**ಅಜೇಯ – 67**
ಅವನ ತಲೆಯ ಹಿಂದಿನಿಂದ ಬಿಸಿ ರಕ್ತ ಧಾರೆಯಾಗಿ ಹರಿದು, ಅವನ ಕುತ್ತಿಗೆಯ ಮೂಲಕ ನೆಲದ ಮೇಲೆ ಹನಿ ಹನಿಯಾಗಿ ಬೀಳಲು ಪ್ರಾರಂಭಿಸಿತು…
ಸರಿಯಾಗಿ ಅದೇ ಸಮಯದಲ್ಲಿ, ಲೂಯಿಸ್ ಸಿಯಾಳನ್ನು ಬಲವಂತವಾಗಿ ಹಿಡಿದುಕೊಂಡನು.
ಸಿಯಾಳ ಕೈಗಳನ್ನು ಹಿಂದೆ ತಿರುಚಿ ಹಿಡಿದುಕೊಂಡಿದ್ದರಿಂದ… ಅವಳ ಗಂಟಲಿನ ಬಳಿ ವಿಕ್ರಮ್ ತನ್ನ ಸೈಲೆನ್ಸರ್ ಗನ್ ಅನ್ನು ಏಮ್ ಮಾಡಿದನು.
ಸಿಯಾ ತನನ್ನು ಲಾಕ್ ಮಾಡಿದ ಮನುಷ್ಯರಿಗಿಂತಲೂ ಹೆಚ್ಚಾಗಿ… ರಾಘವ್ ರಕ್ತವನ್ನು ನೋಡಿ ಭಯದಿಂದ—”ರಾಘವ್… ರಾಘವ್…” ಎಂದು ಅಳುತ್ತಿದ್ದಳು.
ಕಲ್ಲಿನ ನೆಲದ ಮೇಲೆ ಬಿದ್ದಿದ್ದ ರಾಘವ್ ತಲೆಯಿಂದ ರಕ್ತ ಧಾರೆಯಾಗಿ ಹರಿಯುತ್ತಿದೆ… ಅವನ ಕಣ್ಣುಗಳು ಮಸಕಾಗುತ್ತಿವೆ, ದೇಹ ಬಳಲಿಹೋಗಿದೆ…