ಅನಿರೀಕ್ಷಿತಾ ಮದುವೆ – 1
ಅಣ್ಣಾ ನನಗೆ ಮದುವೆಯಾಗಿದೆ… ನಾನು ಇವರ ಜೊತೆ ಹೋಗಬೇಕಲ್ಲವೇ!” ಎಂದಳು ಜಾಹ್ನವಿ.
ಆರ್ಯನ್ ಕಾರ್ ಇಳಿದು “ನಾನು ನಿನಗಾಗಿ ಇವಳ ಕೊರಳಿಗೆ ತಾಳಿ ಕಟ್ಟಿದೆ ಹೊರತು, ನನ್ನ ಜೊತೆ ಕರೆದುಕೊಂಡು ಹೋಗಲಿಕ್ಕಲ್ಲ ಎಂದು ಇವಳಿಗೆ ಹೇಳು” ಎಂದನು.
ಅ ದಿನ ಮನೆ ಮುಂದೆ ಹಸಿರು ತೋರಣ ದ ಸಂಭ್ರಮ ಚಪ್ಪರ ಹಾಕಿ ಮನೆ ಸಿಂಗರಿಸಿ ಜಾಹ್ನವಿ ಮಾಡಿದ ಪೂಜೆ ಪುನಸ್ಕಾರಾಗಳಿಂದ ಇಂದ ಮನೆಯಲ್ಲಿ ದುಪ ದೀಪಗಳಿಂದ ಕಂಗೋಲಿಸುತ್ತೀತ್ತು ಚಪ್ಪರ ಪೂಜೆ ಮಾಡಿ ಖುಷಿಯಿಂದ ಹೊರಟರು ಕಲ್ಯಾಣ ಮಂಟಪಕ್ಕೆ…ಇದು ಅಣ್ಣ ತಂಗಿಗೆ ತುಂಬಾ ಶುಭದಿನ ಆಗಿತ್ತು ವಿದ್ಯುತ್ ಅಲಂಕಾರದಿಂದ ಸುಂದರವಾಗಿ ಅಲಂಕರಿಸಲ್ಪಟ್ಟ ಕಲ್ಯಾಣ ಮಂಟಪದ ಮುಂದೆ ರೋಲ್ಸ್ ರಾಯ್ಸ್ ಕಾರು ಬಂದು ನಿಂತಿತು…
ಅದರಲ್ಲಿ ಸೂಟ್ ಧರಿಸಿದ್ದ ಆರು ಅಡಿ ಎತ್ತರದ ವ್ಯಕ್ತಿ ತನ್ನ ಕಣ್ಣಿಗಿದ್ದ ಗ್ಲಾಸಸ್ ಮೂಲಕ ಡೋರ್ ತೆಗೆಯದೆ ಸುತ್ತಲೂ ನೋಡಿದನು. ಅವನ ಕಣ್ಣು ಯಾರನ್ನೋ ಹುಡುಕ್ತಿತ್ತು ಅಲ್ಲಿ ತನಗೆ ಬೇಕಾದ ವ್ಯಕ್ತಿ ಕಾಣಿಸಲಿಲ್ಲ ಎಂದು ಕಿರಿಕಿರಿಗೊಂಡು ಮತ್ತೆ ಡೋರ್ ಹಾಕಿ ಫೋನ್ ತೆಗೆದುಕೊಂಡು ಕರೆ ಮಾಡಿದನು.
ರಿಂಗ್ ಆಗುತ್ತಿದ್ದರೂ ಕೂಡ ಯಾರೂ ಫೋನ್ ರಿಸೀವ್ ಮಾಡದಿದ್ದಕ್ಕೆ ಕೋಪದಿಂದ ಫೋನ್ ಅನ್ನು ಸೀಟಿನ ಮೇಲೆ ಕೋಪದಿಂದ ಎಸೆದನು…
ಅರ್ಧ ಗಂಟೆಯ ನಂತರ….
ಮದುವೆಯನ್ನು ಒಂದು ಸುಂದರ ಕನಸಿನಂತೆ ಊಹಿಸಿಕೊಂಡು, ಸುಂದರವಾಗಿ ರೆಡಿಯಾಗಿ ಎಷ್ಟೋ ಕನಸುಗಳೊಂದಿಗೆ ನಾಚಿಕೆಯಿಂದ ಮಂಟಪಕ್ಕೆ ಹೆಜ್ಜೆ ಹಾಕಿದಳು.
ತನ್ನ ಮುಂದೆ ಒಂದು ದೊಡ್ಡ ಸುನಾಮಿ ತನ್ನನ್ನು ಮುಳುಗಿಸಲು ಸಿದ್ದವಾಗಿದೆ ಎಂದು ತಿಳಿಯದೆ ಮದುವೆಯ ಪೀಠದ ಮೇಲೆ ನಾಚಿಕೆಯಿಂದ ಕುಳಿತಳು…”ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ, ಕಂಠೇ ಬದ್ನಾಮಿ ಶುಭಗೇ ತ್ವಂಜೀವ ಶರದಾಂ ಶತಮ್” ಎಂದು ಪುರೋಹಿತರು ವರನಿಗೆ ತಾಳಿ ಕಟ್ಟಲು ಕೊಟ್ಟರು…
ಮದುವೆಗೆ ಬಂದವರೆಲ್ಲರೂ ವರನು ತಾಳಿ ಕಟ್ಟಿದರೆ ಅಕ್ಷತೆ ಹಾಕಿ ಆಶೀರ್ವದಿಸಲು ಸಿದ್ಧರಾಗಿದ್ದರು…
ವರನು ತಾಳಿ ತೆಗೆದುಕೊಂಡು ಎದ್ದನು. ವರನು ತಾಳಿ ಕಟ್ಟುತ್ತಾನೆ ಎಂದು ವಧು ತಲೆ ತಗ್ಗಿಸಿ ಕುಳಿತಿದ್ದಳು… ಆದರೆ ಯಾರೂ ಊಹಿಸದ ರೀತಿಯಲ್ಲಿ ವರನು ಕೈಯಲ್ಲಿದ್ದ ತಾಳಿಯನ್ನು ಕೆಳಗೆ ಎಸೆದು ಮಂಟಪದಿಂದ ಕೆಳಗೆ ಇಳಿದು ಹೋದನು….
ಕೊರಳಿಗೆ ತಾಳಿ ಕಟ್ಟದೆ ಕೆಳಗೆ ಹೋಗುತ್ತಿರುವ ವರನನ್ನು ನೋಡಿ ವಧು ಜಾಹ್ನವಿ ಶಾಕ್ ಆಗಿ ಹಾಗೆಯೇ ನೋಡುತ್ತಾ ನಿಂತಳು. ಜಾಹ್ನವಿ ಅಣ್ಣ ಮನೋಜ್ ಗೆ ಏನಾಗುತ್ತಿದೆ ಎಂದು ಅರ್ಥವಾಗದೆ ಅವರ ಕಾಲು ಹಿಡಿದು ಬೇಡಿಕೊಂಡರೂ ಕೇಳಿಸಿಕೊಳ್ಳದೆ, ತಾವು ನೋಡಿದ ವಿಷಯದ ಬಗ್ಗೆ ಹೇಳಿ ಜಾಹ್ನವಿ ಬಗ್ಗೆ ತಪ್ಪಾಗಿ ಮಾತನಾಡುತ್ತಾ ಅಲ್ಲಿಂದ ಹೊರಟುಹೋದರು…
ಮದುವೆಗೆ ಬಂದವರು ಆಡಿಕೊಳ್ಳುತ್ತಿದ್ದ ಮಾತನ್ನು ಕೇಳಿದ ಮನೋಜ್ ಮಾನ ಹೋದ ಮೇಲೆ ಬದುಕಿದ್ದು ಏನು ಪ್ರಯೋಜನ ಎಂದು ಶಾಕ್‌ನಲ್ಲಿ ಕುಳಿತಿದ್ದ ಜಾಹ್ನವಿಯನ್ನು ಎಬ್ಬಿಸಿ, ಕೈ ಹಿಡಿದು ರೂಮಿನೊಳಗೆ ಎಳೆದುಕೊಂಡು ಹೋದನು.
ಮದುವೆಗೆ ಬಂದವರೆಲ್ಲರೂ “ಡೋರ್ ತೆಗಿ” ಎಂದು ಬಡಿಯುತ್ತಿದ್ದರೆ, ರೋಲ್ಸ್ ರಾಯ್ಸ್ ಕಾರಿನಲ್ಲಿ ಬಂದ ಆ ವ್ಯಕ್ತಿ ಎಲ್ಲರನ್ನೂ ತಳ್ಳುತ್ತಾ ಮುಂದೆ ಬಂದು ಡೋರ್‌ಗೆ ಒಂದು ಒದೆ ಕೊಟ್ಟನು. ಅಷ್ಟೇ, ಡೋರ್ ಎರಡು ತುಂಡಾಯಿತು.
ಒಳಗೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮನೋಜ್ ಕೆನ್ನೆಗೆ ಬಾರಿಸಿ “ನಿನಗೇನಾದರೂ ಹುಚ್ಚು ಹಿಡಿದಿದೆಯೇ? ಏನು ಮಾಡುತ್ತಿದ್ದೀಯಾ ನೀನು?” ಎಂದು ಸೀರಿಯಸ್ ಆಗಿ ಕೇಳಿದನು…
“ಮತ್ತೇನು ಮಾಡಲಿ? ನನ್ನ ತಂಗಿಯ ತಪ್ಪು ಇಲ್ಲದಿದ್ದರೂ ಮದುವೆಯವರು ಹೊರಟುಹೋದರು… ಮಾನ ಹೋದ ಮೇಲೆ ಇನ್ನು ಯಾಕೆ ಬದುಕಬೇಕು? ನನ್ನ ತಂಗಿಗೆ ಜೀವನದಲ್ಲಿ ಮದುವೆ ಮಾಡಲು ಸಾಧ್ಯವೇ?” ಎಂದು ಅಳುತ್ತಿದ್ದನು.
ಜಾಹ್ನವಿ ಮಾತ್ರ ಇನ್ನೂ ಶಾಕ್‌ನಲ್ಲಿ ಹಾಗೆಯೇ ಇದ್ದಾಳೆ…
“ಈಗ ನಿನಗೆ ಏನು ಬೇಕು? ನಿನ್ನ ತಂಗಿಯ ಕೊರಳಿಗೆ ತಾಳಿ ಬೀಳಬೇಕು ಅಷ್ಟೇ ತಾನೇ?” ಎಂದು ಜಾಹ್ನವಿ ಕೈ ಹಿಡಿದು ಎಳೆದುಕೊಂಡು ಮಂಟಪಕ್ಕೆ ಕರೆತಂದು, ವರ ಅಲ್ಲಿ ಎಸೆದಿದ್ದ ತಾಳಿಯನ್ನು ತೆಗೆದುಕೊಂಡು ಜಾಹ್ನವಿ ಕೊರಳಿಗೆ ಕಟ್ಟಿದನು…
ಮನೋಜ್ ಹತ್ತಿರ ಹೋಗಿ “ಇದಕ್ಕಾಗಿ ಯಾರಾದರೂ ಸಾಯಲು ಬಯಸುತ್ತಾರಾ?” ಎಂದನು…
ಅವನು ಹಾಗೆ ತಾಳಿ ಕಟ್ಟುತ್ತಾನೆ ಎಂದು ಊಹಿಸದ ಮನೋಜ್ ಅವನ ಕೈ ಹಿಡಿದು “ನೀನು ಮಾಡಿದ ಈ ಸಹಾಯಕ್ಕೆ ನಿನ್ನ ಋಣ ಹೇಗೆ ತೀರಿಸಲಿ… ಈಗ ನೀನು ಇಲ್ಲದಿದ್ದರೆ ನಾವಿಬ್ಬರೂ ಶವವಾಗಿ ಉಳಿಯುತ್ತಿದ್ದೆವು” ಎಂದನು.
“ಇನ್ನು ಸಾಕು ನಿಲ್ಲಿಸು, ಸರಿ ನಾನು ಹೋಗುತ್ತೇನೆ” ಎಂದು ಹೊರಟಾಗ ಆರ್ಯನ್ ನಿಂತು “ಏನು ಹೇಳು” ಎಂದನು…
“ಒಬ್ಬನೇ ಹೋಗುತ್ತಿದ್ದೀಯಾ ಆರ್ಯನ್, ಜಾಹ್ನವಿಯನ್ನು ಕರೆದುಕೊಂಡು ಹೋಗಲ್ವಾ?” ಎಂದನು…”ಜಾಹ್ನವಿ? ಅವಳು ಯಾರು?” ಎಂದು ಕೇಳಿದನು…
“ನೀನು ತಾಳಿ ಕಟ್ಟಿದ ನಿನ್ನ ಹೆಂಡತಿ ಆರ್ಯನ್, ನಮ್ಮ ತಂಗಿ. ಅವಳನ್ನು ನಿನ್ನ ಜೊತೆ ಕರೆದುಕೊಂಡು ಹೋಗಬೇಕಲ್ಲವೇ?””ಏನು? ಅವಳನ್ನು ನಮ್ಮ ಮ್ಯಾನ್ಷನ್‌ಗೆ ಕರೆದುಕೊಂಡು ಹೋಗಬೇಕಾ! ನಾನು ನಿನಗಾಗಿ ತಾಳಿ ಕಟ್ಟಿದೆ ಅಷ್ಟೇ ಹೊರತು ನನ್ನ ಜೊತೆ ಮ್ಯಾನ್ಷನ್‌ಗೆ ಕರೆದುಕೊಂಡು ಹೋಗಲಿಕ್ಕಲ್ಲ.
ಇಂತಹ ಹುಚ್ಚು ಆಲೋಚನೆಗಳನ್ನು ಮನಸ್ಸಿಗೆ ತರಬೇಡ” ಎಂದು ವೇಗವಾಗಿ ನಡೆದುಕೊಂಡು ಹೋದನು… ಅಲ್ಲಿಯವರೆಗೆ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಜಾಹ್ನವಿ, ಮನೋಜ್ ಕಾಲು ಮುಟ್ಟಿ ನಮಸ್ಕರಿಸಿ ಆರ್ಯನ್ ಹಿಂದೆ ಓಡಿದಳು… ಆರ್ಯನ್ ಕಾರಿನಲ್ಲಿ ಕುಳಿತ ಕೂಡಲೇ ಜಾಹ್ನವಿ ಕೂಡ ಕಾರಿನ ಡೋರ್ ತೆಗೆದು ಕುಳಿತಳು…
ಜಾಹ್ನವಿ ಕಾರಿನಲ್ಲಿ ಕುಳಿತಿರುವುದನ್ನು ನೋಡಿ ಆರ್ಯನ್ ಕೋಪದಿಂದ “ಹೌ ಡೇರ್ ಯು! ನನ್ನ ಪರ್ಮಿಷನ್ ಇಲ್ಲದೆ ನನ್ನ ಕಾರಿನಲ್ಲಿ ಕುಳಿತುಕೊಳ್ಳುತ್ತೀಯಾ? ಗೆಟ್ ಡೌನ್ ಮೈ ಕಾರ್!” ಎಂದು ಕಿರುಚುತ್ತಾ ಮನೋಜ್ ಎಂದು ಕರೆದನು…
🌿
ಮುಂದುವರೆಯುವುದು… 😊
ಕಥೆ ಇಷ್ಟ ಆದ್ರೆ ಫಾಲೋ ಮಾಡಿ ಮುಂದಿನ ಸಂಚಿಕೆ ಯಲ್ಲಿ 🙏🏻
Swipe left/right or tap the sides to turn pages