** ಅಜೇಯ – 43 **
ಸಿಯಾ ತನ್ನ ಕ್ಯಾಮೆರಾವನ್ನು ಪಕ್ಕಕ್ಕಿಡುತ್ತಾ., ರಾಘವ್ ಕಡೆಗೆ ನೋಡುತ್ತಾ ಒಂದು ಪ್ರಶಾಂತವಾದ ನಗು ನಕ್ಕಳು..
“ರಾಘವ್… ಈ ಪ್ಲೇಸ್‌ನಲ್ಲಿ ಯಾವುದೋ ಒಂದು ವಿಚಿತ್ರ ಪವರ್ ಇದೆ. ಇಲ್ಲಿಗೆ ಬಂದಮೇಲೆ ನನ್ನ ಮನಸ್ಸಿನಲ್ಲಿದ್ದ ಆ ಭಯ, ಆ ನೈಟ್‌ಮೇರ್ ಪೈನ್ ಎಲ್ಲಾ ಮಾಯವಾಗಿಹೋದವು. ತುಂಬಾ ದಿನಗಳ ನಂತರ ನಾನು ಇಷ್ಟು ಪ್ರಶಾಂತತೆಯನ್ನು ಫೀಲ್ ಆಗುತ್ತಿದ್ದೇನೆ,” ಎಂದಳು ತುಂಬಾ ಸಾಫ್ಟ್ ಆಗಿ..
ರಾಘವ್ ಸಿಯಾ ಕಡೆಗೆ ನೋಡಿ, “ಏಕೆಂದರೆ… ನೀನು ನಿನ್ನ ಸ್ವಂತ ಮನೆಗೆ ಬಂದಿದ್ದೀಯಾ ಬೇಬಿ.. ಈ ಗುಡಿಯನ್ನು ಹಿಂದಿನ ಜನ್ಮದಲ್ಲಿ ನಾವೇ ಕಟ್ಟಿಸಿದೆವು,” ಎಂದನು ತುಂಬಾ ಆತ್ಮೀಯವಾಗಿ..
ರಾಘವ್ ಅಂಡ್ ಸಿಯಾ ಇಬ್ಬರೂ ಕೂಡ ಗತಕಾಲವನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾ.. ದೇವಾಲಯದ ತುಂಬಾ ಸುತ್ತುತ್ತಿರುತ್ತಾರೆ..
ಆ ದೇವಾಲಯದ ಪ್ರಾಂಗಣದಲ್ಲಿರುವ ಆ ವಿಚಿತ್ರ ಪ್ರಶಾಂತತೆ ಕ್ರಮೇಣ ಇನ್ನಷ್ಟು ಆಳವಾಗಿ ಬದಲಾಯಿತು. ಸುತ್ತಲೂ ಇರುವ ದಟ್ಟವಾದ ಮರಗಳ ಎಲೆಗಳು ಕೂಡ ಅಲುಗಾಡುತ್ತಿಲ್ಲ..