**ಅಜೇಯ – 28**
ರಾಘವ್ ಸಿಯಾಳ ಕಣ್ಣುಗಳಲ್ಲಿ ಎದ್ದು ಕಾಣುವ ಆಶ್ಚರ್ಯವನ್ನು ನೋಡುತ್ತಲೇ.. “Yes, I am Raghav… And you… Siyā, the modern artist who is shaking Hyderabad with her paintings.. Right?”
ಹೂಂ.. ನಾನು ರಾಘವ್ ನೇ.. ನೀನು.. ಫೇಮಸ್ ಹೈದರಾಬಾದ್ ಮಾಡರ್ನ್ ಆರ್ಟಿಸ್ಟ್ ಸಿಯಾ ತಾನೇ.. ಎಂದು ಕೇಳುತ್ತಾನೆ.. ಸಣ್ಣ ನಗುವಿನೊಂದಿಗೆ..
ಅವನ ತುಟಿಗಳ ಮೇಲೆ ನಿಂತು ನಿಲ್ಲದ ಆ ನಗುವನ್ನು ಆಕೆ ಸಮ್ಮೋಹಿತಳನ್ನಾಗಿ ಮಾಡುತ್ತಿದ್ದರೆ.. ಅವನ ನಗುವನ್ನೇ ನೋಡುತ್ತಿರುವ..
ಸಿಯಾ.. ಮನಸ್ಸಿನಲ್ಲಿ.. ನಾನು ಕೇವಲ ಪೇಂಟಿಂಗ್ಸ್ ಮಾತ್ರ ಬಿಡಿಸುತ್ತಿಲ್ಲ ರಾಘವಾ.. ನಾನು ಬಿಡಿಸುವ ಪ್ರತಿಯೊಂದು ಚಿತ್ರದ ಹಿಂದೆ, ನನ್ನ ಪ್ರತಿಯೊಂದು ಕನಸಿನ ಹಿಂದೆ… ನಿನ್ನ ಈ ಮುಖವಿದೆ.. ಎಂದುಕೊಳ್ಳುತ್ತಾಳೆ….
ಸಿಯಾ ಮಾತುಗಳನ್ನು ಕೇಳಿಸಿಕೊಂಡವನಂತೆ.. ಆಕೆಯ ಕಡೆಗೆ ಒಂದು ಹೆಜ್ಜೆ ಮುಂದೆ ಇಟ್ಟನು ರಾಘವ್.. ಅವನ ಕಣ್ಣುಗಳಲ್ಲಿ ಒಂದು ವಿಚಿತ್ರವಾದ, ತೀಕ್ಷ್ಣತೆ ಕಾಣಿಸುತ್ತಿದೆ..