New Katha Varnika is now on Google Play — read original stories on your phone. Learn more
ಅಜೇಯ – 45
ಅಜೇಯ Premium 6 min read

ಅಜೇಯ – 45

** ಅಜೇಯ – 45  **

 

ರಾಘವ್ ತಕ್ಷಣ ತನ್ನ ಅರಿಹಸ್ತವನ್ನು ಶಾಸನದಿಂದ ತೆಗೆದನು. ಆದರೆ ಆ ಬೆಳಕು ಹಾಗೆಯೇ ಸ್ಥಿರವಾಗಿ ಆ ಕಲ್ಲಿನ ಮೇಲೆಯೇ ಇದೆ. ಅವನು ಮೆಲ್ಲಗೆ ಮೊಣಕಾಲುಗಳ ಮೇಲೆ ಕುಳಿತು, ಆ ಬೆಳಗುತ್ತಿರುವ ಕಲ್ಲಿನ ಹತ್ತಿರ ಬಂದನು..

 

ಸಿಯಾ ಕೂಡ ರಾಘವ್ ಹಿಂದೆ ಬಂದು ನಿಂತಳು.”ರಾಘವ್.. ಆ ಕಲ್ಲು ಉಳಿದ ಕಲ್ಲುಗಳಿಗಿಂತ ಸ್ವಲ್ಪ ಭಿನ್ನವಾಗಿದೆ.. ಅದರ ಮೇಲೆ ಏನೋ ಡಿಸೈನ್ ಇದೆ ನೋಡು,” ಸಿಯಾ ಕೆಳಗೆ ಬಾಗಿ ಗಮನಿಸುತ್ತಾ ಎಂದಳು..

 

ರಾಘವ್ ತನ್ನ ಪಾಕೆಟ್‌ನಿಂದ ಒಂದು ಚಿಕ್ಕ ಬ್ರಷ್, ಕ್ಲೀನಿಂಗ್ ಲಿಕ್ವಿಡ್ ತೆಗೆದನು.. ಆ ಕಲ್ಲಿನ ಮೇಲೆ ಶತಮಾನಗಳಿಂದ ಶೇಖರಗೊಂಡಿದ್ದ ಮಣ್ಣನ್ನು, ಪಾಚಿಯನ್ನು ಮೆಲ್ಲಗೆ ಶುದ್ಧ ಮಾಡಲು ಪ್ರಾರಂಭಿಸಿದನು..

 

ಮಣ್ಣು ಕರಗುತ್ತಾ ಹೋಗುತ್ತಿದ್ದಂತೆ.. ಆ ಕಲ್ಲಿನ ಮೇಲಿರುವ ಅಸಲು ರಹಸ್ಯ ಹೊರಬಂತು..ಅದೊಂದು ದೊಡ್ಡ ಕಲ್ಲಿನ ಪಜಲ್..

 

ಆ ಕಲ್ಲಿನ ಮೇಲೆ ಮೂರು ವೃತ್ತಗಳನ್ನು ಕೆತ್ತಲಾಗಿದೆ.. ಪ್ರತಿ ವೃತ್ತದ ಮೇಲೆ ಕೆಲವು ವಿಚಿತ್ರ ಗುರುತುಗಳು, ಸಂಕೇತಗಳು ಇವೆ..

ಆ ವೃತ್ತಗಳನ್ನು ಕೈಯಿಂದ ತಿರುಗಿಸಲು ಅನುಕೂಲವಾಗುವಂತೆ ಚಿಕ್ಕ ಗೂಡುಗಳಿವೆ..

Premium Premium reading Full story · from ₹69
Sign in to continue