New Katha Varnika is now on Google Play — read original stories on your phone. Learn more

ಪ್ರೀತಿಯೇ ನಿನ್ನ…

4 stories Ongoing Romance Love Comedy

ಸಂಜೆಯ ಸಮಯ… ನಗರದ ಪ್ರಸಿದ್ಧ ಸೂಪರ್ ಮಾರ್ಕೆಟ್‌ನಲ್ಲಿ ಎಂದಿನಂತೆ ಜನರ ಓಡಾಟ ಜೋರಾಗಿತ್ತು. ಕೆಲವರು ವಾರದ ದಿನಸಿ ಸಾಮಾನುಗಳನ್ನು ಖರೀದಿಸುತ್ತಿದ್ದರೆ, ಇನ್ನು ಕೆಲವರು ಅಗತ್ಯವಿಲ್ಲದ ವಸ್ತುಗಳನ್ನೂ ಖರೀದಿಸುವುದರಲ್ಲಿ ಬ್ಯುಸಿಯಾಗಿದ್ದರು. ಅದೇ ಸಮಯಕ್ಕೆ ಕೈಯಲ್ಲಿ ಒಂದು ಪುಟ್ಟ ಶಾಪಿಂಗ್ ಲಿಸ್ಟ್ ಹಿಡಿದುಕೊಂಡು ಹುಡುಗಿಯೊಬ್ಬಳು ಸೂಪರ್ ಮಾರ್ಕೆಟ್ ಒಳಗೆ ಬಂದಳು. ಮೊಬೈಲ್‌ನಲ್ಲಿ ಯಾರಿಗೋ ಮಾತನಾಡುತ್ತಾ, ಎದುರಿಗೆ ಗಮನ ಕೊಡದೆ ವೇಗವಾಗಿ ನಡೆಯುತ್ತಿದ್ದಳು. "ಹಲೋ ಅಮ್ಮಾ... ಹೌದು, ಹಾಲು, ಬ್ರೆಡ್, ಸಕ್ಕರೆ ಎಲ್ಲ ತಗೋತೀನಿ. ಇನ್ನೇನಾದರೂ ಬೇಕಾ?" ಅತ್ತ ಕಡೆಯಿಂದ ತಾಯಿ ಏನೋ ಹೇಳುತ್ತಿದ್ದಂತೆ, "ಅಯ್ಯೋ ಅಮ್ಮಾ, ಇಷ್ಟೊಂದು ಸಾಮಾನುಗಳನ್ನೆಲ್ಲ ನಾನೊಬ್ಬಳೇ ಹೇಗೆ ತರಲಿ? ಸರಿ ಬಿಡು, ನೋಡ್ತೀನಿ" ಎಂದು ಮಾತನಾಡುತ್ತಾ ತಿರುಗಿದವಳೇ ಎದುರಿಗೆ ಬರುತ್ತಿದ್ದ ಹುಡುಗನಿಗೆ ಜೋರಾಗಿ ಡಿಕ್ಕಿ ಹೊಡೆದಳು. "ಅಯ್ಯೋ!" ಅವಳ ಕೈಯಲ್ಲಿದ್ದ ಶಾಪಿಂಗ್…

Browse Stories

ಪ್ರೀತಿಯೇ ನಿನ್ನ...

ಪ್ರೀತಿಯೇ ನಿನ್ನ… – 1

ಸಂಜೆಯ ಸಮಯ… ನಗರದ ಪ್ರಸಿದ್ಧ ಸೂಪರ್ ಮಾರ್ಕೆಟ್‌ನಲ್ಲಿ ಎಂದಿನಂತೆ ಜನರ ಓಡಾಟ ಜೋರಾಗಿತ್ತು. ಕೆಲವರು ವಾರದ ದಿನಸಿ ಸಾಮಾನುಗಳನ್ನು ಖರೀದಿಸುತ್ತಿದ್ದರೆ, ಇನ್ನು ಕೆಲವರು ಅಗತ್ಯವಿಲ್ಲದ ವಸ್ತುಗಳನ್ನೂ ಖರೀದಿಸುವುದರಲ್ಲಿ ಬ್ಯುಸಿಯಾಗಿದ್ದರು. ಅದೇ ಸಮಯಕ್ಕೆ ಕೈಯಲ್ಲಿ ಒಂದು ಪುಟ್ಟ ಶಾಪಿಂಗ್ ಲಿಸ್ಟ್ ಹಿಡಿದುಕೊಂಡು ಹುಡುಗಿಯೊಬ್ಬಳು ಸೂಪರ್ ಮಾರ್ಕೆಟ್ ಒಳಗೆ ಬಂದಳು. ಮೊಬೈಲ್‌ನಲ್ಲಿ ಯಾರಿಗೋ ಮಾತನಾಡುತ್ತಾ, ಎದುರಿಗೆ ಗಮನ ಕೊಡದೆ ವೇಗವಾಗಿ ನಡೆಯುತ್ತಿದ್ದಳು. “ಹಲೋ ಅಮ್ಮಾ… ಹೌದು, ಹಾಲು, ಬ್ರೆಡ್, ಸಕ್ಕರೆ ಎಲ್ಲ ತಗೋತೀನಿ. ಇನ್ನೇನಾದರೂ ಬೇಕಾ?” ಅತ್ತ ಕಡೆಯಿಂದ ತಾಯಿ […]

3 min 35 views
ಪ್ರೀತಿಯೇ ನಿನ್ನ...

ಪ್ರೀತಿಯೇ ನಿನ್ನ… – 2

ಅಭಿಜ್ಞಾ ಮುಖ ಗಂಟಿಕ್ಕಿಕೊಂಡು ಮನೆಯೊಳಗೆ ಹೆಜ್ಜೆ ಇಟ್ಟಳು. ಅವಳ ಮುಖದಲ್ಲಿದ್ದ ಕೋಪವನ್ನು ನೋಡಿದ ಭುವನೇಶ್ವರಿ ಏನಾಯ್ತು ಅಭಿ? ಮುಖ ಯಾಕೆ ಹೀಗಿದೆ? ನಾನು ಹೇಳಿದ ಸಾಮಾನುಗಳನ್ನೆಲ್ಲ ತಂದ್ಯಾ?” ಎಂದು ಅಡುಗೆಮನೆಯಿಂದಲೇ ಕೇಳಿದರು. “ಅಮ್ಮಾ… ಇನ್ನೊಮ್ಮೆ ನನ್ನನ್ನು ಸಾಮಾನು ತರೋದಕ್ಕೆ ಕಳಿಸಬೇಡ. ಒಳ್ಳೆ  ಯಾವುದೋ ಮೆಂಟಲ್ ಸಹವಾಸ ಬೇರೆ ಸುಮ್ಮನೆ ಬಂದು ತಲೆ ತಿಂತವೆ. ಅವರ ಜೊತೆ ವಾದ ಮಾಡೋಕೆ ಹೋಗಿ ಸಾಕಾಗಿದೆ” ಎಂದು ಸೋಫಾದ ಮೇಲೆ ಕುಸಿದು ಕುಳಿತಳು. ಅಷ್ಟರಲ್ಲಿ ಅಲ್ಲಿಗೆ ಬಂದ ಅವಳ ಅಣ್ಣ ಅಭಿಷೇಕ್, […]

3 min 37 views
ಪ್ರೀತಿಯೇ ನಿನ್ನ...

ಪ್ರೀತಿಯೇ ನಿನ್ನ… – 3

ಮರುದಿನ ಬೆಳಗ್ಗೆ… ಅಭಿಜ್ಞಾ ಕಾಲೇಜಿಗೆ ಹೋಗಲು ತಯಾರಾಗಿ ಅಡುಗೆಮನೆಗೆ ಬಂದಳು. ತಾಯಿ ಭುವನೇಶ್ವರಿ ತಿಂಡಿ ತಯಾರಿಸುತ್ತಿದ್ದರು. “ಅಮ್ಮಾ… ತಿಂಡಿ ಕೊಡು ಬೇಗ. ಲೇಟ್ ಆಗುತ್ತೆ.” “ಎಲ್ಲಾ ರೆಡಿಯಾಗಿದೆ. ಸ್ವಲ್ಪ ತಾಳ್ಮೆಯಿಂದ ಇರು.” “ಅಮ್ಮಾ, ಪ್ಲೀಸ್… ಇವತ್ತು ಫಸ್ಟ್ ಅವರ್ ಇದೆ. ಲೇಟ್ ಆದರೆ ಮತ್ತೆ ಲೆಕ್ಚರರ್ ಬಯ್ಯುತ್ತಾರೆ.” “ನೀನು ಬೆಳಗ್ಗೆ ಬೇಗ ಏಳಬೇಕು ಅಂದರೆ ಕೇಳಲ್ಲ. ಈಗ ನನ್ನ ತಲೆ ತಿನ್ನುತ್ತಿದ್ದೀಯ.” “ಅಮ್ಮಾ, ನಿನ್ನ ಮುದ್ದಿನ ಮಗಳ ಅಲ್ವಾ? ಸ್ವಲ್ಪ ಬೇಗ ಕೊಡು.” ಮಗಳ ಮಾತಿಗೆ ನಗುತ್ತಾ […]

3 min 28 views
ಪ್ರೀತಿಯೇ ನಿನ್ನ...

ಪ್ರೀತಿಯೇ ನಿನ್ನ… – 4

ಅವನು ಅಲ್ಲಿಂದ ಹೋಗುತ್ತಾ ಮನಸ್ಸಿನಲ್ಲಿ, “ಒಳ್ಳೆ ತರಲೆ ಹುಡುಗಿ! ಅದೆಷ್ಟು ಮಾತಾಡುತ್ತಾಳೆ. ಬಿಟ್ಟರೆ ಮೆದುಳಿಗೇ ಕೈ ಹಾಕುತ್ತಾಳೆ!” ಎಂದುಕೊಂಡು ತುಟಿಯಂಚಿನಲ್ಲಿ ಮುಗುಳ್ನಗೆ ಮೂಡಿಸಿಕೊಂಡ. ನಂತರ ಪ್ರಿನ್ಸಿಪಾಲ್ ಚೆಂಬರ್ ತಲುಪಿದವನು ಬಾಗಿಲು ತಟ್ಟಿ ಒಳಗೆ ಪ್ರವೇಶಿಸಿದ. ಅವನನ್ನು ನೋಡಿದ ಪ್ರಿನ್ಸಿಪಾಲ್ ಮುಖದಲ್ಲಿ ಸಂತೋಷ ಮೂಡಿತು. ತಕ್ಷಣ ಎದ್ದು ಬಂದು ಅವನ ಕೈ ಕುಲುಕಿ, “ವೆಲ್ಕಮ್! ವೆಲ್ಕಮ್! ನಿಮ್ಮ ಆಗಮನದಿಂದ ನಮ್ಮ  ತುಂಬಾ ಸಂತೋಷವಾಯಿತು” ಎಂದು ಆತ್ಮೀಯವಾಗಿ ಸ್ವಾಗತಿಸಿದರು. “ಥ್ಯಾಂಕ್ ಯು ಸರ್” ಸರ್ ಪ್ಲೀಸ್ ಹೋಗು ಬಾ ಅಂತ […]

4 min 18 views