**ಅಜೇಯ – 42 **
ರಾಘವ್ ಮಾತಿಗೆ ಸಣ್ಣಗೆ ನಕ್ಕರೂ ಸಿಯಾ ರಾಘವ್ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಳು..
ಈಗ ಅವರ ನಡುವೆ ಇರುವ ಬಂಧ ಪ್ರಪಂಚದ ಯಾವ ಶಕ್ತಿಯನ್ನೇ ಎದುರಿಸುವಷ್ಟು ಗಟ್ಟಿಯಾಗಿ ಬದಲಾಗಿದೆ..ಎಂದು ಅನಿಸುತ್ತದೆ ಸಿಯಾಳಿಗೆ..
ಆದರೆ… ಅವರಿಗೆ ತಿಳಿಯದ ವಿಷಯ.. ಅಷ್ಟರಲ್ಲೇ ಅವರನ್ನು ಕೊನೆಗಾಣಿಸಲು ಒಂದು ಭಯಂಕರ ಶಕ್ತಿ ಅವರನ್ನು ಬೆನ್ನಟ್ಟುತ್ತಾ ಅವರ ಹಿಂದೆಯೇ ಬಂದಿದೆ ಎಂದು.
ಸಿಯಾ ರಾಘವ್ ಯಾವಾಗ ರೆಸಾರ್ಟ್‌ನಿಂದ ಹೊರಬಂದರೋ.. ಆ ದಟ್ಟವಾದ ಕಾಡಿನ ಮರಗಳ ಪೊದೆಗಳ ಹಿಂದೆ… ಅವರು ಪ್ರಯಾಣಿಸುತ್ತಿದ್ದ ರೆಡ್ ಥಾರ್ ಜೀಪ್ ಅನ್ನು ತುಂಬಾ ಸೈಲೆಂಟ್ ಆಗಿ
ಒಂದು ಕಾರ್ ಫಾಲೋ ಮಾಡಿತು..ಅದರಲ್ಲಿದ್ದ ಮೇನ್ ಹೆಡ್ ಇನ್ನೂ ತನ್ನ ಮೇನ್ ಶೂಟರ್ಸ್‌ನೊಂದಿಗೆ ಕುಳಿತುಕೊಂಡಿದ್ದಾನೆ..