ಪ್ರೀತಿಯೇ ನಿನ್ನ… – 4
ಅವನು ಅಲ್ಲಿಂದ ಹೋಗುತ್ತಾ ಮನಸ್ಸಿನಲ್ಲಿ, “ಒಳ್ಳೆ ತರಲೆ ಹುಡುಗಿ! ಅದೆಷ್ಟು ಮಾತಾಡುತ್ತಾಳೆ. ಬಿಟ್ಟರೆ ಮೆದುಳಿಗೇ ಕೈ ಹಾಕುತ್ತಾಳೆ!” ಎಂದುಕೊಂಡು ತುಟಿಯಂಚಿನಲ್ಲಿ ಮುಗುಳ್ನಗೆ ಮೂಡಿಸಿಕೊಂಡ.
ನಂತರ ಪ್ರಿನ್ಸಿಪಾಲ್ ಚೆಂಬರ್ ತಲುಪಿದವನು ಬಾಗಿಲು ತಟ್ಟಿ ಒಳಗೆ ಪ್ರವೇಶಿಸಿದ.
ಅವನನ್ನು ನೋಡಿದ ಪ್ರಿನ್ಸಿಪಾಲ್ ಮುಖದಲ್ಲಿ ಸಂತೋಷ ಮೂಡಿತು. ತಕ್ಷಣ ಎದ್ದು ಬಂದು ಅವನ ಕೈ ಕುಲುಕಿ,
“ವೆಲ್ಕಮ್! ವೆಲ್ಕಮ್! ನಿಮ್ಮ ಆಗಮನದಿಂದ ನಮ್ಮ ತುಂಬಾ ಸಂತೋಷವಾಯಿತು” ಎಂದು ಆತ್ಮೀಯವಾಗಿ ಸ್ವಾಗತಿಸಿದರು.
“ಥ್ಯಾಂಕ್ ಯು ಸರ್” ಸರ್ ಪ್ಲೀಸ್ ಹೋಗು ಬಾ ಅಂತ ಅನ್ನಿ. ಈ ರೆಸ್ಪೆಕ್ಟ್ ಎಲ್ಲಾ ಬೇಡ.
ಇದು ನಿನ್ನ ಅರ್ಹತೆಯಿಂದ ಪಡೆದುಕೊಂಡಿರೋದು. ನೀನು ಈಗ ನನ್ನ ಸ್ಟೂಡೆಂಟ್ ಅಲ್ಲ. ಮತ್ತು ಈ ಮರ್ಯಾದೆಗೆ ನೀನು ಅರ್ಹ.
ಇಬ್ಬರೂ ಕೆಲಕಾಲ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳು, ವಿದ್ಯಾರ್ಥಿಗಳ ಸಾಧನೆ ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.
ನಂತರ ಪ್ರಿನ್ಸಿಪಾಲ್ ತಮ್ಮ ಆಸನದಿಂದ ಎದ್ದು,
“ಬನ್ನಿ ನಿಮಗೆ ನಮ್ಮ ವಿದ್ಯಾರ್ಥಿಗಳನ್ನು ಪರಿಚಯಿಸುತ್ತೇನೆ” ಎನ್ನುತ್ತಾ ಅವನನ್ನು ಕರೆದುಕೊಂಡು ಚೆಂಬರ್ನಿಂದ ಹೊರಬಂದರು.
ಇಬ್ಬರೂ ಕಾಲೇಜಿನ ಕಾರಿಡಾರ್ನಲ್ಲಿ ಸಾಗುತ್ತಾ ತರಗತಿಗಳ ಕಡೆ ಹೆಜ್ಜೆ ಹಾಕಿದರು.
ಅತ್ತ ಅಭಿಜ್ಞಾ ಮಾತ್ರ ತನ್ನ ಗೆಳತಿಯರ ಜೊತೆ ಕುಳಿತು ಇನ್ನೂ ಅವನ ಬಗ್ಗೆಯೇ ಮಾತನಾಡುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲೇ ಅವನು ಮತ್ತೆ ಎದುರಾಗುತ್ತಾನೆ ಎಂಬ ಕಲ್ಪನೆಯೂ ಅವಳಿಗಿರಲಿಲ್ಲ.
ಅಭಿಜ್ಞಾ ತಲೆ ತಗ್ಗಿಸಿಕೊಂಡು ಮೊಬೈಲ್ನಲ್ಲಿ ಏನೋ ಮಾಡುತ್ತಾ ಕುಳಿತಿದ್ದಳು. ಚಂದನ ಮತ್ತು ಪ್ರಿಯಾ ಪಕ್ಕದಲ್ಲೇ ಕುಳಿತು ಮಾತನಾಡುತ್ತಿದ್ದರು.
ಅದೇ ಸಮಯಕ್ಕೆ ಪ್ರಿನ್ಸಿಪಾಲ್ ಅವರ ಜೊತೆ ಬಂದ ಅವನನ್ನು ಕರೆದುಕೊಂಡು ತರಗತಿಯೊಳಗೆ ಪ್ರವೇಶಿಸಿದರು.
“ಗುಡ್ ಮಾರ್ನಿಂಗ್ ಎವರಿವನ್!” ಎಂದರು ಪ್ರಿನ್ಸಿಪಾಲ್.
ವಿದ್ಯಾರ್ಥಿಗಳೆಲ್ಲರೂ ಎದ್ದು ನಿಂತು, “ಗುಡ್ ಮಾರ್ನಿಂಗ್ ಸರ್!” ಎಂದರು.
“ಸರಿ, ಕುಳಿತುಕೊಳ್ಳಿ. ಇಂದು ನಿಮಗೆ ಒಬ್ಬರನ್ನು ಪರಿಚಯಿಸಬೇಕಿದೆ. ಮೀಟ್ ಮಿಸ್ಟರ್ ಅದ್ವೈತ್ ಭಾರದ್ವಾಜ್” ಎಂದು ಅವನತ್ತ ಕೈ ತೋರಿಸಿದರು.
ಅವರ ಮಾತು ಕೇಳಿ ಅಭಿಜ್ಞಾ ತಲೆ ಎತ್ತಿ ನೋಡಿದಳು.
ಅಲ್ಲಿದ್ದ ವ್ಯಕ್ತಿಯನ್ನು ಕಂಡು ಅವಳ ಕಣ್ಣುಗಳು ಆಶ್ಚರ್ಯದಿಂದ ದೊಡ್ಡದಾದವು. ಅವಳ ಜೊತೆ ಚಂದನ ಮತ್ತು ಪ್ರೀಯ ಕೂಡ ಅಷ್ಟೇ ಆಶ್ಚರ್ಯದಿಂದ ನೋಡುತ್ತಿದ್ದರು.
‘ಅಯ್ಯೋ! ಇವನಾ ನನ್ನ ಕ್ಲಾಸ್ಗೆ ಬಂದಿರೋದು? ನೋಡೋಕೆ ದೊಡ್ಡವನ ತರ ಕಾಣ್ತಾನೆ. ಎಲ್ಲೋ ಫೇಲ್ ಆಗಿರಬೇಕು. ಅದಕ್ಕೆ ಈಗ ಇಲ್ಲಿಗೆ ಟ್ರಾನ್ಸ್ಫರ್ ತೆಗೆದುಕೊಂಡಿರಬೇಕು. ಬೇರೆಯವರ ತಲೆ ತಿನ್ನೋದು ಬಿಟ್ಟು ಓದಿನ ಕಡೆ ಗಮನ ಕೊಟ್ಟಿದ್ದರೆ ಇವನ ವಯಸ್ಸಿಗೆ ಇಷ್ಟೊತ್ತಿಗೆ ಲೆಕ್ಚರರ್ ಆಗಬಹುದಿತ್ತು!’ ಎಂದು ಮನಸ್ಸಿನಲ್ಲೇ ಅಂದುಕೊಂಡಳು.
ಅವಳ ಯೋಚನೆಗೆ ತಡೆ ಹಾಕುವಂತೆ ಪ್ರಿನ್ಸಿಪಾಲ್ ಮುಂದುವರಿಸಿದರು.
“ಇವರು ಇನ್ಮುಂದೆ ನಿಮ್ಮ ಕೆಮಿಸ್ಟ್ರಿ ಲೆಕ್ಚರರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ವಿಶೇಷವೆಂದರೆ ಅದ್ವೈತ್ ಅವರು ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿ. ತಮ್ಮ ವಿದ್ಯಾಭ್ಯಾಸವನ್ನು ಇಲ್ಲಿಯೇ ಪೂರ್ಣಗೊಳಿಸಿ, ಇಂದು ಅದೇ ಕಾಲೇಜಿಗೆ ಉಪನ್ಯಾಸಕರಾಗಿ ಮರಳಿದ್ದಾರೆ. ಇವರ ಅನುಭವದಿಂದ ನೀವು ಸಾಕಷ್ಟು ಕಲಿಯುವ ಅವಕಾಶವಿದೆ. ಎಲ್ಲರೂ ಇವರಿಗೆ ಸಹಕರಿಸುತ್ತೀರಿ ಎಂದು ಭಾವಿಸುತ್ತೇನೆ.”
ಪ್ರಿನ್ಸಿಪಾಲ್ ಹೇಳಿದ ಮಾತುಗಳು ಕೇಳಿ ಮೂರು ಜನ ಗಾಬರಿಯಿಂದ ಅವನನ್ನೇ ನೋಡುತ್ತಿದ್ದರು.
‘ಏನಿದು? ಇವನು ನಮ್ಮ ಲೆಕ್ಚರರಾ? ಅದೂ ಕೆಮಿಸ್ಟ್ರಿ ಲೆಕ್ಚರರ್! ಅಯ್ಯೋ ದೇವರೇ… ನಾನೇನು ತಪ್ಪು ಮಾಡಿದ್ದೆ?’ ಎಂದು ಮನಸ್ಸಿನಲ್ಲೇ ಗೋಳಾಡಿದಳು.
ಅವಳ ಬಾಯಿ ಮಾತ್ರ ಆಶ್ಚರ್ಯದಿಂದ ತೆರೆದೇ ಉಳಿದಿತ್ತು.
ಅದನ್ನು ಗಮನಿಸಿದ ಪ್ರಿಯಾ ಅವಳ ಕೈಗೆ ಮೆಲ್ಲಗೆ ಚಿವುಟಿದಳು.
“ಅಭಿ… ಬಾಯಿ ಮುಚ್ಚು. ನೊಣ ಹೋಗುತ್ತೆ!” ಎಂದು ಪಿಸುಗುಟ್ಟಿದಳು.
ತಕ್ಷಣ ಬಾಯಿ ಮುಚ್ಚಿಕೊಂಡ ಅಭಿಜ್ಞಾ ಪ್ರಿಯಾಳತ್ತ ಕೋಪದಿಂದ ನೋಡಿದಳು.
ಅತ್ತ ಅದ್ವೈತ್ ವಿದ್ಯಾರ್ಥಿಗಳತ್ತ ನೋಡಿ ಸಣ್ಣಗೆ ಮುಗುಳ್ನಕ್ಕ.
“ಗುಡ್ ಮಾರ್ನಿಂಗ್ ಸ್ಟೂಡೆಂಟ್ಸ್!”
“ಗುಡ್ ಮಾರ್ನಿಂಗ್ ಸರ್!” ಎಂದು ಎಲ್ಲರೂ ಒಕ್ಕೊರಲಿನಿಂದ ಉತ್ತರಿಸಿದರು.
ಅದ್ವೈತ್ನ ದೃಷ್ಟಿ ಒಂದು ಕ್ಷಣ ಅಭಿಜ್ಞಾಳ ಮೇಲೆ ಬಿತ್ತು. ಸೂಪರ್ ಮಾರ್ಕೆಟ್ನಲ್ಲಿ ಸಿಕ್ಕಿದ್ದ ಅದೇ ಹುಡುಗಿ, ಈಗ ತನ್ನ ತರಗತಿಯಲ್ಲಿ ವಿದ್ಯಾರ್ಥಿನಿಯಾಗಿ ಕುಳಿತಿದ್ದಳು.
ಅವನ ತುಟಿಗಳಲ್ಲಿ ತುಂಟ ನಗೆ ಮೂಡಿತು.
‘ಓಹೋ! ಹಾಗಾದರೆ ಇವಳು ನನ್ನ ಸ್ಟೂಡೆಂಟ್. ಇನ್ನು ಮುಂದೆ ಭೇಟಿಯಾಗೋಕೆ ಸೂಪರ್ ಮಾರ್ಕೆಟ್ಗೆ ಹೋಗಬೇಕಾದ ಅಗತ್ಯವೇ ಇಲ್ಲ!’ ಎಂದು ಮನಸ್ಸಿನಲ್ಲೇ ಅಂದುಕೊಂಡ.
ಅಭಿಜ್ಞಾ ಮಾತ್ರ ಅವನ ನಗುವನ್ನು ನೋಡಿ ಮತ್ತಷ್ಟು ಕಿರಿಕಿರಿಗೊಂಡಳು.
‘ಸಿಕ್ಕಾಪಟ್ಟೆ ನಗ್ತಿದ್ದಾನೆ. ಇನ್ನು ನನ್ನ ಕಾಲೇಜು ಜೀವನ ದೇವರಿಗೇ ಪ್ರೀತಿ!’ ಎಂದುಕೊಂಡು ತಲೆ ಮೇಲೆ ಕೈ ಇಟ್ಟುಕೊಂಡಳು.
ಚಂದನ ಮತ್ತು ಪ್ರಿಯಾ ಇಬ್ಬರೂ ಅಭಿಜ್ಞಾಳತ್ತ ತಿರುಗಿ ನೋಡಿದರು.
“ಅಭಿ, ನಿನಗೆ ಬೇರೆ ಯಾರೂ ಸಿಗಲಿಲ್ವಾ ಜಗಳ ಆಡೋಕೆ? ಇಡೀ ಕಾಲೇಜಿನಲ್ಲಿ ಅವನೇ ಸಿಗಬೇಕಿತ್ತಾ?” ಎಂದು ಚಂದನ ಮೆಲ್ಲಗೆ ಕೇಳಿದಳು.
ಅಭಿಜ್ಞಾ ಇನ್ನೂ ಅದ್ವೈತನನ್ನೇ ನೋಡುತ್ತಾ,
“ಅಯ್ಯೋ! ಇವನು ನಮ್ಮ ಲೆಕ್ಚರರ್ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ ಕಣೆ. ಈಗ ಏನು ಮಾಡೋದು? ಮೊದಲೇ ಕೆಮಿಸ್ಟ್ರಿಗೂ ನಮಗೂ ಹಾಗಿ ಬರಲ್ಲ. ಅದರಲ್ಲೂ ಇವನು ಬೇರೆ ನಮ್ಮ ಲೆಕ್ಚರರ್ ಆಗಿದ್ದಾನೆ. ಎಲ್ಲ ನಿನ್ನಿಂದ ಆಗಿದ್ದು ಇನ್ನೂ ನಮಗೂ ಸೇರಿ ಕಾಟ ಕೊಡ್ತಾನೆ” ಎಂದು ಪ್ರಿಯಾ ಪೇಚಾಡಿದಳು.
“ಹೇಯ್! ನಾನೇನು ಬೇಕು ಅಂತ ಜಗಳ ಆಡಿದ್ದೀನಾ? ಮೊದಲು ಅವನೇ ಬಂದು ನನ್ನ ಜೊತೆ ಜಗಳ ಶುರು ಮಾಡಿದ್ದು” ಎಂದು ಅಭಿಜ್ಞಾ ಸಮರ್ಥಿಸಿಕೊಂಡಳು.
“ಆಯ್ತು ಬಿಡು. ಆದರೆ ಬೆಳಗ್ಗೆ ಅವನಿಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಈಗ ಅದನ್ನೆಲ್ಲ ನೆನಪಿಟ್ಟುಕೊಂಡು ಕ್ಲಾಸ್ನಲ್ಲಿ ನಮ್ಮನ್ನು ಸುಮ್ಮನೆ ಬಿಡ್ತಾನಾ?” ಎಂದು ಪ್ರಿಯಾ ಆತಂಕದಿಂದ ಕೇಳಿದಳು.
“ಅಯ್ಯೋ, ನೀವಿಬ್ಬರೂ ಯಾಕೆ ಇಷ್ಟು ಹೆದರಿಕೊಳ್ತೀರಾ? ಕ್ಲಾಸ್ನಲ್ಲಿ ಅವನು ಲೆಕ್ಚರರ್, ನಾವು ಸ್ಟೂಡೆಂಟ್ಸ್. ಅಷ್ಟೇ. ಬೆಳಗ್ಗೆ ನಡೆದಿದ್ದನ್ನೆಲ್ಲ ಕ್ಲಾಸ್ಗೆ ತರಬಾರದು” ಎಂದಳು ಅಭಿಜ್ಞಾ.
ನೀನು ತರಬೇಡ ಅವನೇ ತರ್ತಾನೆ. ಅಯ್ಯೋ ಅವನು ಅಲ್ಲ ಅವರು, ಅವರು… ಎರಡು ಬಾರಿ ಹೇಳಿಕೊಂಡಳು “ನೀನು ಹೇಳೋದು ಸುಲಭ ಕಣೆ. ಆದರೆ ಅವನು ನಿನ್ನನ್ನು ನೋಡಿದಾಗಲೇ ನಗ್ತಿದ್ದಾನೆ ನೋಡು!” ಎಂದು ಚಂದನ ಮೆಲ್ಲಗೆ ಹೇಳಿದಳು.
ಅಭಿಜ್ಞಾ ತಕ್ಷಣ ಅದ್ವೈತ್ನತ್ತ ನೋಡಿದಳು. ಅವನು ಈಗಾಗಲೇ ಬೋರ್ಡ್ ಕಡೆ ತಿರುಗಿದ್ದ.
“ನಗಲಿ ಬಿಡಿ. ನಾನೇನು ಹೆದರುತ್ತೀನಾ?” ಎಂದು ಧೈರ್ಯ ತೋರಿಸಿದರೂ ಮನಸ್ಸಿನೊಳಗೆ ಮಾತ್ರ ಹೊಸ ಲೆಕ್ಚರರ್ನ ಕಾಟ ಹೇಗಿರುತ್ತೋ. ದೇವರೇ ಭೂಮಿ ತಿರುಗಿಸುವಾಗ ನನ್ನ ಇಷ್ಟವಾದವರನ್ನಾದರು ತಂದು ನನ್ನ ಮುಂದೆ ನಿಲ್ಲಿಸಬಾರದ. ನೀನು ಬರಿ ಹೀಗೆ ಗೋಲ್ ಮಾಲ್ ಮಾಡ್ತೀಯಾ ಎಂದು ತನ್ನಲ್ಲೇ ಗೊಣಗಿಕೊಂಡಳು
ಮುಂದುವರಿಯುವುದು……..
Swipe left/right or tap the sides to turn pages