New Katha Varnika is now on Google Play — read original stories on your phone. Learn more
ಒಲವಿನ ಸೆರೆ – 11
ಒಲವಿನ ಸೆರೆ Premium 6 min read

ಒಲವಿನ ಸೆರೆ – 11

 

ವಿರಾಟ್ ಅಜ್ಜಿಯ ಬಳಿ ತಾನು ಮದುವೆ ಆಗುವುದಿಲ್ಲ  ಎಂದು ಹೇಳಿದರೆ ಅಜ್ಜಿ ಆಘಾತಕ್ಕೆ ಒಳಗಾದವರು ಕೋಪದಿಂದ ಅವನ ಹೆಗಲಿಗೆ ಒಂದು ಪೆಟ್ಟು ಕೊಟ್ಟಿದ್ದರು. ಏನೋ ಹೇಳ್ತಾ ಇದೀಯಾ? ತಲೆ ಸರಿ ಇದೆಯಾ? ಮದುವೆ ಆಗಲ್ಲ ಅಂದ್ರೆ ಏನು ಹುಡುಗಾಟ ಅಂದುಕೊಂಡಿದೀಯ? ಎಂದು ಜೋರಾಗಿ ಹೇಳಿದರೆ ವಿರಾಟ್,”ನಿಜನೆ ಹೇಳ್ತಾ ಇದೀನಿ ಅಜ್ಜಿ…ನಾನು ಈ ಮದುವೆ ಆಗಲ್ಲ…ಡ್ಯಾಡ್ ಏನ್ ಮಾಡ್ತಾರೆ ಅಂತ ನಾನು ನೋಡಬೇಕು” ಎಂದು ಹಠಕ್ಕೆ ಬಿದ್ದವನಂತೆ ಹೇಳಿದ್ದ. 

 

ಅಜ್ಜಿ,”ಏನೋ ವೀರು ಇದೆಲ್ಲ? ಇದು ನಿಜವಾಗ್ಲೂ ನೀನೇ ಹೀಗೆ ಹೇಳ್ತಾ ಇರೋದ? ನನಗೆ ನಿಜಕ್ಕೂ ನಂಬೋಕೆ ಸಾಧ್ಯ ಆಗ್ತಾ ಇಲ್ಲ…ನಿಶ್ಚಿತಾರ್ಥ ಆಗಿದೆ ಈಗ ಈ ಮಾತನ್ನ ಹೇಳಿದರೆ ಎಷ್ಟು ಸರಿ?” ಎಂದು ಆತಂಕದಲ್ಲಿ ಹೇಳಿದ್ದರು. 

 

ವಿರಾಟ್,”ನನಗೂ ಈಗಲೇ ಗೊತ್ತಾಗಿದ್ದು ಅಜ್ಜಿ…ಮಗನ ಮದುವೆಯ ಹಿಂದೆ ಕೂಡ ತಮ್ಮ ರಾಜಕೀಯ ಲಾಭವನ್ನು ನೋಡ್ತಾರೆ ಅಂತ…ಅವರಿಗೆ ನನ್ನ ಖುಷಿ ಮುಖ್ಯ ಅಲ್ಲ ಅವರ ರಾಜಕೀಯ ಲಾಭ ಮಾತ್ರ ಮುಖ್ಯ…ನಾನು ಅವರ ಪಾಲಿಗೆ ಏನೂ ಅಲ್ಲ ಅನ್ನೋದನ್ನ ಮತ್ತೆ ಮತ್ತೆ ನಿರೂಪಿಸುತ್ತಾ ಇದಾರೆ…” ಎಂದವನ ದನಿಯಲ್ಲಿ ವಿಷಾದವಿತ್ತು. 

 

ಗೌರಿ ಅವರಿಗೆ ಅರ್ಧ ವಿಷಯ ಅಷ್ಟೇ ಗೊತ್ತಾಗಿತ್ತು. ಪೂರ್ಣ ವಿಷಯ ಏನೆಂದು ಅವರಿಗೆ ಗೊತ್ತಿರಲಿಲ್ಲ. ನೀನು ವಿಷಯ ಏನೆಂದು ಹೇಳದೆ ತನಗೇನು ಗೊತ್ತಾಗುವುದಿಲ್ಲ ಎಂದು ಹೇಳಿದಾಗ ವಿರಾಟ್,”ಅಜ್ಜಿ…ಡ್ಯಾಡ್ ಈ ಮದುವೆಯ ವಿಷಯ ಹೇಳಿದಾಗ ನನಗೆ ಗೊತ್ತಿರಲಿಲ್ಲ…ಇದು ಮಗನ ಒಳ್ಳೆಯದಕ್ಕೆ ಅಂತ ಅಲ್ಲ ತಮ್ಮ ರಾಜಕೀಯ ಭವಿಷ್ಯ ಚೆನ್ನಾಗಿರಲಿ ಅಂತ ಮಾಡುತ್ತಾ ಇರೋ ಮದುವೆ ಅಂತ…ಅವಳು ಕೇಂದ್ರ ಸಚಿವರ ಮಗಳು ಮುಂದೆ ಉಪಯೋಗ ಆಗತ್ತೆ ಅಂತಾನೆ ಡ್ಯಾಡ್ ಅಷ್ಟು ಆತುರದಲ್ಲಿ ಮದುವೆ ಫಿಕ್ಸ್ ಮಾಡಿದ್ದು…” ಎಂದವನು

 

“ನಾನು ಮದುವೆ ಇಷ್ಟ ಇಲ್ಲ ಡ್ಯಾಡ್ ಎಂದು ಹೇಳಿದರೂ ಅವರ ಮನಸು ಕರಗಲಿಲ್ಲ… ಕೊನೆಗೆ ನಾನೇ ಅವರ ಮನಸಿಗೆ ಬೇಸರ ಆಗಬಾರದು ಅಂತ ಒಪ್ಪಿಕೊಂಡೆ…ಆದರೆ ಅವರು ಮಾಡಿದ್ದೇನು? ನಾನು ಯಾವುದು ಆಗಬಾರದು ಅಂತ ಅಂದುಕೊಂಡಿದ್ದೇನೋ ಅದೇ ಆಗಿದೆ.. ಅವರಿಗೆ ನಾನು ಅವರ ರಾಜಕೀಯದ ಒಂದು ಅಸ್ತ್ರ ಅಷ್ಟೇ… ಮಗ ಅನ್ನುವ ಯಾವುದೇ ಪ್ರೀತಿ ಮಮಕಾರ ಈಗ ಅವರಲ್ಲಿ ಉಳಿದಿಲ್ಲ…ಅವರಿಗೆ ತಮ್ಮ ರಾಜಕೀಯ ಬಿಟ್ಟರೆ ಬೇರೇನೂ ಕಣ್ಣಿಗೆ ಕಾಣಿಸುವುದಿಲ್ಲ…ಅದಿಕ್ಕೆ ಹೇಳ್ತಾ ಇದೀನಿ ನಾನು ಈ ಮದುವೆ ಆಗಲ್ಲ…ಅವರು ಏನು ಮಾಡ್ತಾರೋ ನಾನು ನೋಡ್ತೀನಿ…” ಎಂದು ಹೇಳಲು ಗೌರಿ ಅವರಿಗೂ ಆಶ್ಚರ್ಯದ ಜೊತೆ ಆಘಾತ ಆಗಿತ್ತು. ರಾಜಶೇಖರ್ ಅವರು ಮಗನ ಮದುವೆಯ ವಿಷಯದಲ್ಲೂ ಈ ರೀತಿ ಯೋಚಿಸುತ್ತಾರೆ ಎಂದು ಅವರಿಗೂ ನಂಬಲು ಸಾಧ್ಯವಾಗಿರಲಿಲ್ಲ.

 

ಗೌರಿ ಅವರು,”ಅವರು ಮಾಡಿದ್ದು ತಪ್ಪಾದರೆ ಈಗ ನೀನು ಮಾಡ್ತಾ ಇರೋದು ಕೂಡ ತಪ್ಪೇ…ಇಷ್ಟೆಲ್ಲ ಮುಂದುವರೆದ ಮೇಲೆ ಮದುವೆ ಆಗಲ್ಲಾ ಅಂದ್ರೆ ಹೇಗೆ? ನೀನು ಈ ಮದುವೆ ಆಗಲೇಬೇಕು…” ಎಂದು ಕಡ್ಡಿ ಮುರಿದಂತೆ ಹೇಳಿದ್ದರು. 

Premium Premium reading Full story · from ₹69
Sign in to continue