ಲಕ್ಷ್ ನಿಧಾನವಾಗಿ ಅವಳ ಕೈ ಹಿಡಿದುಕೊಂಡು…
“ನಿನ್ನನ್ನು ಬಿಟ್ಟು ನಾನಂತೂ ಎಲ್ಲಿಗೂ ಹೋಗುವುದಿಲ್ಲ ಮೀನಾ… ನೀನು ಏನು ಹೇಳಿದರೂ ನನಗೆ ಅದೇ ಒಪ್ಪಿಗೆ. ನೀನು ಸಂತೋಷವಾಗಿದ್ದರೆ ಅಷ್ಟೇ ಸಾಕು…” ಎಂದು ಹೇಳುತ್ತಾನೆ.
ಆ ಮಾತುಗಳನ್ನು ಕೇಳಿದ ಮೀನಾಕ್ಷಿ ಸಣ್ಣಗೆ ನಗುತ್ತಾಳೆ.
ಅವಳ ನಗುವೇ ತನ್ನ ಉತ್ತರ ಎಂಬಂತೆ…
“ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಅಮೆರಿಕಾಕ್ಕೆ ಹೋಗೋಣ ಶ್ರೀವರೇ… ಆದರೆ ನಾವು ಎಲ್ಲೇ ಇದ್ದರೂ ಭಾರತವನ್ನು ಮಾತ್ರ ಎಂದಿಗೂ ಮರೆಯಬಾರದು. ನಮ್ಮ ಬೇರುಗಳನ್ನು, ನಮ್ಮವರನ್ನು, ನಮ್ಮ ನೆನಪುಗಳನ್ನು ಎಂದಿಗೂ ಮರೆಯಬಾರದು…” ಎಂದು ಹೇಳುತ್ತಾಳೆ.
“ಹಾಗೆಯೇ ಆಗಲಿ ಮೀನಾ…” ಎಂದು ಲಕ್ಷ್ ನಗುತ್ತಾನೆ.