New Katha Varnika is now on Google Play — read Telugu stories on your phone. Learn more
ಪ್ರೀತಿಯೇ ನಿನ್ನ… – 3

ಪ್ರೀತಿಯೇ ನಿನ್ನ… – 3

ಮರುದಿನ ಬೆಳಗ್ಗೆ…

ಅಭಿಜ್ಞಾ ಕಾಲೇಜಿಗೆ ಹೋಗಲು ತಯಾರಾಗಿ ಅಡುಗೆಮನೆಗೆ ಬಂದಳು. ತಾಯಿ ಭುವನೇಶ್ವರಿ ತಿಂಡಿ ತಯಾರಿಸುತ್ತಿದ್ದರು.

“ಅಮ್ಮಾ… ತಿಂಡಿ ಕೊಡು ಬೇಗ. ಲೇಟ್ ಆಗುತ್ತೆ.”

“ಎಲ್ಲಾ ರೆಡಿಯಾಗಿದೆ. ಸ್ವಲ್ಪ ತಾಳ್ಮೆಯಿಂದ ಇರು.”

“ಅಮ್ಮಾ, ಪ್ಲೀಸ್… ಇವತ್ತು ಫಸ್ಟ್ ಅವರ್ ಇದೆ. ಲೇಟ್ ಆದರೆ ಮತ್ತೆ ಲೆಕ್ಚರರ್ ಬಯ್ಯುತ್ತಾರೆ.”

“ನೀನು ಬೆಳಗ್ಗೆ ಬೇಗ ಏಳಬೇಕು ಅಂದರೆ ಕೇಳಲ್ಲ. ಈಗ ನನ್ನ ತಲೆ ತಿನ್ನುತ್ತಿದ್ದೀಯ.”

“ಅಮ್ಮಾ, ನಿನ್ನ ಮುದ್ದಿನ ಮಗಳ ಅಲ್ವಾ? ಸ್ವಲ್ಪ ಬೇಗ ಕೊಡು.”

ಮಗಳ ಮಾತಿಗೆ ನಗುತ್ತಾ ಭುವನೇಶ್ವರಿ ತಿಂಡಿ ತಟ್ಟೆಯನ್ನು ಅವಳ ಕೈಗಿಟ್ಟರು. 

“ತಗೋ, ಬೇಗ ತಿನ್ನು.

ಬಾಕ್ಸ್ ಕೊಟ್ಟು ಏನೂ ತಿನ್ನದೆ ಇರಬೇಡ.” ಎಂದು ಹೇಳಿದರು.

“ಲವ್ ಯೂ ಅಮ್ಮಾ!” ಎಂದು ತಾಯಿಯ ಕೆನ್ನೆಗೆ ಮುತ್ತಿಟ್ಟು ತಿಂಡಿ ತೆಗೆದುಕೊಂಡು ಹೊರಟಳು.

ಅಭಿಜ್ಞಾ RV ಡಿಗ್ರಿ ಕಾಲೇಜಿನ ನಾಲ್ಕನೇ ಸೆಮಿಸ್ಟರ್ ಬಿ.ಎಸ್ಸಿ ವಿದ್ಯಾರ್ಥಿನಿ. ಕಾಲೇಜಿಗೆ ತಲುಪಿದವಳೇ ತನ್ನ ಗೆಳತಿಯರಾದ ಚಂದನ ಮತ್ತು ಪ್ರಿಯಾಳನ್ನು ಹುಡುಕಿಕೊಂಡು ಹೋದಳು.

ಮೂವರೂ ಕಾಲೇಜಿನ ಕಾರಿಡಾರ್‌ನಲ್ಲಿ ಕುಳಿತು ಮಾತನಾಡುತ್ತಿದ್ದರು.

“ನಿನ್ನೆ ಸೂಪರ್ ಮಾರ್ಕೆಟ್‌ನಲ್ಲಿ ಒಬ್ಬ ಮೆಂಟಲ್ ಸಿಕ್ಕಿದ್ದ. ಕೈಯಲ್ಲಿ ಚಾಕೊಲೇಟ್ ಹಿಡಿದುಕೊಂಡು ತನ್ನನ್ನು ತಾನು ಚಾಕೊಲೇಟ್ ಹೀರೋ ಅಂದುಕೊಂಡಿದ್ದ   ಈನಿಸುತ್ತೆ ಅಷ್ಟೊಂದು ಬಿಲ್ಡಪ್ ಬೇರೆ! ಮೆಂಟಲ್ ಎಲ್ಲೋ!” ಎಂದು ಅಭಿಜ್ಞಾ ನಿನ್ನೆಯ ಘಟನೆಯನ್ನು ನೆನಪಿಸಿಕೊಂಡು ಹೇಳುತ್ತಿದ್ದಳು.

“ಅಷ್ಟಕ್ಕೂ ಅವನು ನೋಡೋಕೆ ಹೇಗಿದ್ದ ಕಣೆ?” ಎಂದು ಪ್ರಿಯಾ ಕುತೂಹಲದಿಂದ ಕೇಳಿದಳು.

“ನೋಡೋಕೆ ಹೇಗಿದ್ದರೇನು? ಬಾಯಲ್ಲಿ ಮಾತ್ರ ಮಾತು ಜಾಸ್ತಿ. ಅಂಥವರನ್ನೆಲ್ಲ ದೂರದಿಂದಲೇ ಇಡಬೇಕು.”

ಹೀಗೆ ಹೇಳುತ್ತಾ ಎದುರಿಗೆ ನೋಡಿದವಳಿಗೆ ಅಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ಕಂಡು ಮಾತೇ ನಿಂತುಹೋಯಿತು.

“ಅಯ್ಯೋ ದೇವರೇ!”

“ಏನಾಯ್ತು ಅಭಿ?” ಚಂದನ ಕೇಳಿದಳು.

“ಭೂಮಿ ತಿರುಗುತ್ತೆ ಅಂತ ಗೊತ್ತಿತ್ತು. ಆದರೆ ಇಷ್ಟು ಫಾಸ್ಟಾಗಿ ತಿರುಗುತ್ತೆ ಅಂತ ಇವತ್ತೇ ಗೊತ್ತಾಗಿದ್ದು ಕಣೆ. ಚಂದು, ಅಲ್ಲಿ ನೋಡು… ನಿನ್ನೆ ನೋಡಿದ ಪಿಶಾಚಿ ಇವತ್ತು ಗವಾಕ್ಷಿಯ ಹಾಗೆ ನನ್ನ ಮುಂದೆ ಬಂದು ನಿಂತಿದೆ!” ಎಂದು ಮೆಲ್ಲಗೆ ಪಿಸುಗುಟ್ಟಿದಳು.

ಅವಳ ನೋಟವನ್ನು ಅನುಸರಿಸಿ ಚಂದನ ಮತ್ತು ಪ್ರಿಯಾ ಇಬ್ಬರೂ ಎದುರಿಗೆ ನೋಡಿದರು.

ಅವನನ್ನು ನೋಡಿದ ಚಂದನ ಕಣ್ಣು ದೊಡ್ಡದು ಮಾಡಿಕೊಂಡು,

“ಹೇ! ಅವನು ನಿಜವಾಗ್ಲೂ ಚಾಕೊಲೇಟ್ ಹೀರೋ ತರಾನೇ ಇದ್ದಾನೆ ಕಣೆ!” ಎಂದಳು.

ಪ್ರಿಯಾ ಕೂಡ ಅವನನ್ನೊಮ್ಮೆ ನೋಡಿ,

“ಹೌದು ಅಭಿ, ನೋಡೋಕೆ ಚೆನ್ನಾಗಿದ್ದಾನೆ. ನೀನು ಹೇಳಿದ ಹಾಗೆ ಅಷ್ಟೇನೂ ಕೆಟ್ಟವನಾಗಿ ಕಾಣ್ತಿಲ್ಲ” ಎಂದು ನಕ್ಕಳು.

“ಹೇ… ಬಾಯಿ ಮುಚ್ಚಿ! ನೀವು ನನ್ನ ಫ್ರೆಂಡ್ಸ್. ನನ್ನ ಎನಿಮಿಯ ಹೊಗಳೋ ಹಾಗಿಲ್ಲ. ಅವನು ಎನಿಮಿ, ಅಷ್ಟೇ!” ಎಂದು ಇಬ್ಬರಿಗೂ ಎಚ್ಚರಿಕೆ ಕೊಟ್ಟಳು.

ಅಷ್ಟರಲ್ಲಿ ಆ ಹುಡುಗ ನೇರವಾಗಿ ಅವರ ಬಳಿಗೆ ಬಂದ.

ಅಭಿಜ್ಞಾಳ ಮುಂದೆ ನಿಂತು ಆಶ್ಚರ್ಯದಿಂದ,

“ನೀನಾ? ನೀನು ಇಲ್ಲೇನು ಮಾಡ್ತಿದ್ದೀಯ?” ಎಂದು ಕೇಳಿದ.

ಅವನನ್ನು ನೋಡಿದ ಅಭಿಜ್ಞಾ ಮುಖದಲ್ಲಿ ಕಿರುನಗೆ ಮೂಡಿಸಿಕೊಂಡು,

“ಆ…..ಕಡ್ಲೆಪುರಿ ಕೊಡ್ತೀನಿ ಅಂದಿದ್ರು, ಅದನ್ನೇ ತೆಗೆದುಕೊಂಡು ಹೋಗೋಕೆ ಬಂದೆ!” ಎಂದಳು.

ಅವಳ ಉತ್ತರ ಕೇಳಿ ಚಂದನ ಮತ್ತು ಪ್ರಿಯಾ ನಗುವುದನ್ನು ತಡೆಯಲು ಬಾಯಿ ಮುಚ್ಚಿಕೊಂಡರು.

ಹುಡುಗ ಅವಳ ಮಾತಿಗೆ ತಲೆ ಅಲ್ಲಾಡಿಸಿ,

“ನಿನ್ನ ಬಾಯಿ ಮಾತ್ರ ಯಾವತ್ತೂ ಸುಮ್ಮನಿರಲ್ಲ ಅಲ್ವಾ?”

“ನಿನ್ನ ಹತ್ತಿರ ಮಾತಾಡಿ ಪ್ರಯೋಜನ ಇಲ್ಲ. ಪ್ರಿನ್ಸಿಪಾಲ್ ಚೆಂಬರ್ ಎಲ್ಲಿ ಬರುತ್ತೆ ಹೇಳು” ಎಂದು ಅಭಿಜ್ಞಾಳನ್ನು ಕೇಳಿದ.

“ಪ್ರಿನ್ಸಿಪಾಲ್ ಚೆಂಬರ್‌ಗೆ ಕಾಲು ಇದಿಯೆನ್ರೆ? ಅದು ನಡೆಯೋದನ್ನ ನಾನಂತೂ ಯಾವತ್ತೂ ನೋಡಿಲ್ಲಪ್ಪ!” ಎಂದು ವ್ಯಂಗ್ಯವಾಗಿ ಹೇಳಿದಳು.

ಅವನು ಒಮ್ಮೆ ಅಭಿಯತ್ತಾ ನೋಡಿ, ತಲೆ ಹಿಡಿದುಕೊಂಡು,

“ಅಮ್ಮಾ ತಾಯಿ… ಅದು ಯಾವ ಕಡೆ ಇದೆ ಅಂತ ಹೇಳು” ಎಂದ.

“ಇರೋ ಕಡೆ ಇದೆ ತಂದೆ!” ಎಂದಳು.

“ಅದೇ ಎಲ್ಲಿ?”

“ಇದೇ ಕಾಲೇಜಲ್ಲಿ!”

ಅವನ ತಾಳ್ಮೆ ನಿಧಾನವಾಗಿ ಕಡಿಮೆಯಾಗತೊಡಗಿತು.

“ನೋಡಿ, ನನ್ನ ತಾಳ್ಮೆ ಪರೀಕ್ಷೆ ಮಾಡದೆ ಪ್ರಿನ್ಸಿಪಾಲ್ ಎಲ್ಲಿ ಸಿಗ್ತಾರೆ ಅಂತ ಹೇಳಿ.”

“ಅಯ್ಯೋ! ನಮ್ಮ ಪ್ರಿನ್ಸಿಪಾಲ್ ಯಾವಾಗ ಕಳೆದುಹೋದರು? ಸಿಗೋದಕ್ಕೆ” ಎಂದು ಅಭಿ ಮತ್ತೆ ಕಾಲೆಳೆದಳು.

“ಹೇಯ್! ಜಾಸ್ತಿ ಸ್ಮಾರ್ಟ್‌ನೆಸ್ ತೋರಿಸದೆ ಅವರ ಚೆಂಬರ್‌ಗೆ ಯಾವ ಕಡೆ ಹೋಗಬೇಕು ಅಂತ ಹೇಳಿ” ಎಂದು ಈ ಬಾರಿ ಗಂಭೀರವಾಗಿ ಕೇಳಿದ.

ಅವನು ಮಾತನಾಡುವ ಧಾಟಿ ಬದಲಾಗಿದ್ದನ್ನು ಗಮನಿಸಿದ ಪ್ರಿಯಾ, ಅಭಿಜ್ಞಾ ಏನಾದರೂ ಹೇಳುವ ಮೊದಲೇ ಎದುರಿನ ಕಟ್ಟಡದತ್ತ ಕೈ ತೋರಿಸಿ,

“ಅಲ್ಲಿ ಕಾಣಿಸುತ್ತಿದೆಯಲ್ಲ, ಅದೇ ಅವರ ಚೆಂಬರ್. ನೀವು ಹೋಗಿ” ಎಂದಳು.

“ಥ್ಯಾಂಕ್ ಯೂ!” ಎಂದು ಪ್ರಿಯಾಗೆ ಹೇಳಿದ ಅವನು, ಹೊರಡುವ ಮುನ್ನ ಅಭಿಜ್ಞಾ ಕಡೆ ತಿರುಗಿ,

“ಅವಳನ್ನು ನೋಡಿ ಸ್ವಲ್ಪವಾದರೂ ಕಲೀರಿ. ನಿಮ್ಮ ಒಳ್ಳೆಯ ಬುದ್ಧಿ ಅವಳಿಗೂ ಸ್ವಲ್ಪ ಕಲಿಸಿ!” ಎಂದು ಹೇಳಿ ಹೊರಟುಹೋದ.

ಅವನು ಹೋದ ದಾರಿಯನ್ನೇ ನೋಡುತ್ತಿದ್ದ ಅಭಿಜ್ಞಾ,

“ಏನೇ ಪ್ರಿಯಾ! ನಿನಗೆ ಅವನಿಗೆ ದಾರಿ ತೋರಿಸೋಕೆ ಬೇರೆ ಕೆಲಸ ಇರಲಿಲ್ಲವಾ?” ಎಂದಳು.

ಪ್ರಿಯಾ ನಗುತ್ತಾ, “ನಾನು ದಾರಿ ತೋರಿಸದೆ ಇದ್ದಿದ್ದರೆ ನಿಮ್ಮ ಡ್ರಾಮಾ ಮುಂದುವರಿತನೆ ಇರುತ್ತಿತ್ತು!” ಎಂದಳು.

ಚಂದನ ಇಬ್ಬರ ಮಾತು ಕೇಳಿ ನಗುತ್ತಿದ್ದರೆ, ಅಭಿಜ್ಞಾ ಮಾತ್ರ ಆ ಹುಡುಗನನ್ನು ಮನಸ್ಸಿನಲ್ಲೇ ಮತ್ತೊಮ್ಮೆ ಬೈದುಕೊಳ್ಳುತ್ತಾ. ಇವನಿಗೆ ಇಲ್ಲೇನು ಕೆಲಸ ಓದೊದಕ್ಕೆ ಬಂದಿದ್ದಾನ… ಅದಕ್ಕೆ ಬಂದಿದ್ದರೆ ಇನ್ನೂ ದಿನ ಈ ಮೂತಿ ನೋಡಬೇಕು. ದೇವರೇ… ಅವನು ಮಾತ್ರ ಇಲ್ಲಿಯ ವಿದ್ಯಾರ್ಥಿ ಆಗಿರಬಾರದು. ತರಗತಿಯತ್ತ ನಡೆದಳು

ಮುಂದುವರೆಯುವುದು……


ಸಂಚಿಕೆ ಹೇಗೆ ಅನ್ನಿಸಿತು ತಿಳಿಸಿ.