” ಅದಿತಿ, ಬೇಜಾರ್ ಆಗ್ಬೇಡ..ಹೀಗೆ ಹೇಳ್ತಾ ಇದೀನಿ ಅಂತ. ಎಲ್ಲ ನಮಗೋಸ್ಕರ ಕಾಯ್ತಾ ಇರ್ತಾರೆ. ಏನೋ ಹೇಳ್ಬೇಕು ಅಂದ್ಯಲ್ಲ ಬೇಗ ಹೇಳು. ಇಷ್ಟು ದೂರ ಬಂದು ಸುಮ್ಮನೆ ಹೋಗೋದು ಬೇಡ..ಮನಸು ಬಿಚ್ಚಿ ಮಾತಾಡು..ನಾನೇನೂ ತಿಳ್ಕೊಳೋಲ್ಲ…” ಎಂದ ಅಭಿನವ್.
ತಕ್ಷಣ ಅದಿತಿ,
” ಏನಂದ್ರೆ, ನಂಗೆ ಕೆಲಸ ಬಿಟ್ಟಿರೋದು ತುಂಬಾ ಬೇಜಾರು ಆಗಿದೆ.. ಮದ್ವೆ ಆದ್ಮೇಲೂ ನಾನು ಜಾಬ್ ಗೆ ಹೋಗ್ಬೇಕು ಅನ್ನೋ ಆಸೆ ಇದೆ.. ಮನೇಲೆ ಇರೋಕೆ ಮನಸಿಲ್ಲ. ನಿಮ್ಮ ಮನೇಲಿ ದುಡ್ಡಿಗೆ ಕೊರತೆ ಇಲ್ಲ ಅನ್ನೋದು ನಂಗೆ ಗೊತ್ತು.. ಆದ್ರೆ ನಂಗೆ ಇನ್ನೂ ಸ್ವಲ್ಪ ವರ್ಷ ಕೆಲಸ ಮಾಡಬೇಕು.. ನಾನು ಇಷ್ಟು ಕಷ್ಟಪಟ್ಟು ಓದಿದ್ದಕ್ಕೆ..ಅಂತ ಇದೆ.. ” ಎಂದು ಪಟ ಪಟ ಹೇಳಿಬಿಟ್ಟಳು.
ಅಭಿನವ್ ಒಮ್ಮೆ, ಬಿಟ್ಟ ಕಣ್ಣು ಬಿಟ್ಟ ಹಾಗೆ ಅವಳನ್ನೇ ನೋಡಿ, ನಂತರ ನಕ್ಕುಬಿಟ್ಟ.
” ಇದನ್ನ ಹೇಳೋಕೆ, ಇಲ್ಲಿಗೆ ಕರೆದುಕೊಂಡು ಬಂದ್ಯಾ..ಹುಚ್ಚು ಹುಡುಗಿ..” ಎಂದು ಅವಳ ಕೆನ್ನೆ ತಟ್ಟಿದ.
” ಸರಿ. ಏಳು ಹೋಗೋಣ ” ಎಂದು ಅವಳ ಕೈ ಹಿಡಿದುಕೊಂಡು ಎದ್ದು ಹೊರಟ.
ಅದಿತಿ ಯಾವುದೋ ಮಂತ್ರದ ಶಕ್ತಿಗೆ ಒಳಗಾದಂತೆ ಅವನ ಜೊತೆ ಹೊರಟಳು.
” ಅಲ್ಲ, ಅದಿತಿ..ಇದನ್ನು ಇಲ್ಲಿಗೆ ಕರ್ಕೊಂಡು ಬಂದು ಹೇಳಬೇಕಿತ್ತಾ..ನಾನು ಅನ್ಕೊಂಡೆ..ನೀನು ನಂಗೆ ಏನೇನೋ ಹೇಳಬೇಕು..ಅನ್ಕೊಂಡು ಕರೆದುಕೊಂಡು ಬಂದೆ ಅಂತ..ಏನು ಅದಿತಿ..ಇದು.. ” ಎಂದು ತುಂಟ ನಗುವಿನೊಂದಿಗೆ ಹೇಳಿದ.