* * ಅಜೇಯ – 70 * *
” If so, you are a fool .”
(ನೀನು ಒಬ್ಬ ಮೂರ್ಖ!)
ಆ ಧ್ವನಿಯಲ್ಲಿದ್ದ ರಾಯಲ್ ಸ್ವ್ಯಾಗ್ ಆ ಹಳೆಯ ಫ್ಯಾಕ್ಟರಿಯ ಕಬ್ಬಿಣದ ಗೋಡೆಗಳ ಮಧ್ಯೆ ತುಂಬಾ ಪವರ್ಫುಲ್ ಆಗಿ ಪ್ರತಿಧ್ವನಿಸಿತು.
ವಿಕ್ರಮ್ ಹುಬ್ಬುಗಳು ಸ್ವಲ್ಪ ಮುಡಿಕೊಂಡವು. ತನ್ನ ಮುಂದೆ ಕೈಕಾಲು ಕಟ್ಟಿ ಬಂದಿಯಾಗಿರುವ ಒಬ್ಬ ಹೆಣ್ಣುಮಗಳು… ತನ್ನ ಕಣ್ಣುಗಳೊಳಗೆ ನೋಡುತ್ತಾ ಇಷ್ಟು ಕಾನ್ಫಿಡೆನ್ಸ್ನೊಂದಿಗೆ ಮಾತನಾಡಿದ್ದು ಅವನ ಮೈಂಡ್ ಗೇಮ್ ಅನ್ನು ಒಮ್ಮೆಲೆ ಡಿಸ್ಟರ್ಬ್ ಮಾಡಿತು.
ಸಿಯಾ ತನ್ನ ತುಟಿಗಳ ಮೇಲೆ ಒಂದು ಸಣ್ಣ, ಸಾರ್ಕಾಸ್ಟಿಕ್ ಸ್ಮೈಲ್ನೊಂದಿಗೆ ತನ್ನ ಮಾತುಗಳನ್ನು ಮತ್ತಷ್ಟು ಇಂಟೆನ್ಸ್ ಆಗಿ ಮುಂದುವರಿಸಿದಳು—
” ನಿನಗೆ ಗೊತ್ತಾ ವಿಕ್ರಮ್, ಮೊದಲನೇ ಬಾರಿ ರಾಘವ್ನನ್ನು ರಿಸಾರ್ಟ್ ಕಾರಿಡಾರ್ನಲ್ಲಿ ನೇರವಾಗಿ ನೋಡಿದಾಗ ಏನಾಯಿತು ಗೊತ್ತಾ ? ನನ್ನ ಪ್ರಾಣಕ್ಕೆ ಉಸಿರು ಅವನೇ ಏನೋ ಅನಿಸಿತು.