** ಅಜೇಯ – 31 **
ಆ ಕೋಡ್‌ನ ಅಸಲಾದ ಅರ್ಥ ಹೊರಬಂತು.. ಆ ಪೆಯಿಂಟಿಂಗ್‌ನಲ್ಲಿ ಸಿಯಾ ಬಿಡಿಸಿದ ಆ ಬಂಡೆಗಳ ಜೋಡಣೆ… ಅಹೋಬಿಲಂ ಕಾಡಿನ ಒಳಗಿರುವ ‘ನವ ನರಸಿಂಹ’ ದೇವಾಲಯಗಳ ಒಳಗಿರುವ ಒಂದು ಸೀಕ್ರೆಟ್ ಬೇಸ್‌ಮೆಂಟ್ ಗುಡಿಗೆ ಹೋಗುವ ನಕ್ಷತ್ರಗಳ ಮ್ಯಾಪ್.. ಎಂದು ಅರ್ಥವಾಗುತ್ತಿದ್ದಂತೆ..
ರಾಘವ್..” ಓ..ಮೈ ಗಾಡ್… ಸಿಯಾ.. ನಿಮಗೆ ತಿಳಿಯದೆಯೇ ನಿಮ್ಮ ಕೈಗಳು ಈ ಅಂಡರ್‌ಗ್ರೌಂಡ್ ಟೆಂಪಲ್‌ನ ಲಾಕ್ ಓಪನ್ ಮಾಡುವ ರೂಟ್ ಮ್ಯಾಪ್ ಅನ್ನು ಬಿಡಿಸಿಬಿಟ್ಟಿವೆ!
ನಿಮ್ಮ ಸಬ್‌ಕಾನ್ಷಿಯಸ್ ಮೈಂಡ್‌ನಲ್ಲಿ ಆ 800 ವರ್ಷಗಳ ಹಿಂದಿನ ಸಾಮ್ರಾಜ್ಯದ ಪೂರ್ತಿ ಮ್ಯಾಪ್ ಲೋಡ್ ಆಗಿAದೆ,” ಎಂದುಕೊಂಡನು ರಾಘವ್..
ಅವನ ಮೆದುಲಿನಲ್ಲಿ ಉತ್ಕಂಠತೆ ತಾರಾಮಟ್ಟಕ್ಕೇರಿತು.
ಈಗ ಸಿಯಾ ಕೇವಲ ತನ್ನ ಹಿಂದಿನ ಜನ್ಮದ ಪ್ರೇಮಿಯಲ್ಲ…
ಆ ‘ಅಜೇಯ’ ಕತ್ತಿಯನ್ನು ಹೂಳಲಾಗಿರುವ ಆ ಸೀಕ್ರೆಟ್ ವಾಲ್ಟ್‌ನ ಮೇನ್ ಪಾಸ್‌ವರ್ಡ್ ಕೂಡ ಅವಳ ಮೈಂಡ್‌ನಲ್ಲೇ ಅಡಗಿದೆ ಎಂದು ರಾಘವ್‌ಗೆ ಸ್ಪಷ್ಟತೆಯುಂಟಾಯಿತು.