** ಅಜೇಯ – 26 **
ರಾಘವ್ ರಿಟರ್ನ್ ರಿಸೆಪ್ಷನ್ ಹಾಲಿಗೆ ಹೋಗಲು.. ರಾಘವ್ ರೂಮ್ ಪಕ್ಕದಲ್ಲಿರುವ ರೂಮ್ ನಂಬರ್ 105ಕ್ಕೆ ತೆರಳಿದಳು ಸಿಯಾ…
ಆಯಾಸದಿಂದ ಫೇಸ್ ವಾಶ್ ಮಾಡಿಕೊಂಡು ಬಂದ ಸಿಯಾ ತನ್ನ ಹ್ಯಾಂಡ್‌ವಾಶ್ ಮಾಡಿಕೊಂಡು.. ಒದ್ದೆ ಕೈಗಳನ್ನು ನ್ಯಾಪ್ಕಿನ್‌ನಿಂದ ಒರೆಸಿಕೊಳ್ಳುತ್ತಾ ಬಂದು ಬೆಡ್ ಮೇಲಿರುವ ಆ ಬ್ಲಾಕ್ ಲೆದರ್ ಬ್ಯಾಗ್ ಅನ್ನು ಓಪನ್ ಮಾಡಿದಳು..
ಸಿಯಾ ಇವಾಗತಾನೆ ತಾನು ರೂಟ್ ಬದಲಾಯಿಸುವಂತೆ ಮಾಡಿದ ಆ ಇನ್ಸಿಸ್ಟ್ ಅನ್ನು.. ತನ್ನ ಕಲ್ಪನೆಯನ್ನು.. ಅಹೋಬಿಲಮ್ ಅಡವಿಯನ್ನು ತನ್ನ ಸ್ಕೆಚ್ ಬುಕ್ ತೆಗೆದು ಬಿಡಿಸಬೇಕೆಂದುಕೊಂಡಿದ್ದಳು.. ಆದರೆ ಸಿಯಾ ಬ್ಯಾಗ್ ಓಪನ್ ಮಾಡುತ್ತಿದ್ದಂತೆ ತಾನು ಕೂಡ ತೀವ್ರವಾದ ಶಾಕ್‌ಗೆ ಗುರಿಯಾದಳು..
ಅದರಲ್ಲಿ ಆಕೆಯ ಕಲರ್ ಪ್ಯಾಲೆಟ್ಸ್ ಇರಲಿಲ್ಲ, ಬ್ರಷ್‌ಗಳು ಇರಲಿಲ್ಲ.. ಅದಕ್ಕೆ ಬದಲಾಗಿ… ಅದರಲ್ಲಿ ನೂರು ವರ್ಷಗಳ ಹಳೆಯ ತಾಳೆಗ್ರಿಂಥಗಳ ಜರಾಕ್ಸ್ ಕಾಪಿಗಳು, ಹಾಗೆಯೇ
” ‘Confidential – 1857: British East India Company’ “