ಹಲವು ಜನ್ಮಗಳ ಬಂಧ 💞 – 1
“ಏನ್ರೀ… ಆಫೀಸ್‌ಗೆ ಟೈಮ್ ಆಗ್ತಿದೆ, ಏಳ್ರಿ.” “ಬರ್ತಿದ್ದೀನಿ ಸತ್ಯಾ… ಟೆನ್ ಮಿನಿಟ್ಸ್” ಅಂತಾನೆ ಅಖಿಲ್. “ಏನ್ರೀ… ಪ್ರತಿದಿನ ಇದೇ ಕಥೆ. ನಿಮ್ಮನ್ನ ಪ್ರತಿದಿನ ನಾನೇ ಬಂದು ಎಬ್ಬಿಸಬೇಕು. ನಾನೇ ಎಬ್ಬಿಸದಿದ್ದರೆ ಒಂದಿನವೂ ಏಳಲ್ಲ ನೀವು. ಏನೋ ನಿಮ್ಮ ಗೋಳು…” ಅಂತ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಾ ಗೊಣಗಿಕೊಳ್ಳುತ್ತಾಳೆ ಸತ್ಯಾ. ಹತ್ತು ನಿಮಿಷಗಳ ನಂತರ ಬೆಡ್‌ರೂಮ್‌ಗೆ ಬಂದು ನೋಡಿದರೆ ಇನ್ನೂ ಆರಾಮವಾಗಿ ನಿದ್ರೆ ಮಾಡುತ್ತಿರುತ್ತಾನೆ ಅಖಿಲ್. “ನಿಮಗಿಂತ ಮಕ್ಕಳೇ ವಾಸಿ ರೀ… ಅವರು ಎದ್ದು […]