**ಅಜೇಯ – 86**
ಅವನ ಕಣ್ಣುಗಳು ನೆಲದ ಮೇಲೆ ಬಿದ್ದಿದ್ದ ರೈಫಲ್ ಮೇಲೆ ಬಿದ್ದವು!
ಅವನ ಮುಂಗೈಗಳು ಕೆಲಸ ಮಾಡುತ್ತಿಲ್ಲ,
ಬೆರಳುಗಳನ್ನು ಮುರಿಯುವುದಕ್ಕೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಸ್ತಬ್ಧಗೊಂಡಿವೆ. ಆದರೆ ವಿಕ್ರಮ್ ತನ್ನ ಸರ್ವಶಕ್ತಿಯನ್ನು, ಕ್ರೋಧವನ್ನು ಒಟ್ಟುಗೂಡಿಸಿ…
ಸುಟ್ಟುಹೋದ ತನ್ನ ಎರಡೂ ಅಂಗೈಗಳ ನಡುವೆ ಆ ಗನ್ ಅನ್ನು ನಳಿದು ಹಿಡಿದುಕೊಂಡನು.. ಮೆಲ್ಲನೆ ಮೊಣಕಾಲ ಮೇಲೆ ನಿಲ್ಲಲು ಪ್ರಯತ್ನಿಸುತ್ತಾ, ತೀವ್ರವಾದ ವೇದನೆಯಿಂದ ಕೂಡಿದ ಗರ್ಜನೆ ಮಾಡುತ್ತಾ ಪಕ್ಕದಲ್ಲಿದ್ದ ಕಲ್ಲಿನ ಕಂಬವನ್ನು ಆಸರೆಯಾಗಿಟ್ಟುಕೊಂಡು ಎದ್ದು ನಿಂತನು!
ವಿಕ್ರಮ್ ಹೇಗಾದರೂ ಗನ್ ಸೇಫಟಿ ಕ್ಯಾಚ್ ಅನ್ನು ಹಿಂದೆ ಎಳೆದು.. ರಾಘವ್ ಮತ್ತು ಸಿಯಾ ಕಡೆಗೆ ನೋಡಿದನು..
ರಾಘವ್ ಮತ್ತು ಸಿಯಾ ಪೀಠದ ಕಡೆಗೆ ಹೆಜ್ಜೆ ಇಡಲು ಹೊರಟಿರುವ ಆ ಕ್ಷಣದಲ್ಲಿ… ಹಿಂದೆಂದಿಗಿಂತಲೂ ವಿವೇಕವಿಲ್ಲದ, ವಿಕೃತವಾದ, ಪಿಚ್ಚಿ ನಗು ಆ ಗುಹೆಯಾದ್ಯಂತ ಪ್ರತಿಧ್ವನಿಸಿತು!