**ಅಜೇಯ – 90**
ರಾಘವ್ ತನ್ನ ದೇಹದಲ್ಲಿ ತುಂಬಿಕೊಂಡ ಆ ಅನಂತ ಶಕ್ತಿಯನ್ನು ಅನುಭವಿಸುತ್ತಾ ಸ್ವಚ್ಛವಾಗಿ ಮಂದಹಾಸ ಬೀರಿದನು…
ಇನ್ನು ಮುಂದೆ ಆ ಖಡ್ಗವನ್ನು ಕೈಗಳಿಂದ ಹೊತ್ತುಕೊಳ್ಳಬೇಕಾದ ಅವಶ್ಯಕತೆ ಇಲ್ಲ.. ಆ ಅಜೇಯ ಶಕ್ತಿ ಎಂದೆಂದಿಗೂ ಅವನ ಎದೆಯಲ್ಲಿ, ಅವನ ಆತ್ಮದಲ್ಲೇ ಒಂದು ಧರ್ಮ ರಕ್ಷಣಾ ಕವಚವಾಗಿ ನಿಂತಿರುತ್ತದೆ ಎಂದು ಅವನಿಗೆ ಸಂಪೂರ್ಣವಾಗಿ ಅರ್ಥವಾಯಿತು!
ರಾಘವ್ ದೇಹದಲ್ಲಿ ಆ ದೈವಿಕ ಶಕ್ತಿ ವಿಲೀನವಾಗಿ, ಆ ಪ್ರಚಂಡವಾದ ಕಾಂತಿ ಶಾಂತವಾಗುತ್ತಿದ್ದಂತೆ… ಪಕ್ಕದಲ್ಲಿದ್ದ **ಸಿಯಾ** ಕಣ್ಣುಗಳಿಂದ ಧಾರೆಯಾಗಿ ಕಣ್ಣೀರು ಹರಿಯಿತು..
ಎಂಟು ಶತಮಾನಗಳ ವಿಯೋಗ… ಕಳೆದ ಜನ್ಮದ ಅಸಂಪೂರ್ಣ ಪ್ರೇಮ… ಈ ಜನ್ಮದಲ್ಲಿ ಎದುರಿಸಿದ ಮೃತ್ಯು ಭಯ, ಹೋರಾಟಗಳು, ಆವೇಶಗಳು… ಎಲ್ಲವೂ ಆ ಕ್ಷಣದಲ್ಲಿ ಆನಂದಾಶ್ರುವಾಗಿ ಕರಗಿಹೋದವು..
ಸಿಯಾ ಇನ್ನು ತನ್ನ ಭಾವನೆಗಳನ್ನು ತಡೆದುಕೊಳ್ಳಲು ಆಗಲಿಲ್ಲ.
**”ರಾಘವ್…!”** ಎಂದು ಅರಚುತ್ತಾ ರಾಘವ್ ಅನ್ನು ಗಟ್ಟಿಯಾಗಿ ತಬ್ಬಿಕೊಂಡಳು..