New Katha Varnika is now on Google Play — read Telugu stories on your phone. Learn more
ಅಗ್ನಿಪರೀಕ್ಷೆ – 2

ಅಗ್ನಿಪರೀಕ್ಷೆ – 2

 

ವಿಖ್ಯಾತ್ ಅವಳ ಉಡುಗೆಯ ಬಗ್ಗೆ ಪ್ರಶ್ನಿಸಿದವನು ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡಬೇಡ ತನಗಿದೆಲ್ಲ ಇಷ್ಟ ಇಲ್ಲ ಎಂದು ಹೇಳಿದಾಗ ಅವಳು ಕೋಪದಿಂದ,”ನಿಮ್ಮ ತಾಳ್ಮೆಯನ್ನು ನಾನು ಯಾಕೆ ಪರೀಕ್ಷಿಸಬೇಕು…ಅಷ್ಟಕ್ಕೂ ಇದನ್ನೆಲ್ಲ ಹೇಳೋಕೆ ನೀವ್ಯಾರು?” ಎಂದು ಕೇಳಿದ್ದಳು. 

“ನಾನ್ಯಾರು ಅಂತ ಇಷ್ಟು ಬೇಗ ಮರೆತು ಹೋಯ್ತಾ? ಇದನ್ನೇ ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳು…ನಾನು ಯಾರು ಅನ್ನೋದು ನಿನಗೆ ಮರೆತು ಹೋಗಿದ್ದರೆ ನಾನೇ ನೆನಪಿಸ್ತೀನಿ…” ಎಂದವನು ಅವಳ ಮುಖದತ್ತ ಬಾಗಿದರೆ ತನ್ನ ಬಲವನ್ನೆಲ್ಲಾ ಉಪಯೋಗಿಸಿ ಅವನನ್ನು ಹಿಂದೆ ತಳ್ಳಿದವಳ ಕಣ್ಣಲ್ಲಿ ನೀರಿತ್ತು. 

 

“ಬಿಹೇವ್ ಯುವರ್ಸೆಲ್ಫ್… ನನ್ನ ಜೊತೆ ಹೀಗೆಲ್ಲ ನಡೆದುಕೊಳ್ಳೋಕೆ ನಿಮಗೆ ನಾಚಿಕೆ ಆಗಲ್ವಾ? ನೀವು ಈಗ ನನ್ನ ಅಕ್ಕನ ಗಂಡ ಆಗುವವರು ಅನ್ನೋದು ನೆನಪಿದ್ದರೆ ಒಳ್ಳೆಯದು… ಹೀಗೆಲ್ಲ ವರ್ತಿಸಿ ನಿಮ್ಮ ಗೌರವವನ್ನು ಹಾಳುಮಾಡಿಕೊಳ್ಳಬೇಡಿ… ಬೀ ಇನ್ ಯುವರ್ ಲಿಮಿಟ್…” ಎಂದು ಕೋಪದಿಂದ ಹೇಳಿ ಅಲ್ಲಿಂದ ಹೊರಟಿದ್ದಳು. 

 

ವಿಖ್ಯಾತ್ ಅವಳ ಹಿಂದೆಯೇ ಬಂದವನು ಅವಳ ಕೈಯನ್ನು ಮತ್ತೊಮ್ಮೆ ಬಲವಾಗಿ ಹಿಡಿದಿದ್ದ. ಅವಳು,”ಯಾಕ್ ಹೀಗೆಲ್ಲ ಮಾಡ್ತಾ ಇದೀರಾ? ನಿಮ್ಮ ಪೊಸಿಷನ್ ಏನು ಅನ್ನೋದನ್ನು ಕೂಡ ಮರೆತು ನಡೆದುಕೊಳ್ಳುತ್ತಿದ್ದೀರಾ…ಬಿಡಿ…ನನ್ನ ಕೈ ನೋವಾಗ್ತಾ ಇದೆ ” ಎಂದು ಕೈ ಹಿಂದೆಗೆದುಕೊಳ್ಳಲು ಯತ್ನಿಸಿದಾಗ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿದವನು,”ನಿನ್ನ ದೇಹಕ್ಕೆ ಆಗುವ ನೋವು ಮಾತ್ರ ಗೊತ್ತಾಗ್ತಾ ಇದೆ ಅಲ್ವಾ? ನನ್ನ ಮನದ ನೋವಿಗೆ ಬೆಲೆ ಇಲ್ವಾ? ಅದು ನಿನ್ನ ಕಣ್ಣಿಗೆ ಕಾಣುತ್ತಾ ಇಲ್ವಾ?” ಎಂದವನ ಕಣ್ಣಲ್ಲಿದ್ದ ಭಾವನೆಯನ್ನು ಗ್ರಹಿಸಿದವಳು ತನ್ನ ಭಾವನೆಯನ್ನು ನಿಯಂತ್ರಿಸಲಾರದೆ ಮುಖವನ್ನು ಪಕ್ಕಕ್ಕೆ ಹೊರಳಿಸಿದ್ದಳು. 

 

ವಿಖ್ಯಾತ್ ಅವಳ ಕೈಯನ್ನು ಬಿಟ್ಟವನು ಅವಳ ಮುಖವನ್ನು ತನ್ನೆಡೆ ತಿರುಗಿಸಿಕೊಂಡಿದ್ದ. “ಯಾಕೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡೋಕು ಆಗ್ತಾ ಇಲ್ವಾ? ಎಲ್ಲಿ ಮನದಲ್ಲಿ ಇರುವ ಭಾವನೆ ಹೊರಬರುತ್ತೆ ಅನ್ನುವ ಭಯ ನಿನ್ನ ಕಣ್ಣಲ್ಲಿ ಕಾಣುತ್ತಾ ಇದೆ…” ಎಂದು ಹೇಳುತ್ತಿದ್ದರೆ ಅವನ ಕಡೆ ನೋಡಿದವಳು,”ನನ್ನ ಮನಸಲ್ಲಿ ನಿಮ್ಮ ಬಗ್ಗೆ ಭಾವನೆ ಇದ್ದರೆ ತಾನೇ ಆಚೆ ಬರೋಕೆ… ನನ್ನ ಮನದಲ್ಲಿ ನಿಮ್ಮ ಬಗ್ಗೆ ಯಾವುದೇ ರೀತಿಯ ಭಾವನೆ ಇಲ್ಲ…ನೀವು ಈಗ ನನ್ನ ಅಕ್ಕನ ಗಂಡ ಆಗುತ್ತಿರುವವರು ಅಂತಷ್ಟೇ ನನ್ನ ಮನದಲ್ಲಿ ಇರೋದು… ಇಲ್ಲದ್ದೆಲ್ಲ ಯೋಚಿಸೋಕೆ ಹೋಗಬೇಡಿ…ಸೋ ಪ್ಲೀಸ್…” ಎಂದವಳು ದನಿಯಲ್ಲಿ ಸಾಧ್ಯವಾದಷ್ಟು ಕಠಿಣತೆಯನ್ನು ತಂದುಕೊಂಡಿದ್ದಳು. 

 

ವಿಖ್ಯಾತ್ ದವಡೆ ಬಿಗಿದವನು,”ಇನ್ನೊಂದು ಸಲ ಅದನ್ನೇ ಹೇಳಿದರೆ ನಾನು ಏನ್ ಮಾಡ್ತೀನೋ ನನಗೇ ಗೊತ್ತಿಲ್ಲ…ನಾನು ಸುಮ್ಮನೆ ಇದೀನಿ ಅಂತ ಮನಸಿಗೆ ಬಂದಿದ್ದನ್ನೆಲ್ಲ ಹೇಳಬೇಡ…” ಎಂದು ಅರಚಿದ್ದ. 

 

ಅವಳು,”ಯಾಕೆ ನಾನು ಅಂತದ್ದೇನು ಮನಸಿಗೆ ಬಂದಿದ್ದನ್ನು ಹೇಳುತ್ತ ಇಲ್ಲ…ಇರುವುದನ್ನೇ ಹೇಳಿದರೆ ಕಷ್ಟ ಆಗ್ತಾ ಇದೆಯಾ? ನೋಡಿ ಮಿಸ್ಟರ್… ಇದೇ ಕೊನೆ ಇನ್ನೊಂದು ಸಲ ಹೀಗೆಲ್ಲ ಲಿಮಿಟ್ ಕ್ರಾಸ್ ಮಾಡೋಕೆ ನೋಡಿದರೆ ಸರಿ ಇರಲ್ಲ…ನಿಮ್ಮ ಅಳತೆಯಲ್ಲಿ ನೀವಿದ್ದರೆ ಒಳ್ಳೆಯದು…” ಎಂದು ಹೇಳಿದವಳನ್ನು ಇನ್ನಷ್ಟು ಸಮೀಪಿಸಿದ್ದ. 

 

ಅವಳು ಹಿಂದೆ ಸರಿದವಳು,”ನೀವು ಯಾಕೋ ಅತಿಯಾಗಿ ನಡೆದುಕೊಳ್ಳುತ್ತಿದ್ದೀರಾ…ಇದೆಲ್ಲ ಸರಿ ಇರಲ್ಲ…ಹೇಳ್ತಾ ಇದೀನಿ…” ಎಂದು ಕೈ ತೋರಿಸಿ ಹೇಳುತ್ತಿದ್ದರೆ ಅವನು ಅವಳ ಅತೀ ಸಮೀಪ ಬರಲು ಅವಳು ಹಿಂದೆ ಗೋಡೆಗೆ ಒರಗಿದ್ದಳು. ಮುಖವನ್ನು ಅವಳತ್ತ ತೆಗೆದುಕೊಂಡು ಹೋಗಲು ಪಕ್ಕಕ್ಕೆ ಹೊರಳಿದವಳ ಭುಜದ ಮೇಲೆ ಬಂದ ಮೋಟು ಕೂದಲನ್ನು ಗಮನಿಸಿದ್ದ. ಅವನ ಕೈ ಅವಳನ್ನು ಸಮೀಪಿಸುತ್ತಿದ್ದಂತೆ ಬೆಚ್ಚಿದವಳು,”ಏನ್ ಮಾಡ್ತಾ ಇದೀರಾ?” ಎಂದು ಕೇಳಿದರೆ ಅವಳ ಕೂದಲನ್ನು ಸ್ಪರ್ಶಿಸಿದವನ ಕಟು ನೋಟ ಅವಳನ್ನು ತಟ್ಟಿತ್ತು. 

 

ಅವಳು ಅವನಿಂದ ದೃಷ್ಟಿ ತಪ್ಪಿಸಲು,”ನೀನು ಇದನ್ನೆಲ್ಲ ಬೇಕಂತಲೇ ಮಾಡ್ತಾ ಇರೋದು ಅಲ್ವಾ? ನನಗೆ ಇಷ್ಟ ಆಗದೇ ಇರುವುದನ್ನೇ ಮಾಡ್ತಾ ಇದೀಯ…ನೀನು ಎಷ್ಟೇ ಪ್ರಯತ್ನ ಪಟ್ಟರೂ ನೀನು ಅಂದುಕೊಂಡಿರುವುದನ್ನು ಸಾಧಿಸಲು ಸಾಧ್ಯವಿಲ್ಲ…ಅದು ಆಗೋಕೆ ನಾನು ಬಿಡೋದು ಇಲ್ಲ…” ಎಂದು ಹೇಳುತ್ತಿದ್ದರೆ ಅವಳು,”ನನ್ನಿಷ್ಟ…ನನ್ನನ್ನ ಕೇಳೋಕೆ ನೀವ್ಯಾರು? ನನಗಿಷ್ಟ ಆದ ಹಾಗೆ ಇರುತ್ತೀನಿ…ನಿಮ್ಮ ಇಷ್ಟ ಕಷ್ಟ ಕಟ್ಟಿಕೊಂಡು ನನಗೆ ಏನು ಆಗಬೇಕಿದೆ…ನೀವು ನಿಮ್ಮ ಇಷ್ಟಗಳನ್ನು ನನ್ನ ಮೇಲೆ ಹೇರೋಕೆ ಬರಬೇಡಿ…ನಿಮ್ಮದೇನೆ ಇದ್ದರೂ ಅಕ್ಕನ ಹತ್ತಿರ ಇಟ್ಟುಕೊಳ್ಳಿ… ಪದೇ ಪದೇ ನನ್ನ ಹತ್ತಿರ ಬರೋಕೆ ಪ್ರಯತ್ನ ಮಾಡಬೇಡಿ…ನನಗೆ ಇದೆಲ್ಲ ಇಷ್ಟ ಆಗಲ್ಲ…ನಿಮ್ಮ ಸ್ಥಾನ ಏನು ಅನ್ನೋದನ್ನ ನೆನಪಿನಲ್ಲಿ ಇಟ್ಟುಕೊಳ್ಳಿ…” ಎಂದು ಜೋರು ಮಾಡಿದ್ದಳು. 

 

ವಿಖ್ಯಾತ್,”ಓಹ್…ಮೇಡಂ ನನಗೆ ನನ್ನ ಸ್ಥಾನ ಏನು ಅನ್ನೋದನ್ನ ನೆನಪಿಸುತ್ತಾ ಇದ್ದಾರೆ…ನೀವು? ನಿಮಗೆ ಎಲ್ಲ ನೆನಪಿನಲ್ಲಿ ಇದೆಯಾ?” ಎಂದು ಹುಬ್ಬೇರಿಸಿ ಕೇಳುತ್ತಿದ್ದರೆ ಅವಳು ತಡವರಿಸುತ್ತಾ,”ನಾನೇನು ಮಾಡಿದೀನಿ? ನನಗೆ ನನ್ನ ಸ್ಥಾನ ಏನು ಅನ್ನೋದು ಚೆನ್ನಾಗಿ ತಿಳಿದಿದೆ…ಅದಕ್ಕೆ ನಿಮಗೆ ಹೇಳುತ್ತಿರೋದು ನನ್ನಿಂದ ದೂರ ಇರಿ ಅಂತ…” ಎಂದು ಹೇಳಿದ್ದಳು. 

 

ಅವನು ಅವಳ ತೀರ ಸನಿಹ ಬಂದವನು,”ನೀನು ಇದನ್ನೆಲ್ಲ ಯಾಕ್ ಮಾಡ್ತಾ ಇದೀಯ? ನನಗೆ ಕೋಪ ಬರಲಿ ಅಂತ ತಾನೇ…ಪಾರ್ಟಿಯಲ್ಲಿ ಎಲ್ಲ ನಿನ್ನನ್ನ ಹೇಗ್ ನೋಡ್ತಾ ಇದ್ದರು ಅಂತ ಗೊತ್ತಾ? ನೀನು ಹೀಗೆಲ್ಲ ಇರುವುದು ನನಗಿಷ್ಟ ಆಗಲ್ಲ…” ಎಂದು ಹೇಳಿದರೆ ಅವಳು,”ಪ್ಲೀಸ್ ಮಿಸ್ಟರ್ ವಿಖ್ಯಾತ್… ನನಗೆ ಉಪದೇಶ ಕೊಡೋಕೆ ಬರಬೇಡಿ…ಈಗಷ್ಟೇ ಹೇಳಿದೀನಿ ಇದೆಲ್ಲ ಬೇಡ ಅಂತ…ಯಾರು ಹೇಗ್ ಬೇಕಾದರೂ ನೋಡ್ತಾರೆ ಅದೆಲ್ಲ ನಿಮಗ್ಯಾಕೆ? ಒನ್ ಮೋರ್ ಥಿಂಗ್ ನಿಮ್ಮ ಅಭಿಪ್ರಾಯ ನನಗೆ ಮ್ಯಾಟರ್ ಆಗಲ್ಲ…ನನ್ನ ವಿಷಯ ನಾನು ನೋಡಿಕೊಳ್ಳುತ್ತೀನಿ…ನೀವು ನನ್ನ ಮೇಲೆ ಅಧಿಕಾರ ಚಲಾಯಿಸಲು ಬರಬೇಡಿ…” ಎಂದು ಹೇಳಲು ಅವಳ ಮುಖದ ಬಳಿ ಬಾಗಿದ್ದ. 

 

ಒಮ್ಮೆಲೇ ಅವಳ ನಡು ಬಳಸಿ ತನ್ನತ್ತ ಎಳೆದುಕೊಂಡವನು ಅವಳ ಅದರುತ್ತಿದ್ದ ಅಧರಗಳ ಮೇಲೆ ತುಟಿಯೊತ್ತಿದ್ದ. ಅವಳು ಅವನ ನಡೆಯನ್ನು ನಿರೀಕ್ಷಿಸದೇ ಇದ್ದವಳು ಅವನನ್ನು ತನ್ನಿಂದ ದೂರ ತಳ್ಳಲು ಪ್ರಯತ್ನಿಸಿದಷ್ಟು ಅವನ ಹಿಡಿತ ಬಲವಾಗುತ್ತಿತ್ತು. ಅವನ ಬಲದ ಮುಂದೆ ಅವಳ ಪ್ರಯತ್ನ ವಿಫಲವಾಯಿತು. ಒಂದೆರಡು ನಿಮಿಷಗಳ ನಂತರ ಅವಳಿಂದ ದೂರ ಸರಿದವನು,”ನಾನು ಅಧಿಕಾರ ಚಲಾಯಿಸಿದರೆ ಹೇಗಿರುತ್ತೆ ಅಂತ ಒಂದು ಸಣ್ಣ ಝಲಕ್ ತೋರಿಸಿದೆ… ” ಎಂದು ಅವಳ ತುಟಿ ಸವರಿದ್ದ. 

 

ಅವಳು ಕೋಪದಿಂದ ಅವನನ್ನು ಹಿಂದೆ ತಳ್ಳಿದವಳ ಕಣ್ಣಲ್ಲಿ  ಕೋಪ ಮಿಶ್ರಿತ ಕಣ್ಣೀರಿತ್ತು. ಅವನನ್ನು ಕೆಂಗಣ್ಣಿನಿಂದ ನೋಡಿದವಳು,”ಹೌ ಡೇರ್ ಯು? ಹೌ ಡೇರ್ ಯು ಟು ಟಚ್ ಮೀ? ಯಾಕ್ ನನ್ನ ಲೈಫಲ್ಲಿ ಆಟ ಆಡ್ತಾ ಇದೀರಾ? ನನ್ನ ಮೇಲೆ ಅಧಿಕಾರ ಚಲಾಯಿಸೋಕೆ ನೀವ್ಯಾರು? ಇರೋದನ್ನ ಹೇಳಿದರೆ ಕೋಪ ಬರುತ್ತಾ? ನಿಮ್ಮ ಕೋಪ ಅಹಂಕಾರವನ್ನು ಬೇರೆಯವರ ಹತ್ತಿರ ಇಟ್ಟುಕೊಳ್ಳಿ…ನನ್ನ ಹತ್ತಿರ ಬೇಡ…” ಎಂದು ಸಿಡುಕಿದರೆ ಅವನು ಅವಳ ಬಳಿ ಸರಿದು,”ಈಗ ತೋರಿಸಿದ್ದು ಸ್ಯಾಂಪಲ್ ಅಷ್ಟೇ…ನನ್ನ ಬಗ್ಗೆ ಗೊತ್ತಿದ್ದೂ ಮತ್ತೆ ಮತ್ತೆ ಕೆಣಕಬೇಡ…” ಎಂದು ವಾರ್ನಿಂಗ್ ಕೊಡುವಂತೆ ಹೇಳಿದಾಗ ಅವಳು ಅವನನ್ನೇ ಕೋಪದಿಂದ ದಿಟ್ಟಿಸುತ್ತಿದ್ದಳು.

 

ಅವಳು ಇನ್ನೇನೋ ಹೇಳಬೇಕು ಎನ್ನುವಷ್ಟರಲ್ಲಿ ಜನರ ಚಪ್ಪಾಳೆ ಸದ್ದು ಕೇಳತೊಡಗಿತು. ಬರ್ತಡೇ ಸೆಲೆಬ್ರೇಷನ್ ಪ್ರಾರಂಭವಾಯಿತು. ಜನರ ಮಾತು ಚಪ್ಪಾಳೆ ಶಬ್ದ ಕೇಳಿ ಇಬ್ಬರ ಕಣ್ಣುಗಳು ಸಂಧಿಸಿದ್ದವು. ಅವನು ಅವಳನ್ನೇ ನೋಡುತ್ತಿರಲು ಅವಳು ತನ್ನ ಸನಿಹ ನಿಂತಿದ್ದವನನ್ನು ಹಿಂದೆ ತಳ್ಳಿ ಅಲ್ಲಿಂದ ಓಡಿದ್ದಳು. 

 

 

ಮುಂದುವರೆಯುವುದು…

 

 

ನಿಮ್ಮ ಪ್ರೋತ್ಸಾಹ ಹಾಗೂ ಚಂದದ ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ…