💕ಆಕರ್ಷಿತ💕 – 1
“ಹೋಗಜ್ಜಿ ಆ ಹಳ್ಳಿಗುಗ್ಗುನಾ ನಾನು ಮದುವೆ ಆಗ್ಬೇಕಾ? ಅದೆಲ್ಲ ಆಗಲ್ಲ ನನ್ನ ಮದುವೆನೇ ಆಗದೆ ಇದ್ರೂ ಪರವಾಗಿಲ್ಲ ಇವನನ್ನ ಮಾತ್ರ ಆಗಲ್ಲ… ನೋಡಿ ಅಜ್ಜಿ ಇದೇ ನನ್ನ ಕೊನೆ ನಿರ್ಧಾರ, ನಿನ್ನ ಮಗಳ ಮಗ ಅನ್ನೋ ಕಾರಣಕ್ಕೆ ಗಂಟು ಆಗೋದಕ್ಕೆ ಇದು ಆಗಿನ ಕಾಲ ಅಲ್ಲ”….
“ನಾನು ಓದಿಕೊಂಡಿರುವಳು ಅಜ್ಜಿ ಹಳ್ಳಿಯಲ್ಲಿ ಅದರಲ್ಲೂ ಅವನ್ ಜೊತೆ ಹೇಗೆ ಜೀವನ ಮಾಡ್ಲಿ? ನಾನಂತೂ ಆಗಲ್ಲ ನನಗೆ ತೊಂದರೆ ಕೊಡಬೇಡಿ ನಾನಿನ್ನೂ ಹೈಯರ್ ಸ್ಟಡೀಸ್ ಮಾಡಿ ಏನಾದರೂ ಬಿಸಿನೆಸ್ ಮಾಡಬೇಕು” ಎಂದು ಅಜ್ಜಿಯೊಂದಿಗೆ ವಾದ ಮಾಡಿ ಹೊರ ನಡೆದಳು ಶರಣ್ಯ…
“ಆಗಲ್ಲಮ್ಮ ಅವನ ಮದುವೆ ಆದ್ರೆ ನೀನು ತುಂಬಾ ಚೆನ್ನಾಗಿರ್ತ್ಯಾ ನಿಮ್ ಭವಿಷ್ಯ ಯೋಚನೆ ಮಾಡಿನೇ ನಾನು ಈ ನಿರ್ಧಾರಕ್ಕೆ ಬಂದಿರೋದು ನೀನು ಆಗಲೇ ಸಾಕಷ್ಟು ಓದಿದ್ಯಾ ಮಗಳೇ ಇನ್ನು ನನಗೂ ವಯಸ್ಸಾಯ್ತು. ನಾನು ಸಾಯೋದ್ರೊಳಗ ನಿನ್ ಜೀವನ ಒಂದು ದಡಕ್ಕೆ ಸೇರಿಸಬೇಕು ಅನ್ನೋದೇ ನನ್ನ ಆಲೋಚನೆ”
“ಅಲ್ಲ ಅವನಿಗೆ ಏನು ಕಮ್ಮಿ ಆಗಿದೆ ಅಂತ ಬೇಡ ಅಂತಿದ್ಯಾ? ಹಳ್ಳಿಯಲ್ಲಿದ್ದಾನೆ ಅಷ್ಟೇ ಆದರೆ ಅವನು ಚೆಂದಾಗೆ ಓದ್ಕೊಂಡಿದ್ದಾನೆ”
ಲಕ್ಷ್ಮಿ ಅವರ ಮಾತನ್ನು ಕೇಳಿಸಿಕೊಳ್ಳಲು ಶರಣ್ಯ ತನ್ನ ಸ್ಕೂಟಿಯನ್ನು ಏರಿ ಹೊರಟು ಹೋದಳು….
ಲಕ್ಷ್ಮಿ ಅವರು ಸಪ್ಪೆ ಮೊರೆ ಹಾಕಿಕೊಂಡು ಸುಮ್ಮನಾದರು. ಆದರೆ ಅವರು ಪಟ್ಟುಬಿಡುವಂತೆ ಕಾಣಲಿಲ್ಲ ಈ ಮದುವೆ ಮಾಡಿಯೇ ತೀರಬೇಕು ಎಂದು ನಿರ್ಧರಿಸಿಯಾಗಿತ್ತು…
ಮಗ ಮತ್ತು ಮಗಳ ಆಸೆ ಒಂದೇ ಆಗಿತ್ತು, ಅದು ಶರಣ್ಯ ಕೌಶಿಕ್ ಮದುವೆ…. ಅದು ಇವರ ಕನಸು ಕೂಡ ಆಗಿತ್ತು…
ಇವರೆಲ್ಲರ ಆಸೆ ಕನಸಿಗೋಸ್ಕರ ಶರಣ್ಯ ಕೌಶಿಕ್ ತಮ್ಮ ಕನಸು ಗುರಿಯನ್ನು ಬಿಟ್ಟು ಇವರೆಲ್ಲರ ಹಠಕ್ಕೆ ಮಣಿಯುತ್ತಾರ ಕಾದು ನೋಡಬೇಕಾಗಿದೆ….
ಶರಣ್ಯ , ಸೀದಾಸಾದ ಹುಡುಗಿ ಆದ್ರೂ ಸ್ವಲ್ಪ ಮಾಡ್ರನ್ ಜೊತೆಗೆ ಸಿಟಿಗೆ ಹೊಂದಿಕೊಂಡ ಪ್ರಭಾವ ಗೆಳೆಯರ ಸಹವಾಸ ಎಲ್ಲ ಆಕೆಯನ್ನು ಸ್ವಲ್ಪಮಟ್ಟಿಗೆ ಜಂಬದ ಹುಡುಗಿ ಹಠಮಾರಿ ಸ್ಟೈಲಿಶ್ ಎನಿಸುವಂತೆ ಮಾಡಿತ್ತು.. ಆದರೆ ಅದೆಲ್ಲ ಹೊರಗಿನ ನೋಟಕ್ಕೆ ಮಾತ್ರ ಮನಸ್ಸು ಶುದ್ದ ಹಾಲಿನಂತೆ ಗುಣ ತುಂಬಾ ಕರುಣಾಮಯಿ ಅವಳನ್ನು ತುಂಬಾ ಹತ್ತಿರದಿಂದ ನೋಡಿ ಅರ್ಥ ಮಾಡಿಕೊಂಡವರಿಗೆ ಮಾತ್ರ ಇವೆಲ್ಲ ಗೊತ್ತಾಗುವುದು…
ಓದಿನಲ್ಲಿ ಯಾವಾಗಲೂ ರಾಂಕ್ ಸ್ಟೂಡೆಂಟ್.. ಪ್ರತಿವರ್ಷ ಎಲ್ಲಿಯೂ ಕೂಡ ತನ್ನ ಸ್ಥಾನದ ರಾಂಕ್ ಅನ್ನು ಯಾರಿಗೂ ಬಿಟ್ಟುಕೊಟ್ಟವಳಲ್ಲ..
ಮನೆಯಲ್ಲಿ ಅಜ್ಜಿ ಹೇಳಿದ ಮದುವೆ ಮಾತುಗಳು ಶರಣ್ಯ ಕಿವಿಯಲ್ಲಿ ಗುಯ್ ಗುಡುತ್ತಿದ್ದವು. ಪಾರ್ಕ್ ನಲ್ಲಿ ಒಂಟಿಯಾಗಿ ಕುಳಿತ ಆಕೆಯ ಮನಸ್ಸು ಎರಡು ದೋಣಿಯಲ್ಲಿ ತೊಯ್ಯುತ್ತಿತ್ತು…
ಈ ಮದುವೆ ಅದರಲ್ಲೂ ಅತ್ತೆಯ ಮಗ ಕೌಶಿಕ್ನನ್ನು ನಿರಾಕರಿಸಲು ಯಾವುದೇ ಕಾರಣಗಳಿರಲಿಲ್ಲ ಹಾಗಂತ ಮದುವೆಯಾಗಿ ಸಂಸಾರ ತೂಗಿಸುವ ಸ್ಥಿತಿಯಲ್ಲಿ ಕೂಡ ಅವಳಿರಲಿಲ್ಲ…
ಇನ್ನು ಅಜ್ಜಿಯ ನಿರ್ಧಾರಕ್ಕೆ ಅವರು ಒಮ್ಮೆ ನಿರ್ಧರಿಸಿದರೆ ಮುಗೀತು ಅದನ್ನು ಕೈ ಬಿಡುವುದಿಲ್ಲ ಆ ಕಾರ್ಯ ನೆರವೇರಿಸಿಯೇ ತಿರುತ್ತಾರೆ ಅಂತಹ ಹಠ ಅವರದು ಎಂಬುದು ಇವಳಿಗೂ ಗೊತ್ತಿತ್ತು ಹಾಗಾಗಿ ಚಿಂತೆಯಲ್ಲಿ ಮುಳುಗಿದ್ದಳು…..
ತುಂಬಾ ಯೋಚಿಸಿ ನಂತರ ಒಂದು ನಿರ್ಧಾರಕ್ಕೆ ಬಂದಿದ್ದಳು. ಕಲ್ಲಿನ ಹಾಸಿನ ಮೇಲಿಂದ ಎದ್ದು ನಿಂತವಳ ಮುಖದಲ್ಲಿ ಒಂದು ಗಟ್ಟಿ ನಿರ್ಧಾರ ಮೂಡಿತ್ತು,, ತನ್ನ ಸ್ಕೂಟಿ ಏರಿ ಕುಳಿತು ಹೊರಟವಳ ನೀಳಕೂದಲು ಗಾಳಿಯಲ್ಲಿ ಹಾರುತ್ತಿದ್ದರೆ, ಅವಳ ತಲೆಯಲ್ಲಿ ಹಳೆಯ ನೆನಪುಗಳು ದಾಳಿಯಾಗುತ್ತಿತ್ತು…..
ಅವಳ ಕಾಲೇಜು ದಿನಗಳ ಜೀವನದ ನೆನಪು ಓದು, ತನ್ನ ಕನಸು… ಒಳ್ಳೆಯ ಮಾರ್ಕ್ಸ್ ಇದ್ದರು ಸಹ ಸೈನ್ಸ್(science) ಓದದೆ ಮನೆಯಲ್ಲಿ ಹಠ ಮಾಡಿ ಕಾಮರ್ಸ್(commerce) ತೆಗೆದುಕೊಂಡಿದ್ದು, ಏನಾದರೂ ಬಿಸಿನೆಸ್ ಮಾಡಬೇಕು, ಅದರ ಬಗ್ಗೆ ಎಲ್ಲವನ್ನು ತಿಳಿಯಬೇಕು ಎಂದು ನಿರ್ಧರಿಸಿದ್ದು,… ಆದರೆ ಇಂದು ಆ ಕನಸುಗಳು ನುಚ್ಚುನೂರಾಗುವ ಸೂಚನೆ ಅವಳ ಕಣ್ಣಲ್ಲಿ ಭಯ ಹುಟ್ಟಿಸಿತ್ತು…
ಆದರೆ ಮರುಕ್ಷಣವೇ ಆ ಭಯವನ್ನು ಅಡಗಿಸಿ ಮುನ್ನಡೆಸಿದಳು…
ಪರ್ಸ್ ನಲ್ಲಿನ ಮೊಬೈಲ್ ತೆಗೆದು, ಒಂದು ಸಂದೇಶ ಕಳುಹಿಸಿ ಗಾಡಿಯ ಸ್ಪೀಡ್ ಹೆಚ್ಚಿಸಿದಳು. ಈ ಬಾರಿ ಮನೆ ಕಡೆ ಹೋಗದ ಶರಣ್ಯ ಸಂಗೀತಾಳ ಮನೆಯ ಹತ್ತಿರ ಅವಳನ್ನು ಪಿಕ್ ಮಾಡಿಕೊಂಡು ಊರಾಚೆಯ ನದಿ ದಂಡೆಯ ಕಡೆ ಹೊರಟಳು…
ಸಂಗೀತ, ಶರಣ್ಯಳ ಬಾಲ್ಯ ಸ್ನೇಹಿತೆ. ಇಬ್ಬರು ಒಟ್ಟಿಗೆ ಓದಿದ್ದು ಬೆಳೆದಿದ್ದೆಲ್ಲ.. ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಅವರು ಬೇರೆ ಕಡೆ ಶಿಫ್ಟ್ ಆಗಿದ್ದರು, ಸ್ವಲ್ಪ ದೂರವಾದರೂ ಸಹ ಇಬ್ಬರ ಗೆಳೆತನ ಹಾಗೆ ಇತ್ತು….
ಶರಣ್ಯಳಿಗೆ ಆಪ್ತ ಗೆಳತಿ ಎಂದರೆ ಅವಳೊಬ್ಬಳೇ, ಸುಖ-ದುಃಖ ಹಂಚಿಕೊಳ್ಳಲು ಇದ್ದವಳು ಸಹ ಅವಳು ಒಬ್ಬಳೆ, ಅವಳಿಗೂ ಅಷ್ಟೇ ಶರಣ್ಯ ಆಪ್ತ ಗೆಳತಿ ಸ್ನೇಹಿತೆ ಅಕ್ಕ ತಂಗಿ ಎಲ್ಲವೂ…
ಶರಣ್ಯ ತಾಯಿ ಇಲ್ಲದವಳು ಅವಳಿಗೆ ಸ್ವಂತ ಎಂದು ಅಜ್ಜಿಯನ್ನು ಬಿಟ್ಟರೆ ಕೊನೆಯದಾಗಿ ಸಂಗೀತ, ತನ್ನ ತಾಯಿಯ ರೀತಿಯಲ್ಲಿ ಎಲ್ಲಾ ನೋವುಗಳನ್ನು ಅವಳೊಂದಿಗೆ ಹಂಚಿಕೊಳ್ಳುತ್ತಿದ್ದಳು ಮನಸ್ಸು ಹಗುರ ಮಾಡಿಕೊಳ್ಳುವುದು ಸಹ..
ಯಾವುದೇ ಸಮಸ್ಯೆ ಬಂದರೂ ಇಬ್ಬರೂ ಒಟ್ಟಿಗೆ ಪರಿಹರಿಸುತ್ತಿದ್ದರು. ತುಂಬಾ ಗಟ್ಟಿಯಾದ ಸ್ನೇಹವೆಂದರೆ ಸುಳ್ಳಾಗದು.. ಇವರ ಜೊತೆಗೆ ಇನ್ನೊಂದು ಇದೆ ಬಾಯ್ ಪಿಸ್ (legend)..
ಇಬ್ಬರಿಗೂ ಗೆಳೆಯನಾದರೂ, ತಂದೆ ಅಣ್ಣ ತಮ್ಮನ ಸ್ಥಾನವನ್ನು ತುಂಬಿದ್ದನು ಎಂದರೆ ಸುಳ್ಳಾಗದು..
ಡಿಗ್ರಿ ನಲ್ಲಿ ಇರುವಾಗ ಆತ ತನ್ನ ಮಾತು ನಡವಳಿಕೆ ಗುಣಗಳಿಂದ ಈ ಇಬ್ಬರ ಸ್ನೇಹ ಸಂಪಾದಿಸಿದ್ದ.
ಕೆಲವು ವಿಷಯಗಳಲ್ಲಿ ಹಾಗೂ ಟ್ರಿಪ್ಗಳಲ್ಲಿ ಮಾತ್ರ ಭಾಗಿಯಾಗುತ್ತಿದ್ದ,. ತೀರಾ ಪರ್ಸನಲ್ ಎಂದು ಬಂದಾಗ ಮಾತ್ರ ಸ್ವಲ್ಪ ಯೋಚಿಸಿ ಆಗೊಮ್ಮೆ ಈಗೊಮ್ಮೆ ಎಲ್ಲರೂ ಒಟ್ಟಿಗೆ ಡಿಸೈಡ್, ಡಿಸ್ಕಸ್ ಮಾಡುತ್ತಿದ್ದರು…
ಈಗಲೂ ಶರಣ್ಯಗೆ ಅವನನ್ನು ಕರೆಯುವ ಯೋಚನೆ ಇರಲಿಲ್ಲ.. ಅರ್ಧ ಗಂಟೆಯ ಬಳಿಕ ಶರಣ್ಯ ಸಂಗೀತ ಇಬ್ಬರೂ ಊರಾಚೆಯ ನದಿಯ ಬಳಿ ಬಂದು ನಿಂತಿದ್ದರು.
ನದಿ ದಂಡೆಯಲ್ಲಿ ಇಬ್ಬರ ನಡುವೆ ಕೇವಲ ಮೌನ ಆದರೂ ಆ ಮೌನವೇ ಸಾಂತ್ವಾನವಾಗಿ ಇದ್ದಂತೆ ಎನಿಸುತ್ತಿತ್ತು,.
ಮೌನ ಮುರಿದ ಶರಣ್ಯ, ಸಂಗೀತಳ ಎದುರಿಗೆ ಬಂದು ನಿಂತಳು. ಅವಳ ಮಾತಿಗಾಗೆ ಕಾಯುತ್ತಾ ನಿಂತಿದ್ದಳು ಸಂಗೀತ.
ಸಂಗೀತ, ನಾನೀಗ ಒಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದೇನೆ. ಇದರಿಂದ ಹೊರಬರಲು ಅಥವಾ ನಿರ್ಧಾರ ಮಾಡಲು ಖಂಡಿತ ನನಗೆ ನಿನ್ನ ಅವಶ್ಯಕತೆ ಇದೆ. ಮತ್ತು ನಿರ್ಧಾರ ಅದೇನೇ ಆಗಿದ್ದರೂ ಸಹ ಅದನ್ನೇ ನಾನು ಮಾಡುತ್ತೇನೆ. ಅದಕ್ಕೂ ಮೊದಲು ವಿಷಯ ಮತ್ತು ಅದರ ಸೂಕ್ಷ್ಮತೆ ಹೇಳುತ್ತೇನೆ ಇದಕ್ಕೆ ಪರಿಹಾರನ ನಾವು ಇಬ್ಬರು ಹುಡುಕೋಣ ಕಣೆ..
Swipe left/right or tap the sides to turn pages