬರಿ ಅಥವಾ ನಿಜ ಜೀವನಕ್ಕೆ ಹೋಲಿಕೆ ಕಂಡುಬಂದಲ್ಲಿ ಕೇವಲ ಕಾಕತಾಳೀಯ. ✨✨✨✨✨✨ ಮುಂಬೈ ನಗರದ ಪ್ರಸಿದ್ಧ ಕನ್ವೆನ್ಷನ್ ಹಾಲ್ ಇಂದು ಬಣ್ಣ ಬಣ್ಣದ ಬೆಳಕಿನಿಂದ ಕಂಗೊಳಿಸುತ್ತಿತ್ತು. ಮಾಧ್ಯಮ ಸಂಸ್ಥೆಗಳು ಎಲ್ಲರನ್ನೂ ಸ್ವಾಗತ ಕೋರುವವರಂತೆ ಎಲ್ಲೆಡೆ ಆವರಿಸಿದ್ದರು. ವೇದಿಕೆಯು ವಿಶೇಷವಾದ ಸಮಾರಂಭಕ್ಕೆಂದು ಸಿದ್ಧವಾಗಿತ್ತು. ವೇದಿಕೆಯ ದೊಡ್ಡದಾದ ಪರದೆಯ ಮೇಲೆ ಹಿಂದಿನ ವರ್ಷಗಳ ಪ್ರಶಸ್ತಿಗಳು ಹಾಗೂ ವಿಜೇತರ ಪಟ್ಟಿಯನ್ನು ಹಾಕಲಾಗಿತ್ತು. ಅದಲ್ಲದೇ ಈ ವರ್ಷದ ಪ್ರಶಸ್ತಿಗೆ ಅರ್ಹರಾದ ಕೆಲವರ ಹೆಸರುಗಳನ್ನು ಸಹ ಹಾಕಲಾಗಿತ್ತು. ಎಲ್ಲವನ್ನು ಪರದೆಯ ಮೇಲೆ ಒಂದರ ಹಿಂದೆ ಒಂದರಂತೆ ಪ್ರದರ್ಶಿಸಲಾಗುತ್ತಿತ್ತು. ವೇದಿಕೆಯ ಮುಂಭಾಗದಲ್ಲಿ ಚಂದದ ಅಲಂಕಾರದ ಮಧ್ಯೆ ಮುಖ್ಯ ಪ್ರಶಸ್ತಿಯ ಟ್ರೋಫಿಯನ್ನು ಇಡಲಾಗಿತ್ತು. ವೇದಿಕೆಯಲ್ಲಿ ರಾಜಕೀಯ ಗಣ್ಯರು, ಉದ್ಯಮಿಗಳು, ಮಾಧ್ಯಮದವರು ಅನೇಕ…

Browse Stories

ಒಲವಿನ ಸೆರೆ Premium

ಒಲವಿನ ಸೆರೆ – 11

  ವಿರಾಟ್ ಅಜ್ಜಿಯ ಬಳಿ ತಾನು ಮದುವೆ ಆಗುವುದಿಲ್ಲ  ಎಂದು ಹೇಳಿದರೆ ಅಜ್ಜಿ ಆಘಾತಕ್ಕೆ ಒಳಗಾದವರು ಕೋಪದಿಂದ ಅವನ ಹೆಗಲಿಗೆ ಒಂದು ಪೆಟ್ಟು ಕೊಟ್ಟಿದ್ದರು. ಏನೋ ಹೇಳ್ತಾ ಇದೀಯಾ? ತಲೆ ಸರಿ ಇದೆಯಾ? ಮದುವೆ ಆಗಲ್ಲ ಅಂದ್ರೆ ಏನು ಹುಡುಗಾಟ ಅಂದುಕೊಂಡಿದೀಯ? ಎಂದು ಜೋರಾಗಿ ಹೇಳಿದರೆ ವಿರಾಟ್,”ನಿಜನೆ ಹೇಳ್ತಾ ಇದೀನಿ ಅಜ್ಜಿ…ನಾನು ಈ ಮದುವೆ ಆಗಲ್ಲ…ಡ್ಯಾಡ್ ಏನ್ ಮಾಡ್ತಾರೆ ಅಂತ ನಾನು ನೋಡಬೇಕು” ಎಂದು ಹಠಕ್ಕೆ ಬಿದ್ದವನಂತೆ ಹೇಳಿದ್ದ.    ಅಜ್ಜಿ,”ಏನೋ ವೀರು ಇದೆಲ್ಲ? ಇದು ನಿಜವಾಗ್ಲೂ […]

6 min 11 views
ಒಲವಿನ ಸೆರೆ Premium

ಒಲವಿನ ಸೆರೆ – 12

ರಾಜಶೇಖರ್ ಅವರು ವಿರಾಟ್ ಏನೂ ಹೇಳದೆ ಇರುವುದನ್ನು ನೋಡಿ ನೆಮ್ಮದಿಯ ಉಸಿರಾಡಿದ್ದರು. ಎಲ್ಲಿ ಮದುವೆ ಬೇಡವೆಂದು ಬಿಡುತ್ತಾನೋ ಎಂದು ಹೆದರಿದವರಿಗೆ ಸಮಾಧಾನವಾಗಿತ್ತು. ವಿರಾಟ್ ಅವರ ಜೊತೆ ಮಾತನಾಡಲು ಇಷ್ಟವಿಲ್ಲದೇ ತನ್ನ ಪಾಡಿಗೆ ತಾನು ಊಟ ಮಾಡಿ ಹೋಗಿದ್ದ. ಅವನ ನಿರ್ಧಾರ ಬದಲಾಗುವದರ ಒಳಗೆ ಆದಷ್ಟು ಬೇಗ ಮದುವೆ ಮಾಡಬೇಕು ಎಂದು ನಿರ್ಧರಿಸಿದ್ದರು.            ಮರುದಿನ ಜಗದೀಶ್ ಅವರಿಗೆ ಕರೆ ಮಾಡಿದವರು ಅದರ ಬಗ್ಗೆ ಮಾತನಾಡಿದ್ದರು. ಮಾಧ್ಯಮದವರು ಇಲ್ಲಸಲ್ಲದ್ದೆಲ್ಲ ಹೇಳುವ ಮೊದಲು ಮಕ್ಕಳ […]

6 min 12 views
ಒಲವಿನ ಸೆರೆ Premium

ಒಲವಿನ ಸೆರೆ – 13

  ವಿರಾಟ್ ಬರುತ್ತಿರುವುದನ್ನು ನೋಡಿದ ಅಕ್ಷರಾ ಮುಖದಲ್ಲಿ ನಗು ಮೂಡಿತ್ತು. ಅವಳ ಮುಖದಲ್ಲಿನ ಸಂತೋಷ ಅವನ ಕಣ್ಣಿಗೂ ಕಾಣಿಸಿತ್ತು. ಯಾರದೋ ಮೇಲಿನ ಕೋಪಕ್ಕೆ ಅವಳ ಸಂತೋಷವನ್ನು ಹಾಳು ಮಾಡಲು ಅವನಿಗೆ ಮನಸಾಗಲಿಲ್ಲ. ಅವಳು ರೋಹಿಣಿ ಪಕ್ಕ ಕುಳಿತಿದ್ದು ನೋಡಿದವನಿಗೆ ಏನನಿಸಿತೋ ಅವಳ ಕಡೆ ನೋಡಿ ಕೈ ಬೀಸಿದ್ದ.    ಅಕ್ಷರಾ ಅವನು ಕೈ ಬೀಸಿದ್ದು ನೋಡಿದವಳು ಯಾರಿಗೆ ಎಂಬಂತೆ ಹಿಂದೆ ತಿರುಗಿದರೆ ಅವನು ಅವಳ ಬಳಿ ಬಂದವನು ನಿಮಗೆ ಹಾಯ್ ಅಂತ ಹೇಳಿದ್ದು ಎಂದು ಹೇಳಿದವನ ಮುಖದಲ್ಲಿ […]

6 min 7 views