**ಅಜೇಯ – 12**
ಆ ಗಲಾಟೆಯ ವಾತಾವರಣಕ್ಕೆ ರಾಘವ್ ಬಹಳ ನಿಶ್ಯಬ್ದವಾಗಿ, ಗಂಭೀರವಾಗಿ ಕಾಲಿಟ್ಟನು.. ಅವನ ಬಾಡಿ ಲಾಂಗ್ವೇಜ್‌ನಲ್ಲಿ ಎಲ್ಲೂ ಯಾವುದೇ ಆತಂಕವಿಲ್ಲ..
ರಾಘವ್ ಸರದಿ ಬಂದಿತು.. ಅವನು ನೇರವಾಗಿ ಖಾಲಿ ಇರುವ ಒಂದು ಸ್ಕ್ಯಾನಿಂಗ್ ಬೆಲ್ಟ್ ಹತ್ತಿರಕ್ಕೆ ಬಂದನು.. ತನ್ನ ಬಲ ಭುಜಕ್ಕಿದ್ದ ಹ್ಯಾಂಡ್-ಕ್ರಾಫ್ಟೆಡ್ ಲೆದರ್ ಟ್ರಾವೆಲ್ ಬ್ಯಾಗ್ ಅನ್ನು ಬೆಲ್ಟ್ ಪಕ್ಕದಲ್ಲಿದ್ದ ಒಂದು ಗ್ರೆ ಕಲರ್ ಪ್ಲಾಸ್ಟಿಕ್ ಟ್ರೇನಲ್ಲಿ ಬಹಳ ಕೇರ್‌ಫುಲ್ ಆಗಿ ಇರಿಸಿದನು..
ಆಮೇಲೆ ತನ್ನ ಮೈಮೇಲಿರುವ ಡಾರ್ಕ್ ಗ್ರೆ ಓವರ್‌ಕೋಟ್ ಅನ್ನು ಸಹ ತೆಗೆದು ಮತ್ತೊಂದು ಟ್ರೇನಲ್ಲಿ ಇಟ್ಟು, ಮೆಟಲ್ ಡಿಟೆಕ್ಟರ್ ಫ್ರೇಮ್ ಮೂಲಕ ಆಚೆ ಕಡೆಗೆ ನಡೆದನು..
ಸರಿಯಾಗಿ ಅದೇ ಸಮಯದಲ್ಲಿ… ಸೆಕ್ಯುರಿಟಿ ರೂಮ್ ಒಳಗೆ ಎಕ್ಸ್-ರೇ ಸ್ಕ್ಯಾನರ್ ಮಾನಿಟರ್ ಮುಂದೆ ಕುಳಿತಿದ್ದ ಒಬ್ಬ ಸೀನಿಯರ್ ಬ್ರಿಟನ್ ಸೆಕ್ಯುರಿಟಿ ಆಫೀಸರ್ ನೋಟ ರಾಘವ್ ಬ್ಯಾಗ್ ಕಡೆಗೆ ಹೋಯಿತು..
ಬ್ಯಾಗ್ ಸ್ಕ್ಯಾನರ್ ಒಳಗೆ ಹೋದ ಕೆಲವು ಸೆಕೆಂಡುಗಳಲ್ಲೇ, ಅಲ್ಲಿರುವ ಬ್ರಿಟನ್ ಸೆಕ್ಯುರಿಟಿ ಆಫೀಸರ್ ಮುಖದಲ್ಲಿ ಬದಲಾವಣೆ ಆಯಿತು..