New Katha Varnika is now on Google Play — read original stories on your phone. Learn more
ಒಲವಿನ ಸೆರೆ – 13
ಒಲವಿನ ಸೆರೆ Premium 6 min read

ಒಲವಿನ ಸೆರೆ – 13

 

ವಿರಾಟ್ ಬರುತ್ತಿರುವುದನ್ನು ನೋಡಿದ ಅಕ್ಷರಾ ಮುಖದಲ್ಲಿ ನಗು ಮೂಡಿತ್ತು. ಅವಳ ಮುಖದಲ್ಲಿನ ಸಂತೋಷ ಅವನ ಕಣ್ಣಿಗೂ ಕಾಣಿಸಿತ್ತು. ಯಾರದೋ ಮೇಲಿನ ಕೋಪಕ್ಕೆ ಅವಳ ಸಂತೋಷವನ್ನು ಹಾಳು ಮಾಡಲು ಅವನಿಗೆ ಮನಸಾಗಲಿಲ್ಲ. ಅವಳು ರೋಹಿಣಿ ಪಕ್ಕ ಕುಳಿತಿದ್ದು ನೋಡಿದವನಿಗೆ ಏನನಿಸಿತೋ ಅವಳ ಕಡೆ ನೋಡಿ ಕೈ ಬೀಸಿದ್ದ. 

 

ಅಕ್ಷರಾ ಅವನು ಕೈ ಬೀಸಿದ್ದು ನೋಡಿದವಳು ಯಾರಿಗೆ ಎಂಬಂತೆ ಹಿಂದೆ ತಿರುಗಿದರೆ ಅವನು ಅವಳ ಬಳಿ ಬಂದವನು ನಿಮಗೆ ಹಾಯ್ ಅಂತ ಹೇಳಿದ್ದು ಎಂದು ಹೇಳಿದವನ ಮುಖದಲ್ಲಿ ನಗು ತುಸು ಕಡಿಮೆಯೇ. ಅಕ್ಷರಾ ಥ್ಯಾಂಕ್ ಯು ನೀವು ಬರೋದೇ ಇಲ್ಲವೇನೋ ಅಂತ ಅಂದುಕೊಂಡಿದ್ದೆ ಎಂದು ಹೇಳುತ್ತಿದ್ದಂತೆ ಅವನು ಇಟ್ಸ್ ಓಕೆ ಥ್ಯಾಂಕ್ಸ್ ಎಲ್ಲ ಯಾಕೆ ಎಂದವನು ಅವಳ ಪಕ್ಕ ಖಾಲಿ ಇದ್ದ ಕುರ್ಚಿಯಲ್ಲಿ ಕುಳಿತಿದ್ದ. 

 

ಅವಳು ಆಯ್ಕೆ ಮಾಡಿದ್ದ ಒಂದಷ್ಟು ಸೀರೆಗಳಲ್ಲಿ ಚೆಂದದ ಸೀರೆಗಳನ್ನು ಆಯ್ಕೆ ಮಾಡುವಲ್ಲಿ ಅವಳಿಗೆ ಸಹಾಯ ಮಾಡಿದ್ದ. ಅವಳ ತಾಯಿ ಎಲ್ಲಾ ಶಾಸ್ತ್ರಕ್ಕೂ ಸೀರೆ ಲೆಕ್ಕ ಇಟ್ಟು ಹೇಳಲು ಅವಳು ಅಷ್ಟೆಲ್ಲ ಯಾಕೆ ಮಮ್ಮಾ ನೀನು ಒಂದು ಸೀರೆ ಜಾಸ್ತಿನೇ ಹೇಳ್ತಾ ಇದ್ಯಾ ಎಂದು ಹೇಳಿದ್ದಳು. ಅವಳ ತಾಯಿ ನಾನು ಎಲ್ಲವನ್ನೂ ಸರಿಯಾಗಿಯೇ ಲೆಕ್ಕ ಇಟ್ಟಿದೀನಿ ಎಕ್ಸ್ಟ್ರಾ ಸೀರೆ ಅಲ್ಲ ಅದು ನಿಷೇಕದ ಶಾಸ್ತ್ರಕ್ಕೆ ಅದು ಎಂದು ಪಿಸುದನಿಯಲ್ಲಿ ಹೇಳಿದರೆ ಅವಳ ಮುಖ ನಾಚಿಕೆಯಿಂದ ಕೆಂಪಾಗಿತ್ತು. 

 

ಒಂದಷ್ಟು ಸಮಯದ ಬಳಿಕ ಎಲ್ಲರ ಸೀರೆ ಆಯ್ಕೆ ಮುಗಿದಿತ್ತು. ವಿರಾಟ್ ಚಂದದ ಸೀರೆಯೊಂದನ್ನು ತನ್ನ ಅಜ್ಜಿಗೆ ಕೊಡಲು ತಾನೇ ಆರಿಸಿ ತೆಗೆದುಕೊಂಡಿದ್ದ. ಅಕ್ಷರಾ ಕುತೂಹಲದಿಂದ ಯಾರಿಗೆ ಅದು ಸೀರೆ ಎಂದು ಕೇಳಲು ಅವನು ತನ್ನ ಅಜ್ಜಿಗೆ ಎಂದು ಮುಚ್ಚು ಮರೆಯಿಲ್ಲದೆ ಹೇಳಿದ್ದ. ಅವನು ಅಜ್ಜಿಯ ಮೇಲೆ ತೋರುವ ಪ್ರೀತಿ ಅವಳಿಗೆ ಇಷ್ಟವಾಗಿತ್ತು. 

 

ಎಲ್ಲರೂ ಖರೀದಿ ಮುಗಿಸಿ ಹೊರಬರಲು ರೋಹಿಣಿ ಅವರು ಹಸಿವು ಎಂದು ಹೇಳಿದಾಗ ದುಬಾರಿ ರೆಸ್ಟೋರೆಂಟ್ ಒಂದಕ್ಕೆ ತೆರಳಿದ್ದರು. ಅಕ್ಷರಳಿಗೂ ಕೂಡ ಇದೆಲ್ಲ ಏನೂ ಹೊಸದಲ್ಲ. ಅವಳು ಚಿಕ್ಕಂದಿನಿಂದ ಇಂತದೇ ದುಬಾರಿ ಜಾಗಕ್ಕೆ ಲೆಕ್ಕವಿಲ್ಲದಷ್ಟು ಸಲ ಬಂದಿದ್ದಾಳೆ. ಎಲ್ಲರೂ ಒಂದು ದೊಡ್ಡದಾದ ಟೇಬಲ್ ಸುತ್ತ ಕುಳಿತಿದ್ದರು. ಅಲ್ಲಿ ಜಾಗ ಸಾಲದೇ ಅಕ್ಷರಾ ಇನ್ನೊಂದು ಟೇಬಲ್ ಬಳಿ ಬಂದರೆ ವಿರಾಟ್ ಕೂಡ ಅವಳ ಪಕ್ಕ ಬಂದು ಕುಳಿತಿದ್ದ. 

 

ವಿರಾಟ್ ಮನದಲ್ಲಿ ಅವಳ ಬಗ್ಗೆ ಪ್ರೀತಿ ಇರದಿದ್ದರೂ ಅವಳಿಗೆ ಒಂಟಿ ಎಂಬ ಭಾವನೆ ಬರುವಂತೆ ಮಾಡಲು ಅವನಿಗೆ ಇಷ್ಟವಿರಲಿಲ್ಲ. ಅವಳಿಗೆ ಅವನ ಸನಿಹ ಇಷ್ಟವಾಗತೊಡಗಿತ್ತು. ಅವನು ತುಸು ಗಂಭೀರವಾಗಿ ಇದ್ದರೂ ಅವನು ಮಾಡುತ್ತಿದ್ದ ಸಣ್ಣ ಪುಟ್ಟ ಕಾಳಜಿ ಅವಳಿಗೆ ಇಷ್ಟವಾಗುತ್ತಿತ್ತು. 

Premium Premium reading Full story · from ₹69
Sign in to continue