ಪ್ರೀತಿ ಮರೀಚಿಕೆ – 1
“ಅಮ್ಮಾ… ಒಮ್ಮೆ ಕಣ್ಣು ತೆರೆದು ನೋಡುಮ್ಮಾ! ನನ್ನ ಜೊತೆ ಮಾತಾಡಮ್ಮಾ… ನೀನಿಲ್ಲದೆ ನಾನೇಗೆ ಬದುಕಲಿ?” ಎಂದು ತಾಯಿಯ ಮೃತದೇಹದ ಪಕ್ಕದಲ್ಲಿ ಕುಳಿತು ಅಳುತ್ತಿದ್ದ ಆರು ವರ್ಷದ ಪುಟ್ಟ ಬಾಲಕಿ ಶ್ರಾವ್ಯಳನ್ನು ಕಂಡು ಅಲ್ಲಿದ್ದ ಪ್ರತಿಯೊಬ್ಬರ ಕಣ್ಣುಗಳಲ್ಲೂ ನೀರು ತುಂಬಿಕೊಂಡಿತು. ಆದರೆ ಆ ಪುಟ್ಟ ಬಾಲಕಿಯನ್ನು ಸಮಾಧಾನಪಡಿಸಬೇಕಾದ ತಂದೆ ಮೂರ್ತಿ ಮಾತ್ರ ಮೌನವಾಗಿ ನಿಂತಿದ್ದನು. ಶ್ರಾವ್ಯಳಿಗೆ ತಾಯಿಯೆಂದರೆ ಪ್ರಾಣ. ಅವಳ ಇಡೀ ಪ್ರಪಂಚವೇ ತಾಯಿ. ಬೆಳಿಗ್ಗೆ ನಿದ್ರೆಯಿಂದ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಪ್ರತಿಯೊಂದು ಸಣ್ಣ ವಿಷಯಕ್ಕೂ ಅಮ್ಮ […]