**ಅಜೇಯ – 6**
ಅವರ ಕಣ್ಣುಗಳಲ್ಲಿ ಶತಮಾನಗಳ ಇತಿಹಾಸಕ್ಕೆ ಸಂಬಂಧಿಸಿದ ರಹಸ್ಯದ ಮಿಂಚಿದೆ.. ಅವರು ಬಹಳ ಭಾರವಾದ ಧ್ವನಿಯೊಂದಿಗೆ..
“Raghav, science believes in data, but history sometimes operates on destiny. What you’ve drawn here is not a fiction. It’s a friction between times.”
(ರಾಘವ್, ಸೈನ್ಸ್ ಡೇಟಾವನ್ನು ನಂಬುತ್ತದೆ, ಆದರೆ ಇತಿಹಾಸ ಕೆಲವೊಮ್ಮೆ ವಿಧಿಯ ಆಧಾರದ ಮೇಲೆ ನಡೆಯುತ್ತದೆ. ನೀನು ಇಲ್ಲಿ ಬರೆದಿರುವುದು ಯಾವುದೇ ಕಲ್ಪಿತ ಕಥೆಯಲ್ಲ. ಇದು ಎರಡು ಕಾಲಗಳ ನಡುವೆ ನಡೆಯುತ್ತಿರುವ ಘರ್ಷಣೆ!) ಎಂದು ಹೇಳುತ್ತಿರುವ ಅವರ ಮಾತುಗಳನ್ನು ಕೇಳುತ್ತಿದ್ದಂತೆ ರಾಘವ್ ಬೆನ್ನುಮೂಲೆಯಲ್ಲಿ ಒಂದು ವಿಚಿತ್ರ ನಡುಕ ಹುಟ್ಟಿತು..
ಹಾಗಾದರೆ ಏನು ಆ ಘರ್ಷಣೆ??
ಒಬ್ಬ ಟಾಪ್ ಬ್ರಿಟಿಷ್ ಆರ್ಕಿಯಾಲಜಿಸ್ಟ್ ತನ್ನ ಭ್ರಮೆಗಳನ್ನು ತಳ್ಳಿಹಾಕದೆ, ಅದನ್ನು ‘ಕಾಲಗಳ ನಡುವೆ ಘರ್ಷಣೆ’ ಎಂದು ಕರೆದಿರುವುದು ಅವನ ಲಾಜಿಕಲ್ ಮೈಂಡ್ ಅನ್ನು ಒಂದೇ ಸಮನೆ ಶೇಕ್ ಮಾಡಿತು..