**ಅಜೇಯ – 55**
ಅವನ ಹೆಸರೇ ವಿಕ್ರಮ್!” ವಿಕ್ರಮ್ ಎಂಬ ಹೆಸರು ಕೇಳುತ್ತಿದ್ದಂತೆ ಸಿಯಾ ಎದೆ ಒಮ್ಮೆಲೆ ಲಯ ತಪ್ಪಿತು…
ಆ ಹೆಸರು ಕೇಳಿದ ತಕ್ಷಣ ಅವಳ ಮೈಂಡ್‌ಗೆ ಮತ್ತೆ ಆ 12ನೇ ಶತಮಾನದ ಶತ್ರು ರಾಜ ಮಹಾರಾಜ ವಿಕ್ರಮಾದಿತ್ಯ ಚೌಹಾಣ್ ಮುಖ ನೆನಪಿಗೆ ಬಂತು.
“ವಿಕ್ರಮ? ಯಾರು ಅವನು?” ಎಂದು ರಾಘವ್ ಕೇಳಿದನು…
“ಅವನೊಬ್ಬ ಇಂಟರ್‌ನ್ಯಾಷನಲ್ ಆಂಟಿಕ್ವಿಟಿ ಸ್ಮಗ್ಲರ್ (ಪ್ರಾಚೀನ ವಸ್ತುಗಳನ್ನು ಮತ್ತು ಐತಿಹಾಸಿಕ ವಿಗ್ರಹಗಳನ್ನು ಕಳ್ಳತನದಿಂದ ವಿದೇಶಗಳಿಗೆ ಕಳಿಸುವ ವ್ಯಕ್ತಿ) ಸಾರ್. ಮೇಲ್ನೋಟಕ್ಕೆ ದೊಡ್ಡ ಬಿಸಿನೆಸ್ ಮ್ಯಾನ್, ಆದರೆ ಒಳಗಡೆ ಮಾತ್ರ ಪಕ್ಕಾ ಕ್ರಿಮಿನಲ್!” ಎಂದು ಶಂಕರ್ ರಹಸ್ಯವಾಗಿ ಹೇಳುತ್ತಾನೆ…
“ಈ ಅಡವಿಗಳಲ್ಲಿ ಇರುವ ಪ್ರಾಚೀನ ವಿಗ್ರಹಗಳು, ಶಾಸನಗಳು, ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ವಿದೇಶಗಳಿಗೆ ಮಾರಾಟ ಮಾಡುವುದು ಅವನ ಮೇನ್ ಬಿಸಿನೆಸ್.