New Katha Varnika is now on Google Play — read original stories on your phone. Learn more
ಅಜೇಯ – 87
ಅಜೇಯ Premium 6 min read

ಅಜೇಯ – 87

** ಅಜೇಯ – 87 **

 

ರಾಘವ್ ಕೈಯ ಸ್ಪರ್ಶ ತಗುಲು-ತಗುಲುತ್ತಲೇ ಆ ಖಡ್ಗ ತನ್ನ ನಿಜವಾದ ಒಡೆಯನನ್ನು, ತನ್ನ ರಕ್ತದ ವಾರಸುದಾರನನ್ನು ಗುರುತಿಸಿ ಆನಂದದಿಂದ ಪುಲಕಿತಗೊಂಡಿತು..

 

ಆ ಖಡ್ಗದ ಅಂಚಿನಿಂದ ಹೊರಹೊಮ್ಮುತ್ತಿರುವ ನೀಲಿ ಬಣ್ಣದ ವಿದ್ಯುತ್ ಅಲೆಗಳು ಒಮ್ಮೆಲೆ ಸ್ವಚ್ಛವಾದ, ಪ್ರಶಾಂತವಾದ ಬಂಗಾರ ಕಾಂತಿಯಾಗಿ ರೂಪಾಂತರಗೊಂಡವು..

 

ಆ ಖಡ್ಗದ ಒಳಗಿನಿಂದ ಶತಮಾನಗಳಿಂದ ನಿದ್ರಿಸುತ್ತಿದ್ದ ಒಂದು ಮಹಾಮಂತ್ರ ಘೋಷ… ಗುಹೆಯಾದ್ಯಂತ ಒಂದು ದೈವಿಕ **’ಓಂ’ಕಾರ ನಾದ**ದಂತೆ ಪ್ರತಿಧ್ವನಿಸಿತು!

 

ಆ ನಾದ ಗುಹೆಯಲ್ಲಿರುವ ಪ್ರತಿಯೊಂದು ಶಿಲ್ಪದಿಂದ, ಗಾಳಿಯಿಂದ, ಕಲ್ಲಿನ ಗೋಡೆಗಳಿಂದ ಬಹುಳ ಪ್ರತಿಧ್ವನಿಗಳಾಗಿ ಹೊರಬಂತು..

 

ರಾಘವ್ ದೇಹ ಆ ಬಂಗಾರ ಬೆಳಕಿನಲ್ಲಿ ಸಂಪೂರ್ಣವಾಗಿ ಮುಳುಗಿಹೋಯಿತು. ಅವನ ನರನರಗಳಲ್ಲಿ ಹರಿಯುತ್ತಿರುವ ರಕ್ತ ಈಗ ಬಂಗಾರ ಬಣ್ಣದ ರಸಲೋಹದ ಧಾರೆಗಳೊಂದಿಗೆ ಸೇರಿಕೊಂಡು ಉಕ್ಕಿಹರಿಯುತ್ತಿದೆ..

 

Premium Premium reading Full story · from ₹69
Sign in to continue