New Katha Varnika is now on Google Play — read original stories on your phone. Learn more
ನಿನ್ನ ನಗುವಿಗೆ💞 – 12

ನಿನ್ನ ನಗುವಿಗೆ💞 – 12

ಲಕ್ಷ್‌ನ ಪಕ್ಕದಲ್ಲಿ ಬಂದು ನಿಂತುಕೊಂಡು, “ಅಜ್ಜೀ… ಇವರು ನನ್ನ ಇಬ್ಬರು ಮಕ್ಕಳು.” ಎಂದು ಮೀನಾಕ್ಷಿ ಅವರನ್ನು ಪರಿಚಯಿಸುತ್ತಾಳೆ.

 

ಹೀಗೆ ತನ್ನ ಜೀವನದಲ್ಲಿ ತಾನು ಅನುಭವಿಸಿದ ನೋವುಗಳು, ಲಕ್ಷ್‌ನ ಪರಿಚಯವಾದಾಗಿನಿಂದ ಹಿಡಿದು ಅವರು ಅಮೆರಿಕಕ್ಕೆ ಹೋಗುವವರೆಗೂ ನಡೆದ ಪ್ರತಿಯೊಂದು ವಿಷಯವನ್ನೂ ತನ್ನ ಅಜ್ಜಿಗೆ ಹೇಳುತ್ತಾಳೆ.

 

ತನ್ನ ಮೊಮ್ಮಗಳು ಇಷ್ಟು ದೂರ ಬಂದು, ತನಗಾಗಿ ಒಂದು ಸುಂದರವಾದ ಜೀವನವನ್ನು ರೂಪಿಸಿಕೊಂಡು, ಇಬ್ಬರು ಮಕ್ಕಳೊಂದಿಗೆ ಸಂತೋಷವಾಗಿರುವುದನ್ನು ನೋಡಿ ಆ ದಿನ ಆಸ್ಪತ್ರೆಯಲ್ಲಿ ಅಜ್ಜಿಯ ಸಂತೋಷಕ್ಕೆ ಪಾರವೇ ಇರುವುದಿಲ್ಲ.

 

ಇನ್ನೂ ಕೆಲವು ದಿನಗಳ ಕಾಲ ಅವರು ತಮ್ಮ ಅಜ್ಜಿಯ ಜೊತೆಯಲ್ಲೇ ಅಲ್ಲಿಯೇ ಕಳೆಯುತ್ತಾರೆ. ಮೀನಾಕ್ಷಿ ತನ್ನ ಅಜ್ಜಿಯ ಜೊತೆ ಕಳೆದ ಪ್ರತಿಯೊಂದು ಕ್ಷಣವನ್ನೂ ತುಂಬಾ ಪ್ರೀತಿಯಿಂದ ಅನುಭವಿಸುತ್ತಾಳೆ.

 

ಆದರೆ… ಕೆಲವು ದಿನಗಳ ನಂತರ ಅವಳ ಅಜ್ಜಿ ಈ ಲೋಕವನ್ನೇ ಬಿಟ್ಟು ಹೋಗುತ್ತಾರೆ…

 

ಅಜ್ಜಿಯನ್ನು ಕಳೆದುಕೊಂಡ ನೋವಿನಿಂದ ನಿಧಾನವಾಗಿ ಹೊರಬರುತ್ತಾ ಮೀನಾಕ್ಷಿ ಮತ್ತೆ ತನ್ನ ಜೀವನದಲ್ಲಿ ಬ್ಯುಸಿಯಾಗುತ್ತಾಳೆ.

 

Premium Premium reading Full story · from ₹69
Sign in to continue