** ಅಜೇಯ – 50 **
ಗೋಡೆಗಳಿಂದ ಬಾಣಗಳು ಬರುತ್ತಿವೆ. ಆ ರಾಘವ್ ವನು ಆ ಅಜೇಯ ಕತ್ತಿ ಲೊಕೇಷನ್ ಕಂಡುಹಿಡಿದುಬಿಟ್ಟಿದ್ದಾನೆ..
ಅಸಲು ಆ ಕತ್ತಿ ಇಲ್ಲಿಲ್ಲವೇ.. ಅವನು ಏಳು ಬೆಟ್ಟಗಳಾಚೆ ಇದೆ ಅನ್ನುತ್ತಿದ್ದಾನೆ!” ಎಂದು ಭೈರವ್ ತನ್ನ ಬಾಸ್‌ಗೆ ಇನ್ಫಾರ್ಮ್ ಮಾಡಿದನು..
”ಆ ಹಳೆಯ ನೆಲಮಾಳಿಗೆಯಲ್ಲಿ ಆಕ್ಟಿವೇಟ್ ಆದ ವಿಷಪೂರಿತ ಬಾಣಗಳ ಸುರಿಮಳೆಯಿಂದ, ಗೋಡೆಗಳಿಂದ ಲೀಕ್ ಆಗ್ತಿರೋ ಪ್ರಾಣಾಂತಕ ವಿಷಗಾಳಿಯಿಂದ ರಾಘವ್ ಮತ್ತೆ ಸಿಯಾ ಅಲ್ಪದಲ್ಲೇ ಪಾರಾದರು..”
ರಾಘವ್ ತನ್ನ ಕೈಯಲ್ಲಿರುವ ಆ ಪವಿತ್ರವಾದ ತಾಳಪತ್ರ ಗ್ರಂಥಗಳನ್ನು ಭದ್ರವಾಗಿ ಲ್ಯಾಪ್‌ಟಾಪ್ ಬ್ಯಾಗ್‌ನಲ್ಲಿ ಬಚ್ಚಿಟ್ಟುಕೊಂಡು, ಸಿಯಾಳನ್ನು ಗಟ್ಟಿಯಾಗಿ ಹಿಡಿದುಕೊಂಡು ಆ ಕತ್ತಲು ಕಲ್ಲಿನ ಮೆಟ್ಟಿಲುಗಳ ಮೂಲಕ ಮೇಲಕ್ಕೆ ಓಡಿದನು..
ಹಿಂದೆಂದಿನಿಂದ ಬರುತ್ತಿರುವ ಭೈರವ್ ಅಂಡ್ ಗ್ಯಾಂಗ್ ಆ ಗ್ಯಾಸ್ ಪ್ರಭಾವಕ್ಕೆ ಗುರಿಯಾಗಿ ಹಿಂದೆಬಿದ್ದುಹೋಗುವುದರಿಂದ ಅವರಿಬ್ಬರಿಗೂ ಮೇಲಕ್ಕೆ ಬರಲು ಸ್ವಲ್ಪ ಸಮಯ ಸಿಕ್ಕಿತು..