New Katha Varnika is now on Google Play — read original stories on your phone. Learn more

ಅಗ್ನಿಪರೀಕ್ಷೆ

7 stories Ongoing Romance Love Suspense

ಈ ಕಥೆಯು ಸಂಪೂರ್ಣ ನನ್ನ ಕಲ್ಪನೆಯಲ್ಲಿ ಮೂಡಿಬಂದಿದ್ದು, ಯಾವುದೇ ಕಥೆ ಕಾದಂಬರಿಗೆ ಹೋಲಿಕೆ ಕಂಡುಬಂದಲ್ಲಿ ಕೇವಲ ಕಾಕತಾಳೀಯ. 💙💙💙💙💙💙💙ರಾತ್ರಿಯ ಕತ್ತಲಲ್ಲಿ ಬಣ್ಣ ಬಣ್ಣದ ಬೆಳಕಿನಿಂದ ಪಾರ್ಟಿ ಹಾಲ್ ಮಿನುಗುತ್ತಿತ್ತು. ಹೆಸರಿಗೆ ಬರ್ತಡೇ ಪಾರ್ಟಿ ಆದರೂ  ವ್ಯವಹಾರಿಕ ಜಗತ್ತಿನಲ್ಲಿ ನಡೆಯುವ ದೊಡ್ಡ ಪಾರ್ಟಿಗಳಂತೆಯೇ ಕಾಣುತ್ತಿತ್ತು. ತುಂಡು ಉಡುಗೆ ತೊಟ್ಟು ಮಿಂಚುತ್ತಿದ್ದ ಆಧುನಿಕ ಯುವತಿಯರು, ಕೈಯಲ್ಲಿ ವಿಸ್ಕಿ ಗ್ಲಾಸ್ ಹಿಡಿದು ನಿಂತಿರುವ ಯುವಕರು ಜೊತೆಯಲ್ಲಿ ಮಾತಿನಲ್ಲಿ ತೊಡಗಿರುವ ಮಧ್ಯಮ ವಯಸ್ಸಿನ ಪ್ರಜೆಗಳು ಒಟ್ಟಿನಲ್ಲಿ ಪಾರ್ಟಿ ಜೋರಾಗಿಯೇ ನಡೆಯುತ್ತಿತ್ತು. ಡಾ. ವಿಖ್ಯಾತ್ ಪ್ರಧಾನ್ ಒಂದು ಕೈಯಲ್ಲಿ ವಿಸ್ಕಿ ಗ್ಲಾಸ್ ಹಿಡಿದು ನಿಂತವನು ಯಾರೊಂದಿಗೋ ಗಂಭೀರವಾಗಿ ಮಾತನಾಡುತ್ತಿದ್ದಾನೆ. ಅವನು ತೊಟ್ಟಿದ್ದ ನೀಲಿ ಬಣ್ಣದ ಕೋಟು ಅವನ ಅಂದವನ್ನು ಹೆಚ್ಚಿಸುತ್ತಿದೆ. ಆದರೆ ಅಂದದ ಮುಖದಲ್ಲಿ ಇಂದು ಗಂಭೀರತೆಯೇ ಹೆಚ್ಚಾಗಿ ಕಾಣುತ್ತಿದೆ. ಗಂಭೀರವಾಗಿ ಮಾತನಾಡುತ್ತಿದ್ದವನ…

Browse Stories

ಅಗ್ನಿಪರೀಕ್ಷೆ

ಅಗ್ನಿಪರೀಕ್ಷೆ – 1

ಈ ಕಥೆಯು ಸಂಪೂರ್ಣ ನನ್ನ ಕಲ್ಪನೆಯಲ್ಲಿ ಮೂಡಿಬಂದಿದ್ದು, ಯಾವುದೇ ಕಥೆ ಕಾದಂಬರಿಗೆ ಹೋಲಿಕೆ ಕಂಡುಬಂದಲ್ಲಿ ಕೇವಲ ಕಾಕತಾಳೀಯ.  💙💙💙💙💙💙💙   ರಾತ್ರಿಯ ಕತ್ತಲಲ್ಲಿ ಬಣ್ಣ ಬಣ್ಣದ ಬೆಳಕಿನಿಂದ ಪಾರ್ಟಿ ಹಾಲ್ ಮಿನುಗುತ್ತಿತ್ತು. ಹೆಸರಿಗೆ ಬರ್ತಡೇ ಪಾರ್ಟಿ ಆದರೂ  ವ್ಯವಹಾರಿಕ ಜಗತ್ತಿನಲ್ಲಿ ನಡೆಯುವ ದೊಡ್ಡ ಪಾರ್ಟಿಗಳಂತೆಯೇ ಕಾಣುತ್ತಿತ್ತು. ತುಂಡು ಉಡುಗೆ ತೊಟ್ಟು ಮಿಂಚುತ್ತಿದ್ದ ಆಧುನಿಕ ಯುವತಿಯರು, ಕೈಯಲ್ಲಿ ವಿಸ್ಕಿ ಗ್ಲಾಸ್ ಹಿಡಿದು ನಿಂತಿರುವ ಯುವಕರು ಜೊತೆಯಲ್ಲಿ ಮಾತಿನಲ್ಲಿ ತೊಡಗಿರುವ ಮಧ್ಯಮ ವಯಸ್ಸಿನ ಪ್ರಜೆಗಳು ಒಟ್ಟಿನಲ್ಲಿ ಪಾರ್ಟಿ ಜೋರಾಗಿಯೇ ನಡೆಯುತ್ತಿತ್ತು.  […]

4 min 25 views
ಅಗ್ನಿಪರೀಕ್ಷೆ

ಅಗ್ನಿಪರೀಕ್ಷೆ – 2

  ವಿಖ್ಯಾತ್ ಅವಳ ಉಡುಗೆಯ ಬಗ್ಗೆ ಪ್ರಶ್ನಿಸಿದವನು ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡಬೇಡ ತನಗಿದೆಲ್ಲ ಇಷ್ಟ ಇಲ್ಲ ಎಂದು ಹೇಳಿದಾಗ ಅವಳು ಕೋಪದಿಂದ,”ನಿಮ್ಮ ತಾಳ್ಮೆಯನ್ನು ನಾನು ಯಾಕೆ ಪರೀಕ್ಷಿಸಬೇಕು…ಅಷ್ಟಕ್ಕೂ ಇದನ್ನೆಲ್ಲ ಹೇಳೋಕೆ ನೀವ್ಯಾರು?” ಎಂದು ಕೇಳಿದ್ದಳು.  “ನಾನ್ಯಾರು ಅಂತ ಇಷ್ಟು ಬೇಗ ಮರೆತು ಹೋಯ್ತಾ? ಇದನ್ನೇ ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳು…ನಾನು ಯಾರು ಅನ್ನೋದು ನಿನಗೆ ಮರೆತು ಹೋಗಿದ್ದರೆ ನಾನೇ ನೆನಪಿಸ್ತೀನಿ…” ಎಂದವನು ಅವಳ ಮುಖದತ್ತ ಬಾಗಿದರೆ ತನ್ನ ಬಲವನ್ನೆಲ್ಲಾ ಉಪಯೋಗಿಸಿ ಅವನನ್ನು ಹಿಂದೆ ತಳ್ಳಿದವಳ ಕಣ್ಣಲ್ಲಿ […]

4 min 21 views
ಅಗ್ನಿಪರೀಕ್ಷೆ

ಅಗ್ನಿಪರೀಕ್ಷೆ – 3

  ಚಪ್ಪಾಳೆ ಹಾಗೂ ಜೋರಾದ ಮಾತುಗಳು ಕೇಳಿಬರಲು ಅವಳು ಅವನನ್ನು ತಳ್ಳಿ ಅಲ್ಲಿಂದ ಓಡಿದ್ದಳು. ವಿಖ್ಯಾತ್ ಅವಳು ಹೋಗುವುದನ್ನೇ ನೋಡುತ್ತ ಇದ್ದವನು ಕೋಪದಲ್ಲಿ ಗೋಡೆಗೆ ಕೈ ಬಡಿದಿದ್ದ.    ಆರಾಧ್ಯಳ ಸ್ನೇಹಿತೆ ಸೃಷ್ಟಿಯ ಹುಟ್ಟುಹಬ್ಬದ ಸಂಭ್ರಮ. ಸೃಷ್ಟಿಯ ತಂದೆ ವಿಖ್ಯಾತ್ ನ ಆಸ್ಪತ್ರೆಯ ಪ್ರಮುಖ ಟ್ರಸ್ಟೀಗಳಲ್ಲಿ ಒಬ್ಬರು. ಅವರು ಅವನ ಕುಟುಂಬದ ಜೊತೆ ಕೂಡ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದರು. ಸೃಷ್ಟಿ ಕೇಕ್ ಕಟ್ ಮಾಡತೊಡಗಿದ್ದರೆ ನೆರೆದಿರುವ ಅತಿಥಿಗಳ ಚಪ್ಪಾಳೆ ಸದ್ದು ಜೋರಾಗಿತ್ತು. ವಿಖ್ಯಾತ್ ಅಲ್ಲಿಗೆ ಬಂದವನ ಕಣ್ಣು […]

4 min 18 views
ಅಗ್ನಿಪರೀಕ್ಷೆ

ಅಗ್ನಿಪರೀಕ್ಷೆ – 4

  ಆರಾಧ್ಯ ಬಾಗಿಲು ಮುಚ್ಚಿ ಅಳತೊಡಗಿದಳು. ಅವಳಿಗೆ ವಿಖ್ಯಾತ್ ವರ್ತನೆಯೇ ಅರ್ಥವಾಗುತ್ತಿಲ್ಲ. ಎಲ್ಲವೂ ಅವಳಲ್ಲಿದ್ದ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದೆ.    ಅವಳ ಮನ,”ಅಕ್ಕನನ್ನು ಮದುವೆ ಆಗಲು ಹೊರಟಿದ್ದಾನೆ ಅಂದಮೇಲೆ ನನ್ನ ಜೊತೆ ಯಾಕೆ ಹಾಗೆ ವರ್ತಿಸಿದ…ಅವನು ನಿಜವಾಗ್ಲೂ ನನ್ನನ್ನ ಪ್ರೀತಿಸುತ್ತಾ ಇದಾನ?” ಎಂದುಕೊಂಡವಳು ಮರುಕ್ಷಣವೇ,”ಪ್ರೀತಿ ಇದ್ದರೆ ಅಕ್ಕನ ಜೊತೆ ಮದುವೆಗೆ ಯಾಕೆ ಒಪ್ಪಿಗೆ ಕೊಡುತ್ತಾ ಇದ್ದ…” ಎಂದುಕೊಂಡವಳ ನೋವು ಹೆಚ್ಚಾಗಿತ್ತು.    ಮನದಲ್ಲಿ ಇದ್ದ ಪ್ರಶ್ನೆಗಳಿಗೆ ಎಷ್ಟು ಯೋಚಿಸಿದರೂ ಉತ್ತರ ಸಿಗದೆ ಮನ ಗೊಂದಲದ ಗೂಡಾಗಿತ್ತು. ಅವಳು […]

4 min 19 views
ಅಗ್ನಿಪರೀಕ್ಷೆ

ಅಗ್ನಿಪರೀಕ್ಷೆ – 5

  ಅಪಘಾತ ಆದ ವ್ಯಕ್ತಿಯೊಬ್ಬರನ್ನು ಹೊತ್ತ ಆಂಬುಲೆನ್ಸ್ ಒಂದು ಆಸ್ಪತ್ರೆಯ ಮುಂದೆ ಬಂದು ನಿಂತಿತ್ತು. ಅದರಿಂದ ಇಳಿದ ವ್ಯಕ್ತಿಯೊಬ್ಬ ಡಾಕ್ಟರ್ ಡಾಕ್ಟರ್… ಎಂದು ಕೂಗುತ್ತ ಓಡಿ ಬರುತ್ತಿದ್ದ. ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಕರೆತರಲಾಗುತ್ತಿತ್ತು. ಅವನ ಮುಖಕ್ಕೆ ಹಾಗೂ ತಲೆಗೆ ಗಂಭೀರ ಗಾಯಗಳಾಗಿದ್ದವು.    ಜನರಲ್ ಡಾಕ್ಟರ್ ಒಬ್ಬರು ಅಲ್ಲಿಗೆ ಬಂದವರು ಏನೆಂದು ವಿಚಾರಿಸಿದ್ದರು. ಅವರ ಜೊತೆ ಬಂದವರೊಬ್ಬರು,”ಸರ್ ಈಗಷ್ಟೇ ಮೇನ್ ರೋಡಲ್ಲಿ ಆಕ್ಸಿಡೆಂಟ್ ಆಯಿತು…ಇವರ ಸ್ಥಿತಿ ನೋಡಿದರೆ ಗಂಭೀರವಾಗಿದೆ ಅಂತ ಅನಿಸುತ್ತಿದೆ…ಪ್ಲೀಸ್ ಚೆಕ್ […]

4 min 20 views
ಅಗ್ನಿಪರೀಕ್ಷೆ Premium

ಅಗ್ನಿಪರೀಕ್ಷೆ – 6

  ವಿಖ್ಯಾತ್ ಏನೂ ನಡೆದೇ ಇಲ್ಲವೆಂಬಂತೆ ಅವಳ ಜೊತೆ ಮೊದಲಿನಂತೆ ವರ್ತಿಸಿದರೆ ಆರಾಧ್ಯ ಕೋಪಗೊಂಡಿದ್ದಳು. ಅವನ ಜೊತೆ ಮಾತನಾಡಲು ಇಷ್ಟವಿಲ್ಲದೆ ಮುಂದೆ ನಡೆದರೆ ವಿಖ್ಯಾತ್ ಅವಳ ಜೊತೆ ಮಾತನಾಡಿಯೇ ತೀರುತ್ತೇನೆ ಎಂದು ಕಾರಿನಿಂದ ಇಳಿದು ಅವಳ ಬಳಿಗೆ ಬಂದಿದ್ದ.    ಆರಾಧ್ಯ ಮುಂದೆ ನಡೆಯುತ್ತಿದ್ದರೆ ಅವನು ಅವಳ ಹಿಂದೆಯೇ ಬಂದಿದ್ದ. ರಾಧ್ಯ ಪ್ಲೀಸ್ ನನ್ನ ಮಾತು ಕೇಳು ಎಂದು ಹಿಂದಿನಿಂದ ಅವಳ ಕೈ ಹಿಡಿದಿದ್ದ. ಅವಳು ಕೋಪದಿಂದ ಹಿಂದೆ ತಿರುಗಿದವಳು ಕೈ ಬಿಡಿಸಿಕೊಳ್ಳಲು ನೋಡಿದರೆ ಅವನ ಹಿಡಿತ […]

4 min 13 views
ಅಗ್ನಿಪರೀಕ್ಷೆ Premium

ಅಗ್ನಿಪರೀಕ್ಷೆ – 7

  ವಿಖ್ಯಾತ್ ನ ತಾಯಿ ಕಲ್ಯಾಣಿ ಅವರು ವಸುಂಧರಾ ಅವರಿಗೆ ಕರೆ ಮಾಡಿದವರು ಆದಷ್ಟು ಬೇಗ ಪುರೋಹಿತರ ಜೊತೆ ಮಾತುಕತೆ ನಡೆಸಿ ಅನ್ವಿತಾ ಹಾಗೂ ವಿಖ್ಯಾತನ ನಿಶ್ಚಿತಾರ್ಥಕ್ಕೆ ಅತ್ಯಂತ ಶುಭವಾದ ದಿನವನ್ನು ನಿಗದಿಪಡಿಸಬೇಕು ಎಂದವರು ತಾವು ಈಗಾಗಲೇ ಪುರೋಹಿತರನ್ನು ಬರಹೇಳಿರುವುದನ್ನು ಕೂಡ ಹೇಳಿದ್ದರು. ಆ ವಿಷಯ ತಿಳಿದ ತಕ್ಷಣ ವಸುಂಧರಾ ಅವರ ಮೊಗದಲ್ಲಿ ಮಂದಹಾಸ ಮೂಡಿತ್ತು.    ಗಂಡ ಪ್ರಸಾದ್ ವರ್ಮ ಅವರ ಬಳಿ,” ರೀ ಕಲ್ಯಾಣಿ ಈಗಷ್ಟೇ ಫೋನ್ ಮಾಡಿದ್ಲು…ಪುರೋಹಿತರ ಹತ್ತಿರ ಮಾತನಾಡಿ ಅನ್ವಿತಾ ಹಾಗೂ […]

4 min 15 views