💕ಆಕರ್ಷಿತ💕 – 2
ನದಿ ದಂಡೆಯಲ್ಲಿ ಇಬ್ಬರ ನಡುವೆ ಕೇವಲ ಮೌನ ಆದರೂ ಆ ಮೌನವೇ ಸಾಂತ್ವಾನವಾಗಿ ಇದ್ದಂತೆ ಎನಿಸುತ್ತಿತ್ತು,.
ಮೌನ ಮುರಿದ ಶರಣ್ಯ, ಸಂಗೀತಳ ಎದುರಿಗೆ ಬಂದು ನಿಂತಳು. ಅವಳ ಮಾತಿಗಾಗೆ ಕಾಯುತ್ತಾ ನಿಂತಿದ್ದಳು ಸಂಗೀತ.
ಸಂಗೀತ, ನಾನೀಗ ಒಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದೇನೆ. ಇದರಿಂದ ಹೊರಬರಲು ಅಥವಾ ನಿರ್ಧಾರ ಮಾಡಲು ಖಂಡಿತ ನನಗೆ ನಿನ್ನ ಅವಶ್ಯಕತೆ ಇದೆ. ಮತ್ತು ನಿರ್ಧಾರ ಅದೇನೇ ಆಗಿದ್ದರೂ ಸಹ ಅದನ್ನೇ ನಾನು ಮಾಡುತ್ತೇನೆ. ಅದಕ್ಕೂ ಮೊದಲು ವಿಷಯ ಮತ್ತು ಅದರ ಸೂಕ್ಷ್ಮತೆ ಹೇಳುತ್ತೇನೆ ಇದಕ್ಕೆ ಪರಿಹಾರನ ನಾವು ಇಬ್ಬರು ಹುಡುಕೋಣ ಕಣೆ..
“ನನ್ನ ಒಬ್ಬಳಿಂದ ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ನನಗೆ ನಿನ್ನ ಸಲಹೆ ಖಂಡಿತ ಅವಶ್ಯಕ ಅದಕ್ಕೆ ನಿನಗೆ ಬರಲು ಹೇಳಿದ್ದು”..
“ನಿನಗೆ ಗೊತ್ತಿದೆ ಸಂಗೀತ ನನಗೆ ನನ್ನ ಅಜ್ಜಿ ಬಿಟ್ರೆ ನೀನು, ಇಬ್ಬರೇ ಮುಖ್ಯವಾದವರು.. ಈಗ ಅಜ್ಜಿ ಕೂಡ ನನ್ನ ನಿರ್ಧಾರಕ್ಕೆ ವಿರೋಧವಾಗಿದ್ದಾರೆ, ಈಗ ಕೊನೆಯ ಆಯ್ಕೆ ನೀನೆ. ನಿನ್ನ ನಿರ್ಧಾರ ಸಲಹೆ ನಂತರ ನಾನು ಮುಂದಿನ ನಡೆ ಇಡುತ್ತೇನೆ.” ಎಂದು ಮಾತು ನಿಲ್ಲಿಸಿದವಳು ಗೆಳತಿಯ ಮುಖವನ್ನು ನೋಡಿದಳು ಉತ್ತರಕ್ಕಾಗಿ
“ಹೂಂ.. ಶರೂ ನೀನು ಹೇಳಿದಂತೆ ಆಗಲಿ ಮೊದಲು ಅದೇನು ವಿಷಯ ಹೇಳು ನಂತರ ಯೋಚನೆ ಮಾಡೋಣ.. ನಿನ್ನ ಬಿಸಿನೆಸ್ ಮಾಡುವ ಆಸೆಯ ಬಗ್ಗೆ ಇರಬಹುದು ಆದರೆ ಅದಕ್ಕೆ ಅಜ್ಜಿ ಮೊದಲೇ ಒಪ್ಪಿದ್ದರು,. ಈಗಂತೂ ಅದಲ್ಲ ಎಂದರೆ ಬೇರೆ ಯಾವುದೋ ವಿಷಯ ಇರಬೇಕು ಅದರಲ್ಲೂ ನೀನು ಇಷ್ಟು ಸೀರಿಯಸ್ಸಾಗಿ, ಇಷ್ಟು ಟೆನ್ಶನ್ ಆಗಿ ಇದ್ದೀಯಾ ಅಂದ್ರೆ ಏನು ದೊಡ್ಡದೇ ಇರಬೇಕು ಸರಿ ಅದೇನ್ ಮೊದ್ಲು ಹೇಳು” ಎಂದಳು ಸಂಗೀತ
ಗೆಳತಿಯನ್ನು ನದಿ ದಂಡೆಯ ಪಕ್ಕದಲ್ಲಿನ ಕಲ್ಲು ಹಾಸಿನ ಮೇಲೆ ಕೂರಿಸಿ ತಾನು ಕುಳಿತಳು. ಪಕ್ಕದಲ್ಲಿ ಒಂದು ಪುಟ್ಟ ನೀರಿನ ಬಾಟಲಿ,.. ಅವಳಿಗೆ ಶರಣ್ಯಳ ಬಗ್ಗೆ ಚೆನ್ನಾಗಿಯೇ ಗೊತ್ತಿತ್ತು, ಏನಾದರೂ ತುಂಬಾ ಅಥವಾ ದುಃಖಕರ ವಿಷಯ ಬಂದಾಗ ಹೊರಗಡೆ ಎಲ್ಲರ ಮುಂದೆ ಎಷ್ಟೇ ಗಟ್ಟಿಯಾಗಿ ಇರುವವಳು ಇಂತಹ ಪರಿಸ್ಥಿತಿ ಬಂದಾಗ ಮಾತ್ರ ತುಂಬಾ ವೀಕ್ ಆಗುತ್ತಿದ್ದಳು, ಆಗ ಅವಳನ್ನು ಸಂಭಾಳಿಸಿ ಸಮಾಧಾನಿಸುವುದು ಕಷ್ಟ ಎಂಬುದು ತುಂಬಾ ಅರಿತಿದ್ದಳು ಇಷ್ಟು ವರ್ಷಗಳಲ್ಲಿ..
ಗುಟುಕು ನೀರು ಕುಡಿಯುತ್ತಾ ಸಮಾಧಾನಿಸಿಕೊಂಡ ಶರಣ್ಯ ಎಲ್ಲವನ್ನು ಹೇಳಲು ಶುರು ಮಾಡಿದಳು ಲಕ್ಷ್ಮಿಯಜ್ಜಿ ತನ್ನ ಭಾವ ಕೌಶಿಕ್ನನ್ನು ಮದುವೆಯಾಗಲು ಒತ್ತಾಯಿಸುತ್ತಿರುವುದರ ಬಗ್ಗೆ ಮತ್ತು ಅದರ ಹಿಂದಿನ ಕಾರಣ ಎಲ್ಲವ ಹೇಳಿದಳು, ತುಂಬಾ ಹೊತ್ತಿನ ನಂತರ, ಅವಳ ಮುಂದಿನ ಗುರಿ ಅರ್ಧಕ್ಕೆ ನಿಲ್ಲುವುದು ಮತ್ತು ತಾನು ಇಷ್ಟ ಪಟ್ಟು ಓದಿದ್ದು ವ್ಯರ್ಥವಾಗುವುದು ಎಂಬುದನ್ನು ನೆನೆದು ಅತಿವ ದುಃಖ ತಡೆಯಲಾಗದೆ ಕಣ್ಣೀರಿಡಲು ಶುರುವಾದಳು.. ಅವಳ ಬೆನ್ನನ್ನು ನೆವರಿಸುತ್ತಾ ಕುಡಿಯಲು ನೀರು ಕೊಟ್ಟು ಸಮಾಧಾನ ಮಾಡಿದ ಸಂಗೀತಳಿಗೆ ಅವಳ ಸ್ಥಿತಿ ಸೂಕ್ಷ್ಮತೆ ಎಲ್ಲವೂ ಪೂರ್ತಿಯಾಗಿ ಅರ್ಥವಾಗಿತ್ತು..
ಈಗ ಅದೆಲ್ಲದಕ್ಕೂ ಪರಿಹಾರವನ್ನು ಯೋಚಿಸುತ್ತಾ ಕುಳಿತಳು.. ಅಲ್ಲಿನ ಪ್ರಕೃತಿ, ನದಿ ದಂಡೆ, ಮತ್ತು ಪಕ್ಷಿ, ಕೋಗಿಲೆಗಳು ಎಲ್ಲವೂ ಸಾಂತ್ವಾನ ನೀಡುವಂತೆ ಭಾಸವಾಗುತ್ತಿತ್ತು..
ತಣ್ಣನೆಯ ತಂಗಾಳಿ ಶರಣ್ಯಳ ಕಣ್ಣೀರನ್ನು ಒರಿಸುತ್ತಿತ್ತು. ಮುಳುಗುತ್ತಿದ್ದ ಸಂಜೆಯ ಸೂರ್ಯ ಇದು ಕೊನೆಯಲ್ಲ ನಾನು ಮತ್ತೆ ಬರುತ್ತೇನೆ, ಬರುತ್ತಿರುತ್ತೇನೆ ಹಾಗೆಯೇ ಜೀವನ ಕೂಡ ಎಂದು ಧೈರ್ಯ ತುಂಬುತ್ತಿತ್ತು…
“ಸಮಾಧಾನ ಮಾಡ್ಕೋ ಶರು, ಮದುವೆಯಾದ ತಕ್ಷಣ ನಿನ್ನ ಕನಸು ಮುಗೀತು ಅಂತಲ್ಲ,. ಆ ಸಂಗಾತಿ ಸಾತು ಕೊಟ್ಟರೆ ನೀನು ಕೂಡ ನಿನ್ನ ಕನಸು ಗುರಿಗಾಗಿ ಕೆಲಸ ಮಾಡಬಹುದು, ಧೈರ್ಯ ಕಳೆದುಕೊಳ್ಳಬೇಡ ನಾನು ನಿನ್ನ ಜೊತೆಗೆ ಇದ್ದೀನಿ.. ಹಾಗಂತ ಈ ಮದುವೆಯಾಗು ಅಂತ ನಾನು (ಫೋರ್ಸ್) ಒತ್ತಾಯ ಮಾಡ್ತಿಲ್ಲ. ಏನಾಗುತ್ತೋ ನೋಡೋಣ, ನೀನ್ ಸ್ವಲ್ಪ ಸಮಯ ತಗೊಂಡು ಯೋಚನೆ ಮಾಡು. ಮದುವೆ ಇದು, ಜೀವನ ತಕ್ಷಣಕ್ಕೆ ನಿರ್ಧಾರ ಮಾಡುವುದು ಅಲ್ಲ.. ಆರಾಮಾಗಿ ಬೇಕಾದಷ್ಟು ಟೈಮ್ ತಗೊಂಡು ನಿಧಾನವಾಗಿ ಯೋಚನೆ ಮಾಡು. ಮತ್ತು ನಿನ್ನ ನಿರ್ಧಾರ ಏನೇ ಆಗಿದ್ರು ಸಹ ಅಜ್ಜಿಗೆ ನಾನು ಒಪ್ಪಿಸ್ತೀನಿ ಅದರ ವರಿ ನೀನ್ ಮಾಡ್ಕೋಬೇಡ”…
“ಸುಮ್ಮನೆ ಗೆಳತಿ ಅಂತ ಇಲ್ಲ, ನಿನ್ನ ಕಷ್ಟ ಸುಖದಲ್ಲಿ ನಾನು ಭಾಗಿ ಆಗ್ತೀನಿ ಅಂತ ಮಾತು ಕೊಟ್ಟಿದೀನಿ, ಅದನ್ನ ನಾನು ಉಳಿಸಿಕೊಳ್ಳುತ್ತೇನೆ ನಿನ್ನ ನಿರ್ಧಾರಕ್ಕೆ ನನ್ನ ಒಪ್ಪಿಗೆ ಸದಾ ಇರುತ್ತೆ,. ಹಾಗಂತ ಅರ್ಜೆಂಟಾಗಿ ತೆಗೆದುಕೊಳ್ಳು ನಿರ್ಧಾರಕ ಅಲ್ಲ” ಎಂದಳು ಸಂಗೀತ…
“ಥ್ಯಾಂಕ್ಸ್ ಕಣೆ ನನಗೆ ಇಷ್ಟು ಧೈರ್ಯ ಸಾಕು, ಮುಂದೇನ್ ಮಾಡಬೇಕು ಅಂತ ಖಂಡಿತವಾಗಿ ನಿಧಾನವಾಗಿ ಯೋಚಿಸುತ್ತೇನೆ” ಎಂದು ಗೆಳತಿಗೆ ಧನ್ಯವಾದ ತಿಳಿಸಿದಳು ಶರಣ್ಯ..
“ಸರಿ ಈಗ ಸ್ವಲ್ಪ ರಿಲ್ಯಾಕ್ಸ್ ಆಗೋಣ. ಅಜಯ್ನ ಬರೋದಕ್ಕೆ ಹೇಳ್ತೀನಿ ಎಲ್ಲಾದರೂ ದೂರ ಹೋಗಿ ಬರೋಣ ನಿನಗೂ ರಿಲ್ಯಾಕ್ಸ್ ಆಗುತ್ತೆ, ಯೋಚನೆ ಮಾಡೋದಕ್ಕೆ ಟೈಮ್ ಸಿಗುತ್ತೆ. ನಾನು ಅವನ ಜೊತೆ ಈಗಲೇ ಕಾಲ್ ಮಾಡಿ ಮಾತಾಡ್ತೀನಿ. ಮನೆಗೆ ಹೋಗಿ ಬೇಗ ತಯಾರಾಗಿ ಲಗೇಜ್ ಪ್ಯಾಕ್ ಮಾಡಿಕೊಂಡು ಬಾ” ಎಂದಳು ಸಂಗೀತ
“ಸರಿ ಬಾ ನಿನ್ನ ಡ್ರಾಪ್ ಮಾಡಿ ನಾನು ಹೋಗ್ತೀನಂತೆ. ಅವನಿಗೆ ಡೈರೆಕ್ಟ್ ನಿನ್ನ ಕರೆದುಕೊಂಡು ನಂತರ ಅಲ್ಲಿಗೂ ಬರೋದಕ್ಕೆ ಹೇಳ್ಬಿಡು”
ಸಂಗೀತಳನ್ನು ಡ್ರಾಪ್ ಮಾಡಿದ ಶರಣ್ಯ ಮನೆಯಲ್ಲಿ ಬಂದು ತಯಾರಾದಳು. ಬ್ಯಾಗಿಡಿದು ನಿಂತಿದ್ದ ಶರಣ್ಯಳನ್ನು ನೋಡಿದ ಸರಸ್ವತಿ ಅವರು ಗಾಬರಿಯಾದರು..
“ಎಲ್ಲಿಗೆ ಹೋಗುತ್ತಿದ್ದೀಯಾ ಕುಸೆ ಅದು ಬ್ಯಾಗ ಎತ್ಕೊಂಡು” ಎಂದು ಆತಂಕದಿಂದ ಕೇಳಿದರು
“ಏನಿಲ್ಲ ಅಂಜಿ ಒಂದು ಸಣ್ಣ ಟ್ರಿಪ್ ಅಷ್ಟೇ, ಅಜಯ್ ಮತ್ತು ಸಂಗೀತ ಬರ್ತಿದ್ದಾರೆ. ನೀವೇನ್ ವರಿ ಆಗ್ಬೇಡಿ ಹೋಗ್ಬಿಟ್ ಬರ್ತೀನಿ”…
ಮನಸಲ್ಲೇ ಸಮಾಧಾನಗೊಂಡ ಸರಸ್ವತಿ ಹೊರಗಡೆ ಗತ್ತಾಗಿ ದ್ವನಿ ಬದಲಿಸುತ್ತಾ ” ಹೂ ಮತ್ತೆ ನಾನು ಹೇಳಿದ್ದು ಮದುವೆ ಬಗ್ಗೆ ಏನು ಯೋಚನೆ ಮಾಡಿದೆ!?”..
“ಅದನ್ನು ಟ್ರಿಪ್ ಇಂದ ಬಂದ ಮೇಲೆ ನಾನು ನನ್ನ ನಿರ್ಧಾರ ಹೇಳ್ತೀನಿ”
“ಮನೆ ಕಡೆ ಹುಷಾರು ಟೈಮಿಗೆ ಸರಿಯಾಗಿ ಊಟ ಮಾಡಿ, ಏನಾದ್ರು ಇದ್ರೆ ಕಾಲ್ ಮಾಡಿ”. ಎಂದು ಹೇಳಿ ಆ ಸಮಯಕ್ಕೆ ಸಂಗೀತ ಅಜಯ್ ಬಂದಿದ್ದರಿಂದ ಕಾರನ್ನೇರಿ ಹೊರಟರು…
ಮುಂದುವರೆಯುತ್ತದೆ…
ಧನ್ಯವಾದಗಳು….
ಅನಿಸಿಕೆ ಅಭಿಪ್ರಾಯ ಹಂಚಿಕೊಳ್ಳಿ
✍️ಆಕರ್ಷಿತ❤️………
Swipe left/right or tap the sides to turn pages