New Katha Varnika is now on Google Play — read original stories on your phone. Learn more
ಹಲವು ಜನ್ಮಗಳ ಬಂಧ 💞 – 7

ಹಲವು ಜನ್ಮಗಳ ಬಂಧ 💞 – 7

“ಎಂತಹ ಪರಿಸ್ಥಿತಿಯಲ್ಲಾದರೂ ನಾನು ನಿಮಗೆ ಜೊತೆಯಾಗಿರುತ್ತೇನೆ ಶ್ರೀವರೇ… ನಿಮ್ಮ ಸಂತೋಷಕ್ಕಾಗಿ ಏನನ್ನಾದರೂ ಮಾಡುತ್ತೇನೆ… ನಿಮಗಿಂತ ನಂತರವೇ ನನಗೆ ಬೇರೆ ಯಾರಾದರೂ… ಅದು ನಮ್ಮ ಹುಟ್ಟುವ ಮಕ್ಕಳೇ ಆದರೂ ಸರಿ…” ಎಂದು ಸತ್ಯ ಪ್ರೀತಿಯಿಂದ ಹೇಳುತ್ತಾಳೆ…

 

“ಯಾವುದೇ ಸಂಬಂಧದಲ್ಲಾದರೂ ನಂಬಿಕೆ ಅನ್ನೋದು ಇದ್ದರೆ ಆ ಜೀವನ ಸಂತೋಷವಾಗಿ ಸಾಗುತ್ತದೆ… ಕಷ್ಟದ ಸಮಯದಲ್ಲಿ ನಾನು ನಿಮಗೆ ಜೊತೆಯಾಗಿರುತ್ತೇನೆ… ಈ ಇಡೀ ಜೀವನ ನಿಮಗಾಗಿಯೇ…” ಎಂದು ಅವನ ಕಡೆ ನೋಡುತ್ತಾಳೆ…

 

“ನೀವು ನನಗೆ ‘ನಾನಿದ್ದೇನೆ’ ಎಂದು ಕೊಡುವ ಧೈರ್ಯಕ್ಕಿಂತ ನನಗೆ ಬೇರೆ ಯಾವುದೂ ದೊಡ್ಡದಲ್ಲ… ‘ನಾನಿದ್ದೇನೆ’ ಅನ್ನುವ ಮಾತು ಚಿಕ್ಕದಾಗಿರಬಹುದು… ಆದರೆ ಅದು ಬೆಟ್ಟದಷ್ಟು ಧೈರ್ಯವನ್ನು ಕೊಡುತ್ತದೆ… ನನ್ನ ಕೊನೆಯ ಉಸಿರಿರುವವರೆಗೂ ನಾನು ನಿಮ್ಮ ಜೊತೆಯಲ್ಲೇ ಇರುತ್ತೇನೆ… ಅದು ಕಷ್ಟವಾಗಿರಲಿ, ಇಷ್ಟವಾಗಿರಲಿ…” ಎಂದು ಸತ್ಯ ತನ್ನ ಮನಸ್ಸಿನ ಮಾತನ್ನು ಹೇಳಿಬಿಡುತ್ತಾಳೆ…

 

ಆ ಮಾತುಗಳನ್ನು ಕೇಳಿದ ಅಖಿಲ್ ಅವಳನ್ನು ಬಿಗಿಯಾಗಿ ಅಪ್ಪಿಕೊಂಡು… “ನಿನಗೆ ನಾನಿದ್ದೇನೆ ಅನ್ನುವ ಧೈರ್ಯವೊಂದಿದ್ದರೆ ಸಾಕು ಬಂಗಾರ… ಈ ಇಡೀ ಜಗತ್ತನ್ನೇ ಗೆಲ್ಲುವುದಕ್ಕೂ ನಾನು ಹಿಂದೆ ಮುಂದೆ ನೋಡುವುದಿಲ್ಲ…” ಎಂದು ಹೇಳುತ್ತಾನೆ…

 

“ಹಾಗೆಯೇ ಬಂಗಾರ… ಜೀವನಪೂರ್ತಿ ನಿನಗೆ ನಾನು… ನನಗೆ ನೀನು ಮಾತ್ರ ಜೊತೆಯಾಗಿರೋಣ… ನಮ್ಮ ಜೀವನದಲ್ಲಿ ಎಷ್ಟೇ ಹೊಸ ಸಂಬಂಧಗಳು ಬಂದರೂ… ಗಂಡ ಹೆಂಡತಿಯಾಗಿ ನಾವಿಬ್ಬರೂ ಮಾತ್ರ ಯಾವಾಗಲೂ ಒಬ್ಬರಿಗೊಬ್ಬರು ಜೊತೆಯಾಗಿರಬೇಕು…” ಎಂದು ಅಖಿಲ್ ಪ್ರೀತಿಯಿಂದ ಹೇಳುತ್ತಾನೆ…

 

ಹಾಗೆ ಹೇಳಿ ಅವಳ ಕಿವಿಯ ಹತ್ತಿರ ಹೋಗಿ… “ಇಷ್ಟು ಹೊತ್ತಿನಿಂದ ಪ್ರೀತಿಯ ಮಾತುಗಳಲ್ಲೇ ಟೈಮ್ ಪಾಸ್ ಮಾಡಿದ್ದೇವೆ… ಈಗಲಾದರೂ ನನ್ನ ಬಂಗಾರ ನನ್ನ ಜೊತೆ ಸ್ವಲ್ಪ ಹೊತ್ತು ನೆಮ್ಮದಿಯಾಗಿ ಇರುತ್ತಾಳಾ?” ಎಂದು ತುಂಟತನದಿಂದ ಕೇಳುತ್ತಾನೆ…

 

Premium Premium reading Full story · from ₹69
Sign in to continue